ರೆನಾಲ್ಟ್ ಕ್ವಿಡ್ ಕಾರು ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವ ಮೊದಲು ಹಲವಾರು ಅಂಶಗಳನ್ನು ವಿಶ್ಲೇಷಿಸಬೇಕು. ಡಿಜಿಟ್ನಂತಹ ಇನ್ಶೂರೆನ್ಸ್ ಕಂಪನಿಗಳು ಕೈಗೆಟುಕುವ ರೆನಾಲ್ಟ್ ಕ್ವಿಡ್ ಇನ್ಶೂರೆನ್ಸ್ ಬೆಲೆಯಲ್ಲಿ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯನ್ನು ನೀಡುತ್ತವೆ. ಡಿಜಿಟ್ ತನ್ನ ಗ್ರಾಹಕರಿಗೆ ಏನನೆಲ್ಲಾ ನೀಡುತ್ತದೆ ಎಂಬುದನ್ನು ತಿಳಿಯಲು ಓದುತ್ತಿರಿ -
1. ಇನ್ಶೂರೆನ್ಸ್ ಪಾಲಿಸಿಗಳ ವ್ಯಾಪಕ ರೇಂಜ್
ರೆನಾಲ್ಟ್ ಕ್ವಿಡ್ ಗಾಗಿ ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸಲು ಬಯಸುವ ವಾಹನ ಮಾಲೀಕರಿಗೆ ಡಿಜಿಟ್ ಎರಡು ಇನ್ಶೂರೆನ್ಸ್ ಪಾಲಿಸಿ ಆಯ್ಕೆಗಳನ್ನು ಒದಗಿಸುತ್ತದೆ. ಇವುಗಳು ಕೆಳಗಿನವುಗಳನ್ನು ಒಳಗೊಂಡಿದೆ:
●ಥರ್ಡ್-ಪಾರ್ಟಿ ಪಾಲಿಸಿ – 1988 ರ ಮೋಟಾರ್ ವೆಹಿಕಲ್ಸ್ ಆಕ್ಟ್ ಪ್ರಕಾರ, ಪ್ರತಿ ಕಾರು ಮಾಲೀಕರು ಥರ್ಡ್ ಪಾರ್ಟಿ ಇನ್ಶೂರೆನ್ಸ್ ಪಾಲಿಸಿಯನ್ನು ಆರಿಸಿಕೊಳ್ಳುವುದು ಕಡ್ಡಾಯವಾಗಿದೆ. ಈ ಪಾಲಿಸಿಯ ಅಡಿಯಲ್ಲಿ, ವಾಹನ ಮಾಲೀಕರು ತಮ್ಮ ಕಾರು ಯಾವುದೇ ಮೂರನೇ ವ್ಯಕ್ತಿ, ಪ್ರಾಪರ್ಟಿ ಅಥವಾ ವಾಹನಕ್ಕೆ ಹಾನಿಯನ್ನುಂಟುಮಾಡಿದಾಗ ಯಾವುದೇ ಥರ್ಡ್ ಪಾರ್ಟಿ ಲಯಬಿಲಿಟಿಗಳಿಂದ ರಕ್ಷಿಸಲ್ಪಡುತ್ತಾರೆ. ಇದಲ್ಲದೆ, ಡಿಜಿಟ್ ಮೊಕದ್ದಮೆ ಸಮಸ್ಯೆಗಳನ್ನು ಯಾವುದಾದರೂ ಇದ್ದರೆ ಪರಿಹರಿಸುತ್ತದೆ.
●ಕಾಂಪ್ರೆಹೆನ್ಸಿವ್ ಪಾಲಿಸಿ - ಡಿಜಿಟ್ನ ಕಾಂಪ್ರೆಹೆನ್ಸಿವ್ ಕ್ವಿಡ್ ಇನ್ಶೂರೆನ್ಸ್ ಪಾಲಿಸಿ ಹೊಂದಿರುವ ವ್ಯಕ್ತಿಗಳು ಮೂರನೇ ವ್ಯಕ್ತಿ ಮತ್ತು ಸ್ವಂತ ಡ್ಯಾಮೇಜುಗಳಿಂದ ರಕ್ಷಿಸಲ್ಪಡುತ್ತಾರೆ. ಇದಲ್ಲದೆ, ಅವರು ತಮ್ಮ ಪಾಲಿಸಿ ಪ್ರೀಮಿಯಂಗಳೊಂದಿಗೆ ನಾಮಮಾತ್ರದ ಬೆಲೆಗಳಲ್ಲಿ ಹಲವಾರು ಹೆಚ್ಚುವರಿ ಸೌಲಭ್ಯಗಳನ್ನು ಆಯ್ಕೆ ಮಾಡಬಹುದು.
2. ಗ್ಯಾರೇಜ್ಗಳ ವ್ಯಾಪಕ ನೆಟ್ವರ್ಕ್
ಡಿಜಿಟ್ ದೇಶಾದ್ಯಂತ ಹಲವಾರು ನೆಟ್ವರ್ಕ್ ಗ್ಯಾರೇಜ್ಗಳೊಂದಿಗೆ ಟೈ-ಅಪ್ಗಳನ್ನು ಹೊಂದಿದೆ. ಆದ್ದರಿಂದ ನೀವು ಯಾವುದೇ ವಾಹನ-ಸಂಬಂಧಿತ ಸಮಸ್ಯೆಯಿಂದಾಗಿ ರಸ್ತೆಯಲ್ಲಿ ಸಿಲುಕಿಕೊಂಡಿದ್ದರೆ, ನಿಮ್ಮ ಸಮೀಪದಲ್ಲಿ ನೀವು ಯಾವಾಗಲೂ ನೆಟ್ವರ್ಕ್ ಗ್ಯಾರೇಜ್ ಗೆ ಹೋಗಬಹುದು. ಈ ನೆಟ್ವರ್ಕ್ ಗ್ಯಾರೇಜ್ಗಳು ಅಥವಾ ವರ್ಕ್ ಶಾಪಿಗೆ ಭೇಟಿ ನೀಡಿ ಮತ್ತು ಕ್ಯಾಶ್ಲೆಸ್ ರಿಪೇರಿ ಮತ್ತು ಸೇವೆಯನ್ನು ಪಡೆದುಕೊಳ್ಳಿ. ನಿಮ್ಮ ಪರವಾಗಿ ಡಿಜಿಟ್ ಶುಲ್ಕವನ್ನು ಪಾವತಿಸುತ್ತದೆ.
3. 24x7 ಗ್ರಾಹಕ ಬೆಂಬಲ
ಡಿಜಿಟ್ ಒಂದು ಸ್ಪಂದಿಸುವ ಗ್ರಾಹಕ ಬೆಂಬಲ ಟೀಂ ಅನ್ನು ಹೊಂದಿದೆ. ಯಾವುದೇ ಇನ್ಶೂರೆನ್ಸ್ ಅಥವಾ ವಾಹನ-ಸಂಬಂಧಿತ ಸಮಸ್ಯೆಯನ್ನು ಎದುರಿಸುತ್ತಿರುವ ಯಾರಿಗಾದರೂ ಸಹಾಯ ಮಾಡಲು ಈ ಟೀಂ ರಾಷ್ಟ್ರೀಯ ರಜಾದಿನಗಳಲ್ಲಿಯೂ ಸಹ 24x7 ಕೆಲಸ ಮಾಡುತ್ತದೆ. 1800 258 5956 ಅನ್ನು ಡಯಲ್ ಮಾಡಿ ಮತ್ತು ನಿಮ್ಮ ಪ್ರಶ್ನೆಗಳನ್ನು ಯಾವುದೇ ಸಮಯದಲ್ಲಿ ಪರಿಹರಿಸಿ.
4. ಸುಲಭ ಕ್ಲೈಮ್ ಫೈಲಿಂಗ್ ಪ್ರಕ್ರಿಯೆ
ಡಿಜಿಟ್ ಜೊತೆ, ಸಮಯ ತೆಗೆದುಕೊಳ್ಳುವ ಮತ್ತು ಭಾರಿ ಕ್ಲೈಮ್ ಫೈಲಿಂಗ್ ವಿಧಾನವನ್ನು ಕಡಿತಗೊಳಿಸಿ. ಈ ಮೂರು ಹಂತಗಳನ್ನು ಅನುಸರಿಸುವ ಮೂಲಕ ನಿಮ್ಮ ರೆನಾಲ್ಟ್ ಕ್ವಿಡ್ ಕಾರ್ ಇನ್ಶೂರೆನ್ಸ್ ಪಾಲಿಸಿಯ ವಿರುದ್ಧ ನೀವು ಕ್ಲೈಮ್ ಅನ್ನು ಸಲ್ಲಿಸಬಹುದು -
ಹಂತ 1: ಸ್ವಯಂ ತಪಾಸಣೆ ಲಿಂಕ್ ಸ್ವೀಕರಿಸಲು ನಿಮ್ಮ ರಿಜಿಸ್ಟರ್ಡ್ ಕಾಂಟಾಕ್ಟ್ ಸಂಖ್ಯೆಯಿಂದ 1800 258 5956 ಅನ್ನು ಡಯಲ್ ಮಾಡಿ.
ಹಂತ 2: ಸ್ವಯಂ ತಪಾಸಣೆ ಲಿಂಕ್ ಅನ್ನು ಕ್ಲಿಕ್ ಮಾಡಿ ಮತ್ತು ಡ್ಯಾಮೇಜ್ ಆದ ವಾಹನದ ಚಿತ್ರಗಳನ್ನು ಅಪ್ಲೋಡ್ ಮಾಡಿ.
ಹಂತ 3: ರಿಪೇರಿ ಮೋಡ್ ಅನ್ನು ಆಯ್ಕೆಮಾಡಿ - "ಕ್ಯಾಶ್ಲೆಸ್" ಅಥವಾ "ರಿಇಂಬರ್ಸ್ಮೆಂಟ್".
5. ಮಲ್ಟಿಪಲ್ ಹೆಚ್ಚುವರಿ ಪ್ರಯೋಜನಗಳು
ರೆನಾಲ್ಟ್ ಕ್ವಿಡ್ಗಾಗಿ ಡಿಜಿಟ್ನ ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಹೊಂದಿರುವ ಜನರು ಹೆಚ್ಚುವರಿ ಶುಲ್ಕಗಳ ವಿರುದ್ಧ ತಮ್ಮ ಪಾಲಿಸಿ ಪ್ರೀಮಿಯಂಗಳೊಂದಿಗೆ ಹಲವಾರು ಹೆಚ್ಚುವರಿ ಸೌಲಭ್ಯಗಳನ್ನು ಪಡೆಯಬಹುದು. ಈ ಆ್ಯಡ್-ಆನ್ಗಳಲ್ಲಿ ಕೆಲವು ಸೇರಿವೆ -
● ಕನ್ಸ್ಯುಮೇಬಲ್ ಕವರೇಜ್
● ರೋಡ್ ಸೈಡ್ ಅಸಿಸ್ಟೆನ್ಸ್
● ಎಂಜಿನ್ ಮತ್ತು ಗೇರ್ಬಾಕ್ಸ್ ಪ್ರೊಟೆಕ್ಷನ್ ಕವರ್
● ಟೈರ್ ಪ್ರೊಟೆಕ್ಷನ್ ಕವರ್
● ಝೀರೋ ಡೆಪ್ರಿಸಿಯೇಷನ್ ಕವರ್
6. ಇನ್ಶೂರ್ಡ್ ಡಿಕ್ಲರೇಡ್ ವಾಲ್ಯೂ ಕಸ್ಟಮೈಸೇಶನ್
ಇನ್ಶೂರ್ಡ್ ಡಿಕ್ಲರೇಡ್ ವಾಲ್ಯೂ (ಐಡಿವಿ ) ನಿಮ್ಮ ಕಾರಿನ ಪ್ರಸ್ತುತ ಮಾರುಕಟ್ಟೆ ಮೌಲ್ಯವನ್ನು ನಿರ್ಧರಿಸುತ್ತದೆ. ಡಿಜಿಟ್ ತನ್ನ ಗ್ರಾಹಕರಿಗೆ ಅವರ ಅನುಕೂಲಕ್ಕೆ ಅನುಗುಣವಾಗಿ ಅವರ ವಾಹನದ ಐಡಿವಿ ಅನ್ನು ಹೆಚ್ಚಿಸುವ ಅಥವಾ ಕಡಿಮೆ ಮಾಡುವ ಪ್ರಯೋಜನವನ್ನು ಒದಗಿಸುತ್ತದೆ. ಹೆಚ್ಚಿನ ಐಡಿವಿ ಎಂದರೆ ನಿಮ್ಮ ಕಾರು ಕಳುವಾದಾಗ ಅಥವಾ ಬೆಂಕಿಗೆ ಆಹುತಿಯಾದ ಸಂದರ್ಭದಲ್ಲಿ ಹೆಚ್ಚಿನ ಪರಿಹಾರದ ಮೊತ್ತ ಮತ್ತು ಕಡಿಮೆ ಐಡಿವಿ ಎಂದರೆ ಕಡಿಮೆ ಪಾಲಿಸಿ ಪ್ರೀಮಿಯಂಗಳು.
7. ಆನ್ಲೈನ್ ಇನ್ಶೂರೆನ್ಸ್ ಪ್ರಾಡಕ್ಟ್ ಗಳು ಮತ್ತು ಸರ್ವೀಸ್ ಗಳು
ಡಿಜಿಟ್ನ ಅಧಿಕೃತ ವೆಬ್ಸೈಟ್ನಲ್ಲಿ ನೀವು ಎಲ್ಲಾ ಇನ್ಶೂರೆನ್ಸ್ ಪ್ರಾಡಕ್ಟ್ ಗಳು ಮತ್ತು ಸರ್ವೀಸ್ ಗಳನ್ನು ಕಾಣಬಹುದು. ಆದ್ದರಿಂದ ನೀವು ರೆನಾಲ್ಟ್ ಕ್ವಿಡ್ ಇನ್ಶೂರೆನ್ಸ್ ರಿನೀವಲ್ ಅನ್ನು ಹುಡುಕುತ್ತಿದ್ದರೆ, ಅಧಿಕೃತ ಪೋರ್ಟಲ್ನಲ್ಲಿ ಸೂಕ್ತವಾದ ಆಯ್ಕೆಯನ್ನು ಕ್ಲಿಕ್ ಮಾಡಿ.
ಇದಲ್ಲದೆ, ನೀವು ಡಿಜಿಟ್ನ ಡೋರ್ ಸ್ಟೆಪ್ ಪಿಕಪ್ ಮತ್ತು ಡ್ರಾಪ್ ಸೌಲಭ್ಯವನ್ನು ಆರಿಸಿಕೊಳ್ಳಬಹುದು. ಒಮ್ಮೆ ನೀವು ಈ ಸೇವೆಯನ್ನು ಆರಿಸಿಕೊಂಡರೆ, ನಿಮ್ಮ ವಾಹನವನ್ನು ನಿಮ್ಮ ಮನೆಯಿಂದ ಪಿಕ್ ಮಾಡಲಾಗುತ್ತದೆ ಮತ್ತು ರಿಪೇರಿಗಾಗಿ ನೆಟ್ವರ್ಕ್ ಗ್ಯಾರೇಜ್ಗೆ ಕೊಂಡೊಯ್ಯಲಾಗುತ್ತದೆ. ಅಗತ್ಯ ದುರಸ್ತಿ ಪೂರ್ಣಗೊಂಡ ನಂತರ, ಡಿಜಿಟ್ನ ತಂತ್ರಜ್ಞರ ಟೀಮ್ ಕಾರನ್ನು ನಿಮ್ಮ ಮನೆಗೆ ಹಿಂತಿರುಗಿಸುತ್ತದೆ. ನಿಮ್ಮ ವಾಹನವು ಚಲಾಯಿಸಬಹುದಾದ ಸ್ಥಿತಿಯಲ್ಲಿಲ್ಲದ ಸಂದರ್ಭಗಳಲ್ಲಿ ಈ ಸೌಲಭ್ಯವು ಸಹಕಾರಿಯಾಗಿದೆ.
ಆದ್ದರಿಂದ, ನಿಮ್ಮ ರೆನಾಲ್ಟ್ ಕ್ವಿಡ್ ಕಾರ್ ಇನ್ಶೂರೆನ್ಸ್ ಪೂರೈಕೆದಾರರನ್ನು ಆಯ್ಕೆಮಾಡುವಾಗ ಈ ಅಂಶಗಳನ್ನು ನೆನಪಿನಲ್ಲಿಡಿ.