ವೋಕ್ಸ್ವ್ಯಾಗನ್ 1937ರಲ್ಲಿ ಸ್ಥಾಪನೆಯಾದ ಜರ್ಮನ್ ಮೂಲದ ವಾಹನ ತಯಾರಕ ಕಂಪನಿಯಾಗಿದೆ ಮತ್ತು 2016 ಹಾಗೂ 2017 ಸಂದರ್ಭದಲ್ಲಿ ವಿಶ್ವಾದ್ಯಂತ ಕಾರ್ ಮಾರಾಟ ಮಾಡುವ ಮೂಲಕ ಅತಿದೊಡ್ಡ ಕಾರ್ ತಯಾರಕ ಕಂಪನಿಯಾಗಿ ರೂಪುಗೊಂಡಿದೆ. ಈ ಬ್ರ್ಯಾಂಡ್ನಿಂದ ಹಲವಾರು ಎ, ಬಿ ಮತ್ತು ಸಿ- ಸೆಗ್ಮೆಂಟಿನ ಹ್ಯಾಚ್ಬ್ಯಾಕ್ಗಳು ಮತ್ತು ಎಸ್ಯುವಿ ಕ್ರಾಸ್ಓವರ್ಗಳು ಬಂದಿವೆ- 2019ರಲ್ಲಿ ಬೆಸ್ಟ್ ಸೆಲ್ಲಿಂಗ್ ಮಾಡೆಲ್ಗಳಾಗಿ ಹೆಸರು ಮಾಡಿವೆ. ಅದರ ವಿವಿಧ ಶ್ರೇಣಿಯ ಕಾರುಗಳು ಮತ್ತು ನವೀಕರಿಸಿದ ತಂತ್ರಜ್ಞಾನದಿಂದಾಗಿ, ಇದು 2019ರಲ್ಲಿ ಸುಮಾರು 11 ಮಿಲಿಯನ್ ಯುನಿಟ್ಗಳನ್ನು ಮಾರಾಟ ಮಾಡಿತ್ತು.
ಇದಲ್ಲದೆ, ವೋಕ್ಸ್ವ್ಯಾಗನ್ನ ಭಾರತೀಯ ಅಂಗಸಂಸ್ಥೆಯ ಕಾರಣದಿಂದಾಗಿ ಈ ಜರ್ಮನ್-ಎಂಜಿನಿಯರ್ಡ್ ಕಾರುಗಳು ಭಾರತೀಯ ಪ್ರಯಾಣಿಕ ಕಾರುಗಳ ಮಾರುಕಟ್ಟೆಯಲ್ಲಿ ಲಭ್ಯವಿದೆ. ಭಾರತದಲ್ಲಿನ ಕೆಲವು ಜನಪ್ರಿಯ ವೋಕ್ಸ್ವ್ಯಾಗನ್ ಕಾರುಗಳಲ್ಲಿ ವೆಂಟೊ, ಪೋಲೋ, ಪೋಲೋ ಜಿಟಿ ಇತ್ಯಾದಿ ಸೇರಿವೆ. 2021ರ ಉದ್ದಕ್ಕೂ, ಈ ಕಂಪನಿಯು ಭಾರತದಾದ್ಯಂತ ಸುಮಾರು 26,000 ಪ್ರಯಾಣಿಕ ವಾಹನಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ.
ಈ ವರ್ಷ ಮೇಲೆ ತಿಳಿಸಲಾದ ಯಾವುದೇ ಮಾಡೆಲ್ ಗಳನ್ನು ಖರೀದಿಸಲು ನೀವು ಪ್ಲಾನ್ ಮಾಡುತ್ತಿದ್ದರೆ, ಅಪಘಾತದ ಸಮಯದಲ್ಲಿ ಅದು ಉಂಟುಮಾಡುವ ಡ್ಯಾಮೇಜ್ ಗಳ ಬಗ್ಗೆಯೂ ನೀವು ತಿಳಿದಿರಬೇಕು. ಇದನ್ನು ಗಮನದಲ್ಲಿಟ್ಟುಕೊಂಡು, ನೀವು ವೋಕ್ಸ್ವ್ಯಾಗನ್ ಕಾರ್ ಇನ್ಶೂರೆನ್ಸ್ ಅನ್ನು ಪ್ರತಿಷ್ಠಿತ ಇನ್ಶೂರರ್ ರಿಂದ ಪಡೆಯಬೇಕು.
ಕಾರ್ ಇನ್ಶೂರೆನ್ಸ್ ಪಾಲಿಸಿಗಳು ಅಪಘಾತದಿಂದ ಉಂಟಾಗುವ ಗಣನೀಯ ಡ್ಯಾಮೇಜ್ ಗಳಿಂದ ಉಂಟಾಗುವ ಅತಿಯಾದ ದುರಸ್ತಿ ಶುಲ್ಕಗಳನ್ನು ಕವರ್ ಮಾಡುತ್ತವೆ. ಈ ವೆಚ್ಚಗಳನ್ನು ಪಾವತಿಸುವುದು ನಿಮಗೆ ಭಾರಿ ಆಗಲಿದೆ ಮತ್ತು ನಿಮ್ಮ ಆರ್ಥಿಕ ಹೊರೆಯನ್ನು ಹೆಚ್ಚಿಸುತ್ತದೆ. ಹೀಗಾಗಿ, ವೋಕ್ಸ್ವ್ಯಾಗನ್ ಕಾರುಗಳಿಗೆ ಇನ್ಶೂರೆನ್ಸ್ ಅನ್ನು ಪಡೆಯುವುದು ನಿಮ್ಮ ಹಣಕಾಸಿನ ಲಯಬಿಲಿಟಿಯನ್ನು ಕಡಿಮೆ ಮಾಡುತ್ತದೆ ಮತ್ತು ಭವಿಷ್ಯದ ಉದ್ದೇಶಗಗೆ ಹಣವನ್ನು ಉಳಿಸಲು ಸಹಾಯ ಮಾಡುತ್ತದೆ.
ಇದಲ್ಲದೆ, ಮೋಟಾರ್ ವೆಹಿಕಲ್ ಆ್ಯಕ್ಟ್ 1988ರ ಪ್ರಕಾರ, ಪೆನಲ್ಟಿಗಳನ್ನು ತಪ್ಪಿಸಲು ವೋಕ್ಸ್ವ್ಯಾಗನ್ಗೆ ಬೇಸಿಕ್ ಕಾರ್ ಇನ್ಶೂರೆನ್ಸ್ ಪ್ಲಾನ್ ಅನ್ನು ಪಡೆಯುವುದು ಕಡ್ಡಾಯವಾಗಿದೆ. ಬೇಸಿಕ್ ಇನ್ಶೂರೆನ್ಸ್ ಪ್ಲಾನ್ ವೋಕ್ಸ್ವ್ಯಾಗನ್ ಕಾರಿಗೆ ಥರ್ಡ್-ಪಾರ್ಟಿ ಇನ್ಶೂರೆನ್ಸ್ ಆಗಿದ್ದು, ಅದು ಥರ್ಡ್-ಪಾರ್ಟಿ ವ್ಯಕ್ತಿ, ಪ್ರಾಪಟ್ರಿ ಅಥವಾ ವಾಹನಕ್ಕೆ ಉಂಟಾಗುವ ಡ್ಯಾಮೇಜ್ ಅನ್ನು ಕವರ್ ಮಾಡುತ್ತದೆ. ಆದಾಗ್ಯೂ, ಓನ್ ಕಾರ್ ಡ್ಯಾಮೇಜ್ ಗಳ ವಿರುದ್ಧ ಹೆಚ್ಚುವರಿ ಕವರೇಜ್ ಪಡೆಯಲು ನೀವು ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಪ್ಲಾನ್ ಅನ್ನು ಪರಿಗಣಿಸಬಹುದು.
ಭಾರತದಲ್ಲಿನ ಹಲವಾರು ಇನ್ಶೂರೆನ್ಸ್ ಕಂಪನಿಗಳು ನಿಮ್ಮ ಅಗತ್ಯಗಳನ್ನು ಸರಿಹೊಂದಿಸುವಂತೆ, ಇತರ ಆಕರ್ಷಕ ಕೊಡುಗೆಗಳ ಜೊತೆಗೆ ಥರ್ಡ್-ಪಾರ್ಟಿ ಮತ್ತು ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಅನ್ನು ನೀಡುತ್ತವೆ. ಈ ನಿಟ್ಟಿನಲ್ಲಿ, ಸ್ಪರ್ಧಾತ್ಮಕ ವೋಕ್ಸ್ವ್ಯಾಗನ್ ಕಾರ್ ಇನ್ಶೂರೆನ್ಸ್ ಬೆಲೆ, ಆನ್ಲೈನ್ ಪ್ರೊಸೆಸ್ ಗಳು, ನೆಟ್ವರ್ಕ್ ಗ್ಯಾರೇಜ್ಗಳಿಂದ ಕ್ಯಾಶ್ ಲೆಸ್ ರಿಪೇರಿ ಮತ್ತು ಹೆಚ್ಚಿನವುಗಳಂತಹ ಪ್ರಯೋಜನಗಳನ್ನು ಒದಗಿಸುವುದರಿಂದಾಗಿ ನೀವು ಡಿಜಿಟ್ ಇನ್ಶೂರೆನ್ಸ್ ಅನ್ನು ಪರಿಗಣಿಸಬಹುದು.
ಆದಾಗ್ಯೂ, ನೀವು ಯಾವುದೇ ಪ್ಲಾನ್ ಅನ್ನು ಆಯ್ಕೆಮಾಡುವ ಮೊದಲು ಗರಿಷ್ಠ ಪ್ರಯೋನಗಳೊಂದಿಗೆ ಬರುವ ವೋಕ್ಸ್ವ್ಯಾಗನ್ ಕಾರ್ ಇನ್ಶೂರೆನ್ಸ್ ಅನ್ನು ಆನ್ಲೈನ್ನಲ್ಲಿ ಹೋಲಿಸಬೇಕು.