ಮಾರುತಿ ಸುಜುಕಿ ಸ್ವಿಫ್ಟ್ ಅನ್ನು ಮೇ 2005 ರಲ್ಲಿ ಭಾರತೀಯ ಮಾರ್ಕೆಟ್ ನಲ್ಲಿ ಬಿಡುಗಡೆ ಮಾಡಲಾಯಿತು. ಹೆಚ್ಚಿನ ಫ್ಯೂಯೆಲ್ ದಕ್ಷತೆ ಮತ್ತು ಕಡಿಮೆ ಮೆಂಟೇನೆನ್ಸ್ ಕಾಸ್ಟ್ ಕಾರಣದಿಂದಾಗಿ ಸ್ವಿಫ್ಟ್ ಭಾರತದಲ್ಲಿನ ಅತ್ಯಂತ ಜನಪ್ರಿಯ ಫೋರ್-ವೀಲರ್ ವಾಹನಗಳಲ್ಲಿ ಒಂದಾಗಿದೆ. ಇದೊಂದು ಐದು ಸೀಟರ್ ಹ್ಯಾಚ್ಬ್ಯಾಕ್ ಆಗಿದ್ದು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಹೊಂದಿದೆ.
ಸ್ವಿಫ್ಟ್ ಸರಾಸರಿ 23.76 ಕಿಮೀ/ಲೀ ಮೈಲೇಜ್ ಮತ್ತು 1197 ಸಿಸಿ ಎಂಜಿನ್ ಡಿಸ್ಪ್ಲೇಸ್ಮೆಂಟ್ ನೊಂದಿಗೆ ಬರುತ್ತದೆ. ಇದರ ಫ್ಯೂಯೆಲ್ ಟ್ಯಾಂಕ್ 37 ಲೀಟರ್ ಫ್ಯೂಯೆಲ್ ಅನ್ನು ಸಂಗ್ರಹಿಸಬಹುದು ಮತ್ತು ಮಾರುತಿ ಸುಜುಕಿ ಸ್ವಿಫ್ಟ್ 268 ಲೀಟರ್ ಬೂಟ್ ಸ್ಪೇಸ್ ಅನ್ನು ಹೊಂದಿದೆ.
ಇದು ನಾಲ್ಕು ಸಿಲಿಂಡರ್ ಎಂಜಿನ್ ಹೊಂದಿದ್ದು, 88.50ಬಿ ಎಚ್ ಪಿ@6000ಆರ್ ಪಿ ಎಂ ನ ಗರಿಷ್ಟ ಪವರ್ ಮತ್ತು 113ಎನ್ ಎಂ@4400ಆರ್ ಪಿ ಎಂ ವರೆಗಿನ ಗರಿಷ್ಠ ಟಾರ್ಕ್ ಅನ್ನು ಒದಗಿಸುತ್ತದೆ.
ಸ್ವಿಫ್ಟ್ನ ಒಳಭಾಗವು ಫ್ರಂಟ್ ಡೋಮ್ ಲ್ಯಾಂಪ್, ಬಣ್ಣದ ಮಲ್ಟಿ-ಇನ್ಫಾರ್ಮೇಶನ್ ಡಿಸ್ಪ್ಲೇ, ಕ್ರೋಮ್ ಪಾರ್ಕಿಂಗ್ ಬ್ರೇಕ್ ಲಿವರ್ ಟಿಪ್, ಎತ್ತರ-ಹೊಂದಾಣಿಕೆ ಮಾಡಬಲ್ಲ ಡ್ರೈವರ್ ಸೀಟ್ ಇತ್ಯಾದಿಗಳನ್ನು ಒಳಗೊಂಡಿದೆ. ಈ ಕಾರಿನ ಹೊರಭಾಗವು ಎಲ್ಇಡಿ ಹೆಡ್ಲೈಟ್ಗಳು, ಡೇ ಟೈಮ್ ರನ್ನಿಂಗ್ ಲೈಟ್ಗಳು, ಎಲ್ಇಡಿ ಟೈಲ್ಲೈಟ್ಗಳು, ಅಲಾಯ್ ವ್ಹೀಲ್ಸ್ ಮತ್ತು ಪವರ್ ಆಂಟೆನಾವನ್ನು ಒಳಗೊಂಡಿದೆ.
ಈ ಕಾರು, ಪಾದಚಾರಿ ರಕ್ಷಣೆಯ ಅನುಸರಣೆ, ಚಾಲಕ ಮತ್ತು ಸಹ-ಚಾಲಕ ಸೈಡ್ ಸೀಟ್ ಬೆಲ್ಟ್ ರಿಮೈಂಡರ್, ಸ್ಪೀಡ್ ಅಲರ್ಟ್, ಇಬಿಡಿ, ಫ್ರಂಟ್ ಇಂಪ್ಯಾಕ್ಟ್ ಬೀಮ್ಗಳು ಮುಂತಾದ ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ.
ಈ ಸುರಕ್ಷತಾ ವೈಶಿಷ್ಟ್ಯಗಳ ಹೊರತಾಗಿಯೂ, ಮಾರುತಿ ಸುಜುಕಿ ಸ್ವಿಫ್ಟ್ ರಸ್ತೆಯ ಏರುಪೇರುಗಳಿಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ, ವಾಹನ ರಿಪೇರಿ ವೆಚ್ಚಗಳು ಮತ್ತು ಪೆನಾಲ್ಟಿಗಳಿಂದ ಉಂಟಾಗಬಹುದಾದ ಹಣಕಾಸಿನ ಲಯಬಿಲಿಟಿಗಳನ್ನು ತಪ್ಪಿಸಲು ಮಾರುತಿ ಸುಜುಕಿ ಸ್ವಿಫ್ಟ್ ಕಾರ್ ಇನ್ಶೂರೆನ್ಸ್ ಅನ್ನು ಆರಿಸಿಕೊಳ್ಳಬೇಕು.
ಡಿಜಿಟ್ನಂತಹ ಹೆಸರಾಂತ ಸ್ವಿಫ್ಟ್ ಇನ್ಶೂರೆನ್ಸ್ ಪೂರೈಕೆದಾರರು ತಮ್ಮ ಗ್ರಾಹಕರಿಗೆ ವ್ಯಾಪಕ ರೇಂಜ್ಯ ಪ್ರಯೋಜನಗಳನ್ನು ಒದಗಿಸುತ್ತಾರೆ. ಇನ್ನಷ್ಟು ತಿಳಿಯಲು ಓದುವುದನ್ನು ಮುಂದುವರಿಸಿ!