ಕೋಪೇ, ಕೋಇನ್ಶೂರೆನ್ಸ್ ಮತ್ತು ಡಿಡಕ್ಟಿಬಲ್ ಎಂದರೇನು
ಹೆಲ್ತ್ ಇನ್ಶೂರೆನ್ಸ್ ಅನ್ನು ಪಡೆದುಕೊಳ್ಳುವ ವಿಷಯ ಬಂದಾಗ, ನೀವು ಕೆಲವು ನಿಯಮಗಳ ಬಗ್ಗೆ ಸ್ಪಷ್ಟತೆ ಹೊಂದಿರಬೇಕು, ಇಲ್ಲದಿದ್ದರೆ ಸಾಮಾನ್ಯವಾಗಿ ಗೊಂದಲಕ್ಕೊಳಕ್ಕೀಡಾಗಬಹುದು.
ನಿರ್ದಿಷ್ಟವಾಗಿ, ಕೋಪೇ, ಡಿಡಕ್ಟಿಬಲ್ ಮತ್ತು ಕೋಇನ್ಶೂರೆನ್ಸ್ ನಂತಹ ನಿಯಮಗಳಿಗೆ ಬಂದಾಗ, ಸರಿಯಾದ ಮಾಹಿತಿಯಿಲ್ಲದ ಯಾರಾದರೂ ಬಹಳ ವೇಗವಾಗಿ ಗೊಂದಲಕ್ಕೊಳಗಾಗಬಹುದು.
ಚಿಂತಿಸಬೇಡಿ, ನೀವು ಎಲ್ಲಾ ವಿಚಾರಗಳನ್ನು ಕವರ್ ಮಾಡುವಂತೆ ನಾವು ನೋಡಿಕೊಳ್ಳುತ್ತೇವೆ!
ಇಲ್ಲಿ, ನಾವು ಕೋಇನ್ಶೂರೆನ್ಸ್, ಡಿಡಕ್ಟಿಬಲ್ ಮತ್ತು ಕೋಪೇಯ ಅರ್ಥ ಮತ್ತು ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯ ಮೇಲೆ ಅವುಗಳ ಪರಿಣಾಮಗಳ ಬಗ್ಗೆ ಎಲ್ಲವನ್ನೂ ವಿವರಿಸುತ್ತೇವೆ.
ಅವುಗಳನ್ನು ಈ ಕೆಳಗೆ ತಿಳಿಯೋಣ!
ಹೆಲ್ತ್ ಇನ್ಶೂರೆನ್ಸ್ ನಲ್ಲಿ ಕೋಪೇ ಎಂದರೇನು?
ಪಾಲಿಸಿಹೋಲ್ಡರ್ ಗಳು ಮೆಡಿಕಲ್ ಚಿಕಿತ್ಸೆಗಾಗಿ ತಮ್ಮ ವೆಚ್ಚದ ಫಿಕ್ಸ್ಡ್ ಭಾಗವನ್ನು ಭರಿಸಬೇಕಾದಾಗ ಉಳಿದವು ಇನ್ಶೂರರ್ ರಿಂದ ಭರಿಸಬೇಕಾಗುವುದನ್ನು ಕೋಪೇ ಎನ್ನಲಾಗುತ್ತದೆ. ಇದು ಫಿಕ್ಸ್ಡ್ ಅಮೌಂಟ್ ಆಗಿರಬಹುದು ಅಥವಾ ಚಿಕಿತ್ಸೆಯ ವೆಚ್ಚದ ಫಿಕ್ಸ್ಡ್ ಪರ್ಸಟೇಂಜ್ ಆಗಿರಬಹುದು.
ಉದಾಹರಣೆಗೆ, ನಿಮ್ಮ ಇನ್ಶೂರೆನ್ಸ್ ಪಾಲಿಸಿಯು ನಿಮ್ಮ ಚಿಕಿತ್ಸಾ ವೆಚ್ಚದ ರೂ.2000ರಷ್ಟರ ಕೋಪೇ ಷರತ್ತಿನೊಂದಿಗೆ ಬಂದರೆ ಮತ್ತು ಚಿಕಿತ್ಸೆಯ ವೆಚ್ಚ ರೂ. 10,000 ಆಗಿದ್ದರೆ ನಿಮ್ಮ ಚಿಕಿತ್ಸೆಗೆ ರೂ.2000 ಅನ್ನು ನೀವು ಪಾವತಿಸಬೇಕಾಗುತ್ತದೆ, ಉಳಿದ ರೂ. 8000 ಇನ್ಶೂರರ್ ರಿಂದ ಕವರ್ ಮಾಡಲಾಗುತ್ತದೆ.
ಮತ್ತೊಮ್ಮೆ, ಕೋಪೇ ಷರತ್ತಿನಲ್ಲಿ ನೀವು ಒಟ್ಟು ವೆಚ್ಚದ 10% ಅನ್ನು ಭರಿಸಲು ಬಯಸಿದರೆ, ನೀವು ಅದರ ಕಡೆಗೆ ರೂ.1000 ಪಾವತಿಸಬೇಕಾಗುತ್ತದೆ, ಉಳಿದ 90% (ರೂ. 9000) ಅನ್ನು ಇನ್ಶೂರರ್ ಪಾವತಿಸುತ್ತಾರೆ.
ಇನ್ಶೂರೆನ್ಸ್ ಪಾಲಿಸಿಗಳ ಅಡಿಯಲ್ಲಿ ಕೋಪೇಮೆಂಟ್ ವೈಶಿಷ್ಟ್ಯಗಳನ್ನು ಈ ಕೆಳಗಿನಂತೆ ಪಟ್ಟಿ ಮಾಡಬಹುದು:
ಕೋಪೇ ಷರತ್ತಿನೊಂದಿಗೆ, ಇನ್ಶೂರೆನ್ಸ್ ಪೂರೈಕೆದಾರರು ಬಹುಪಾಲು ಕ್ಲೈಮ್ ಅನ್ನು ಭರಿಸುತ್ತಾರೆ, ಆದರೆ ಪಾಲಿಸಿಹೋಲ್ಡರ್ ನಿರ್ದಿಷ್ಟ ಫಿಕ್ಸ್ಡ್ ಭಾಗವನ್ನು ಕವರ್ ಮಾಡಬೇಕಾಗುತ್ತದೆ.
ಪಡೆದ ಮೆಡಿಕಲ್ ಸೇವೆಗೆ ಅನುಗುಣವಾಗಿ ಕೋಪೇ ಅಮೌಂಟ್ ಫಿಕ್ಸ್ಡ್ ಆಗಿದೆ.
ಕಡಿಮೆ ಕೋಪೇಮೆಂಟ್ ಅಮೌಂಟ್ ಎಂದರೆ ಹೆಚ್ಚಿನ ಪ್ರೀಮಿಯಂ ಪಾವತಿ.
ಈ ನಿಬಂಧನೆಗಳನ್ನು ಹೆಚ್ಚಾಗಿ ಸೀನಿಯರ್ ಸಿಟಿಜನ್ ಗಳ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳ ಮೇಲೆ ವಿಧಿಸಲಾಗುತ್ತದೆ.
ಚಿಕಿತ್ಸೆಯ ವೆಚ್ಚ ಹೆಚ್ಚಿರುವ ಮೆಟ್ರೋಪಾಲಿಟನ್ ನಗರಗಳಲ್ಲಿ ಇವು ಹೆಚ್ಚು ಜನಪ್ರಿಯವಾಗಿವೆ.
ನೋ ಕೋಪೇಮೆಂಟ್ ಎಂದರೆ ಇನ್ಶೂರೆನ್ಸ್ ಪೂರೈಕೆದಾರರಿಂದ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಭರಿಸಲಾಗುತ್ತದೆ ಎಂದರ್ಥ.
ಡಿಜಿಟ್ ಇನ್ಶೂರೆನ್ಸ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳನ್ನು 0% ಕೋಪೇಮೆಂಟ್ ನೊಂದಿಗೆ ಒದಗಿಸುತ್ತದೆ ಮತ್ತು ಒಬ್ಬ ವ್ಯಕ್ತಿಯಿಂದ ಉಂಟಾಗುವ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಕವರ್ ಮಾಡುತ್ತದೆ.
ಅದರ ಕುರಿತು ಬಗ್ಗೆ ಇನ್ನಷ್ಟು ತಿಳಿಯಿರಿ:
ಡಿಡಕ್ಟಿಬಲ್ಸ್ ಎಂಬುದರ ಅರ್ಥವೇನು?
ಡಿಡಕ್ಟಿಬಲ್ಸ್ ಎಂದರೆ ಇನ್ಶೂರೆನ್ಸ್ ವಿಮಾ ಪಾಲಿಸಿಯು ಅವರ ಮೆಡಿಕಲ್ ಚಿಕಿತ್ಸೆಗೆ ಕೊಡುಗೆ ನೀಡಲು ಪ್ರಾರಂಭಿಸುವ ಮೊದಲು ಪಾಲಿಸಿಹೋಲ್ಡರ್ ಗಳು ಪಾವತಿಸಬೇಕಾದ ಫಿಕ್ಸ್ಡ್ ಅಮೌಂಟ್ ಆಗಿದೆ. ಡಿಡಕ್ಟಿಬಲ್ಸ್ ಅನ್ನು ಪಾವತಿಸುವ ಅವಧಿಯನ್ನು ಇನ್ಶೂರೆನ್ಸ್ ಪೂರೈಕೆದಾರರು ನಿರ್ಧರಿಸುತ್ತಾರೆ - ಅದು ವರ್ಷಕ್ಕೋ ಅಥವಾ ಪ್ರತಿ ಚಿಕಿತ್ಸೆಗೋ ಅಂತ.
ಉದಾಹರಣೆಗೆ, ನಿಮ್ಮ ಪಾಲಿಸಿಯು ರೂ. 5000ಗಳ ಡಿಡಕ್ಟಿಬಲ್ಸ್ ಅನ್ನು ಕಡ್ಡಾಯಗೊಳಿಸಿದರೆ, ನಿಮ್ಮ ಇನ್ಶೂರೆನ್ಸ್ ಪಾಲಿಸಿಯು ಪ್ರಾರಂಭಗೊಂಡ ನಂತರ ನಿಮ್ಮ ಚಿಕಿತ್ಸಾ ವೆಚ್ಚಗಳಿಗೆ ರೂ.5000ವರೆಗಿನ ಅಮೌಂಟ್ ಅನ್ನು ನೀವು ಪಾವತಿಸಬೇಕಾಗುತ್ತದೆ.
ಡಿಡಕ್ಟಿಬಲ್ಸ್ ನ ಕೆಲವು ವೈಶಿಷ್ಟ್ಯಗಳು ಈ ಕೆಳಗಿನಂತಿವೆ:
- ನಿಯಮಿತ ಮತ್ತು ಅನಗತ್ಯ ಕ್ಲೈಮ್ಗಳ ವಿರುದ್ಧ ತಮ್ಮ ಹಿತಾಸಕ್ತಿಯನ್ನು ಕಾಪಾಡಲು ಇನ್ಶೂರೆನ್ಸ್ ಕಂಪನಿಗಳಿಗೆ ಸಹಾಯ ಮಾಡಲು ಇದನ್ನು ವಿಧಿಸಲಾಗುತ್ತದೆ.
- ಇದು ಇನ್ಶೂರೆನ್ಸ್ ಪಾಲಿಸಿಗಳಿಗೆ ಪ್ರೀಮಿಯಂ ಪಾವತಿಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
- ಇದು ಒಬ್ಬ ವ್ಯಕ್ತಿಯು ತನ್ನ ಮೆಡಿಕಲ್ ಚಿಕಿತ್ಸೆಗಾಗಿ ಮಾಡುವ ಒಟ್ಟು ವೆಚ್ಚವನ್ನು ಹೆಚ್ಚಿಸಬಹುದು.
ಹೆಲ್ತ್ ಇನ್ಶೂರೆನ್ಸ್ ಡಿಡಕ್ಟಿಬಲ್ಸ್ ಕುರಿತು ಇನ್ನಷ್ಟು ತಿಳಿಯಿರಿ.
ಕೋಇನ್ಶೂರೆನ್ಸ್ ಎಂಬುದರ ಅರ್ಥವೇನು?
ಡಿಡಕ್ಟಿಬಲ್ ಗಳನ್ನು ಪಾವತಿಸಿದ ನಂತರ ನೀವು ಭರಿಸಬೇಕಾದ ಚಿಕಿತ್ಸೆಯ ವೆಚ್ಚಗಳ ಪರ್ಸಂಟೇಜ್ ಅನ್ನು ಕೋಇನ್ಶೂರೆನ್ಸ್ ಎನ್ನಲಾಗುತ್ತದೆ. ಈ ಅಮೌಂಟ್ ಅನ್ನು ಸಾಮಾನ್ಯವಾಗಿ ಫಿಕ್ಸ್ಡ್ ಪರ್ಸಂಟೇಜ್ ನಲ್ಲಿ ನೀಡಲಾಗುತ್ತದೆ. ಇದು ಹೆಲ್ತ್ ಇನ್ಶೂರೆನ್ಸ್ ಅಡಿಯಲ್ಲಿ ಕೋಪೇಮೆಂಟ್ ನಿಬಂಧನೆಯನ್ನು ಹೋಲುತ್ತದೆ.
ಉದಾಹರಣೆಗೆ, ನಿಮ್ಮ ಕೋಇನ್ಶೂರೆನ್ಸ್ 20% ಆಗಿದ್ದರೆ, ನಂತರ ನೀವು ಚಿಕಿತ್ಸೆಯ ವೆಚ್ಚದ 20% ಅನ್ನು ಭರಿಸಲು ಲಯಬಲ್ ಆಗಿರುತ್ತೀರಿ ಮತ್ತು ಉಳಿದ 80% ಅನ್ನು ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರು ಭರಿಸುತ್ತಾರೆ.
ಅಂದರೆ, ಒಂದು ನಿರ್ದಿಷ್ಟ ಕಾಯಿಲೆಯ ಚಿಕಿತ್ಸೆಗಾಗಿ ನಿಮ್ಮ ವೆಚ್ಚವು ರೂ.10,000 ಆಗಿದ್ದರೆ, ನೀವು ರೂ.2000 ಪಾವತಿಸಬೇಕಾಗುತ್ತದೆ. ಉಳಿದ ರೂ.8000 ನಿಮ್ಮ ಇನ್ಶೂರೆನ್ಸ್ ಪಾಲಿಸಿಯಿಂದ ಕವರ್ ಮಾಡಲ್ಪಡುತ್ತದೆ. ನಿಮ್ಮ ಡಿಡಕ್ಟಿಬಲ್ಸ್ ಅನ್ನು ನೀವು ಪಾವತಿಸಿದ ನಂತರ ಈ ಅಮೌಂಟ್ ಅನ್ನು ಸಾಮಾನ್ಯವಾಗಿ ಕ್ಯಾಲ್ಕುಲೇಟ್ ಮಾಡಲಾಗುತ್ತದೆ.
ಕೋಇನ್ಶೂರೆನ್ಸ್ ಪ್ಲಾನ್ ಗಳ ಕೆಲವು ವೈಶಿಷ್ಟ್ಯಗಳು ಈ ಕೆಳಗಿನಂತಿವೆ:
- ಇದು ದೊಡ್ಡ ಕ್ಲೈಮ್ಗಳ ವಿರುದ್ಧ ಇನ್ಶೂರರ್ ರನ್ನು ರಕ್ಷಿಸಲು ಸಹಾಯ ಮಾಡುತ್ತದೆ.
- ಪಾಲಿಸಿಹೋಲ್ಡರ್ ಗಳು ತಮ್ಮ ಕೋಇನ್ಶೂರೆನ್ಸ್ ಪ್ಲಾನ್ ಕಾರ್ಯರೂಪಕ್ಕೆ ಬರುವ ಮೊದಲು ತಮ್ಮ ಡಿಡಕ್ಟಿಬಲ್ ಅಮೌಂಟ್ ಅನ್ನು ಪಾವತಿಸಬೇಕಾಗುತ್ತದೆ.
- ಕೋಇನ್ಶೂರೆನ್ಸ್ ಪರ್ಸಂಟೇಜ್ ಫಿಕ್ಸ್ಡ್ ಆಗಿರುತ್ತದೆ.
- ಈ ಪರ್ಸಂಟೇಜ್ ನಿಮ್ಮ ಇನ್ಶೂರೆನ್ಸ್ ಪಾಲಿಸಿಯು ಉಳಿದ ಅಮೌಂಟ್ ಅನ್ನು ಪಾವತಿಸುವ ಮೊದಲು ನೀವು ಒಂದು ವರ್ಷಕ್ಕೆ ಪಾವತಿಸಬಹುದಾದ ಗರಿಷ್ಠ ಅಮೌಂಟ್ ಆಗಿದೆ.
ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗೆ ಈ ಪ್ರತಿಯೊಂದು ನಿಯಮಗಳು ಏನು ಎಂಬುದನ್ನು ನಾವು ಈಗ ವಿವರಿಸಿದ್ದೇವೆ, ಇವುಗಳಲ್ಲಿ ಪ್ರತಿಯೊಂದರ ನಡುವಿನ ವ್ಯತ್ಯಾಸಗಳನ್ನು ನಾವು ನೋಡೋಣ.