ಯುಎಸ್-ಮೂಲದ ಆಟೋಮೊಬೈಲ್ ತಯಾರಿಕಾ ಕಂಪನಿ, ಜೀಪ್ ಭಾರತದಲ್ಲಿ ಹೊಸ ಶ್ರೇಣಿಯ ಎಸ್ಯುವಿ ಕಂಪಾಸ್ ವೇರಿಯಂಟ್ಗಳನ್ನು ಅನಾವರಣಗೊಳಿಸಿದೆ. ಜೀಪ್ ಬ್ರ್ಯಾಂಡ್ ಡೀಲರ್ಶಿಪ್ಗಳು 2ನೇ ಫೆಬ್ರವರಿ 2021ರಿಂದ ಗ್ರಾಹಕರಿಗೆ ಟೆಸ್ಟ್ ಡ್ರೈವ್ಗಳು ಮತ್ತು ವಾಹನ ವಿತರಣೆಯನ್ನು ಪ್ರಾರಂಭಿಸಿವೆ.
ಈ ಮಾದರಿಯು ಮೂರು ವರ್ಷಗಳ ಹಿಂದೆಯೇ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ತನ್ನ ಅಸ್ತಿತ್ವವನ್ನು ಹೊಂದಿತ್ತಾದರೂ, ಇದು ಪ್ರಮುಖ ಫೇಸ್ಲಿಫ್ಟ್ ಹೊಂದಿದ ಮೊದಲ ಕಾರ್ ಆಗಿದೆ.
ಇದಲ್ಲದೆ, ಈ ಮಾದರಿಯು 2017ರಲ್ಲಿ ಭಾರತದ ಹೆಚ್ಚು ಪ್ರಶಸ್ತಿ ಪಡೆದ ಎಸ್ಯುವಿ ಆಗಿತ್ತು, ಮತ್ತು ಬ್ರಾಂಡ್ ಟ್ರಸ್ಟ್ ರಿಪೋರ್ಟ್ ಇಂಡಿಯಾ ಸ್ಟಡಿ 2019ರ ಪ್ರಕಾರ, ಕಂಪಾಸ್ "ಭಾರತದ ಅತ್ಯಂತ ವಿಶ್ವಾಸಾರ್ಹ ಆಟೋಮೊಬೈಲ್ ಬ್ರಾಂಡ್" ಎಂಬ ಹೆಗ್ಗಳಿಕೆ ಪಡೆದಿದೆ.
ನೀವು ಈಗಾಗಲೇ ಈ ಕಾರನ್ನು ಹೊಂದಿದ್ದರೆ ಅಥವಾ ಅದರ ನವೀಕರಿಸಿದ ಆವೃತ್ತಿಯನ್ನು ಖರೀದಿಸಲು ಯೋಜಿಸುತ್ತಿದ್ದರೆ, ನೀವು ಜೀಪ್ ಕಂಪಾಸ್ ಕಾರ್ ಇನ್ಶೂರೆನ್ಸ್ ಅನ್ನು ಪಡೆದುಕೊಳ್ಳುವುದನ್ನು ಪರಿಗಣಿಸಬೇಕು.
ಮೋಟಾರ್ ವೆಹಿಕಲ್ ಆ್ಯಕ್ಟ್, 1988ರ ಪ್ರಕಾರ ವ್ಯಕ್ತಿಗಳು ಥರ್ಡ್-ಪಾರ್ಟಿ ಕಾರು ಇನ್ಶೂರೆನ್ಸ್ ಅನ್ನು ಕಡ್ಡಾಯವಾಗಿ ಆರಿಸಿಕೊಳ್ಳಬೇಕು. ಈ ಇನ್ಶೂರೆನ್ಸ್ ಪಾಲಿಸಿಯು ಥರ್ಡ್-ಪಾರ್ಟಿ ವ್ಯಕ್ತಿ, ಪ್ರಾಪರ್ಟಿ ಅಥವಾ ವಾಹನಕ್ಕೆ ಉಂಟು ಮಾಡುವ ಡ್ಯಾಮೇಜ್ಗಳು ಅಥವಾ ನಷ್ಟವನ್ನು ಕವರ್ ಮಾಡುತ್ತದೆ.
ಆದಾಗ್ಯೂ, ಸಂಪೂರ್ಣ ಕವರೇಜ್ ಪ್ರಯೋಜನಗಳನ್ನು ಪಡೆಯಲು, ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸುವುದನ್ನು ಪರಿಗಣಿಸಬೇಕು.
ಭಾರತದಲ್ಲಿ, ಹಲವಾರು ಇನ್ಶೂರೆನ್ಸ್ ಪೂರೈಕೆದಾರರು ಸ್ಪರ್ಧಾತ್ಮಕ ಪ್ರೀಮಿಯಂಗಳಲ್ಲಿ ಜೀಪ್ ಕಂಪಾಸ್ಗಾಗಿ ಕಾರು ಇನ್ಶೂರೆನ್ಸ್ ಅನ್ನು ನೀಡುತ್ತಾರೆ. ಅಂಥಾ ಒಂದು ಇನ್ಶೂರರ್ ಡಿಜಿಟ್.
ಕೆಳಗಿನ ವಿಭಾಗದಲ್ಲಿ, ನೀವು ಜೀಪ್ ಕಂಪಾಸ್, ಕಾರ್ ಇನ್ಶೂರೆನ್ಸ್ ಪಾಲಿಸಿಯ ಪ್ರಯೋಜನಗಳು ಮತ್ತು ಇನ್ಶೂರೆನ್ಸ್ ಪೂರೈಕೆದಾರರಾಗಿ ಡಿಜಿಟ್ ಅನ್ನು ಆಯ್ಕೆ ಮಾಡಲು ಇರುವ ಕಾರಣಗಳ ಕುರಿತ ವಿವರಗಳನ್ನು ಕಾಣಬಹುದು.