ಟಿ.ಪಿ.ಎ ಎನ್ನುವುದು ಇನ್ಶೂರೆನ್ಸ್ ಕಂಪನಿ ಮತ್ತು ಪಾಲಿಸಿಹೋಲ್ಡರ್ ನಡುವಿನ ಮಧ್ಯವರ್ತಿಯಾಗಿದೆ. ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳಡಿಯಲ್ಲಿ ಕ್ಲೈಮ್ ಪ್ರೊಸೀಜರ್ ಅನ್ನು ಸರಳಗೊಳಿಸುವುದು ಇವರ ಕೆಲಸ. ನಮಗೆಲ್ಲಾ ತಿಳಿದಿರುವಂತೆ ಎರಡು ರೀತಿಯ ಕ್ಲೈಮ್ ವಿಧಾನ ಇದೆ: ಎ) ಕ್ಯಾಶ್ ಲೆಸ್ ಮತ್ತು ಬಿ) ರಿಇಂಬರ್ಸ್ ಮೆಂಟ್.
ವೈದ್ಯಕೀಯ ಅಥವಾ ತುರ್ತು ಚಿಕಿತ್ಸೆಯ ಅವಶ್ಯಕತೆ ಉಂಟಾದ ತಕ್ಷಣ ಪಾಲಿಸಿಹೋಲ್ಡರ್ ಆಸ್ಪತ್ರೆಗೆ ಭೇಟಿ ನೀಡುತ್ತಾರೆ. ವ್ಯಕ್ತಿಯನ್ನು ಕನಿಷ್ಠ 24 ಗಂಟೆಗಳ ಕಾಲ ಹಾಸ್ಪಿಟಲೈಸೇಷನ್ ತಿಳಿಸಿದರೆ (ಕ್ಯಾಟರಾಕ್ಟ್ ನಂತಹ ಪಟ್ಟಿ ಮಾಡಲಾದ ಕಾಯಿಲೆಗಳನ್ನು ಹೊರತುಪಡಿಸಿ) ಕ್ಲೈಮ್ ಸ್ವೀಕಾರಾರ್ಹವಾಗುತ್ತದೆ.
ಈ ಸಂದರ್ಭದಲ್ಲಿ ಪಾಲಿಸಿಹೋಲ್ಡರ್ ಟಿ.ಪಿ.ಎಗೆ ಅಥವಾ ಇನ್ಶೂರೆನ್ಸ್ ಕಂಪನಿಗೆ ಹಾಸ್ಪಿಟಲೈಸೇಷನ್ ಮತ್ತು ಚಿಕಿತ್ಸೆಯ ಅಗತ್ಯತೆಯನ್ನು ತಿಳಿಸುತ್ತಾರೆ. ನಂತರ ಟಿ.ಪಿ.ಎ ಸಾಧ್ಯವಾದರೆ ಕ್ಯಾಶ್ ಲೆಸ್ ಸೌಲಭ್ಯ ವ್ಯವಸ್ಥೆ ಮಾಡಲು ಆಸ್ಪತ್ರೆಯನ್ನು ಕೇಳುತ್ತಾರೆ. ಇಲ್ಲದಿದ್ದರೆ, ರಿಇಂಬರ್ಸ್ ಮೆಂಟ್ ಕ್ಲೈಮ್ ಜಾರಿಗೆ ಪ್ರಕ್ರಿಯೆ ನಡೆಸಲಾಗುತ್ತದೆ. ಚಿಕಿತ್ಸೆ ಮುಗಿದ ನಂತರ, ಕ್ಯಾಶ್ಲೆಸ್ ಅನ್ನು ಅನುಮೋದಿಸಿದರೆ ಆಸ್ಪತ್ರೆಯು ಎಲ್ಲಾ ಬಿಲ್ಗಳನ್ನು ಟಿ.ಪಿ.ಎಗೆ ಕಳುಹಿಸುತ್ತದೆ. ಇಲ್ಲದಿದ್ದರೆ, ಪಾಲಿಸಿಹೋಲ್ಡರ್ ನಂತರದಲ್ಲಿ ಡಾಕ್ಯುಮೆಂಟುಗಳನ್ನು ಸಲ್ಲಿಸಬೇಕಾಗುತ್ತದೆ.
ಟಿ.ಪಿ.ಎನ ಅಧಿಕಾರಿಗಳು ಬಿಲ್ಗಳು ಮತ್ತು ಇತರ ಡಾಕ್ಯುಮೆಂಟುಗಳನ್ನು ಪರಿಶೀಲಿಸುತ್ತಾರೆ. ಅದರಿಂದ ಕ್ಲೈಮ್ನ ಇತ್ಯರ್ಥ ಸಾಧ್ಯವಾಗುತ್ತದೆ. ಒಂದುವೇಳೆ ಕ್ಯಾಶ್ ಲೆಸ್ ಆಗಿದ್ದರೆ ಆಸ್ಪತ್ರೆಗೆ ಪಾವತಿಸಲಾಗುತ್ತದೆ. ಆದರೆ ರಿಇಂಬರ್ಸ್ ಮೆಂಟ್ ಗಾಗಿ, ಚಿಕಿತ್ಸೆ ವೆಚ್ಚವನ್ನು ಇನ್ಶೂರೆನ್ಸ್ ಕಂಪನಿಯ ಮೂಲಕ ಪಾಲಿಸಿಹೋಲ್ಡರ್ ಸ್ವೀಕರಿಸುತ್ತಾರೆ.