ಹೀರೋ ಬೈಕ್ ಇನ್ಶೂರೆನ್ಸ್

ಕೇವಲ ₹714 ರಿಂದ ಆರಂಭವಾಗುವ ಹೀರೋ ಬೈಕ್ ಇನ್ಶೂರೆನ್ಸ್ ಅನ್ನು ಪಡೆಯಿರಿ.

Third-party premium has changed from 1st June. Renew now

ಹೀರೋ ಬೈಕ್ ಅನ್ನು ಖರೀದಿಸುತ್ತಿದ್ದೀರಾ? ಈ ಬೈಕ್ ಗಳು ಇಷ್ಟು ಮೆಚ್ಚಿಗೆಗೆ ಪಾತ್ರವಾಗಲು ಕಾರಣ, ಹಾಗೂ ನಿಮ್ಮ ಬೈಕ್ ನ ಜೊತೆಯಲ್ಲಿ ಹೀರೋ ಬೈಕ್ ಇನ್ಶೂರೆನ್ಸ್ ಅನ್ನು ಖರೀದಿಸುವ ಮೊದಲು ನೀವು ನಿರೀಕ್ಷಿಸಬೇಕಾದ ವಿಷಯಗಳ ಬಗ್ಗೆ ಇಲ್ಲಿ ಎಲ್ಲವನ್ನೂ ತಿಳಿಯೋಣ. ಹೀರೋ ಮೋಟೋಕಾರ್ಪ್ ನ  ಮಾರಾಟ ವರದಿಯ ಪ್ರಕಾರ, 2018-19 ರಲ್ಲಿ, ಈ ಕಂಪನಿಯು 7.8 ದಶಲಕ್ಷಕ್ಕಿಂತಲೂ ಹೆಚ್ಚು ಟು ವೀಲರ್ ವಾಹನಗಳನ್ನು ಭಾರತದಲ್ಲಿ ಮಾರಾಟ ಮಾಡಿದೆ.(1)

ಇದರ ಜೊತೆ, 2018 ರ ಅಕ್ಟೋಬರ್ ಹಾಗೂ ಡಿಸೆಂಬರ್ ಮಧ್ಯೆ, ಈ ಕಂಪನಿಯು ರೂ.7,800 ಕೋಟಿಗಳಿಗಿಂತಲೂ ಹೆಚ್ಚು ಆದಾಯವನ್ನು ಗಳಿಸಿತ್ತು. (2

ಆದರೆ, ಈ ಬೈಕ್ ಗಳು ಇಷ್ಟು ಜನಪ್ರಿಯವಾಗಲು ಕಾರಣವೇನು? ಹೀರೋ ಮೋಟೋಕಾರ್ಪ್, ಫೋರ್ಬ್ಸ್ ನ ವಿಶ್ವದ 200 ಅತೀ ಗೌರವಾನ್ವಿತ ಕಂಪನಿಗಳಲ್ಲಿ ಒಂದಾಗಲು ಕಾರಣವೇನು? ಹಾಗೂ, ಹೀರೋ ಬೈಕ್ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯುವು, ಇದರ ಮಾಲೀಕರಿಗೆ, ಮುಖ್ಯವಾಗಿರುವುದು ಏಕೆ?

ಸರಿ, ಮೊದಲಿಗಂತೂ, ಥರ್ಡ್ ಪಾರ್ಟೀ ಹೊಣೆಗಾರಿಕಾ ಇನ್ಶೂರೆನ್ಸ್ ಪಾಲಿಸಿ ಪಡೆಯುವುದು 1988 ರ ಮೋಟಾರ್ ವಾಹನ ಅಧಿನಿಯಮದ ಪ್ರಕಾರ ಕಡ್ಡಾಯವಾಗಿದೆ. ನಿಮ್ಮ ಬಳಿ ಒಂದು ಥರ್ಡ್ ಪಾರ್ಟೀ ಹೊಣೆಗಾರಿಕಾ ಇನ್ಶೂರೆನ್ಸ್ ಪಾಲಿಸಿ ಕೂಡಾ ಇಲ್ಲದಿದ್ದರೆ ಟ್ರಾಫಿಕ್ ಉಲ್ಲಂಘನೆಗಾಗಿ ನಿಮಗೆ ದಂಡ ವಿಧಿಸಲಾಗುವುದು.

ಇದರ ಜೊತೆ, ನಿಮ್ಮ ಬೈಕ್ ಗೆ ಅಪಘಾತ, ಕಳವು, ಬೆಂಕಿ, ನೈಸರ್ಗಿಕ ವಿಪತ್ತು, ಇತ್ಯಾದಿಗಳಿಂದಾಗಿ ಹಾನಿಗೀಡಾಗುವ ಅಪಾಯವು ಇರುತ್ತದೆ. ಆದ್ದರಿಂದಲೇ ಬೈಕ್ ಇನ್ಶೂರೆನ್ಸ್ ಪಾಲಿಸಿ ಪಡೆಯುವುದು ಬಹಳ ಮುಖ್ಯವಾಗುತ್ತದೆ.

ಹೀರೋ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿ ಖರೀದಿಯ ವಿವರಗಳತ್ತ ಸಾಗುವ ಮುನ್ನ, ಈ ಬೈಕ್ ಗಳನ್ನು ತಯಾರಿಸುವ ಕಂಪನಿಯ ಒಂದು ಸಂಕ್ಷಿಪ್ತ ಇತಿಹಾಸವನ್ನು ತಿಳಿಯೋಣ.

ಹೀರೋ ಬೈಕ್ ಇನ್ಶೂರೆನ್ಸ್ ನಲ್ಲಿ ಏನೆಲ್ಲಾ ಕವರ್

ಏನೆಲ್ಲಾ ಕವರ್ ಆಗಿರುವುದಿಲ್ಲ?

ನೀವು ಕ್ಲೈಮ್ ಮಾಡುವಾಗ ಯಾವುದೇ ಆಶ್ಚರ್ಯ ಪಡಬೇಕಾದ ಸಂದರ್ಭ ಸೃಷ್ಟಿಯಾಗಬಾರದು ಎಂದರೆ ನಿಮ್ಮ ಎಲೆಕ್ಟ್ರಿಕ್ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಏನೆಲ್ಲಾ ಸಿಗುವುದಿಲ್ಲ ಎಂಬುದನ್ನು ತಿಳಿದುಕೊಳ್ಳುವುದು ಅಷ್ಟೇ ಮುಖ್ಯವಾಗಿದೆ. ಆದ್ದರಿಂದ ಅಂತಹ ಕೆಲವು ಸನ್ನಿವೇಶಗಳು ಇಲ್ಲಿವೆ:

 

ಥರ್ಡ್ ಪಾರ್ಟಿ ಪಾಲಿಸಿ ಹೋಲ್ಡರ್ ಗಾಗಿ ಇರುವಾಗ ಸ್ವಂತ ಹಾನಿಗಳು

ಥರ್ಡ್-ಪಾರ್ಟಿ ಅಥವಾ ಲಯಬಿಲಿಟೀಸ್ ಬೈಕ್ ಪಾಲಿಸಿಯ ಸಂದರ್ಭದಲ್ಲಿ, ಸ್ವಂತ ವಾಹನಕ್ಕೆ ಉಂಟಾದ ಹಾನಿಯನ್ನು ಒಳಗೊಂಡಿರುವುದಿಲ್ಲ.

 

ಕುಡಿದು ಅಥವಾ ಲೈಸೆನ್ಸ್ ಇಲ್ಲದೆ ಗಾಡಿ ಓಡಿಸುವುದು

ನೀವು ಕುಡಿದು ಸವಾರಿ ಮಾಡುತ್ತಿರುವ ಸಂದರ್ಭಗಳಲ್ಲಿ ಅಥವಾ ಮಾನ್ಯವಾದ ಟು ವೀಲರ್ ವಾಹನ ಲೈಸೆನ್ಸ್ ಇಲ್ಲದೆ ಗಾಡಿ ಓಡಿಸುತ್ತಿದ್ದರೆ, ನಿಮ್ಮ ಎಲೆಕ್ಟ್ರಿಕ್ ಬೈಕ್ ಇನ್ಶೂರೆನ್ಸ್ ನಿಮಗೆ ಕವರ್ ನೀಡುವುದಿಲ್ಲ.

 

ಮಾನ್ಯ ಡ್ರೈವಿಂಗ್ ಲೈಸೆನ್ಸ್ ಹೊಂದಿರುವವರು ಇಲ್ಲದೆ ವಾಹನ ಚಾಲನೆ ಮಾಡುತ್ತಿದ್ದರೆ

ನೀವು ಕಲಿಯುವವರ ಲೈಸೆನ್ಸ್ ಹೊಂದಿದ್ದು, ಪಿಲಿಯನ್ ಸೀಟಿನಲ್ಲಿ ಮಾನ್ಯವಾದ ಲೈಸೆನ್ಸ್-ಹೋಲ್ಡರ್ ಇಲ್ಲದೆ ನಿಮ್ಮ ಟು ವೀಲರ್ ವಾಹನವನ್ನು ಓಡಿಸುತ್ತಿದ್ದರೆ- ಆ ಸಂದರ್ಭಗಳಲ್ಲಿ ನಿಮ್ಮ ಕ್ಲೈಮ್  ಕವರ್ ಗೆ ಒಳಪಡುವುದಿಲ್ಲ.

 

ಪರಿಣಾಮವಾಗಿ ಉಂಟಾಗುವ ಹಾನಿಗಳು

ಅಪಘಾತದ ನೇರ ಪರಿಣಾಮವಲ್ಲದ ಯಾವುದೇ ಹಾನಿ (ಉದಾ. ಅಪಘಾತದ ನಂತರ, ಹಾನಿಗೊಳಗಾದ ಟು ವೀಲರ್  ವಾಹನವನ್ನು ತಪ್ಪಾಗಿ ಬಳಸಿ ಅದರ ಎಂಜಿನ್ ಹಾನಿಗೊಳಗಾದರೆ, ಅದನ್ನು ಪರಿಣಾಮದ ಹಾನಿ ಎಂದು ಪರಿಗಣಿಸಲಾಗುತ್ತದೆ ಮತ್ತು ಇಂತಹ ಸಂದರ್ಭಗಳಲ್ಲಿ ಇನ್ಶೂರೆನ್ಸ್ ಕವರ್ ನೀಡಲಾಗುವುದಿಲ್ಲ)

 

ಕೊಡುಗೆ ನಿರ್ಲಕ್ಷ್ಯಗಳು

ಯಾವುದೇ ಕೊಡುಗೆಯ ನಿರ್ಲಕ್ಷ್ಯ (ಉದಾ. ತಯಾರಕರ ಚಾಲನಾ ಕೈಪಿಡಿಯ ಪ್ರಕಾರ ಶಿಫಾರಸು ಮಾಡಲಾಗಿರದ ಪ್ರಕ್ರಿಯೆ ಅಂದರೆ ಪ್ರವಾಹದಲ್ಲಿ ಟು ವೀಲರ್  ವಾಹನವನ್ನು ಚಾಲನೆ ಮಾಡುವುದರಿಂದ ಉಂಟಾಗುವ ಹಾನಿ ಇವುಗಳಿಗೆ ಕವರ್ ನೀಡಲಾಗುವುದಿಲ್ಲ)

 

ಆಡ್-ಆನ್‌ಗಳನ್ನು ಖರೀದಿಸಿಲ್ಲದಿದ್ದರೆ

ಕೆಲವು ಸನ್ನಿವೇಶಗಳನ್ನು ಆಡ್-ಆನ್‌ಗಳು ರಕ್ಷಿಸುತ್ತವೆ. ನೀವು ಅಂತಹ ಆಡ್-ಆನ್‌ಗಳನ್ನು ಖರೀದಿಸದಿದ್ದರೆ, ಅದಕ್ಕೆ ಅನುಗುಣವಾದ ಸಂದರ್ಭಗಳಲ್ಲಿ ಕವರ್ ಪಡೆದುಕೊಳ್ಳಲು ಸಾಧ್ಯವಿಲ್ಲ.

 

ನೀವು ಡಿಜಿಟ್ ನ ಹೀರೋ ಬೈಕ್ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು?

ನಿಮ್ಮ ಅಗತ್ಯತೆಗಳಿಗೆ ತಕ್ಕಂತೆ ಬರುವ ಬೈಕ್ ಇನ್ಶೂರೆನ್ಸ್ ಯೋಜನೆಗಳು

ಥರ್ಡ್ ಪಾರ್ಟಿ ಸಮಗ್ರ

ಅಪಘಾತದಿಂದಾಗಿ ಸ್ವಂತ ಟು ವೀಲರ್ ವಾಹನಕ್ಕೆ ಆಗುವ ಹಾನಿ/ನಷ್ಟ

×

ಬೆಂಕಿಯ ಸಂದರ್ಭದಲ್ಲಿ ಸ್ವಂತ ಟು ವೀಲರ್ ವಾಹನಕ್ಕೆ ಆಗುವ ಹಾನಿ/ನಷ್ಟಗಳು

×

ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಸ್ವಂತ ಟು ವೀಲರ್ ವಾಹನಕ್ಕೆ ಆಗುವ ಹಾನಿ/ನಷ್ಟಗಳು

×

ಥರ್ಡ್ ಪಾರ್ಟಿಯ ವಾಹನಕ್ಕೆ ಆಗುವ ಹಾನಿ

×

ಥರ್ಡ್ ಪಾರ್ಟಿಯ ಆಸ್ತಿಗೆ ಆಗುವ ಹಾನಿ

×

ಪರ್ಸನಲ್ ಆಕ್ಸಿಡೆಂಟ್ ಕವರ್

×

ಥರ್ಡ್-ಪಾರ್ಟಿ ವ್ಯಕ್ತಿಯ ಗಾಯಗಳು/ಸಾವು

×

ನಿಮ್ಮ ಬೈಕ್/ಸ್ಕೂಟರಿನ ಕಳ್ಳತನ

×

ನಿಮ್ಮ ಐಡಿವಿ ಅನ್ನು ಕಸ್ಟಮೈಸ್ ಮಾಡಿ

×

ಕಸ್ಟಮೈಸ್ ಮಾಡಿದ ಆಡ್-ಆನ್‌ಗಳೊಂದಿಗೆ ಹೆಚ್ಚುವರಿ ರಕ್ಷಣೆ

×
Get Quote Get Quote

ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ನಡುವಿನ ವ್ಯತ್ಯಾಸದ ಕುರಿತು ಇನ್ನಷ್ಟು ತಿಳಿಯಿರಿ.

ಕ್ಲೈಮ್ ಫೈಲ್ ಮಾಡುವುದು ಹೇಗೆ?

ನೀವು ನಮ್ಮ ಟು – ವೀಲರ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಿದ ಅಥವಾ ನವೀಕರಿಸಿದ ನಂತರ, ನೀವು ಚಿಂತೆ ಇಲ್ಲದೆ ಇರಬಹುದು, ಏಕೆಂದರೆ 3 ಹಂತಗಳ ಸಂಪೂರ್ಣ ಡಿಜಿಟಲ್ ಕ್ಲೈಮ್ ಪ್ರಕ್ರಿಯೆಯನ್ನು ನಾವು ನಿಮಗಾಗಿ ಒದಗಿಸುತ್ತಿದ್ದೇವೆ!

ಹಂತ 1

1800-258-5956 ಗೆ ಕಾಲ್ ಮಾಡಿ. ಯಾವುದೇ ಫಾರಂ ಭರ್ತಿ ಮಾಡಬೇಕಾದ ಅವಶ್ಯಕತೆ ಇಲ್ಲ.

ಹಂತ 2

ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಸೆಲ್ಫ್ ಇನ್ಸ್ಪೆಕ್ಷನ್ ಮಾಡುವ ಲಿಂಕ್ ಪಡೆಯಿರಿ. ಹಂತ ಹಂತವಾಗಿ ಬರಲಾಗುವ ಮಾರ್ಗದರ್ಶನದ ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನಿಮ್ಮ ವಾಹನಕ್ಕೆ ಉಂಟಾದ ಹಾನಿಯನ್ನು ಸೆರೆ ಹಿಡಿಯಿರಿ.

ಹಂತ 3

ನೀವು ಆಯ್ಕೆ ಮಾಡಲು ಬಯಸುವ ರಿಪೇರಿ ವಿಧಾನವನ್ನು ಆಯ್ದುಕೊಳ್ಳಿ ಅಂದರೆ, ನಮ್ಮ ಗ್ಯಾರೇಜ್ ಗಳ ನೆಟ್ವರ್ಕ್ ಮೂಲಕ ಮರುಪಾವತಿ ಅಥವಾ ಕ್ಯಾಶ್ಲೆಸ್ ವ್ಯವಹಾರದ ಸೌಲಭ್ಯ ಪಡೆಯಬಹುದು.

ಡಿಜಿಟ್ ಇನ್ಶೂರೆನ್ಸ್ ಕ್ಲೈಮ್ ಗಳು ಎಷ್ಟು ವೇಗವಾಗಿ ಸೆಟಲ್ ಆಗುತ್ತವೆ? ವಿಮಾ ಕಂಪನಿ ಬದಲಿಸಬೇಕಾದರೆ ನಿಮ್ಮ ತಲೆಯಲ್ಲಿ ಸಹಜವಾಗಿ ಬರುವ ಮೊಟ್ಟ ಮೊದಲ ಪ್ರಶ್ನೆ ಇದು. ನೀವು ಹಾಗೆ ಮಾಡುವುದು ಒಳ್ಳೆಯದು! ಡಿಜಿಟ್ ನ ಕ್ಲೈಮ್ ರಿಪೋರ್ಟ್ ಕಾರ್ಡ್ ಓದಿ

ಹೀರೋ ಮೋಟೋಕಾರ್ಪ್ - ಈ ಕಂಪನಿಯ ಬಗ್ಗೆ ನಿಮಗೆ ತಿಳಿದಿರಬೇಕಾದ ವಿಷಯಗಳು

1984 ರಲ್ಲಿ ಡಾ. ಬ್ರಿಜ್ಮೋಹನ್ ಲಾಲ್ ಮುಂಜಲ್ ಜೀ ಅವರಿಂದ ಸ್ಥಾಪಿಸಲಾದ ಹೀರೋ ಮೋಟಾರ್ಕಾರ್ಪ್ ಲಿ.., ಅನ್ನು ಮೊದಲಿಗೆ ಹೀರೋ ಹೋಂಡಾ ಎಂದು ಕರೆಯಲಾಗಿತ್ತು. ಈ ಕಂಪನಿಯು, ದೇಶದಲ್ಲಿ, ಸೈಕಲ್ ಗಳು, ಸ್ಕೂಟರ್ ಗಳು ಮತ್ತು ಮೋಟಾರ್ ಸೈಕಲ್ ಗಳ ಪ್ರಮುಖ ತಯಾರಕರಾಗಿದ್ದು, ಇದರ ಪ್ರಧಾನಕಛೇರಿ ನವದೆಹೆಲಿಯಲ್ಲಿದೆ. ಇಂದು, ಹೀರೋ ಮೋಟೋಕಾರ್ಪ್, ವಿಶ್ವದಲ್ಲೇ ಅತೀ ದೊಡ್ಡ ಟು ವೀಲರ್ ವಾಹನ ತಯಾರಕನಾಗಿದೆ.

ಭಾರತದಲ್ಲಿ, ಈ ಕಂಪನಿಯು 46% ಕ್ಕಿಂತಲೂ ಹೆಚ್ಚಿನ ಟು ವೀಲರ್ ವಾಹನ ಮಾರುಕಟ್ಟೆಯನ್ನು ಹೊಂದಿದೆ. 1980 ರ ದಶಕದಲ್ಲಿ ತನ್ನ ಇಂಧನ ಸಾಮರ್ಥ್ಯದಿಂದಾಗಿ ಇವರು ತಯಾರಿಸಿದ ವಾಹನಗಳು ಅತ್ಯಂತ ಜನಪ್ರಿಯಗೊಂಡವು. ಇದರ ಜೊತೆ ಕೈಗೆಟಕುವ ಬೆಲೆಗಳೂ, ಹೀರೋ ಡೀಲರ್ಶಿಪ್ ನ ಮುಂದೆ ಬೈಕ್ ಅಥವಾ ಸ್ಕೂಟರ್ ಕೊಳ್ಳಲು ಜನರು ಸಾಲುಗಟ್ಟಿ ನಿಲ್ಲಲು ಕಾರಣವಾಯಿತು. 

2010 ರಲ್ಲಿ ಹೋಂಡಾ, ಹೀರೋ ಜೊತೆಗಿನ ತನ್ನ ಜಂಟಿ ಉದ್ಯಮದಿಂದ ಹೊರಗುಳಿಯಲು ನಿರ್ಧರಿಸಿತು. ನಂತರ, ಹೀರೋ, ಹೋಂಡಾ ಹೊಂದಿರುವ ಷೇರುಗಳನ್ನು ಖರೀದಿಸಿ ತನ್ನದೇ ಆದ ಉಪಸಂಸ್ಥೆಯನ್ನು ಸ್ಥಾಪಿಸಿತು.

ಹೀಗೆ, ಹೋಂಡಾ ಮೋಟಾರ್ ಸೈಕಲ್ ಹಾಗೂ ಸ್ಕೂಟರ್ ಇಂಡಿಯಾದ ಪ್ರಯಾಣ ಆರಂಭವಾಯಿತು.

ಇಂದು ಹೀರೋ, ಹಲವು ಜನಪ್ರಿಯ ಬೈಕ್ ಗಳನ್ನು ಒಳಗೊಂಡಿದೆ:

  • ಹೀರೋ ಸ್ಪ್ಲೆಂಡರ್ ಪ್ಲಸ್

  • ಹೀರೋ ಎಚ್ ಎಫ್ ಡಿಲಕ್ಸ್

  • ಹೀರೋ ಪ್ಯಾಷನ್ ಪ್ರೋ

  • ಹೀರೋ ಸೂಪರ್ ಸ್ಪ್ಲೆಂಡರ್

  • ಹೀರೋ ಎಕ್ಸ್ ಪ್ಲಸ್ 200

  • ಹೀರೋ ಗ್ಲಾಮರ್

.. ಹಾಗೂ ಇನ್ನೂ ಹಲವಾರು!

ಇಷ್ಟು ವರ್ಷಗಳಲ್ಲಿ, ಹೀರೋ, ಭಾರತೀಯರು ವಿಶ್ವಾಸವಿಡುವಂತಹ ನಂಬಿಕಸ್ಥ ಬ್ರ್ಯಾಂಡ್ ಆಗುವಲ್ಲಿ ಯಶಸ್ವಿಯಾಗಿದೆ. ಕೈಗೆಟಕುವ ಹಾಗೂ ಉತ್ತಮ ಗುಣಮಟ್ಟದ ಕೊಡುಗೆಯೊಂದಿಗೆ, ಹೀರೋ ಬೈಕ್ ಹಾಗೂ ಸ್ಕೂಟರ್ ಗಳು ಎಲ್ಲಾ ಪ್ರದೇಶಗಳ ಜನರಿಗೆ ಒಪ್ಪುವಂತಹ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ.

ಹೀರೋ ಬೈಕ್ ಗಳು ಇಷ್ಟು ಜನಪ್ರಿಯವಾಗಲು ಕಾರಣವೇನು?

ಹೀರೋ ಬೈಕ್ ಗಳು, ಬಳಕೆದಾರರಲ್ಲಿ ನಿರಂತರವಾಗಿ ಇಷ್ಟು ಜನಪ್ರಿಯತೆಯನ್ನು ಕಾಣಲು ಹಲವಾರು ಕಾರಣಗಳಿವೆ. ಇಲ್ಲಿ ಕೆಲವನ್ನು ನೀಡಲಾಗಿದೆ:

  • ಶ್ರೇಷ್ಟ ಗ್ರಾಹಕ ಸೇವೆಯು ಯಾವುದೇ ಕಂಪನಿಯ ಒಂದು ಆಕರ್ಷಕ ಲಕ್ಷಣವಾಗಿರುತ್ತದೆ. ಹೀರೋ ತನ್ನ ಗ್ರಾಹಕರಿಗೆ ಉತ್ತಮ ಮಾರಾಟನಂತರದ ಸೇವೆಗಳನ್ನು ಒದಗಿಸುವುದು ಮಾತ್ರವಲ್ಲದೆ, ಭಾರತದ ಇತರ ಟು ವೀಲರ್ ವಾಹನ ಕಂಪನಿಗಳಿಗೆ ಒಂದು ಪ್ರೇರಣೆಯೂ ಆಗಿದೆ.

  • ಇವರ ಅಪಾರ ಬೆಳವಣಿಗೆಗೆ ಇನ್ನೊಂದು ಕಾರಣವೇನೆಂದರೆ ಇವರ ಉತ್ಪನ್ನ ಕ್ಷೇತ್ರದಲ್ಲಿರುವ ವೈವಿಧ್ಯತೆ. ಯಾವುದೇ ರೀತಿಯ ಆರ್ಥಿಕ ಹಿನ್ನಲೆಯಿರುವ ಬಳಕೆದಾರರಿಗೂ, ಅವರ ಅಗತ್ಯ ಹಾಗೂ ಖರ್ಚಿನ ಸಾಮರ್ಥ್ಯಕ್ಕೆ ಹೊಂದುವಂತಹ ಉತ್ಪನ್ನ ದೊರೆಯುತ್ತದೆ.

  • ಕೊನೆಯದಾಗಿ, ಇಷ್ಟು ವರ್ಷಗಳಿಂದಲೂ ತನ್ನ ಗುಣಮಟ್ಟವನ್ನು ಕಾಯ್ದಿರಿಸಿಕೊಂಡು ಬಂದಿರುವ ಬೆರಳೆಣಿಕೆಯ ಕಂಪನಿಗಳಲ್ಲಿ ಹೀರೋ, ಒಂದಾಗಿದೆ. ನೀವು ಅವರ ಒಂದು ಬೈಕ್ ಅನ್ನು ಖರೀದಿಸಿದಾಗ, ಅದರ ರಸ್ತೆಯಲ್ಲಿಯ ಸಾಮರ್ಥ್ಯ ಹಾಗೂ ಬಾಳಿಕೆಯ ಬಗ್ಗೆ ನೀವು ನಿಶ್ಚಿಂತೆಯಿಂದಿರಬಹುದು.

ಇವುಗಳು ಈ ಬ್ರ್ಯಾಂಡಿನ ಅಪಾರ ಜನಪ್ರಿಯತೆಗೆ ಕಾರಣವಾಗಿದ್ದರೂ, ಹೀರೋ ಗೆ ನಿರಂತರ ಗ್ರಾಹಕ ಬೆಂಬಲವನ್ನು ಹುಟ್ಟುಹಾಕಿರುವುದು, ಅದರ ಶ್ರೇಷ್ಠ ವೈಶಿಷ್ಟ್ಯತೆಗಳಿಂದ ಕೂಡಿರುವ ಉತ್ಪನ್ನಗಳು.

ಹೀರೋ ಟು ವೀಲರ್ ವಾಹನಗಳಿಂದ ನೀವು ನಿರೀಕ್ಷಿಸಬಹುದಾದ ವೈಶಿಷ್ಟ್ಯತೆಗಳು

ನಿಮ್ಮ ಬಜೆಟ್ ಎಷ್ಟೇ ಇರಲಿ, ಹೀರೋ ನಿಮ್ಮ ಅಗತ್ಯಗಳಿಗೆ ಸರಿಹೊಂದುವಂತಹ ವ್ಯಾಪಕ ಶ್ರೇಣಿಯ ವಾಹನಗಳನ್ನು  ನೀಡುವುದರಲ್ಲಿ ಸಮರ್ಥವಾಗಿದೆ. ಕಂಪನಿಯು, ತಮ್ಮ ವಾಹನದಲ್ಲಿ ನೀಡುವ ವೈಶಿಷ್ಟ್ಯಗಳಲ್ಲಿ ಯಾವುದೇ ರೀತಿಯ ಕೊರತೆ ಉಂಟುಮಾಡುವುದಿಲ್ಲ.

ಅತ್ಯುತ್ತಮ ವೈಶಿಷ್ಟ್ಯಗಳು ಕೇವಲ ಉನ್ನತ ಮಟ್ಟದ ಸ್ಕೂಟರ್ ಹಾಗೂ ಬೈಕ್ ಗಳಿಗೆ ಮಾತ್ರ ಸೀಮಿತ ಎಂದುಕೊಂಡಿರೇ? 

ಹಾಗಾದರೆ, ಮತ್ತೊಮ್ಮೆ ಯೋಚಿಸಿ.

ಎಲ್ಲಾ ಟು  ವೀಲರ್ ವಾಹನಗಳ ಸಾಮಾನ್ಯ ವೈಶಿಷ್ಟ್ಯಗಳು ಇಲ್ಲಿವೆ: 

  • ವಿಶ್ವಾಸ - ಭಾರತೀಯ ಮಾರುಕಟ್ಟೆಯ ವಿಷಯ ಬಂದಾಗ, ಬೈಕ್ ನ ಮೈಲೇಜ್ ಹಾಗೂ ಎಂಜಿನ್ ಗುಣಮಟ್ಟ ಅದರ ಎರಡು ಅತೀ ಪ್ರಮುಖ ಅಂಶಗಳಾಗಿವೆ. ಹೀರೋ ನ ಬೈಕ್ ಗಳು, ಜನಪ್ರಿಯ ಸ್ಪ್ಲೆಂಡರ್ ಹಾಗೂ ಪ್ಯಾಷನ್ ಮಾದರಿಗಳನ್ನೂ ಸೇರಿಸಿ, ರಸ್ತೆಯಲ್ಲಿ ಅತ್ಯುತ್ತಮ ಮೈಲೇಜ್ ನೀಡುವುದನ್ನೇ ತಮ್ಮ ಗುರಿಯನ್ನಾಗಿಸಿದ್ದು, ಇದರಿಂದ ಮಾಲೀಕನ ಇಂಧನ ವೆಚ್ಚವು ಕಡಿಮೆಯಾಗುತ್ತದೆ.

  • ಬಾಳಿಕೆ - ಶ್ರೀಸಾಮಾನ್ಯರಿಗೆ ಬೈಕ್ ಖರೀದಿಸಲು ಹೆಚ್ಚು ಹಣದ ಉಳಿತಾಯ ಮಾಡಬೇಕಾಗುತ್ತದೆ. ಆದ್ದರಿಂದಲೇ, ಖರೀದಿಯ ನಂತರ ವಾಹನಕ್ಕೆ ಯಾವುದೇ ಹಾನಿಯಾದರೆ, ಹೆಚ್ಚಿನ ಗ್ರಾಹಕರು ತೀವ್ರ ಹೊಡೆತಕ್ಕೊಳಗಾಗುತ್ತಾರೆ. ಹೀರೋ ತನ್ನ ಬೆಲೆಗಳನ್ನು ಕಡಿಮೆಗೊಳಿಸಲು ತನ್ನ ಬೈಕ್ ಭಾಗಗಳ ಗುಣಮಟ್ಟದಲ್ಲಿ ಯಾವುದೇ ರೀತಿಯ ರಾಜಿ ಮಾಡುವುದಿಲ್ಲ. ಇದರಿಂದಾಗಿ ಅದರ ರಚನೆ ಗಟ್ಟಿಮುಟ್ಟಾಗಿದ್ದು, ಇದು ಸರಳವಾಗಿ ಸಣ್ಣಪುಟ್ಟ ಹೊಡೆತ ಅಥವಾ ಢಿಕ್ಕಿಗಳನ್ನು ಯಾವುದೇ ಗಂಭೀರ ಹಾನಿಗೊಳಗಾಗದೆಯೇ ಸಹಿಸಿಕೊಳ್ಳುತ್ತದೆ.

  • ಉತ್ಪನ್ನಗಳಲ್ಲಿ ವೈವಿಧ್ಯತೆ - ಹೀರೋ ತನ್ನ ಉತ್ಪನ್ನಗಳಿಂದ ಯಾವುದೇ ನಿರ್ದಿಷ್ಟ ಆರ್ಥಿಕ ವರ್ಗಕ್ಕೆ ಮಾತ್ರ ಒದಗಿಸುವುದಿಲ್ಲ. ಬದಲಾಗಿ, ಹುಟ್ಟಿನಿಂದಲೇ, ಅದರ ಗಮನ ಕೈಗೆಟಕುವ ದರದ ಬೈಕ್ ಹಾಗೂ ಸ್ಕೂಟರ್ ಶ್ರೇಣಿಯನ್ನು ತಯಾರಿಸುವ ದಿಕ್ಕಿನಲ್ಲಿದೆ. ಅವರು, ವಾಹನಗಳ ಪ್ರೀಮಿಯಂ ಅಥವಾ ಐಷಾರಾಮಿ ರೂಪಾಂತರಗಳನ್ನು ಒದಗಿಸಿತ್ತಿದ್ದರೂ, ಕಂಪನಿಯೂ ತನ್ನ ‘ಎಲ್ಲರಿಗೂ ಕೈಗೆಟಕುವಂತಹ’ ನೀತಿಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತದೆ.

  • ತಾಂತ್ರಿಕ ವಿಸ್ಮಯಗಳು - ತನ್ನ ವಾಹನಗಳಲ್ಲಿ ಹೊಸ ತಾಂತ್ರಿಕತೆಯನ್ನು ಅಳವಡಿಸುವ ವಿಷಯದಲ್ಲಿ ಕಂಪನಿಯು ಎಂದಿಗೂ ಹಿಂದೆ ಉಳಿದಿಲ್ಲ. ಉದಾಹರಣೆಗೆ, ಹೀರೋ ಇತ್ತೀಚೆಗಷ್ಟೇ ತನ್ನ ಪ್ರೀಮಿಯಂ ಶ್ರೇಣಿಯ ಸ್ಪೋರ್ಟ್ಸ್ ಬೈಕ್ ಆದ ಎಕ್ಸ್ಟ್ರೀಮ್ 200 ಎಸ್ ಅನ್ನು ಪರಿಚಯಿಸಿತು. ಇನ್ನೊಂದು ರೋಚಕ ಉತ್ಪನ್ನ ಎಕ್ಸ್ ಎಫ್3ಆರ್ ಆಗಿದ್ದು, ಇದರ ರಚನೆಯು ಜನಪ್ರಿಯ ವೀಡೀಯೋ ಗೇಮ್ ಆದ ಸ್ಟ್ರೀಟ್ ಫೈಟರ್ ಅನ್ನು ಆಧರಿಸಿದೆ.

ಆದಾಗ್ಯೂ, ಭಾರತೀಯ ರಸ್ತೆಗಳು ಅಪಘಾತ ಹಾಗೂ ಇತರ ಅಪಾಯಗಳಿಗಾಗಿ ಕುಖ್ಯಾತಿಯನ್ನು ಪಡೆದಿವೆ. ಈ ಮೇಲೆ ವಿವರಿಸಲಾದ ಯಾವುದೇ ವಿಶಿಷ್ಟ್ಯಗಳು, ದುರಾದೃಷ್ಟವೆಂಬಂತೆ, ಇಂತಹ ರಸ್ತೆ ಅಪಾಯಗಳಿಂದ ನಿಮ್ಮ ನೆಚ್ಚಿನ ಹೀರೋ ವಾಹನವನ್ನು ಸಂರಕ್ಷಿಸಲು ಅಸಮರ್ಥವಾಗಿವೆ.

ಇಂತಹ ಅಕಸ್ಮಾತಾದ ಹೊಣೆಗಾರಿಕೆಗಳಿಂದ ತಪ್ಪಿಸಿಕೊಳ್ಳಲು ಹೀರೋ ಬೈಕ್ ಇನ್ಶೂರೆನ್ಸ್ ಪಾಲಿಸಿ ಯೋಜನೆಯನ್ನು ಆಯ್ಕೆ ಮಾಡುವುದು ಕಡ್ಡಾಯವಾಗುತ್ತದೆ.

ನೀವು ಹೀರೋ ಬೈಕ್ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು?

ನಿಮ್ಮ ಬೈಕ್ ಆನು ಯಾವುದೇ ಇನ್ಶೂರೆನ್ಸ್ ಕವರೇಜ್ ಇಲ್ಲದೆ ಚಲಾಯಿಸಬಹುದು ಎಂದು ನೀವು ಅಂದುಕೊಂಡಿದ್ದೀರಾ? ಕಾನೂನಾತ್ಮಕವಾಗಿ ಹೇಳುವುದಾದರೆ, ಇಲ್ಲ.

ಕಾನೂನಾತ್ಮಕ ಹೊಣೆಗಾರಿಕೆಗಳು - ಮೋಟಾರ್ ವಾಹನ ಅಧಿನಿಯಮ 1988 ರ ಪ್ರಕಾರ, ಭಾರತೀಯ ರಸ್ತೆಗಳಲ್ಲಿ ಓಡಾಡುವ ಎಲ್ಲಾ ಮೋಟರೀಕೃತ ವಾಹನಗಳಿಗೆ ಥರ್ಡ್ ಪಾರ್ಟೀ ಇನ್ಶೂರೆನ್ಸ್ ಯೋಜನೆಯನ್ನು ಪಡೆಯುವುದು ಕಡ್ಡಾಯವಾಗಿದೆ. ಮಾನ್ಯ ಇನ್ಶೂರೆನ್ಸ್ ಹೊಂದಿರದ, ಬೈಕ್, ಸ್ಕೂಟರ್ ಅಥವಾ ಯಾವುದೇ ವಾಹನ ಚಲಾಯಿಸುತ್ತಿರುವ ವ್ಯಕ್ತಿ ದಂಡಕ್ಕೆ ಪಾತ್ರನಾಗುತ್ತಾರೆ. ಮೋಟಾರ್ ವಾಹನ ಅಧಿನಿಯಮ(ತಿದ್ದುಪಡಿ)ದ ಪ್ರಕಾರ, ಇನ್ಶೂರೆನ್ಸ್ ಇಲ್ಲದೆ ವಾಹನ ಚಲಾಯಿಸಿದ್ದಲ್ಲಿ ರೂ 2000 ಹಾಗೂ ತಪ್ಪು ಪುನರಾವರ್ತನೆಯಾದಲ್ಲಿ ರೂ 4000 ದಂಡ ವಿಧಿಸಲಾಗುವುದು.

ಕಾನೂನಾತ್ಮಕ ಹೊಣೆಗಾರಿಕೆಗಳನ್ನು ಹೊರತುಪಡಿಸಿ, ಬೈಕ್ ಇನ್ಶೂರೆನ್ಸ್ ಪಾಲಿಸಿ ಏಕೆ ಮುಖ್ಯ ಎಂದು ವಿವರಿಸಲು ಕೆಲವು ಅಂಶಗಳು ಇಲ್ಲಿವೆ:

  • ಥರ್ಡ್ ಪಾರ್ಟೀ ಸ್ವತ್ತಿಗಾದ ಹಾನಿಗಳಿಗೆ ಮರುಪಾವತಿ ಕ್ಲೈಮ್ ಮಾಡಲು - ಥರ್ಡ್ ಪಾರ್ಟೀ ಹೀರೋ ಮೋಟೋಕಾರ್ಪ್ ಇನ್ಶೂರೆನ್ಸ್, ನಿಮ್ಮ ವಾಹನವು ಒಳಗೊಂಡಿರುವ ಅಪಘಾತಗಳಿಂದ ಉಂಟಾದ ಹಾನಿಗಳಿಗಾಗಿ ಕ್ಲೈಮ್ ಮಾಡಲು ಅನುಮತಿ ನೀಡುತ್ತದೆ. ಇದು ಇನ್ನೊಂದು ಪಾರ್ಟೀಯ ಸ್ವತ್ತು ಅಥವಾ ವಾಹನಕ್ಕಾದ ಹಾನಿಗಳ ರಿಪೇರಿಗೆ ಆರ್ಥಿಕ ನೆರವು ನೀಡುವುದರ ಜೊತೆಗೆ, ಅಪಘಾತದ ಸಂದರ್ಭಗಳಲ್ಲಿಯ ಕಾನೂನಾತ್ಮಕ ಹೊಣೆಗಾರಿಕೆಗಳನ್ನೂ ಕಡಿಮೆ ಮಾಡುತ್ತದೆ. ಥರ್ಡ್ ಪಾರ್ಟೀಗಾದ ಆರ್ಥಿಕ ಹಾನಿಯನ್ನು ಹೊರತುಪಡಿಸಿ, ಈ ಇನ್ಶೂರೆನ್ಸ್ ಯೋಜನೆಯೂ ಅದೇ ಆರ್ಥಿಕ ನೆರವನ್ನು ಥರ್ಡ್ ಪಾರ್ಟೀಗೆ ಅಪಘಾತದಲ್ಲಿ ಗಾಯವಾದರೆ ಅಥವಾ ಸಾವು ಸಂಭವಿಸಿದರೂ ನೀಡುತ್ತದೆ.

  • ಸ್ವಂತ ಬೈಕ್ ಹಾನಿಗಳ ರಿಪೇರಿಗೆ ಆರ್ಥಿಕ ನೆರವನ್ನು ಕ್ಲೈಮ್ ಮಾಡಲು - ನೀವು ಕಾಂಪ್ರೆಹೆನ್ಸಿವ್  ಹೀರೋ ಬೈಕ್ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆ ಮಾಡಿದರೆ, ಅಪಘಾತ ಅಥವಾ ರಸ್ತೆ ಅವಘಡದ ಸಂದರ್ಭದಲ್ಲಿ ನಿಮ್ಮ ಸ್ವಂತ ಬೈಕಿಗಾದ ಹಾನಿಗಳನ್ನು ನಿರ್ವಹಿಸಲು ಆರ್ಥಿಕ ನೆರವನ್ನು ಪಡೆಯಬಹುದು. ಇಂತಹ ಇನ್ಶೂರೆನ್ಸ್ ಪಾಲಿಸಿಗಳು ಥರ್ಡ್ ಪಾರ್ಟೀ ಹಾಗೂ ಸ್ವಂತ ಹಾನಿ ಎರಡಕ್ಕೂ ಕವರೇಜ್ ನೀಡುತ್ತವೆ. ಅಪಘಾತದ ಜೊತೆ, ನೈಸರ್ಗಿಕ ವಿಪತ್ತು, ಬೆಂಕಿ, ಸ್ಫೋಟ, ನಷ್ಟ, ಕಳವು ಇತ್ಯಾದಿಗಳಿಂದ ಆಗಬಹುದಾದ ಹಾನಿಗಳನ್ನೂ ಕಾಂಪ್ರೆಹೆನ್ಸಿವ್  ಇನ್ಶೂರೆನ್ಸ್ ಪಾಲಿಸಿಗಳ ಅಡಿಯಲ್ಲಿ ಕವರ್ ಮಾಡಬಹುದು.

  • ವಾಹನದ ಸಂಪೂರ್ಣ ನಷ್ಟ ಅಥವಾ ಕಳವಿನ ಸಂದರ್ಭದಲ್ಲಿ ಅದರ ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ ಅನ್ನು ಹಿಂಪಡೆಯುವುದು - ಕೆಲವು ಸಂದರ್ಭಗಳಲ್ಲಿ, ನಿಮ್ಮ ಹೀರೋ ಬೈಕ್ ರಿಪೇರಿಗೂ ಮೀರಿದ ಹಾನಿಗೆ ಒಳಗಾಗಬಹುದು.  ಅಂತಹ ಸಮಯದಲ್ಲಿ, ನಿಮ್ಮ ಬಳಿ ಕಾಂಪ್ರೆಹೆನ್ಸಿವ್  ಇನ್ಶೂರೆನ್ಸ್ ಕವರ್ ಇದ್ದರೆ, ನೀವು ನಿಮ್ಮ ವಾಹನದ ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ ಅನ್ನು ಪಡೆಯಬಹುದು. ಐಡಿವಿ ಎಂದರೆ, ನಿಮ್ಮ ಹೀರೋ ಟು ವೀಲರ್ ವಾಹನದ ಪ್ರಸ್ತುತ ದರ, ಅದರ ಡಿಪ್ರಿಸಿಯೇಷನ್ ಅನ್ನು ಕಳೆದ ನಂತರ. ನಿಮ್ಮ ಇನ್ಶೂರ್ಡ್ ಬೈಕ್ ನ ಕಳವಾದ ಅಥವಾ ಅದೂ ರಿಪೇರಿಗೂ ಮೀರಿದ ಹಾನಿಗೊಳಗಾದ ಸಂದರ್ಭದಲ್ಲಿ ನಿಮ್ಮ ಇನ್ಶೂರರ್ ನಿಮಗೆ ಅದರ ಐಡಿವಿ ಮೊತ್ತವನ್ನು ಪಾವತಿಸಲು ಬಾಧ್ಯರಾಗಿರುತ್ತಾರೆ.

  • ವೈಯಕ್ತಿಕ ಅಪಘಾತ ಕವರ್ - ಇನ್ಶೂರ್ಡ್ ವಾಹನವನ್ನು ಒಳಗೊಂಡ ಅಪಘಾತದಲ್ಲಿ  ಪಾಲಿಸಿದಾರನ ಸಾವು ಸಂಭವಿಸಿದರೆ, ಅವನ/ಅವಳ ಪರಿವಾರದ ಸದಸ್ಯರು ಇನ್ಶೂರೆನ್ಸ್ ಪ್ರೊವೈಡರ್ ನಿಂದ ಆರ್ಥಿಕ ಪರಿಹಾರವನ್ನು ಪಡೆಯಲು ಅರ್ಹರಾಗುತ್ತಾರೆ. ಈ ಲಾಭವನ್ನು ಇನ್ಶೂರೆನ್ಸ್ ಪಾಲಿಸಿ ಅಡಿಯಲ್ಲಿ ಇರುವ ಕಡ್ಡಾಯ ವೈಯಕ್ತಿಕ ಅಪಘಾತ ಕವರ್ ಅಡಿಯಲ್ಲಿ ಒದಗಿಸಲಾಗುತ್ತದೆ. 

ಕೆಲವು ಇನ್ಶೂರರ್ಸ್ ಗಳು, ಬೈಕ್ ಮಾಲೀಕ ಜೀವಂತವಾಗಿದ್ದು ಅಪಘಾತದಿಂದಾಗಿ ಅಂಗವೈಕಲ್ಯವನ್ನು ಹೊಂದಿದರೂ, ಇಂತಹ ಲಾಭಗಳನ್ನು ಒದಗಿಸುತ್ತಾರೆ.

ಈ ಸುರಕ್ಷತೆಯು ಒಂದು ನಿಗದಿತ ಅವಧಿ ಪೂರ್ಣವಾದ ಮೇಲೆ ಕೊನೆಗೊಳ್ಳುತ್ತದೆಂದು ಗಮನವಿರಲಿ. ಈ ಸಂರಕ್ಷಣೆಯನ್ನು ಮುಂದುವರಿಸಬೇಕೆಂದಿದ್ದರೆ, ನೀವು ನಿಮ್ಮ ಹೀರೋ ಬೈಕ್ ಇನ್ಶೂರೆನ್ಸ್ ಅನ್ನು ಅದರ ಪಿಎ ಕವರ್ ನೊಂದಿಗೆ ಸರಿಯಾದ ಸಮಯದಲ್ಲಿ ರಿನ್ಯೂ ಮಾಡುತ್ತಾ ಇರಬೇಕು.

ನಿಮ್ಮ ಪ್ರಸ್ತುತ ಇನ್ಶೂರೆನ್ಸ್ ಪ್ರೊವೈಡರ್ ಬಗ್ಗೆ ನಿಮಗೆ ಸಂತೋಷವಿಲ್ಲವೇ?  ನಿಮ್ಮ ಇನ್ಶೂರರ್ ಅನ್ನು ನೀವು ಯಾವ ಸಮಯದಲ್ಲಿ ಬೇಕಾದರೂ ಬದಲಾಯಿಸಬಹುದು ಎಂದು ನಿಮಗೆ ತಿಳಿದಿತ್ತೇ?

ನಿಮ್ಮ ಪ್ರಸ್ತುತ ಇನ್ಶೂರರ್ ನಿಂದ ಸಿಗುತ್ತಿರುವ ಲಾಭಗಳ ಹಾಗೂ ವಶಿಷ್ಟ್ಯಗಳ ಹೋಲಿಕೆ ಮಾಡಿ. ಯಾವುದಾದರೂ ಒಂದು ಅಂಶ ಕಾಣುತ್ತಿಲ್ಲ ಎಂದಾದರೆ, ಡಿಜಿಟ್ ನ ಟು ಟು  ವೀಲರ್ ಇನ್ಶೂರೆನ್ಸ್ ಯೋಜನೆಯನ್ನು ನೋಡಿ.

ಡಿಜಿಟ್ ನ ಹೀರೋ ಬೈಕ್ ಇನ್ಶೂರೆನ್ಸ್ ಅನ್ನು ನೀವು ಏಕೆ ಅಯ್ಕೆ ಮಾಡಬೇಕು?

ಹೀರೋ ಬೈಕ್ ಇನ್ಶೂರೆನ್ಸ್ ಯೋಜನೆಗಳನ್ನು ಹುಡುಕುತ್ತಿರುವ ಯಾವುದೇ ವ್ಯಕ್ತಿಗೂ ದಿಜಿಟ್ ಬಗ್ಗೆ ಈಗಾಗಲೇ ಗೊತ್ತಿರಬಹುದು. ತೀವ್ರ ವೇಗದಲ್ಲಿ ಬೆಳೆಯುತ್ತಿರುವ ಜನರಲ್ ಇನ್ಶೂರೆನ್ಸ್ ಕಂಪನಿಗಳಲ್ಲಿ ಒಂದಾದ ಡಿಜಿಟ್, ಆರ್ಥಿಕ ಸುರಕ್ಷತೆಯನ್ನು ಸಮರ್ಥವಾಗಿ ಒದಗಿಸಬಲ್ಲ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಗಳನ್ನು ನೀಡುತ್ತದೆ. ನೀವು ಡಿಜಿಟ್ ನ ಇನ್ಶೂರೆನ್ಸ್ ಅನ್ನು ಖರೀದಿಸುವಲ್ಲಿ ತಪ್ಪು ಮಾಡಲು ಸಾಧ್ಯವೇ ಇಲ್ಲ ಎನ್ನುವುದಕ್ಕೆ ಇಲ್ಲಿ ಕೆಲವು ಕಾರಣಗಳನ್ನು ನೀಡಲಾಗಿದೆ:

  • ವ್ಯಾಪಕ ಶ್ರೇಣಿಯ ಉತ್ಪನ್ನಗಳು - ಡಿಜಿಟ್, ಹೀರೋ ಟು ವೀಲರ್ ವಾಹನ ಮಾಲೀಕರಿಗೆ, ಅವರ ಅಗತ್ಯದ ಕವರೇಜ್ ಪ್ರಕಾರ ಈ ಕೆಳಗಿನ ಕೆಲವು ಇನ್ಶೂರೆನ್ಸ್ ಪಾಲಿಸಿಗಳನ್ನು ಒದಗಿಸುತ್ತದೆ.

  1. ಥರ್ಡ್ ಪಾರ್ಟೀ ಹೊಣೆಗಾರಿಕೆಯ ಬೈಕ್ ಇನ್ಶೂರೆನ್ಸ್- ಈ ಇನ್ಶೂರೆನ್ಸ್ ಪಾಲಿಸಿಯು ಅಪಘಾತದ ಸಮಯದಲ್ಲಿ ನಿಮ್ಮ ಬೈಕಿನಿಂದ, ಥರ್ಡ್ ಪಾರ್ಟೀ ವಾಹನ ಅಥವಾ ಸ್ವತ್ತಿಗಾದ ಹಾನಿಗಳಿಂದ ಉಂಟಾದ ಆರ್ಥಿಕ ನಷ್ಟವನ್ನು ಕವರ್ ಮಾಡುತ್ತದೆ. ಇದರ ಜೊತೆ ಥರ್ಡ್ ಪಾರ್ಟೀ ವ್ಯಕ್ತಿಗಾದ ಗಾಯ ಅಥವಾ ಸಾವಿನ ಸಂದರ್ಭದಲ್ಲೂ ಕವರೇಜ್ ನೀಡುತ್ತದೆ.

  2. ಕಾಂಪ್ರೆಹೆನ್ಸಿವ್  ಬೈಕ್ ಇನ್ಶೂರೆನ್ಸ್ - ಇದು ನಿಮ್ಮ ಬೈಕ್ ಅಥವಾ ಸ್ಕೂಟರ್ ಗೆ ಸಂಪೂರ್ಣ ಸುರಕ್ಷತೆಯನ್ನು ನೀಡುತ್ತದೆ. ಇಂತಹ ಪಾಲಿಸಿ ಇದ್ದಲ್ಲಿ, ಅಪಘಾತದಲ್ಲಿ ಇನ್ನೊಂದು ಪಾರ್ಟೀಗಾದ ಹಾನಿಗಳ ಜೊತೆ ನಿಮ್ಮ ಸ್ವಂತ ಬೈಕಿಗಾದ ಹಾನಿಗಳಿಗೂ ನೀವು ಕ್ಲೈಮ್ ಮಾಡಬಹುದಾಗಿದೆ. ಇದರ ಜೊತೆ ನೈಸರ್ಗಿಕ ವಿಪತ್ತು, ಗಲಭೆ ಇತ್ಯಾದಿ ಕಾರಣಗಳಿಂದ ನಿಮ್ಮ ಬೈಕಿಗಾಗುವ ಹಾನಿಗಳ ಆರ್ಥಿಕ ಹೊಣೆಗಾರಿಕೆಗಳನ್ನೂ ಇದು ಕಡಿಮೆಗೊಳಿಸುತ್ತದೆ. 

ಈ ಸಾಮಾನ್ಯ ಆಯ್ಕೆಗಳ ಹೊರತಾಗಿ, ಡಿಜಿಟ್ ತನ್ನ ಗ್ರಾಹಕರಿಗೆ ಸ್ವಂತ ಡ್ಯಾಮೇಜ್ ಬೈಕ್ ಇನ್ಶೂರೆನ್ಸ್ ಪಾಲಿಸಿಯನ್ನೂ ನೀಡುತ್ತದೆ. ಈ ಯೋಜನೆಯು, ಸುದೀರ್ಘ ಕಾಲದಿಂದ ಥರ್ಡ್ ಪಾರ್ಟೀ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿರುವ, ಹಾಗೂ ತಮ್ಮ ಸ್ವಂತ ವಾಹನಕ್ಕೂ ಆರ್ಥಿಕ ಹೊಣೆಗಾರಿಕೆಯ ಸಂರಕ್ಷಣೆ ಬಯಸುವವರಿಗೆ ಅನ್ವಯಿಸುತ್ತದೆ. ಆದರೆ, ನೀವಿಲ್ಲಿ ಗಮನಿಸಬೇಕಾಗಿರುವುದು ಏನೆಂದರೆ ಈ ಕವರ್, ನೀವು ನಿಮ್ಮ ಬೈಕ್ ಅನ್ನು ಸೆಪ್ಟೆಂಬರ್ 2018, ನಂತರ ಖರೀದಿಸಿದ್ದರೆ ಮಾತ್ರ ಅನ್ವಯಿಸುತ್ತದೆ.

  • ನೆಟ್ವರ್ಕ್ ಗ್ಯಾರೇಜ್ ಗಳ ಅಧಿಕ ಸಂಖ್ಯೆ - ಡಿಜಿಟ್ ನ ನೆಟ್ವರ್ಕ್ ಗ್ಯಾರೇಜ್ ಗಳಿಗೆ ಭೇಟಿ ನೀಡಿ ನೀವು ನಗದುರಹಿತ ಇನ್ಶೂರೆನ್ಸ್ ಕ್ಲೈಮ್ ಗಳನ್ನು ಪಡೆಯಬಹುದು. ಅದೃಷ್ಟವೆಂಬಂತೆ, ಈ ಇನ್ಶೂರೆನ್ಸ್ ಪ್ರೊವೈಡರ್ ಬಳಿ, ಭಾರತಾದ್ಯಂತ ತನ್ನ ನೆಟ್ವರ್ಕ್ ಒಳಗಡೆ 1000 ಕ್ಕೂ ಹೆಚ್ಚು ಗ್ಯಾರೇಜ್ ಗಳಿವೆ. ಆದ್ದರಿಂದಲೇ, ನೀವು ದೇಶದ ಯಾವುದೇ ಭಾಗದಲ್ಲಿದ್ದರೂ ನಮ್ಮ ನೆಟ್ವರ್ಕ್ ಗ್ಯಾರೇಜ್ ಗಳನ್ನು ತಲುಪುವುದು ತುಂಬಾ ಸರಳವಾಗುತ್ತದೆ. ನಮ್ಮ ನೆಟ್ವರ್ಕ್ ಗ್ಯಾರೇಜ್ ಗಳಲ್ಲಿ ಒಂದಕ್ಕೆ ಕೇವಲ ಒಮ್ಮೆ ಭೇಟಿ ನೀಡಿ ಹಾಗೂ ಯಾವ ಖರ್ಚಿಲ್ಲದೆಯೇ ನಿಮ್ಮ ಬೈಕ್ ರಿಪೇರಿಯನ್ನು ಪೂರ್ಣಗೊಳಿಸಿ.

  •  ಸರಳ ಖರೀದಿ ಹಾಗೂ ರಿನೀವಲ್ ಪ್ರಕ್ರಿಯೆ  - ಡಿಜಿಟ್, ಹೀರೋ ಬೈಕ್ ಇನ್ಶೂರೆನ್ಸ್ ನ ಆನ್ಲೈನ್ ಖರೀದಿಯನ್ನು ಸರಳಗೊಳಿಸಿದೆ. ನೀವು ಕೇವಲ ಕೆಲವು ವಿವರಗಳನ್ನು ತುಂಬಿಸಿ, ನೀವು ಬಯಸಿದ ಕವರೇಜ್ ಅನ್ನು ಆಯ್ಕೆ ಮಾಡಿ, ಪಾವತಿ ಮಾಡಿ, ನಿಮ್ಮ ಪಾಲಿಸಿಯನ್ನು ಇ- ಮೇಲ್ ಮೂಲಕ ಪಡೆಯಬಹುದು. ಇಂತಹ ಗೊಂದಲರಹಿತ ಖರೀದಿ/ರಿನೀವಲ್ ಜೊತೆಸಂಪೂರ್ಣ ಪ್ರಕ್ರಿಯೆಯು ಸುಗಮಗೊಂಡು, ಬ್ರೋಕರ್ ಅಥವಾ ಇನ್ಶೂರೆನ್ಸ್ ಏಜಂಟ್ ನ ಮಧ್ಯಸ್ಥಿಕೆಯ ಅಗತ್ಯವನ್ನೂ ತಪ್ಪಿಸುತ್ತದೆ. 

  • ನಿಮ್ಮ ಅಗತ್ಯಗಳ ಪ್ರಕಾರ ನಿಮ್ಮ ಐಡಿವಿ(IDV) ಅನು ಕಸ್ಟಮೈಜ್ ಮಾಡಿ - ಐಡಿವಿ ಅಥವಾ ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ ಎಂದರೆ, ನಿಮ್ಮ ವಾಹನದ ಸಂಪೂರ್ಣ ಹಾನಿ ಅಥವಾ ಕಳವಿನ ಸಂದರ್ಭದಲ್ಲಿ ನೀವು ನಿಮ್ಮ ಇನ್ಶೂರೆನ್ಸ್ ಕಂಪನಿಯಿಂದ ಪಡೆಯಬಹುದಾದ ಮೊತ್ತವಾಗಿದೆ.  ಈ ಮೊತ್ತವನ್ನು, ನಿಮ್ಮ ಹೀರೋ ಬೈಕ್ ನ ತಯಾರಕರ ದರದಿಂದ ಅದರ ಡಿಪ್ರಿಸಿಯೇಷನ್ ಅನ್ನು ಕಳೆದು ಲೆಕ್ಕಹಾಕಲಾಗುತ್ತದೆ. ಈಗ ಡಿಪ್ರಿಸಿಯೇಷನ್ ನ ಲೆಕ್ಕ ಒಂದು ಕಂಪನಿಯಿಂದ ಇನ್ನೊಂದಕ್ಕೆ ಬಂದಾಗ ಬದಲಾಗುತ್ತಿರುತ್ತದೆ. ಡಿಜಿಟ್ ನೊಂದಿಗೆ ನಿಮಗೆ ಹೆಚ್ಚು ಐಡಿವಿ ದೊರೆಯುತ್ತದೆ, ಹಾಗೂ ಅದರ ಲಾಭಗಳನ್ನು ಗರಿಷ್ಠ  ಗೊಳಿಸಲು ನೀವು ಅದನ್ನು ಕಸ್ಟಮೈಜ್ ಕೂಡಾ ಮಾಡಬಹುದಾಗಿದೆ.

  • ನೋ ಕ್ಲೈಮ್ ಬೋನಸ್ ಜೊತೆ ನಿಮ್ಮ ಪ್ರೀಮಿಯಂ ಅನ್ನು ಕೈಮೆ ಗೊಳಿಸಿ - ನಿಮ್ಮ ದ್ವಿಚಕ್ರವಾಹನವನ್ನು ಎಚ್ಚರಿಕೆಯಿಂದ ಚಲಾಯಿಸುವ ಒಂದು ಲಾಭವೇನೆಂದರೆ ನೀವು ರಸ್ತೆ ಅವಘಡಗಳನ್ನು ತಪ್ಪಿಸಬಹುದು. ಹೀಗೆ ಮಾಡಿದ್ದಲ್ಲಿ ನೀವು ನಿಮ್ಮ ಇನ್ಶೂರೆನ್ಸ್ ಪಾಲಿಸಿಯಲ್ಲಿ ಕ್ಲೈಮ್ ಮಾಡುವ ಅವಕಾಶಗಳೂ ಕಡಿಮೆಯಾಗುತ್ತವೆ. ನೀವು ನಿಮ್ಮ ಹೀರೋ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಅಡಿಯಲ್ಲಿ ಕ್ಲೈಮ್ ಮಾಡದೇ ಇದ್ದರೆ, ಡಿಜಿಟ್ ನಿಮಗೆ ನ್ ಕ್ಲೈಮ್ ಬೋನಸ್ ನ ಲಾಭವನ್ನು ನೀಡುತ್ತದೆ. ಈ ಲಾಭದೊಂದಿಗೆ, ನೀವು ಮುಂದಿನ ವರ್ಷದಲ್ಲಿ ನಿಮ್ಮ ಇನ್ಶೂರೆನ್ಸ್ ಪಾಲಿಸಿಗಾಗಿ ನೀವು ಪಾವತಿಸುವ ಪ್ರೀಮಿಯಂ ನಲ್ಲಿ ರಿಯಾಯಿತಿಯನ್ನು ಪಡೆಯಬಹುದಾಗಿದೆ. ಈ ಎನ್ ಸಿ ಬಿ ಮೊತ್ತವು 50%ವರೆಗೂ ಹೋಗಬಹುದು( ಕ್ಲೈಮ್ ಇಲ್ಲಾ ವರ್ಷಗಳ ಸಂಖ್ಯೆ ಮೇಲೆ), ಹಾಗೂ ನೀವು ಪಾವತಿಸುವ ಪ್ರೀಮಿಯಂ ಮೊತ್ತದಲ್ಲಿ ನಿಮಗೆ ಗಣನೀಯ ಉಳಿತಾಯವನ್ನು ಮಾಡಬಹುದು. 

  • ಸರಳ ಕ್ಲೈಮ್ ಪ್ರಕ್ರಿಯೆ ಹಾಗೂ ಹೆಚ್ಚಿನ ಕ್ಲೈಮ್ ಇತ್ಯರ್ಥದ ಅನುಪಾತ - ಡಿಜಿಟ್, ತನ್ನ ಸಂಪೂರ್ಣ ಕ್ಲೈಮ್ ಪ್ರಕ್ರಿಯೆಯನ್ನು ಆನ್ಲೈನ್ ಗೆ ವರ್ಗಾಯಿಸಿ, ತನ್ನ ಪಾಲಿಸಿದಾರರಿಗೆ ಕ್ಲೈಮ್ ಮಾಡುವುದನ್ನು ಸರಳಗೊಳಿಸಿದೆ.   ಡಿಜಿಟ್ ನೊಂದಿಗೆ, ನೀವು ಸ್ಮಾರ್ಟ್ ಫೋನ್ ಅಳವಡಿಕೆಯ ಸ್ವಪರಿಶೀಲನೆ ಮಾಡಿ, ಕ್ಲೈಮ್ ಮಾಡುವಾಗ, ನಿಮ್ಮ ಇನ್ಶೂರೆನ್ಸ್ ಕಂಪನಿಯ ಏಜಂಟ್ ಬಂದು ನಿಮ್ಮ ಟು ವೀಲರ್ ವಾಹನದ ಪರಿಶೀಲನೆ ಮಾಡುವ ಗೊಂದಲವನ್ನು ತಪ್ಪಿಸಬಹುದು. ಇದರ ಜೊತೆ, ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿ ಕೊಳ್ಳುವಾಗ ನಾವು ಗಮನಿಸಬೇಕಾದ ಒಂದು ಪ್ರಮುಖ ಅಂಶ್ವೇನೆಂದರೆ, ಡಿಜಿಟ್ ನಲ್ಲಿ ಕ್ಲೈಮ್ ಇತ್ಯರ್ಥದ ಅನುಪಾತ ಹೆಚ್ಚಿರುವ ಕಾರಣ, ನಿಮ್ಮ ಕ್ಲೈಮ್ ಅಸ್ವೀಕಾರವಾಗುವ ಸಂಭಾವನೆಗಳನ್ನು ನೀವು ದೊಡ್ಡಮಟ್ಟಿಗೆ ಕಡಿಮೆಗೊಳಿಸಬಹುದು. 

  • ಹಲವು ಆಡ್-ಆನ್ ಗಳು ಹಾಗೂ ರೈಡರ್ ಗಳ ಲಭ್ಯತೆ - ಸ್ಟಾಂಡರ್ಡ್ ಪಾಲಿಸಿಗಳು ಕೆಲ ಬೈಕ್ ಭಾಗಗಳ ರಿಪೇರಿಗೆ ಆರ್ಥಿಕ ನೆರವು ನೀಡುವುದಿಲ್ಲ. ಉದಾಹರಣೆಗೆ, ನಿಮ್ಮ ಎಂಜಿನ್ ಗೆ ಹಾನಿಯಾದರೆ, ನಿಮ್ಮ ಇನ್ಶೂರೆನ್ಸ್ ಯೋಜನೆಯ ಅಡಿಯಲ್ಲಿ ನೀವು ಅದರ ರಿಪೇರಿಗಾಗಿ ಕವರೇಜ್ ಅನ್ನು ಕ್ಲೈಮ್ ಮಾಡಲಾಗುವುದಿಲ್ಲ. ಡಿಜಿಟ್,ತನ್ನ ಗ್ರಾಹಕರಿಗೆ, ಸಂಪೂರ್ಣ ಸುರಕ್ಷತೆಗಾಗಿ ವ್ಯಾಪಕ ಶ್ರೇಣಿಯ ಆಡ್-ಆನ್ ಹಾಗೂ ರೈಡರ್ ಗಳನ್ನು ಒದಗಿಸುತ್ತದೆ. ಕೆಲವು ಜನಪ್ರಿಯ ಆಡ್-ಆನ್ ಸುರಕ್ಷತೆಗಳನ್ನು ಇಲ್ಲಿ ನೀಡಲಾಗಿದೆ:

  1. ಎಂಜಿನ್ ಹಾಗೂ ಗೇರ್ ಸಂರಕ್ಷಣಾ ಕವರ್

  2. ಶೂನ್ಯ ಡಿಪ್ರಿಸಿಯೇಷನ್ ಕವರ್

  3. ಬ್ರೇಕ್ಡೌನ್ ಅಸಿಸ್ಟೆನ್ಸ್

  4. ರಿಟರ್ನ್ ಟು ಇನ್ವಾಯ್ಸ್ ಕವರ್

  5. ಕನ್ಸ್ಯೂಮೇಬಲ್ ಕವರ್

ಎಲ್ಲಾ ಸಂದರ್ಭದಲ್ಲಿ ನಿಮ್ಮ ಹಣವನ್ನು ಕಾಪಾಡಲು, ನೀವು ಅಗತ್ಯದ ಆಡ್-ಆನ್ ಸೇವೆಗಳನ್ನು ಪಡೆಯಲು ಮರೆಯದಿರಿ.

  • ಭರವಸೆಯ ಗ್ರಾಹಕ ಸೇವೆ - ಅಪಘಾತ ಹಾಗೂ ಇತರ ಅವಘಡಗಳು ಯಾವಾಗ ಬೇಕಾದರೂ ಸಂಭವಿಸಬಹುದು. ಆದ್ದರಿಂದಲೇ, ತನ್ನ ಗ್ರಾಹಕರಿಗಾಗಿ ಯಾವಾಗಲೂ ಲಭ್ಯವಿರುವ, ಹಗಲಿರಲಿ ರಾತ್ರಿಯಿರಲಿ, ಇನ್ಶೂರೆನ್ಸ್ ಪ್ರೊವೈಡರ್ ನ ಸೇವೆಯನ್ನು ಆಯ್ಕೆ ಮಾಡುವುದು ಆವಶ್ಯಕವಾಗುತ್ತದೆ. ಡಿಜಿಟ್ ನ 24x7 ಗ್ರಾಹಕ ಸೇವೆ ನೀವು ಸಹಾಯದಿಂದ ಕೇವಲ ಒಂದು ಫೋನ್ ಕರೆಯ ಅಂತರದಲ್ಲಿರುವುದನ್ನು ಖಚಿತಪಡಿಸುತ್ತದೆ.

ನೀವು ಅಪಘಾತದ ಬಗೆ ತಿಳಿಸಲು ಬಯಸಿದ್ದಲ್ಲಿ, ಅಥವಾ ಕೇವಲ ನಿಮ್ಮ ಪಾಲಿಸಿ ಬೆಗ್ಗೆ ನಿಮಗೆ ಇರುವ ಪ್ರಶ್ನೆಗಳ ಉತ್ತರಕ್ಕಾಗಿ, ನಿಮ್ಮ ಇನ್ಶೂರೆನ್ಸ್ ಕಂಪನಿ ನಿಮ್ಮಾ ಎಲ್ಲಾ ಸಮಸ್ಯೆಗಳಲ್ಲಿ ನಿಮ್ಮೊಂದಿಗೆ ಇರುತ್ತದೆ.

ಆದರೆ, ಯಾರೂ ರಾಷ್ಟ್ರೀಯ ರಜಾದಿನಗಳಂದು ಕೆಲಸ ಮಾಡುವುದಿಲ್ಲ, ಅಲ್ಲವೇ? ತಪ್ಪು. ಡಿಜಿಟ್ ನ ಗ್ರಾಹಕ ಸೇವೆ  ರಾಷ್ಟ್ರೀಯ ರಜಾದಿನಗಳಲ್ಲೂ ತೆರೆದಿರುತ್ತದೆ.

ಹೀಗಾಗಿ, ಯೋಚನೆ ಬಿಟ್ಟು ಇಂದೇ ನಿಮ್ಮ ಹೀರೋ ಬೈಕ್ ಇನ್ಶೂರೆನ್ಸ್ ಅನ್ನು ಪಡೆಯಿರಿ!

ಆದರೆ ಇನ್ಶೂರೆನ್ಸ್ ಪ್ರೀಮಿಯಂ ಹೆಚ್ಚಿರಬಹುದು ಎಂದು ಯೋಚಿಸುತ್ತಿದ್ದೀರಾ? ಸರಿ, ಅದಕ್ಕಾಗಿಯೂ ನಮ್ಮ ಬಳಿ ಪರಿಹಾರವಿದೆ.

ಹೀರೋ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಪರಿಣಾಮಕಾರಿಯಾಗಿ ಕಡಿಮೆಗೊಳಿಸುವುದು ಹೇಗೆ?

ನೀವು ಇನ್ಶೂರೆನ್ಸ್ ಪಾಲಿಸಿಯ್ ಪ್ರೀಮಿಯಂ ಪಾವತಿಯ ಬಗ್ಗೆ ಯೋಚಿಸುತ್ತಿದ್ದರೆ, ಈ ಕೆಲವು ವಿಧಾನಗಳನ್ನು ಅನುಸರಿಸಿ ನಿಮ್ಮ ಆರ್ಥಿಕ ಹೊರೆಯನ್ನು ಕಡಿಮೆ ಮಾಡಬಹುದು;

  • ನೋ ಕ್ಲೈಮ್ ಬೋನಸ್ ನ ಲಾಭಗಳನ್ನು ಆನಂದಿಸಿ - ನಿಮ್ಮ ಇನ್ಶೂರೆನ್ಸ್ ಪ್ರೊವೈಡರ್ ನಿಮಗೆ ನೋ ಕ್ಲೈಮ್ ಬೋನಸ್ ನ ಲಾಭ ನೀಡುವುದನ್ನು ಖಚಿತಪಡಿಸಿ. ನೀವು ನೋ ಕ್ಲೈಮ್ ಬೋನಸ್ ನ ಲಾಭ ಪಡೆಯಲು, ಕ್ಲೈಮ್ ರೈಸ್ ಮಾಡುವ ಆವಶ್ಯಕತೆಗಳನ್ನು ಕಡಿಮೆಗೊಳಿಸಿ ಹಾಗೂ ತಮ್ಮ ಪ್ರೀಮಿಯಂ ಮೊತ್ತವನ್ನೂ ಕಡಿಮೆ ಮಾಡಾಬಹುದು.

  • ವಾಲಂಟರಿ(ಸ್ವಯಂಪ್ರೇರಿತ)ಡಿಡಕ್ಟಿಬಲ್ ಗಳ ಆಯ್ಕೆ ಮಾಡಿ -  ವಾಲಂಟರಿ ಡಿಡಕ್ಟಿಬಲ್ ಗಳನ್ನು ನೀಡುವ ಪಾಲಿಸಿಯನ್ನು ಆಯ್ಕೆ ಮಾಡಿ. ಇಂತಹ ಪಾಲಿಸಿಗಳಲ್ಲಿ, ನೀವು ಕ್ಲೈಮ್ ನ ಒಂದು ಭಾಗವನ್ನು ಇನ್ಶೂರೆನ್ಸ್ ನ ಲಾಭ ಆರಂಭವಾಗುವ ಮೊದಲೇ ಪಾವತಿಸಬೇಕಾಗುತ್ತದೆ. ಇದರಿಂದಾಗಿ, ನೀವು ಪಾವತಿಸಬೇಕಾಗುವ ಪ್ರೀಮಿಯಂ ಮೊತ್ತ ಕೂಡಾ ಕಡಿಮೆಯಾಗುತ್ತದೆ.

  • ಯೋಜನೆಯನ್ನು ನೇರವಾಗಿ ಇನ್ಶೂರೆನ್ಸ್ ಕಂಪನಿಯಿಂದಲೇ ಖರೀದಿಸಿ  - ನಿಮ್ಮ ಯೋಜನೆಯನ್ನು ನೇರವಾಗಿ ಇನ್ಶೂರೆನ್ಸ್ ಕಂಪನಿಯಿಂದಲೇ ಖರೀದಿಸಿ. ಏಜಂಟ್ ಹಾಗೂ ಬ್ರೋಕರ್ ನಂತಹ ಮಧ್ಯವರ್ತಿಗಳು, ತಮ್ಮ ಸೇವೆಗಾಗಿ ಕಮಿಷನ್ ಪಡೆಯುತ್ತಾರೆ. ಈ ಹೆಚ್ಚುವರಿ ಖರ್ಚಿನಿಂದ ನಿಮ್ಮ ಹೀರೋ ಟು ವೀಲರ್ ವಾಹನದ ಇನ್ಶೂರೆನ್ಸ್ ವೆಚ್ಚವು ಗಣನೀಯವಾಗಿ ಹೆಚ್ಚುತ್ತದೆ.

  • ನಿಮಗೆ ಬೇಕಾದ ಆಡ್-ಆನ್ ಗಳನ್ನು ಪಡೆಯಿರಿ - ಅಗತ್ಯವಿರುವ ಆಡ್-ಆನ್ ಕವರ್ ಗಳನ್ನು ಮಾತ್ರ ಆಯ್ಕೆ ಮಾಡಿ. ಹೆಚ್ಚುವರಿ ಸುರಕ್ಷತೆ ಯಾವಾಗಲೂ ಬೇಕೆಂದು ಕಂಡರೂ, ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲಾ ರೈಡರ್ ಗಳನ್ನು ಕುರುಡಾಗಿ ಖರೀದಿಸುವುದು ತಪ್ಪಾಗುತ್ತದೆ. ಬದಲಾಗಿ, ವಯಕ್ತಿಕವಾಗಿ ಅಗತ್ಯವಿರುವ ರೈಡರ್ ಅನ್ನು ಆಯ್ಕೆ ಮಾಡಿ. ಉದಾಹರಣೆಗೆ, ನೀವು ಹೆಚ್ಚಾಗಿ ಪ್ರವಾಹ ಪೀಡಿತವಾಗುವ ಸ್ಥಳದಲ್ಲಿ ವಾಸವಾಗಿದ್ದರೆ, ಎಂಜಿನ್ ಸುರಕ್ಷತಾ ಕವರ್ ಅನ್ನು ಖರೀದಿಸಿ. 

ಕೇವಲ ಪ್ರೀಮಿಯಂ ಒಂದರ ಆಧಾರದ ಮೇಲೆ ಯೋಜನೆಯ ಆಯ್ಕೆಯನ್ನು ಮಾಡಬೇಡಿ. ಬದಲಾಗಿ, ಎಲ್ಲಾ ಅಂಶಗಳನ್ನು ಪರಿಗಣಿಸಿ, ನಿಮ್ಮ ಹೀರೋ ಬೈಕ್ ಗೆ ಹಾನಿಯಾದ ಸಂದರ್ಭದಲ್ಲಿ ಸಮರ್ಪಕರೀತಿಯ ಕವರೇಜ್ ನೀಡುವಂತಹ ಟು ವೀಲರ್ ವಾಹನ ಪಾಲಿಸಿಯನ್ನು ಆಯ್ಕೆ ಮಾಡಿ.

ಹೀರೋ ಸ್ಕೂಟರ್ ಹಾಗೂ ಬೈಕ್ ಗಳು ಬೆಲೆಬಾಳುವ ಸ್ವತ್ತುಗಳಾಗಿವೆ. ನೀವು ಅದರ ಆರೈಕೆ ಮಾಡಿದರೆ, ಅದು ಕೂಡಾ ಯಾವುದೇ ಸಮಸ್ಯೆಯಿಲ್ಲದೆ ಒಂದು ದಶಕದ ಕಾಲ ಬಾಳಿಕೆ ಬರುತ್ತದೆ. ಒಂದು ಹೀರೋ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ನಿಮಗೆ ಅದರ ಹೆಚ್ಚಿನ ಲಾಭವನ್ನು ಪಡೆಯುವಲ್ಲಿ ನೆರವಾಗುತ್ತದೆ!

ಭಾರತದಲ್ಲಿ ಹೀರೋ ಬೈಕ್ ಇನ್ಶೂರೆನ್ಸ್ ಗಳ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು

ನನ್ನ ಹೀರೋ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಅಡಿಯಲ್ಲಿ, ನನ್ನ ಇನ್ಶೂರೆನ್ಸ್ ಪ್ರೊವೈಡರ್ ಗೆ ಅಪಘಾತದ ಬಗ್ಗೆ ತಿಳಿಸಿ ಕ್ಲೈಮ್ ಮಾಡಲು ನನಗಿರುವ ಕಾಲಾವಧಿ ಎಷ್ಟು?

ಹೆಚ್ಚಿನ ಸಂದರ್ಭದಲ್ಲಿ, ನಿಮ್ಮ ಟು ವೀಲರ್ ವಾಹನ ಇನ್ಶೂರೆನ್ ಪಾಲಿಸಿ ಅಡಿಯಲ್ಲಿ, ಪಾಲಿಸಿದಾರನಿಗೆ ತನ್ನ ಅಪಘಾತದ ಬಗ್ಗೆ ತಿಳಿಸಿ ಕ್ಲೈಮ್ ಮಾಡಲು 7 ದಿನಗಳ ಕಾಲಾವಧಿ ಇರುತ್ತದೆ. ಆದರೆ ಕೆಲವು ಇನ್ಶೂರೆನ್ಸ್ ಪ್ರೊವೈಡರ್ ಗಳು ಪಾಲಿಸಿದಾರರಿಗೆ ಅಪಘಾತದ ಬಗ್ಗೆ ತಿಳಿಸಲು 24 to 48 ಘಂಟೆಗಳ ಕಾಲಾವಧಿಯನ್ನು ನೀಡುತ್ತಾರೆ.

ನಾನು ನನ್ನ ನೋ ಕ್ಲೈಮ್ ಬೋನಸ್ ಅನ್ನು ಪಡೆಯಲು ಎಷ್ಟು ಬೇಗ ನನ್ನ ಹೀರೋ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಯೋಜನೆಯನ್ನು ರಿನ್ಯೂ ಮಾಡಬೇಕು?

ಸಾಮಾನ್ಯವಾಗಿ, ಇನ್ಶೂರೆನ್ಸ್ ಪಾಲಿಸಿಯ ಅವಧಿ ಮುಕ್ತಾಯದ 90 ದಿನಗಳ ಒಳಗೆಯೇ ಅದರ ರಿನೀವಲ್ ಆಗಬೇಕು. ಈ ಅವಧಿಯ ನಂತರ, ನೀವು ಕೂಡಿಟ್ಟ ನೋ ಕ್ಲೈಮ್ ಬೋನಸ್ ಅನ್ನು ಕಳೆದುಕೊಳ್ಳುತ್ತೀರಿ.

ನನ್ನ ಹೀರೋ ಬೈಕ್/ಸ್ಕೂಟರ್ ನ ಪ್ರೀಮಿಯಂ ಅನ್ನು ನಿರ್ಧರಿಸುವ ಅಂಶಗಳು ಯಾವುವು?

ಪಾವತಿಸಬೇಕಾದ ಪ್ರೀಮಿಯಂ ನ ಮೊತ್ತವನ್ನು ನಿರ್ಧರಿಸಲು ಇನ್ಶೂರೆನ್ಸ್ ಪ್ರೊವೈಡರ್ ಗಳು ಈ ಕೆಳಗಿನ ಅಂಶಗಳನ್ನು ಪರಿಗಣಿಸುತ್ತಾರೆ.

  • ವಾಹನದ ವಯಸ್ಸು.

  • ಮಾಡೆಲ್ ಪ್ರಕಾರ.

  • ಸ್ಥಳ

  • ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ.

  • ಬೈಕ್ ಎಂಜಿನ್ ನ ಕ್ಯೂಬಿಕ್ ಸಾಮರ್ಥ್ಯ