ಬಿಕ್ಕಟ್ಟಿನ ಸಂದರ್ಭಗಳಲ್ಲಿ ಇನ್ಶೂರೆನ್ಸ್ ನಿಮ್ಮನ್ನು ಆರ್ಥಿಕವಾಗಿ ಸುರಕ್ಷಿತವಾಗಿ ಇರಿಸುತ್ತದೆ. ಇದು ಇನ್ಶೂರರ್ ಎಂಬ ಥರ್ಡ್ ಪಾರ್ಟಿಗೆ ನಿಮ್ಮ ರಿಸ್ಕ್ನ ವರ್ಗಾವಣೆಯಿಸಲು ಸೂಚಿಸುತ್ತದೆ. ಕಾರಿಗೆ ಇನ್ಶೂರೆನ್ಸ್ ಪಾಲಿಸಿ ಖರೀದಿಸುವುದು ಮುಖ್ಯ, ಯಾಕೆಂದರೆ ಅದು:
ಕಾನೂನುಬದ್ಧವಾಗಿ ಡ್ರೈವ್ ಮಾಡಲು ಅನುಮತಿಸುತ್ತದೆ : ಕಾರ್ ಇನ್ಶೂರೆನ್ಸ್ ಪಾಲಿಸಿ ಕಾನೂನುಬದ್ಧವಾಗಿ ರಸ್ತೆಯಲ್ಲಿ ಡ್ರೈವ್ ಮಾಡಲು ಪರ್ಮಿಟ್ ಅಥವಾ ಲೀಗಲ್ ಡಾಕ್ಯುಮೆಂಟ್ ಆಗಿರುತ್ತದೆ. ಟ್ರಾಫಿಕ್ ನಿಯಮಗಳ ಪ್ರಕಾರ ಭಾರತದಲ್ಲಿ ಇದು ಕಂಪ್ಲಯನ್ಸ್ ಆಗಿದೆ, ಅದಿಲ್ಲದಿದ್ದರೆ ನಿಮ್ಮ ಡ್ರೈವಿಂಗ್ ಲೈಸೆನ್ಸ್ ಕ್ಯಾನ್ಸಲ್ ಆಗಬಹುದು. ಮೋಟಾರ್ ವೆಹಿಕಲ್ ಆ್ಯಕ್ಟ್ ಹೊಸ ತಿದ್ದುಪಡಿ ಪ್ರಕಾರ, ಕನಿಷ್ಠ ಇನ್ಶೂರೆನ್ಸ್ ಪಡೆಯದೆ ಡ್ರೈವಿಂಗ್ ಮಾಡುವ ಅಪರಾಧ ಮಾಡುವವರಿಗೆ ಭಾರಿ ದಂಡ ಹೇರಲಾಗುತ್ತದೆ.
ಥರ್ಡ್-ಪಾರ್ಟಿ ಲಯಬಿಲಿಟಿಯಿಂದ ನಿಮ್ಮ ರಕ್ಷಣೆ : ನೀವು ರಸ್ತೆಯಲ್ಲಿ ಡ್ರೈವ್ ಮಾಡುತ್ತಿರುವಾಗ ಆಕಸ್ಮಿಕವಾಗಿ ಥರ್ಡ್ ಪಾರ್ಟಿಗೆ ಹೊಡೆಯುವುದು ನಿಮಗೆ ತೊಂದರೆಯನ್ನುಂಟು ಮಾಡಬಹುದು. ಅವರ ದೈಹಿಕ ಗಾಯಗಳಿಗೆ ಅಥವಾ ಪ್ರಾಪರ್ಟಿ ಡ್ಯಾಮೇಜ್ಗೆ ನಿಮ್ಮನ್ನು ಹೊಣೆಗಾರರನ್ನಾಗಿ ಪರಿಗಣಿಸಲ್ಪಟ್ಟಾಗ ಅಂಥಾ ನಷ್ಟಗಳಿಗೆ ನೀವು ಪಾವತಿ ಮಾಡಬೇಕಾಗುತ್ತದೆ. ನಷ್ಟದ ಅಮೌಂಟ್ ಪಾವತಿ ಮಾಡುವ ನಿಮ್ಮ ಸಾಮರ್ಥ್ಯಕ್ಕಿಂತ ಮೀರಿದ್ದು ಆಗಿರಬಹುದು. ಅಂಥಾ ಸಂದರ್ಭಗಳಲ್ಲಿ ಇನ್ಶೂರರ್ ಭಾರಿ ನೆರವು ಒದಗಿಸಬಹುದು.
ಅನಗತ್ಯ ಆರ್ಥಿಕ ಹೊರೆಯಿಂದ ನಿಮ್ಮನ್ನು ರಕ್ಷಿಸುತ್ತದೆ : ಅಪಘಾತ ಅಥವಾ ಕಳ್ಳತನ ಸಂದರ್ಭಗಳಲ್ಲಿ ನಿಮ್ಮ ಕಾರಿಗೆ ಉಂಟಾಗಬಹುದಾದ ಯಾವುದೇ ನಷ್ಟ. ಅಫಘಾತದ ನಂತರದ ರಿಪೇರಿ ವೆಚ್ಚವು ಭಾರಿ ಆಗಿರಬಹುದು, ಅದನ್ನು ಭರಿಸುವುದು ನಿಮ್ಮಿಂದ ಸಾಧ್ಯವಾಗದಿರಬಹುದು. ಮತ್ತು ಒಂದು ವೇಳೆ ಕಾರು ಹೊಸದಾಗಿದ್ದರೆ, ಹಳೇ ಕಾರುಗಳಿಗೆ ಹೋಲಿಸಿದರೆ ರಿಪೇರಿ ವೆಚ್ಚಗಳು ತುಂಬಾ ಹೆಚ್ಚಿರುತ್ತದೆ.
ಈ ವೆಚ್ಚಗಳನ್ನು ನೋಡಿಕೊಳ್ಳಲು ನೀವು ಇನ್ಶೂರರ್ಗೆ ಮನವಿ ಮಾಡಬಹುದು. ಅವರು ಕ್ಯಾಶ್ಲೆಸ್ ರಿಪೇರಿ ವ್ಯವಸ್ಥೆ ಮಾಡುತ್ತಾರೆ ಅಥವಾ ನಂತರ ಅಮೌಂಟ್ ಅನ್ನು ನಿಮಗೆ ರಿಇಂಬರ್ಸ್ ಮಾಡುತ್ತಾರೆ. ಮತ್ತೊಂದು ಸಂದರ್ಭದಲ್ಲಿ, ಒಂದು ವೇಳೆ ನಿಮ್ಮ ವೆಹಿಕಲ್ ಕಳ್ಳತನವಾದರೆ ಇನ್ವಾಯ್ಸ್ನಲ್ಲಿರುವ ಒಟ್ಟು ಬೆಲೆಯನ್ನು ಇನ್ಶೂರೆನ್ಸ್ ಕಂಪನಿ ರಿಇಂಬರ್ಸ್ ಮಾಡುತ್ತದೆ.
ಓನ್ ಡ್ಯಾಮೇಜ್ ಕಾರ್ ಇನ್ಶೂರೆನ್ಸ್ ಕುರಿತು ಇನ್ನಷ್ಟು ತಿಳಿಯಿರಿ.
ಬೇಸಿಕ್ ಕಾರ್ ಕವರ್ ಹಿರಿದಾಗಿಸಲು ಅನುಮತಿಸುತ್ತದೆ : ಭಾರತದಲ್ಲಿ ಕಾರ್ ಇನ್ಶೂರೆನ್ಸ್ ಎರಡು ವಿಧಗಳಲ್ಲಿ ಲಭ್ಯವಿದೆ, ಒಂದು ಕಾಂಪ್ರೆಹೆನ್ಸಿವ್ ಕವರ್ ಮತ್ತು ಎರಡನೆಯದು ಥರ್ಡ್-ಪಾರ್ಟಿ ಲಯಬಿಲಿಟಿ ಪಾಲಿಸಿ. ಒಂದು ವೇಳೆ ನೀವು ಕಾಂಪ್ರೆಹೆನ್ಸಿವ್ ಅನ್ನು ಪಡೆದರೆ, ಬ್ರೇಕ್ಡೌನ್ ಅಸಿಸ್ಟೆನ್ಸ್, ಎಂಜಿನ್ ಮತ್ತು ಗೇರ್ಬಾಕ್ಸ್ ಪ್ರೊಟೆಕ್ಷನ್, ಟೈರ್ ಪ್ರೊಟೆಕ್ಟಿವ್ ಕವರ್, ಮತ್ತು ಝೀರೋ-ಡೆಪ್ ಕವರ್ಮುಂತಾದ ಕಾರ್ ಇನ್ಶೂರೆನ್ಸ್ ಆ್ಯಡ್-ಆನ್ಗಳು ಹೊಂದಬಹುದು.