ಸುಜುಕಿಯಿಂದ ತಯಾರಿಸಲ್ಪಟ್ಟ, ಸಿಯಾಜ್ ಒಂದು ಸಬ್ಕಾಂಪ್ಯಾಕ್ಟ್ ಸೆಡಾನ್ ಆಗಿದ್ದು, ಇದು 2014 ರಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಮಾರಾಟವಾಯಿತು. ಪ್ರಸ್ತುತ, ಇದು ಈ ಜಪಾನಿನ ಆಟೋಮೊಬೈಲ್ ತಯಾರಕರು ಉತ್ಪಾದಿಸುವ ಅತಿದೊಡ್ಡ ಸೆಡಾನ್ ಆಗಿದೆ.
ಅದರ ಪ್ರಾರಂಭದಿಂದ ಹಿಡಿದು ಸೆಪ್ಟೆಂಬರ್ 2019 ರವರೆಗೆ, ಭಾರತದಲ್ಲಿ 2.7 ಲಕ್ಷಕ್ಕೂ ಹೆಚ್ಚು ಸಿಯಾಜ್ ಯುನಿಟ್ಗಳು ಮಾರಾಟವಾಗಿವೆ. ಹೀಗಾಗಿ, ಈ ಕಾರಿನ ಪ್ರವೇಶದ ನಂತರ ಬಿ-ಸೆಗ್ಮೆಂಟ್ ಸೆಡಾನ್ ಮಾರ್ಕೆಟ್ನ ಬೇಡಿಕೆ ಹೆಚ್ಚಾಯಿತು ಎಂಬುದು ಸ್ಪಷ್ಟವಾಗಿದೆ.
ಆರಂಭದಲ್ಲಿ ಈ ಮಾಡೆಲ್, ಆಟೋಮ್ಯಾಟಿಕ್ ಮತ್ತು ಮ್ಯಾನುಯಲ್ ಟ್ರಾನ್ಸ್ಮಿಷನ್ನೊಂದಿಗೆ ಎರಡು ಇಂಜಿನ್ಗಳನ್ನು ಹೊಂದಿತ್ತು. ಇದು ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ (ABS), ಚೈಲ್ಡ್ ಸೇಫ್ಟಿ ಲಾಕ್ಗಳು, ಏರ್ಬ್ಯಾಗ್ಗಳಂತಹ ಕೆಲವು ಸುರಕ್ಷತಾ ಫೀಚರ್ಗಳೊಂದಿಗೆ ಬರುತ್ತದೆ. ಇದಲ್ಲದೆ, ಈ 5-ಸೀಟರ್ ಸೆಡಾನ್ 8 ವೇರಿಯಂಟ್ಗಳಲ್ಲಿ ಲಭ್ಯವಿದೆ.
ನೀವು ಈ ಕಾರನ್ನು ಡ್ರೈವ್ ಮಾಡುತ್ತಿದ್ದರೆ ಅಥವಾ ಅದರ ವೇರಿಯಂಟ್ಗಳಲ್ಲಿ ಒಂದನ್ನು ಖರೀದಿಸಲು ಪ್ಲ್ಯಾನ್ ಮಾಡುತ್ತಿದ್ದರೆ, ಆಯಾ ಕಾರ್ ಇನ್ಶೂರೆನ್ಸ್ ಪ್ಲ್ಯಾನ್ನ ಪ್ರಯೋಜನಗಳ ಬಗ್ಗೆ ನೀವು ತಿಳಿದಿರಬೇಕು. ಒಂದು ಉತ್ತಮವಾದ ಮಾರುತಿ ಸುಜುಕಿ ಸಿಯಾಜ್ ಕಾರ್ ಇನ್ಶೂರೆನ್ಸ್ ಪಾಲಿಸಿಯು ಆರ್ಥಿಕ ಮತ್ತು ಕಾನೂನು ಬಾಧ್ಯತೆಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಸಹಾಯ ಮಾಡುತ್ತದೆ.
ಈ ನಿಟ್ಟಿನಲ್ಲಿ, ನೀವು ಡಿಜಿಟ್ನಂತಹ ಹೆಸರಾಂತ ಇನ್ಶೂರೆನ್ಸ್ ಕಂಪನಿಯಿಂದ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಖರೀದಿಸಬಹುದು.
ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರಾಗಿ ಡಿಜಿಟ್ ಕಂಪನಿಯನ್ನು ಆಯ್ಕೆ ಮಾಡುವ ಕಾರಣಗಳ ಕುರಿತು ಇನ್ನಷ್ಟು ತಿಳಿಯಲು ಮುಂದೆ ಓದಿ.