ಮೇ 2019 ರಲ್ಲಿ ಬಿಡುಗಡೆಯಾದ ಹ್ಯುಂಡೈ ವೆನ್ಯೂ ಡೀಸೆಲ್ ಮತ್ತು ಪೆಟ್ರೋಲ್ ಎರಡೂ ಎಂಜಿನ್ಗಳನ್ನು ಹೊಂದಿದೆ. ಇದು ಸಬ್-4 ಎಸ್ಯುವಿ ಆಗಿದ್ದು, ಚಾಲಕ ಸೇರಿದಂತೆ ಐದು ಜನರು ಕುಳಿತುಕೊಳ್ಳುವ ಸ್ಥಳಾವಕಾಶವಿದೆ. ಈ ಕಾರ್, ಮಹೀಂದ್ರ XUV300, ಫೋರ್ಡ್ ಇಕೋಸ್ಪೋರ್ಟ್, ನಿಸ್ಸಾನ್ ಮ್ಯಾಗ್ನೈಟ್, ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಟಾಟಾ ನೆಕ್ಸಾನ್ ಮತ್ತು ಇನ್ನೂ ಅನೇಕ ಕಾಂಪ್ಯಾಕ್ಟ್ ಎಸ್ಯುವಿಗಳೊಂದಿಗೆ ಸ್ಪರ್ಧಿಸುತ್ತದೆ.
ವೆನ್ಯೂ ಥ್ರೀ-ಸಿಲಿಂಡರ್ ಎಂಜಿನ್ ಹೊಂದಿದೆ ಮತ್ತು 118.35bhp@6000rpm ಮತ್ತು ಗರಿಷ್ಠ ಟಾರ್ಕ್ 171.6Nm@1500-4000rpm ಅನ್ನು ನೀಡುತ್ತದೆ.
ಹ್ಯುಂಡೈ ವೆನ್ಯೂ ಆಟೋಮ್ಯಾಟಿಕ್ ಮತ್ತು ಮ್ಯಾನ್ಯುವಲ್ ಟ್ರಾನ್ಸ್ಮಿಷನ್ನೊಂದಿಗೆ ಲಭ್ಯವಿದೆ. ಫ್ಯೂಯೆಲ್ ಪ್ರಕಾರ ಮತ್ತು ವೇರಿಯಂಟ್ ಅನ್ನು ಅವಲಂಬಿಸಿ, ಇದು ಸರಾಸರಿ 17.52 kmpl-23.7 kmpl ಮೈಲೇಜ್ ನೀಡುತ್ತದೆ.
ಈ ಕಾರಿನ ಹೊರಭಾಗದಲ್ಲಿ ಟಾಪ್ ಡೇಟೈಮ್ ರನ್ನಿಂಗ್ ಲೈಟ್ಗಳು, ಪ್ರೊಜೆಕ್ಟರ್ ಮತ್ತು ಕಾರ್ನರಿಂಗ್ ಹೆಡ್ಲೈಟ್ಗಳು, ಪ್ರೊಜೆಕ್ಟರ್ ಫಾಗ್ ಲೈಟ್ಗಳು, ಎಲ್ಇಡಿ ಟೈಲ್ ಲೈಟ್ಗಳು ಇತ್ಯಾದಿಗಳನ್ನು ಅಳವಡಿಸಲಾಗಿದೆ. ಹ್ಯುಂಡೈ ವೆನ್ಯೂನ ಒಳಭಾಗವು ಡೋರ್ ಹ್ಯಾಂಡಲ್ಗಳ ಒಳಗೆ ಮೆಟಲ್ ಫಿನಿಶ್, ಲೆದರ್ ಪ್ಯಾಕ್ ಫ್ರಂಟ್ ಸೆಂಟರ್ ಆರ್ಮ್ರೆಸ್ಟ್, ಸ್ಪೋರ್ಟಿ ಮೆಟಲ್ ಪೆಡಲ್ಗಳು ಇತ್ಯಾದಿಗಳನ್ನು ಒಳಗೊಂಡಿದೆ.
ಇವುಗಳ ಹೊರತಾಗಿ ವೆನ್ಯೂ ಕಾರ್, ಡೈನಾಮಿಕ್ ಮಾರ್ಗಸೂಚಿಗಳೊಂದಿಗೆ ರಿಯರ್ ಕ್ಯಾಮರಾ, ಹೆಡ್ಲ್ಯಾಂಪ್ ಎಸ್ಕಾರ್ಟ್ ಫಂಕ್ಷನ್ ಮತ್ತು ಬರ್ಗಲರ್ ಅಲಾರಂನಂತಹ ಹೆಚ್ಚುವರಿ ಸೇಫ್ಟಿ ಫೀಚರ್ಗಳನ್ನು ಹೊಂದಿದೆ.
ಇಂತಹ ಸುಧಾರಿತ ಸೇಫ್ಟಿ ಫೀಚರ್ಗಳ ಹೊರತಾಗಿಯೂ, ಹುಂಡೈ ವೆನ್ಯೂ ವಿವಿಧ ಸಂಭವನೀಯ ಆನ್-ರೋಡ್ ಅನಾಹುತಗಳಿಗೆ ಬಲಿಯಾಗಬಹುದು. ಆದ್ದರಿಂದ, ವೃತ್ತಿಪರ ಮತ್ತು ವಿಶ್ವಾಸಾರ್ಹ ಕಾರ್ ಇನ್ಶೂರೆನ್ಸ್ ಪೂರೈಕೆದಾರರನ್ನು ಆಯ್ಕೆ ಮಾಡುವುದು ತುಂಬಾ ಅವಶ್ಯಕ. ಈ ನಿಟ್ಟಿನಲ್ಲಿ ಹ್ಯುಂಡೈ ವೆನ್ಯೂಗೆ ಡಿಜಿಟ್ನ ಕಾರ್ ಇನ್ಶೂರೆನ್ಸ್ ಸರಿಯಾದ ಆಯ್ಕೆಯಾಗಿದೆ.