ಸುಜುಕಿಯ ಭಾರತೀಯ ಅಂಗಸಂಸ್ಥೆಯಾದ ಮಾರುತಿ ಸುಜುಕಿಯು, ಭಾರತೀಯ ಮೋಟರಿಸ್ಟ್ಗಳ ಬೇಡಿಕೆಗಳನ್ನು ಪರಿಗಣಿಸಿ 2000 ರಲ್ಲಿ ಸಣ್ಣ ಸಿಟಿ ಕಾರ್ ಆಲ್ಟೋವನ್ನು ಬಿಡುಗಡೆ ಮಾಡಿತು. ಅದರ ಅಡ್ವಾನ್ಸ್ಡ್ ಫೀಚರ್ಗಳ ಕಾರಣದಿಂದಾಗಿ, ಈ ಕಾರ್ ಶೀಘ್ರವಾಗಿ ಭಾರತದಲ್ಲಿ ಹೆಚ್ಚು ಮಾರಾಟವಾದ ಹ್ಯಾಚ್ಬ್ಯಾಕ್ ಆಯಿತು.
ಇದು ಫೆಬ್ರವರಿ 2008 ರಲ್ಲಿ 1 ಮಿಲಿಯನ್ ಉತ್ಪಾದನಾ ಅಂಕಿಅಂಶವನ್ನು ದಾಟಿತು ಮತ್ತು ಮಿಲಿಯನ್ ಮಾರ್ಕ್ ಅನ್ನು ದಾಟಿದ ಮೂರನೇ ಮಾರುತಿ ಮಾಡೆಲ್ ಆಯಿತು. ಇದಲ್ಲದೆ, ಮಾರುತಿ ಸುಜುಕಿ ಆಲ್ಟೋದ 17 ಸಾವಿರಕ್ಕೂ ಹೆಚ್ಚು ಯುನಿಟ್ಗಳನ್ನು ಏಪ್ರಿಲ್ 2021 ರಲ್ಲಿ ಭಾರತದಾದ್ಯಂತ ಮಾರಾಟ ಮಾಡಲಾಗಿದೆ.
ನೀವು ಈ ಕಾರಿನ 8 ವೇರಿಯಂಟ್ಗಳಲ್ಲಿ ಯಾವುದನ್ನಾದರೂ ಖರೀದಿಸಲು ಪ್ಲ್ಯಾನ್ ಮಾಡುತ್ತಿದ್ದರೆ, ಮಾರುತಿ ಸುಜುಕಿ ಆಲ್ಟೋ ಕಾರ್ ಇನ್ಶೂರೆನ್ಸ್ನ ಬಗ್ಗೆ ನೀವು ಮೊದಲೇ ತಿಳಿದಿರಬೇಕು. ಅತ್ಯುತ್ತಮ ಕಾರ್ ಇನ್ಶೂರೆನ್ಸ್ ಪಾಲಿಸಿಯು, ಅಪಘಾತಗಳಿಂದ ಉಂಟಾಗಬಹುದಾದ ಹಾನಿಗಳನ್ನು ರಿಪೇರಿ ಮಾಡಿಸುವ ವೆಚ್ಚವನ್ನು ಕವರ್ ಮಾಡುತ್ತದೆ. ಆದರೆ ಅಂತಹ ದುರದೃಷ್ಟಕರ ಸಂದರ್ಭಗಳನ್ನು ತಪ್ಪಿಸಲು ಸಾಧ್ಯವಿಲ್ಲದ ಕಾರಣ, ನಿಮ್ಮ ಮಾರುತಿ ಕಾರಿಗೆ, ಸರಿಯಾದ ಇನ್ಶೂರೆನ್ಸ್ ಅನ್ನು ಪಡೆಯುವುದು ಒಳ್ಳೆಯ ಉಪಾಯ.
ಈ ನಿಟ್ಟಿನಲ್ಲಿ, ಸ್ಪರ್ಧಾತ್ಮಕ ಪಾಲಿಸಿ ಪ್ರೀಮಿಯಂಗಳ ಜೊತೆಗೆ ಹಲವಾರು ಸರ್ವೀಸ್ ಪ್ರಯೋಜನಗಳನ್ನು ನೀಡುವ ಡಿಜಿಟ್ನಂತಹ ಹೆಸರಾಂತ ಇನ್ಶೂರರ್ಗಳನ್ನು ಜನರು ನಂಬಬಹುದು.
ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರಾಗಿ ಡಿಜಿಟ್ ಅನ್ನು ಆಯ್ಕೆ ಮಾಡುವುದರ ಪ್ರಯೋಜನಗಳ ಕುರಿತು ಇನ್ನಷ್ಟು ತಿಳಿಯಲು ಮುಂದೆ ಓದಿ.