ಟಾಟಾ ಸಫಾರಿಯನ್ನು, ನಮ್ಮದೇ ದೇಶದ ಆಟೋಮೊಬೈಲ್ 'ಟಾಟಾ ಮೋಟಾರ್ಸ್ ಲಿಮಿಟೆಡ್' 1998 ರಿಂದ ತಯಾರಿಸುತ್ತಿದೆ. 'ನಿಮ್ಮ ಜೀವನವನ್ನು ಮರುಪಡೆಯಿರಿ', 'ನಿಮ್ಮ ಸ್ವಂತ ದಾರಿಯನ್ನು ನಿರ್ಮಿಸಿ' ಎಂಬ ಆ್ಯಡ್ ಕ್ಯಾಂಪೇನ್ನೊಂದಿಗೆ, ಟಾಟಾ ಸಫಾರಿ ಭಾರತೀಯ ರಸ್ತೆಗಳನ್ನು ಸ್ಟಾರ್ಮ್ನಂತೆ ತನ್ನತ್ತ ಸೆಳೆದುಕೊಂಡಿತು. ಟಾಟಾ ಮೋಟಾರ್ಸ್ ಅದನ್ನು ಅಕ್ಷರಶಃ ನೋಡಿತು ಹಾಗೂ ನಂತರದಲ್ಲಿ ಈ ಬೀಸ್ಟ್ನ ಹೊಸ ಸುಧಾರಿತ ವರ್ಷನ್ ಅನ್ನು ಟಾಟಾ ಸಫಾರಿ 'ಸ್ಟ್ರೋಮ್' ಎಂದು ಬಿಡುಗಡೆ ಮಾಡಿತು.
ಒರಿಜಿನಲ್ ಟಾಟಾ ಸಫಾರಿಯನ್ನು 1998 ರಲ್ಲಿ ಭಾರತದ ಮಾರ್ಕೆಟ್ನಲ್ಲಿ ಪರಿಚಯಿಸಲಾಯಿತು, ಸಮಯ ಕಳೆದಂತೆ ಅದಕ್ಕೆ ಹೆಚ್ಚಿನ ಆಕರ್ಷಣೆಯನ್ನು ನೀಡಲಾಯಿತು. ಟಾಟಾ ಮೋಟಾರ್ಗಳು ಒರಿಜಿನಲ್ ಡಿಸೈನ್ನಲ್ಲಿ ಕೆಲವು ಬದಲಾವಣೆಗಳನ್ನು ಮತ್ತು ಎನ್ಹಾನ್ಸ್ಮೆಂಟ್ಗಳನ್ನು ಮಾಡಿತು. ಅದು ಹೊಸ ವೇರಿಯಂಟ್ಗಳಿಗೆ ದಾರಿ ಮಾಡಿಕೊಟ್ಟಿತು ಮತ್ತು ಇದು 'ಟಾಟಾ ಸಫಾರಿ ಡಿಕೋರ್' ಮತ್ತು 'ಟಾಟಾ ಸಫಾರಿ ಸ್ಟಾರ್ಮ್' ಗೆ ಜನ್ಮ ನೀಡಿತು. ಈ ಮಿಡ್-ಸೈಜ್ ಎಸ್ಯುವಿ ಯಶಸ್ವಿಯಾಯಿತು ಮತ್ತು ಲಕ್ಷಾಂತರ ಹೃದಯಗಳನ್ನು ಗೆದ್ದಿತು. ಆದ್ದರಿಂದ ಇದು ಪ್ರಶಸ್ತಿಗಳನ್ನು ಗೆಲ್ಲುವುದರಲ್ಲಿ ಆಶ್ಚರ್ಯವೇನಿಲ್ಲ, ಸಫಾರಿ ಡಿಕೋರ್ ಕಾರ್, O&M ಗಾಗಿ 'ಓವರ್ಡ್ರೈವ್ ಕ್ಯಾಂಪೇನ್ ಆಫ್ ದಿ ಇಯರ್' ಪ್ರಶಸ್ತಿಯನ್ನು ಗೆದ್ದಿದೆ.
ಟಾಟಾ ಕಾರ್ ಇನ್ಶೂರೆನ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ.
ನೀವು ಟಾಟಾ ಸಫಾರಿಯನ್ನು ಏಕೆ ಖರೀದಿಸಬೇಕು?
ಅಂದಹಾಗೆ, ಇದಕ್ಕೆ ಕಾರಣಗಳು ಹಲವಾರಿವೆ. ಇಲ್ಲಿ ಕೆಲವನ್ನು ಚರ್ಚಿಸೋಣ! ಟಾಟಾ ಮೋಟಾರ್ಸ್ ಪ್ರಕಾರ, ಸಫಾರಿ ಸ್ಟ್ರೋಮ್ (ಸಫಾರಿ ಕುಟುಂಬದ ಇತ್ತೀಚಿನ ವರ್ಷನ್) 'ಪ್ರಾಬಲ್ಯ ಹೊಂದಲು ಡಿಸೈನ್ ಮಾಡಲಾಗಿದೆ, ಪರ್ಫಾರ್ಮೆನ್ಸ್ಗಾಗಿ ಪರ್ಫೆಕ್ಟ್ ಆಗಿದೆ ಮತ್ತು ಟಾಟಾ ಮೋಟರ್ನ ಪ್ರಿನ್ಸಿಪಾಲ್ಗೆ ಅನುಗುಣವಾಗಿದೆ, ಈ ಕಾರು ತಾನು ನೀಡಿದ್ದ ಭರವಸೆಯನ್ನು ಉಳಿಸಿಕೊಂಡಿದೆ ಮತ್ತು ಇತಿಹಾಸವನ್ನು ನಿರ್ಮಿಸಿದೆ.
ಟಾಟಾ ಸಫಾರಿಯ ಲಾಂಗ್ ಡ್ರೈವ್ಗಳು ಅದರ ಸೂಪರ್ ಸ್ಪೇಶಿಯಸ್ ಇಂಟೀರಿಯರ್ಗಳು, ಆಂಪಲ್ ಹೆಡ್ರೂಮ್, ಬೃಹತ್ ಲೆಗ್ರೂಮ್ಗಳಿಂದಾಗಿ ಆರಾಮದಾಯಕವೆನಿಸುತ್ತವೆ. ಸ್ಟೈಲಿಶ್ ಇಂಟೀರಿಯರ್ಗಳು, ದಪ್ಪ ಮತ್ತು ಕಠಿಣವಾದ ಎಕ್ಸ್ಟೀರಿಯರ್ಗಳು. ಟಾಟಾ ಸಫಾರಿಯ ಇತ್ತೀಚಿನ ವೇರಿಯಂಟ್ನ (ಸ್ಟಾರ್ಮ್) ಕೆಲವು ಫೀಚರ್ಗಳೆಂದರೆ: ಅತ್ಯುತ್ತಮ ದರ್ಜೆಯ ಅಡ್ವಾನ್ಸ್ಡ್ 2.2L VARICOR 400 ಇಂಜಿನ್, ಸಿಕ್ಸ್-ಸ್ಪೀಡ್ ಗೇರ್ಬಾಕ್ಸ್, 63 ಲೀಟರ್ ಕೆಪ್ಯಾಸಿಟಿಯ ಬೃಹತ್ ಫ್ಯೂಯೆಲ್ ಟ್ಯಾಂಕ್. ಮೈಲೇಜ್ ಪ್ರತಿ ಲೀಟರ್ಗೆ 14.1km, ESOF, 200mm ಗ್ರೌಂಡ್ ಕ್ಲಿಯರೆನ್ಸ್, ಹೊಸ ಮತ್ತು ಸುಧಾರಿತ ಮಲ್ಟಿ-ಫಂಕ್ಷನ್ ಸ್ಟೀರಿಂಗ್ ವೀಲ್, ಸೈಡ್-ಇಂಪ್ಯಾಕ್ಟ್ ಬಾರ್ಗಳು, ಆಟೋಮ್ಯಾಟಿಕ್ ORVM ಗಳು, ಥ್ರೀ-ಪೊಸಿಷನ್ ಲುಂಬರ್ ಸಪೋರ್ಟ್ನೊಂದಿಗೆ ಆಯಾಸ-ಮುಕ್ತ ಡ್ರೈವ್, ಅತ್ಯುತ್ತಮ ಟರ್ನಿಂಗ್ ರೇಡಿಯಸ್, ರೂಫ್-ಮೌಂಟೆಡ್ ರಿಯರ್ ಎಸಿ ಮತ್ತು ಇನ್ನೂ ಅನೇಕ ಇವೆ.
11.09- 16.44 ಲಕ್ಷ ಬೆಲೆಯ (ಎಕ್ಸ್ ಶೋ ರೂಂ ಬೆಲೆ, ದೆಹಲಿ), ಇದು ಸ್ಟೈಲ್ನಲ್ಲಿ ಪ್ರತಿಯೊಂದು ಕ್ಷೇತ್ರವನ್ನು ವಶಪಡಿಸಿಕೊಳ್ಳುತ್ತದೆ ಎಂದು ಸಫಾರಿ ಹೇಳಿಕೊಂಡಿದೆ ಆದರೆ ವಿಶೇಷವಾಗಿ ಕಠಿಣವಾದ ಭೂಪ್ರದೇಶಗಳಲ್ಲಿ ರೈಡ್ ಮಾಡಲು ವಿನ್ಯಾಸಗೊಳಿಸಲಾಗಿದೆ, ಈ ಬೀಸ್ಟ್, 'ಸ್ಟಾರ್ಮ್' ಚೇಸರ್ಗಳು ಮತ್ತು ಥ್ರಿಲ್-ಸೀಕರ್ಗಳಿಗೆ ವರವಾಗಿದೆ ಎಂದು ಹೇಳುವುದರಲ್ಲಿ ತಪ್ಪೇನಿಲ್ಲ.
ಉನ್ನತ-ಮಧ್ಯಮ-ವರ್ಗದ ವಿಭಾಗಕ್ಕೆ ಸೇರಿದ ಕುಟುಂಬಗಳನ್ನು ಗುರಿಯಾಗಿರಿಸಿಕೊಂಡು, ಸಫಾರಿಯು ಯುವಕರು ಅಥವಾ ಹಿರಿಯರ ನಡುವೆ ಜನಪ್ರಿಯ ವಾಹನವಾಗಿದೆ.