ಹ್ಯುಂಡೈ ಕಡಿಮೆ ಅವಧಿಯಲ್ಲಿ ಯಶಸ್ವಿಯಾಗಿ ಭಾರಿ ಜನಪ್ರಿಯತೆಯನ್ನು ಗಳಿಸಿದೆ. ಈ ನಿಟ್ಟಿನಲ್ಲಿ, ಹ್ಯುಂಡೈ ವರ್ನಾ ಮಾಡೆಲ್ ಕಡಿಮೆ ನಿರ್ವಹಣಾ ವೆಚ್ಚದಲ್ಲಿ ಅತ್ಯುತ್ತಮ ಮೈಲೇಜ್ ಒದಗಿಸುವ ಕಾರ್ ಎಂಬ ಮೆಚ್ಚುಗೆಯನ್ನು ಗಳಿಸಿಕೊಂಡಿದೆ. ಈ ಕಾರ್ 1.5-ಲೀಟರ್, 1497 ಸಿಸಿ ಫೋರ್-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಒಳಗೊಂಡಿದೆ, 4500 ಆರ್ಪಿಎಂನಲ್ಲಿ 144 ಎನ್ಎಂ ಟಾರ್ಕ್ ಮತ್ತು 6,300 ಆರ್ಪಿಎಂನಲ್ಲಿ 113ಬಿಎಚ್ಪಿ ಶಕ್ತಿಯನ್ನು ಉತ್ಪಾದಿಸುತ್ತದೆ. ಕಾರಿನ 1.0-ಲೀಟರ್ ಟರ್ಬೊ ಎಂಜಿನ್ ಏಳು-ವೇಗದ ಡಿಸಿಟಿ ಟ್ರಾನ್ಸ್ ಮಿಷನ್ ಸಂಪರ್ಕ ಹೊಂದಿದೆ.
ಕಾರಿನ ಒಳಾಂಗಣ ಭಾಗಗಳು ಗ್ರಾಹಕರ ಕಣ್ಣುಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಪ್ರೀಮಿಯಂ ಡ್ಯುಯಲ್-ಟೋನ್ ಬೀಜ್ ಮತ್ತು ಫ್ರಂಟ್/ರೇರ್ ಪವರ್ ವಿಂಡೋಗಳು ಮತ್ತು ಹಿಂಭಾಗದ ಏಸಿ ವೆಂಟ್ಗಳು ಸೇರಿದಂತೆ ಹಲವು ವೈಶಿಷ್ಟ್ಯಗಳು ಹ್ಯುಂಡೈ ವರ್ನಾದ ಹಲವು ವೇರಿಯಂಟ್ ಗಳಲ್ಲಿ ಸ್ಟಾಂಡರ್ಡ್ ಆಗಿದೆ. ಇದಲ್ಲದೆ, ಈ ಕಾರ್ ಅನ್ನು ಅದರ ಡ್ಯುಯಲ್ ಫ್ರಂಟ್ ಏರ್ಬ್ಯಾಗ್ಗಳು, ರಿವರ್ಸ್ ಪಾರ್ಕಿಂಗ್ ಸೆನ್ಸರ್ಗಳು, ಸ್ಪೀಡ್ ಅಲರ್ಟ್ ಮತ್ತು ಸೆಂಟ್ರಲ್ ಲಾಕಿಂಗ್ ವೈಶಿಷ್ಟ್ಯಗಳ ಕಾರಣದಿಂದಾಗಿ ಸುರಕ್ಷಿತ ಆಯ್ಕೆಗಳಲ್ಲಿ ಒಂದೆಂದು ಪರಿಗಣಿಸಬಹುದಾಗಿದೆ. ಈ ಮಾಡೆಲ್ ಮುಂಭಾಗದ ಸೀಟ್ ಬೆಲ್ಟ್ ಪ್ರಿ-ಟೆನ್ಷನರ್ಗಳು, ಇಂಪ್ಯಾಕ್ಟ್ ಸೆನ್ಸಿಂಗ್ನೊಂದಿಗೆ ಅಟೋ ಡೋರ್ ಅನ್ಲಾಕ್, ಎಮರ್ಜೆನ್ಸಿ ಬ್ರೇಕ್ ಸಿಗ್ನಲ್, ಸ್ಪೀಡ್ ಸೆನ್ಸಿಂಗ್ ಆಟೋ ಡೋರ್ ಲಾಕ್, ಇಮೊಬಿಲೈಸರ್ ಮತ್ತು ಡ್ಯುಯಲ್ ಹಾರ್ನ್ ಅನ್ನು ಸಹ ಹೊಂದಿದೆ.
ಮತ್ತೊಂದೆಡೆ, ಹ್ಯುಂಡೈ ವರ್ನಾದ ಹೊರಭಾಗ ಕೂಡ ಒಳಭಾಗಕ್ಕೆ ಸಮಾನವಾಗಿ ಆಕರ್ಷಕವಾಗಿದೆ. ಅಗಲವಾದ ಕ್ರೋಮ್ ಮೆಶ್ ಗ್ರಿಲ್ ಮತ್ತು ಟ್ರಯಾಂಗುಲರ್ ಹೌಸಿಂಗ್ ನಲ್ಲಿರುವ ದುಂಡಾದ ಫಾಗ್ ಲ್ಯಾಂಪ್ಗಳೊಂದಿಗೆ ಬರುವ ಈ ಮಾಡೆಲ್ ಅದರ ಬೆಲೆಯಲ್ಲಿಯೂ ಅನನ್ಯವಾಗಿದೆ. ಕಾರಿನ ವೇರಿಯಂಟ್ ಗಳನ್ನು ಅವಲಂಬಿಸಿ ಹೆಡ್ಲ್ಯಾಂಪ್ಗಳ ವಿಧಗಳು ಬದಲಾಗುತ್ತವೆ. ಕೆಲವರು ಹ್ಯಾಲೊಜಿನ್ ಹೆಡ್ಲ್ಯಾಂಪ್ಗಳನ್ನು ಪಡೆದರೆ, ಇತರರು ಪ್ರೊಜೆಕ್ಟರ್ ಹೆಡ್ಲ್ಯಾಂಪ್ಗಳನ್ನು ಪಡೆಯುತ್ತಾರೆ. ಈ ಕಾರಿನ ಬೇಸ್ ಟ್ರಿಮ್ ಉಕ್ಕಿನ ಚಕ್ರಗಳ ಮೇಲೆ ಸವಾರಿ ಮಾಡುತ್ತದೆ, ಆದರೆ ಇತರ ವೇರಿಯಂಟ್ ಗಳು ಬೂದು ಅಥವಾ ಡೈಮಂಡ್-ಕಟ್ ಅಲಾಯ್ ವೀಲ್ ಗಳನ್ನು ಪಡೆಯಬಹುದು.
ಆದಾಗ್ಯೂ, ಹ್ಯುಂಡೈ ನೀಡುವ ವೈಶಿಷ್ಟ್ಯಗಳು ಮತ್ತು ಸೌಲಭ್ಯಗಳ ಹೊರತಾಗಿಯೂ, ಸಮರ್ಥ ಚಾಲಕ ಕೂಡ ಹ್ಯುಂಡೈ ವರ್ನಾವನ್ನು ಚಾಲನೆ ಮಾಡುವ ಸಂದರ್ಭದಲ್ಲಿ ಆಕಸ್ಮಿಕ ಡ್ಯಾಮೇಜ್ ಗಳನ್ನು ಎದುರಿಸಬೇಕಾಗಬಹುದು. ಆದ್ದರಿಂದ, ಹ್ಯುಂಡೈ ವರ್ನಾ ಕಾರ್ ಇನ್ಶೂರೆನ್ಸ್ ಅನ್ನು ಕಾರಿನ ಜೊತೆಗೆ ಖರೀದಿಸುವುದು ಮಾಲೀಕರಿಗೆ ಪ್ರಯೋಜನಕಾರಿಯಾಗಿದೆ. ಇದಲ್ಲದೆ, ಕಾನೂನು ಪರಿಣಾಮಗಳನ್ನು ತಪ್ಪಿಸಲು 1988ರ ಮೋಟಾರ್ ವೆಹಿಕಲ್ ಆ್ಯಕ್ಟ್, ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸುವುದನ್ನು ಕಡ್ಡಾಯಗೊಳಿಸಿದೆ.