ವೋಕ್ಸ್‌ವ್ಯಾಗನ್ ಟೈಗನ್ ಕಾರ್ ಇನ್ಶೂರೆನ್ಸ್

ವೋಕ್ಸ್‌ವ್ಯಾಗನ್ ಟೈಗನ್ ಕಾರ್ ಇನ್ಶೂರೆನ್ಸ್‌ನ ಬೆಲೆಯನ್ನು ತಕ್ಷಣವೇ ಚೆಕ್ ಮಾಡಿ

Third-party premium has changed from 1st June. Renew now

ಟೈಗನ್ ಇನ್ಶೂರೆನ್ಸ್: ವೋಕ್ಸ್‌ವ್ಯಾಗನ್ ಟೈಗನ್ ಕಾರ್ ಇನ್ಶೂರೆನ್ಸ್ ಅನ್ನು ಆನ್‌ಲೈನ್‌ನಲ್ಲಿ ಖರೀದಿಸಿ/ರಿನೀವಲ್‌ಗೊಳಿಸಿ

ಜರ್ಮನ್ ಮೋಟಾರ್ ವೆಹಿಕಲ್ ತಯಾರಕರಾದ, ವೋಕ್ಸ್‌ವ್ಯಾಗನ್, ಭಾರತದಲ್ಲಿ ತನ್ನ ಮಿಡ್-ಸೈಜ್ ಎಸ್‌ಯುವಿ ಟೈಗನ್‌ನೊಂದಿಗೆ ಎಸ್‌ಯುವಿಡಬ್ಲ್ಯೂ ಸ್ಟ್ರ್ಯಾಟಜಿಯನ್ನು ಪ್ರಾರಂಭಿಸಲು ಸಿದ್ಧವಾಗಿದೆ. 5-ಸೀಟ್‌ಗಳ ಯುನಿಟ್, 23ನೇ ಸೆಪ್ಟೆಂಬರ್ 2021 ರಂದು ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ಟೈಗುನ್ ಅನ್ನು MQB-A0-IN ಪ್ಲಾಟ್‌ಫಾರ್ಮ್‌ನಲ್ಲಿ ತಯಾರಿಸಲಾಗುತ್ತದೆ ಮತ್ತು ಮಾಡರ್ನ್ ಫೀಚರ್‌ಗಳು, ಪ್ರೀಮಿಯಂ ಇಂಟೀರಿಯರ್ ಮತ್ತು ಹೆಚ್ಚಿನವುಗಳೊಂದಿಗೆ ಇದನ್ನು ಪ್ಯಾಕ್ ಮಾಡಲಾಗಿದೆ. ಆದ್ದರಿಂದ, ಈ ಫೋಕ್ಸ್‌ವ್ಯಾಗನ್‌ನ ಹೊಚ್ಚಹೊಸ ಎಸ್‌ಯುವಿಯನ್ನು ಖರೀದಿಸಲು ಪ್ಲ್ಯಾನ್ ಮಾಡುತ್ತಿರುವವರು ಅಪಘಾತಗಳು ಮತ್ತು ಇತರ ದುರಂತಗಳಿಂದ ಆರ್ಥಿಕ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಫೋಕ್ಸ್‌ವ್ಯಾಗನ್ ಟೈಗನ್ ಕಾರ್ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು.

ಅಲ್ಲದೆ, ಮೋಟಾರ್ ವೆಹಿಕಲ್ಸ್ ಆ್ಯಕ್ಟ್‌ 1988 ರ ಪ್ರಕಾರ ಭಾರತದಲ್ಲಿ ಓಡಾಡುವ ಪ್ರತಿಯೊಂದು ಕಾರಿಗೆ ಥರ್ಡ್ ಪಾರ್ಟಿ ಲಯಬಿಲಿಟಿ ಕಾರ್ ಇನ್ಶೂರೆನ್ಸ್ ಪಾಲಿಸಿಯು ಕಡ್ಡಾಯವಾಗಿದೆ. ಈ ಯೋಜನೆಯು ಥರ್ಡ್ ಪಾರ್ಟಿಯ ನಷ್ಟವನ್ನು ಕವರ್ ಮಾಡುತ್ತದೆ. ಪರ್ಯಾಯವಾಗಿ, ಥರ್ಡ್ ಪಾರ್ಟಿ ಲಯಬಿಲಿಟಿ ಮತ್ತು ನಿಮ್ಮ ಸ್ವಂತ ಕಾರಿಗಾಗಿ ರಕ್ಷಣೆ, ಇವೆರಡಕ್ಕೂ ಆರ್ಥಿಕ ರಕ್ಷಣೆಯನ್ನು ಪಡೆಯಲು ನೀವು ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡಬಹುದು.

ತೊಂದರೆ-ಮುಕ್ತ ವೋಕ್ಸ್‌ವ್ಯಾಗನ್ ಟೈಗನ್ ಇನ್ಶೂರೆನ್ಸ್ ಅನ್ನು ನೀಡುವುದಾಗಿ ಹೇಳಿಕೊಳ್ಳುವ ಅನೇಕ ಇನ್ಶೂರೆನ್ಸ್ ಕಂಪನಿಗಳನ್ನು ನೀವು ಕಾಣಬಹುದು. ಡಿಜಿಟ್ ಕೂಡ ಅಂತಹ ಒಂದು ಉತ್ತಮ ಇನ್ಶೂರೆನ್ಸ್ ಕಂಪನಿಯಾಗಿದೆ.

ಈ ಮುಂದಿನ ಸೆಗ್ಮೆಂಟ್ ಟೈಗನ್‌ನ ಕೆಲವು ಫೀಚರ್‌ಗಳು, ಅದರ ವೇರಿಯಂಟ್‌ಗಳ ಬೆಲೆಗಳು, ಕಾರ್ ಇನ್ಶೂರೆನ್ಸ್‌ನ ಮಹತ್ವ ಮತ್ತು ಡಿಜಿಟ್ ನೀಡುವ ಆಫರ್‌ಗಳೊಂದಿಗೆ ನಿಮಗೆ ಪರಿಚಯ ಮಾಡಿಸುತ್ತವೆ.

ವೋಕ್ಸ್‌ವ್ಯಾಗನ್ ಟೈಗನ್ ಕಾರ್ ಇನ್ಶೂರೆನ್ಸ್‌ನ ಬೆಲೆ

ರಿಜಿಸ್ಟ್ರೇಷನ್ ದಿನಾಂಕ ಪ್ರೀಮಿಯಂ (ಓನ್ ಡ್ಯಾಮೇಜ್ ಓನ್ಲಿ ಪಾಲಿಸಿಗಾಗಿ)
ಅಕ್ಟೋಬರ್-2021 29,639

** ಡಿಸ್‌ಕ್ಲೈಮರ್ - ವೋಕ್ಸ್‌ವ್ಯಾಗನ್ ಟೈಗನ್ ಜಿ.ಟಿ ಪ್ಲಸ್ 1.5 ಟಿಎಸ್‌ಐ ಡಿಎಸ್‌ಜಿ ಪೆಟ್ರೋಲ್ 1498.0 ಜಿಎಸ್‌ಟಿ ಯನ್ನು ಹೊರತುಪಡಿಸಿ ಪ್ರೀಮಿಯಂ ಕ್ಯಾಲ್ಕುಲೇಶನ್ ಮಾಡಲಾಗಿದೆ.

ಸಿಟಿ - ಬೆಂಗಳೂರು, ವೆಹಿಕಲ್ ರಿಜಿಸ್ಟ್ರೇಷನ್ ತಿಂಗಳು - ಅಕ್ಟೋಬರ್, ಎನ್‌ಸಿಬಿ - 0%, ಯಾವುದೇ ಆ್ಯಡ್-ಆನ್‌ಗಳಿಲ್ಲ, ಅವಧಿ ಮುಗಿಯದ ಪಾಲಿಸಿ, & ಐಡಿವಿ-ಕಡಿಮೆ ಲಭ್ಯವಿದೆ. ಪ್ರೀಮಿಯಂ ಕ್ಯಾಲ್ಕುಲೇಶನ್ ಅನ್ನು ಅಕ್ಟೋಬರ್-2021 ರಲ್ಲಿ ಮಾಡಲಾಗಿದೆ. ಮೇಲೆ ನಿಮ್ಮ ವಾಹನದ ವಿವರಗಳನ್ನು ಎಂಟರ್ ಮಾಡುವ ಮೂಲಕ ದಯವಿಟ್ಟು ಫೈನಲ್ ಪ್ರೀಮಿಯಂ ಅನ್ನು ಚೆಕ್ ಮಾಡಿ.

ಡಿಜಿಟ್‌ನ ವೋಕ್ಸ್‌ವ್ಯಾಗನ್ ಟೈಗನ್ ಕಾರ್ ಇನ್ಶೂರೆನ್ಸ್ ಏನನ್ನು ಕವರ್ ಮಾಡುತ್ತದೆ

ನೀವು ಡಿಜಿಟ್‌ನ ವೋಕ್ಸ್‌ವ್ಯಾಗನ್ ಟೈಗನ್ ಕಾರ್ ಇನ್ಶೂರೆನ್ಸ್ ಅನ್ನೇ ಏಕೆ ಖರೀದಿಸಬೇಕು?

ವೋಕ್ಸ್‌ವ್ಯಾಗನ್ ಟಿ-ರಾಕ್ ಕಾರ್‌ಗಾಗಿ ಇನ್ಶೂರೆನ್ಸ್ ಪ್ಲ್ಯಾನ್‌ಗಳು

ಥರ್ಡ್ ಪಾರ್ಟಿ ಕಾಂಪ್ರೆಹೆನ್ಸಿವ್

ಅಪಘಾತದ ಕಾರಣದಿಂದಾಗಿ ಸ್ವಂತ ಕಾರಿಗೆ ಉಂಟಾಗುವ ಹಾನಿ/ನಷ್ಟಗಳು

×

ಬೆಂಕಿಯ ಸಂದರ್ಭದಲ್ಲಿ ಸ್ವಂತ ಕಾರಿಗೆ ಉಂಟಾಗುವ ಹಾನಿ/ನಷ್ಟಗಳು

×

ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಸ್ವಂತ ಕಾರಿಗೆ ಉಂಟಾಗುವ ಹಾನಿ/ನಷ್ಟಗಳು

×

ಥರ್ಡ್ ಪಾರ್ಟಿ ವೆಹಿಕಲ್‌ಗೆ ಉಂಟಾಗುವ ಹಾನಿ

×

ಥರ್ಡ್ ಪಾರ್ಟಿ ಪ್ರಾಪರ್ಟಿಗೆ ಉಂಟಾಗುವ ಹಾನಿ

×

ಪರ್ಸನಲ್ ಆ್ಯಕ್ಸಿಡೆಂಟ್ ಕವರ್

×

ಥರ್ಡ್-ಪಾರ್ಟಿ ವ್ಯಕ್ತಿಯ ಗಾಯ/ಮರಣ

×

ನಿಮ್ಮ ಕಾರ್‌ನ ಕಳ್ಳತನ

×

ಡೋರ್‌ಸ್ಟೆಪ್ ಪಿಕಪ್ ಮತ್ತು ಡ್ರಾಪ್

×

ನಿಮ್ಮ ಐಡಿವಿ ಅನ್ನು ಕಸ್ಟಮೈಸ್ ಮಾಡಿ

×

ಕಸ್ಟಮೈಸ್ಡ್ ಆ್ಯಡ್-ಆನ್‌ಗಳೊಂದಿಗೆ ಹೆಚ್ಚುವರಿ ರಕ್ಷಣೆ

×
Get Quote Get Quote

ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಇನ್ಶೂರೆನ್ಸ್‌ನ ವ್ಯತ್ಯಾಸದ ಬಗ್ಗೆ ಮತ್ತಷ್ಟು ತಿಳಿಯಿರಿ

ಕ್ಲೈಮ್ ಸಲ್ಲಿಸುವುದು ಹೇಗೆ?

ನಮ್ಮ ಕಾರ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಖರೀದಿಸಿದ ನಂತರ ಅಥವಾ ರಿನೀವ್ ಮಾಡಿದ ನಂತರ, ನೀವು ಚಿಂತಾ ಮುಕ್ತರಾಗಿ ಬದುಕಬಹುದು. ಏಕೆಂದರೆ ನಾವು ಸರಳವಾದ 3-ಹಂತದ, ಸಂಪೂರ್ಣ ಡಿಜಿಟಲ್ ಕ್ಲೈಮ್‌ಗಳ ಪ್ರಕ್ರಿಯೆಯನ್ನು ಹೊಂದಿದ್ದೇವೆ!

ಹಂತ 1

1800-258-5956 ಗೆ ಕಾಲ್ ಮಾಡಿ. ಯಾವುದೇ ಫಾರ್ಮ್‌ಗಳನ್ನು ಭರ್ತಿ ಮಾಡಬೇಕಾಗಿಲ್ಲ

ಹಂತ 2

ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರ್‌ನಲ್ಲಿ ಸೆಲ್ಫ್- ಇನ್‌ಸ್ಪೆಕ್ಷನ್‌ಗಾಗಿ ಲಿಂಕ್ ಒಂದನ್ನು ಪಡೆಯಿರಿ. ನೀಡಲಾದ ಮಾರ್ಗದರ್ಶಿಯಂತೆ ಹಂತ ಹಂತವಾಗಿ ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನಿಮ್ಮ ವೆಹಿಕಲ್‌ನ ಹಾನಿಯನ್ನು ಶೂಟ್ ಮಾಡಿ.

ಹಂತ 3

ನಮ್ಮ ಗ್ಯಾರೇಜ್‌ಗಳ ನೆಟ್‌ವರ್ಕ್ ಮೂಲಕ ರಿಇಂಬರ್ಸ್‌ಮೆಂಟ್ ಅಥವಾ ಕ್ಯಾಶ್‌ಲೆಸ್ ಈ ಎರಡು ಆಯ್ಕೆಗಳಲ್ಲಿ ನೀವು ಬಯಸುವ ರಿಪೇರಿ ವಿಧಾನವನ್ನು ಆಯ್ಕೆ ಮಾಡಿ

ಡಿಜಿಟ್ ಇನ್ಶೂರೆನ್ಸ್ ಕ್ಲೈಮ್‌ಗಳು ಎಷ್ಟು ವೇಗವಾಗಿ ಇತ್ಯರ್ಥವಾಗುತ್ತವೆ? ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ನಿಮ್ಮ ಮನಸ್ಸಿನಲ್ಲಿ ಮೂಡುವ ಮೊದಲ ಪ್ರಶ್ನೆ ಇದು. ಒಳ್ಳೆಯದು, ನೀವೀಗ ಅದನ್ನೇ ಮಾಡುತ್ತಿರುವಿರಿ! ಡಿಜಿಟ್‌ನ ಕ್ಲೈಮ್‌ಗಳ ರಿಪೋರ್ಟ್ ಕಾರ್ಡ್ ಅನ್ನು ಓದಿ

ಡಿಜಿಟ್‌ನ ವೋಕ್ಸ್‌ವ್ಯಾಗನ್ ಟೈಗನ್ ಕಾರ್ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡಲು ಕಾರಣಗಳು

ಯಾವ ಕಾರನ್ನು ಖರೀದಿಸಬೇಕೆಂದು ಆಯ್ಕೆಮಾಡುವುದರ ಜೊತೆಗೆ, ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸುವುದು ಮತ್ತೊಂದು ಮುಖ ನಿರ್ಧಾರವಾಗಿದೆ. ಆದಾಗ್ಯೂ, ವಿಶ್ವಾಸಾರ್ಹ ಮತ್ತು ಆ್ಯಕ್ಸೆಸ್ಸಿಬಲ್ ಇನ್ಶೂರೆನ್ಸ್ ಕಂಪನಿಯನ್ನು ಆಯ್ಕೆ ಮಾಡುವುದು ಬಹಳಷ್ಟು ವ್ಯತ್ಯಾಸವನ್ನು ಉಂಟುಮಾಡುತ್ತದೆ. ಉದಾಹರಣೆಗೆ, ಡಿಜಿಟ್ ತನ್ನ ವೈವಿಧ್ಯಮಯ ಕಸ್ಟಮರ್‌ಗಳಿಗೆ ಉತ್ತಮ ಸೇವೆ ಸಲ್ಲಿಸಲು ಈ ಕೆಳಗಿನ ಪ್ರಯೋಜನಗಳನ್ನು ನೀಡುತ್ತದೆ.

  • ಡಿಜಿಟೈಸ್ಡ್ ಕ್ಲೈಮಿಂಗ್ ಪ್ರಕ್ರಿಯೆ - ಡಿಜಿಟ್‌ನೊಂದಿಗೆ, ನಿಮ್ಮ ಕ್ಲೈಮ್ ಇತ್ಯರ್ಥವಾಗುವವರೆಗೆ ನೀವು ಕಾಯಬೇಕಾಗಿಲ್ಲ. ಕ್ಲೈಮ್‌ಗಳನ್ನು ತಕ್ಷಣವೇ ಫೈಲ್ ಮಾಡಲು ಇನ್ಶೂರೆನ್ಸ್ ಕಂಪನಿಯವರು, ಸ್ಮಾರ್ಟ್‌ಫೋನ್-ಸಕ್ರಿಯಗೊಳಿಸಿದ ಸೆಲ್ಫ್-ಇನ್‌ಸ್ಪೆಕ್ಷನ್‌ ಸಿಸ್ಟಮ್ ಅನ್ನು ವಿಸ್ತರಿಸುತ್ತಾರೆ. ಈಗ, ವೈಯಕ್ತಿಕ ಮೌಲ್ಯಮಾಪನದ ತೊಂದರೆಯನ್ನು ಬಗೆಹರಿಸಲು, ಟೈಗನ್ ಇನ್ಶೂರೆನ್ಸ್‌ನ ವಿರುದ್ಧ ನಿಮ್ಮ ಕ್ಲೈಮ್ ಅನ್ನು ಸಮರ್ಥಿಸಿಕೊಳ್ಳಲು ನೀವು ಫೋಟೋಗಳನ್ನು ಕಳುಹಿಸಬೇಕು.
  • ಹೆಚ್ಚಿನ ಕ್ಲೈಮ್ ಸೆಟಲ್‌ಮೆಂಟ್ ಅನುಪಾತ - ಜವಾಬ್ದಾರಿಯುತ ಇನ್ಶೂರೆನ್ಸ್ ಕಂಪನಿಯಾಗಿರುವುದರಿಂದ, ಸಾಧ್ಯವಾದಷ್ಟು ಕಡಿಮೆ ಸಮಯದೊಳಗೆ ಗರಿಷ್ಠ ಸಂಖ್ಯೆಯ ಕ್ಲೈಮ್ ಸೆಟಲ್‌ಮೆಂಟ್‌ಗಳನ್ನು ಮಾಡುವುದಾಗಿ ಡಿಜಿಟ್ ಖಾತರಿಪಡಿಸುತ್ತದೆ. ಇದು ವಿಶ್ವಾಸಾರ್ಹವಾಗಿದ್ದು, ಹೆಚ್ಚಿನ ಕ್ಲೈಮ್ ಸೆಟಲ್‌ಮೆಂಟ್ ಅನುಪಾತದ ರೆಕಾರ್ಡ್ ಹೊಂದಿದೆ.
  • ವೈಯಕ್ತೀಕರಿಸಿದ ಐಡಿವಿ (IDV) ಮೊತ್ತ - ಡಿಜಿಟ್ ಕಂಪನಿಯು ಇನ್ಶೂರೆನ್ಸ್‌ನ ಘೋಷಿತ ಮೌಲ್ಯ (ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ) ವನ್ನು ಪಡೆಯಲು, ನಿಮ್ಮ ವಾಹನದ ಎಕ್ಸ್-ಶೋರೂಂ ಬೆಲೆಯಿಂದ ಡೆಪ್ರಿಸಿಯೇಶನ್ ಅನ್ನು ಡಿಡಕ್ಟ್ ಮಾಡುತ್ತದೆ. ಈಗ, ನಿಮ್ಮ ವೋಕ್ಸ್‌ವ್ಯಾಗನ್ ಟೈಗನ್ ಇನ್ಶೂರೆನ್ಸ್ ವೆಚ್ಚವನ್ನು ಸ್ವಲ್ಪ ಹೆಚ್ಚಿಸುವ ಮೂಲಕ ನಿಮ್ಮ ಐಡಿವಿ ಮೊತ್ತವನ್ನು ನೀವು ಕಸ್ಟಮೈಸ್ ಮಾಡಬಹುದು. ಸರಿಪಡಿಸಲಾಗದ ಹಾನಿಗಳು, ಸಂಪೂರ್ಣ ನಷ್ಟ ಅಥವಾ ಕಳ್ಳತನದಂತಹ ಪರಿಸ್ಥಿತಿಗಳಲ್ಲಿ ಹೆಚ್ಚಿನ ಪರಿಹಾರವನ್ನು ಪಡೆಯಲು ಇದು ನಿಮಗೆ ಸಹಾಯ ಮಾಡುತ್ತದೆ.
  • ವ್ಯಾಪಕ ಶ್ರೇಣಿಯ ಹೆಚ್ಚುವರಿ ಕವರ್‌ಗಳು - ಈ ಪ್ರಯೋಜನಗಳ ಹೊರತಾಗಿ, ಡಿಜಿಟ್ ತನ್ನ ಕಾಂಪ್ರೆಹೆನ್ಸಿವ್ ವೋಕ್ಸ್‌ವ್ಯಾಗನ್ ಟೈಗನ್ ಕಾರ್ ಇನ್ಶೂರೆನ್ಸ್ ಪಾಲಿಸಿದಾರರಿಗೆ 7 ಹೆಚ್ಚುವರಿ ಕವರ್‌ಗಳೊಂದಿಗೆ ಇನ್ಶೂರೆನ್ಸ್ ಅನ್ನು ಸುಗಮಗೊಳಿಸುತ್ತದೆ. ಅವುಗಳಲ್ಲಿ ಕೆಲವು ಹೀಗಿವೆ-

ಆದಾಗ್ಯೂ, ನಿಮ್ಮ ಪ್ರೀಮಿಯಂಗಳ ಕನಿಷ್ಠ ಏರಿಕೆಗೆ ವಿರುದ್ಧವಾಗಿ ನೀವು ಈ ಕವರ್‌ಗಳಲ್ಲಿ ಯಾವುದನ್ನಾದರೂ ನಿಮ್ಮ ಪಾಲಿಸಿಗೆ ಆ್ಯಡ್ ಮಾಡಬಹುದು.

  • ಭಾರತದಾದ್ಯಂತ ನೆಟ್‌ವರ್ಕ್ ಗ್ಯಾರೇಜ್‌ಗಳು - ಡಿಜಿಟ್ ಭಾರತದಾದ್ಯಂತ 6000+ ಗ್ಯಾರೇಜ್‌ಗಳ ನೆಟ್‌ವರ್ಕ್ ಅನ್ನು ಹೊಂದಿದೆ. ಪ್ರತಿಯೊಂದೂ ಕ್ಯಾಶ್‌ಲೆಸ್ ರಿಪೇರಿಯನ್ನು ನೀಡುತ್ತವೆ. ಆದ್ದರಿಂದ, ನೀವು ಎಲ್ಲೇ ಇದ್ದರೂ, ನಿಮ್ಮ ಲೊಕೇಶನ್‌ನಲ್ಲಿ ಹಾಗೂ ನಿಮ್ಮ ಸುತ್ತಮುತ್ತ ನೆಟ್‌ವರ್ಕ್ ಗ್ಯಾರೇಜ್ ಅನ್ನು ನೀವು ಕಾಣಬಹುದು.
  • ಅನುಕೂಲಕರ ಪಿಕಪ್, ರಿಪೇರಿ ಮತ್ತು ಡ್ರಾಪ್ ಸೇವೆ - ನಿಮ್ಮ ಟೈಗನ್ ಡ್ರೈವ್ ಮಾಡಲು ಸರಿಯಾದ ಕಂಡೀಷನ್‌ನಲ್ಲಿ ಇರುವುದಿಲ್ಲ, ಹೀಗೂ ಆಗಬಹುದು. ಅಂತಹ ಸಂದರ್ಭಗಳಲ್ಲಿ, ತೊಂದರೆಗಳನ್ನು ತಪ್ಪಿಸಲು ನೀವು ಡಿಜಿಟ್ ನೆಟ್‌ವರ್ಕ್ ಕಾರ್ ಗ್ಯಾರೇಜ್‌ಗಳಿಂದ ಡೋರ್‌ಸ್ಟೆಪ್ ಪಿಕಪ್, ರಿಪೇರಿ ಮತ್ತು ಡ್ರಾಪ್ ಸೌಲಭ್ಯವನ್ನು ಆಯ್ಕೆ ಮಾಡಿಕೊಳ್ಳಬಹುದು.
  • ಸ್ಟೆಲ್ಲರ್ ಕಸ್ಟಮರ್ ಕೇರ್ ಸರ್ವೀಸ್ - ಕೊನೆಯದಾಗಿ, ಫೋಕ್ಸ್‌ವ್ಯಾಗನ್ ಟೈಗನ್ ಇನ್ಶೂರೆನ್ಸ್ ರಿನೀವಲ್ ಅಥವಾ ಖರೀದಿ ಪ್ರಕ್ರಿಯೆಯ ಕುರಿತು ನೀವು ಯಾವುದೇ ಪ್ರಶ್ನೆ-ಸಂದೇಹಗಳನ್ನು ಹೊಂದಿದ್ದರೆ, ನಿಮ್ಮ ಅನುಕೂಲಕ್ಕಾಗಿ ಡಿಜಿಟ್‌ನೊಂದಿಗೆ ಸಂಪರ್ಕದಲ್ಲಿರಿ. ಡಿಜಿಟ್‌ನ ಕಸ್ಟಮರ್ ಕೇರ್ ಎಕ್ಸಿಕ್ಯೂಟಿವ್‌ಗಳು 24X7 ಲಭ್ಯವಿರುತ್ತಾರೆ.

ಈ ಎಲ್ಲಾ ಪ್ರಯೋಜನಗಳು ಭಾರತದಲ್ಲಿ ಡಿಜಿಟ್‌ನ ವ್ಯಾಪಕ ಜನಪ್ರಿಯತೆಗೆ ಸಾಕ್ಷಿಯಾಗಿ ಕೆಲಸ ಮಾಡುತ್ತಿವೆ. ಆದಾಗ್ಯೂ, ವಾಹನ ಮಾಲೀಕರು ತಮ್ಮ ವೋಕ್ಸ್‌ವ್ಯಾಗನ್ ಟೈಗನ್ ಕಾರ್ ಇನ್ಶೂರೆನ್ಸ್‌ನ ಪ್ರೀಮಿಯಂಗಳನ್ನು ಕಡಿಮೆ ಮಾಡಲು ಕೆಲವು ಟಿಪ್ಸ್‌ಗಳನ್ನು ಸಹ ತಿಳಿದಿರಬೇಕು.

ನೆನಪಿಡಿ, ಹೆಚ್ಚಿನ ಕಡಿತಗಳು ಮತ್ತು ಸಣ್ಣ ಕ್ಲೈಮ್‌ಗಳು ಪ್ರೀಮಿಯಂ ಮೊತ್ತವನ್ನು ಗಣನೀಯವಾಗಿ ಕಡಿಮೆ ಮಾಡುತ್ತವೆ. ಆದಾಗ್ಯೂ, ಕಡಿಮೆ ಪ್ರೀಮಿಯಂಗಳು ವ್ಯಾಪಕ ಶ್ರೇಣಿಯ ಪ್ರಯೋಜನಗಳನ್ನು ಖಾತರಿಪಡಿಸುವುದಿಲ್ಲ. ಆದ್ದರಿಂದ, ಇನ್ಶೂರೆನ್ಸ್ ಪ್ರಕ್ರಿಯೆಯನ್ನು ವಿವರವಾಗಿ ಅರ್ಥಮಾಡಿಕೊಳ್ಳಲು, ಡಿಜಿಟ್‌ನಂತಹ ವಿಶ್ವಾಸಾರ್ಹ ಇನ್ಶೂರರ್ ಅನ್ನು ಸಂಪರ್ಕಿಸಿ.

ವೋಕ್ಸ್‌ವ್ಯಾಗನ್ ಟೈಗನ್ ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸುವುದು ಏಕೆ ಮುಖ್ಯವಾಗಿದೆ?

ಪ್ರತಿ ಭಾರತೀಯ ಕಾರು ಮಾಲೀಕರು, ಕಾರಿನ ಹಾನಿಗೆ ಕಾರಣವಾಗುವ ದುರದೃಷ್ಟಕರ ಸಂದರ್ಭಗಳಿಗೆ ಸಿದ್ಧರಾಗಿರುವುದು ಅತ್ಯಗತ್ಯ. ಮತ್ತು ಇದಕ್ಕಾಗಿ, ನಿಮ್ಮ ಹಣಕಾಸನ್ನು ಸುರಕ್ಷಿತವಾಗಿರಿಸಲು ವ್ಯಾಲಿಡ್ ಆಗಿರುವ ಕಾರ್ ಇನ್ಶೂರೆನ್ಸ್ ಅಗತ್ಯ. ಹೆಚ್ಚುವರಿಯಾಗಿ, ವೋಕ್ಸ್‌ವ್ಯಾಗನ್ ಟೈಗನ್ ಇನ್ಶೂರೆನ್ಸ್ ಬೆಲೆಯನ್ನು ಪಾವತಿಸುವುದು, ನಿಮಗೆ ಪೆನಲ್ಟಿಗಳಿಂದ ಉಂಟಾಗುವ ನಷ್ಟ ಮತ್ತು ಹಾನಿಗಳನ್ನು ಸರಿಪಡಿಸುವ ಕೈಗೆಟುಕುವ ಆಯ್ಕೆಯಾಗಿದೆ.

ಭಾರತದಲ್ಲಿ ಕಾರ್ ಇನ್ಶೂರೆನ್ಸ್ ಪಾಲಿಸಿಯ ಅಗತ್ಯವನ್ನು ಒತ್ತಿಹೇಳುವ ಕಾರಣಗಳನ್ನು ಈ ಕೆಳಗೆ ನೀಡಲಾಗಿದೆ.

  • ಫೈನಾನ್ಸಿಯಲ್ ಲಯಬಿಲಿಟಿಗಳನ್ನು ಕವರ್ ಮಾಡುತ್ತದೆ - ನಿಮ್ಮ ವೋಕ್ಸ್‌ವ್ಯಾಗನ್ ಟೈಗನ್ ಕಾರ್, ಅಪಘಾತದಲ್ಲಿ ಸಿಲುಕಿ ಹಾನಿಗೊಳಗಾದರೆ, ನಿಮ್ಮ ಅನುಕೂಲಕ್ಕೆ ಅನುಗುಣವಾಗಿ ನೀವು ರಿಇಂಬರ್ಸ್‌ಮೆಂಟ್ ಅಥವಾ ಉಚಿತ ರಿಪೇರಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಆದಾಗ್ಯೂ, ನೀವು ಕಾಂಪ್ರೆಹೆನ್ಸಿವ್ ಪಾಲಿಸಿಯನ್ನು ಹೊಂದಿದ್ದರೆ ಮಾತ್ರ ನೀವು ಈ ಪ್ರಯೋಜನಗಳಿಗೆ ಅರ್ಹರಾಗಿರುತ್ತೀರಿ. ಇದಲ್ಲದೆ, ಟೈಗನ್, ಮಾರ್ಕೆಟ್‌ನಲ್ಲಿ ಹೊಸದಾಗಿರುವುದರಿಂದ, ರಿಪೇರಿ ಮತ್ತು ಬಿಡಿಭಾಗಗಳ ವೆಚ್ಚವು ಸಾಕಷ್ಟು ದುಬಾರಿಯಾಗಿದೆ. ಇದು ಕಾರ್ ಇನ್ಶೂರೆನ್ಸ್ ಪಾಲಿಸಿಯ ಮಹತ್ವವನ್ನು ಸಮರ್ಥಿಸುತ್ತದೆ.
  • ಥರ್ಡ್ ಪಾರ್ಟಿ ಚಾರ್ಜ್‌ಗಳಿಂದ ರಕ್ಷಿಸುತ್ತದೆ - ಥರ್ಡ್-ಪಾರ್ಟಿ ಕಾರ್ ಇನ್ಶೂರೆನ್ಸ್ ಯಾವುದೇ ಥರ್ಡ್-ಪಾರ್ಟಿ ಕ್ಲೈಮ್‌ಗಳಿಂದ ಹಣಕಾಸಿನ ರಕ್ಷಣೆಯನ್ನು ಒದಗಿಸುತ್ತದೆ. ಇದು ವ್ಯಕ್ತಿ ಅಥವಾ ಪ್ರಾಪರ್ಟಿ ಎರಡೂ ಆಗಿರಬಹುದು. ಡಿಜಿಟ್‌ನಂತಹ ಹೆಸರಾಂತ ಇನ್ಶೂರೆನ್ಸ್ ಕಂಪನಿಯು ಅಪಘಾತದಲ್ಲಿ ಭಾಗಿಯಾಗಿರುವ ಲಿಟಿಗೇಶನ್ ಸಮಸ್ಯೆಗಳನ್ನು ಬಗೆಹರಿಸಲು ಪಾಲಿಸಿಯನ್ನು ನೀಡುತ್ತವೆ.
  • ಭಾರಿ ದಂಡ ಅಥವಾ ಶಿಕ್ಷೆಯಿಂದ ಉಳಿಸುತ್ತದೆ - ಮೋಟಾರ್ ವೆಹಿಕಲ್ಸ್ ಆ್ಯಕ್ಟ್ 1988, ಭಾರತದಲ್ಲಿ ಪ್ರತಿಯೊಬ್ಬ ಕಾರ್ ಮಾಲೀಕರು ಥರ್ಡ್ ಪಾರ್ಟಿ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿರಬೇಕು ಎಂದು ಸ್ಪಷ್ಟವಾಗಿ ಹೇಳುತ್ತದೆ. ಆದ್ದರಿಂದ, ಕಾರ್ ಇನ್ಶೂರೆನ್ಸ್ ಪಾಲಿಸಿ ಇಲ್ಲದೆ ಡ್ರೈವ್ ಮಾಡುವ ಯಾರೇ ಆದರೂ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಮೊದಲ ಬಾರಿಗೆ ನಿಯಮಗಳನ್ನು ಉಲ್ಲಂಘಿಸಿದರೆ ₹2000 ಗಳವರೆಗಿನ ಭಾರಿ ದಂಡ ತೆರಬೇಕಾಗುತ್ತದೆ. ಮತ್ತು ಅದೇ ಅಪರಾಧವನ್ನು ಪುನರಾವರ್ತಿಸಿದರೆ, ನೀವು ₹ 4000 ಗಳನ್ನನು ಪಾವತಿಸಬೇಕಾಗಬಹುದು. ಕೆಟ್ಟ ಸಂದರ್ಭಗಳಲ್ಲಿ, ನಿಮ್ಮ ಲೈಸೆನ್ಸ್ ಅನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು ಅಥವಾ ನೀವು 3 ತಿಂಗಳವರೆಗೆ ಜೈಲಿನಲ್ಲಿ ಉಳಿಯಬೇಕಾಗಬಹುದು.
  • ಕಾಂಪ್ರೆಹೆನ್ಸಿವ್ ಪಾಲಿಸಿಯೊಂದಿಗೆ ಹೆಚ್ಚುವರಿ ಕವರ್‌ಗಳನ್ನು ನೀಡುತ್ತದೆ - ಹೆಸರೇ ಸೂಚಿಸುವಂತೆ, ಬೆಂಕಿ, ಕಳ್ಳತನ, ನೈಸರ್ಗಿಕ ವಿಪತ್ತುಗಳು, ಮಾನವ ನಿರ್ಮಿತ ವಿಪತ್ತುಗಳು ಮತ್ತು ನಿಮ್ಮ ನಿಯಂತ್ರಣಕ್ಕೆ ಮೀರಿದ ಇತರ ಅಂಶಗಳಿಂದ ಸಂಭವಿಸಿದ ಎಲ್ಲಾ ರೀತಿಯ ಹಾನಿಗಳನ್ನು ಕಾಂಪ್ರೆಹೆನ್ಸಿವ್ ಪಾಲಿಸಿಯು ವಿಶಾಲವಾಗಿ ಕವರ್ ಮಾಡುತ್ತದೆ.
  • ನೋ ಕ್ಲೈಮ್ ಬೋನಸ್ ಅನ್ನು ವಿಸ್ತರಿಸುತ್ತದೆ - ಪ್ರತಿ ನಾನ್-ಕ್ಲೈಮ್ ವರ್ಷಕ್ಕೆ ನಿಮ್ಮ ವೋಕ್ಸ್‌ವ್ಯಾಗನ್ ಟೈಗನ್ ಇನ್ಶೂರೆನ್ಸ್‌ ರಿನೀವಲ್‌ನ ಬೆಲೆಯಲ್ಲಿ ನೀವು ಡಿಸ್ಕೌಂಟ್‌ಗಳನ್ನು ಗಳಿಸಬಹುದು. ಡಿಜಿಟ್‌ನಂತಹ ಇನ್ಶೂರೆನ್ಸ್ ಕಂಪನಿಯು ನೀವು ಸತತ ಐದು ವರ್ಷಗಳವರೆಗೆ ಕ್ಲೈಮ್ ಫೈಲ್ ಮಾಡಿರದಿದ್ದರೆ ಪ್ರೀಮಿಯಂಗಳಲ್ಲಿ 50% ವರೆಗೆ ಡಿಸ್ಕೌಂಟ್‌ಗಳನ್ನು ನೀಡುತ್ತವೆ.

ಈ ರೆಗ್ಯುಲರ್ ಪ್ರಯೋಜನಗಳ ಹೊರತಾಗಿ, ಡಿಜಿಟ್‌ನಂತಹ ಜನಪ್ರಿಯ ಇನ್ಶೂರೆನ್ಸ್ ಪೂರೈಕೆದಾರರು ತಡೆರಹಿತ ಅನುಭವವನ್ನು ಖಚಿತಪಡಿಸಲು ಕ್ಲೈಮ್ ಪ್ರಕ್ರಿಯೆಯನ್ನು ಸರಳಗೊಳಿಸುತ್ತಾರೆ. ಅಲ್ಲದೆ, ನೀವು ಡಿಜಿಟ್‌ನಿಂದ ಫೋಕ್ಸ್‌ವ್ಯಾಗನ್ ಟೈಗನ್ ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸಿದರೆ ಅಥವಾ ರಿನೀವಲ್‌ಗೊಳಿಸಿದರೆ, ಕಳ್ಳತನ, ಬೆಂಕಿಯಿಂದ ಉಂಟಾಗುವ ಹಾನಿ, ಅಪಘಾತಗಳು, ನೈಸರ್ಗಿಕ ವಿಕೋಪಗಳು ಮತ್ತು ಹೆಚ್ಚಿನವುಗಳ ವಿರುದ್ಧ ನೀವು ಗರಿಷ್ಠ ಕವರೇಜನ್ನು ನಿರೀಕ್ಷಿಸಬಹುದು.

ವೋಕ್ಸ್‌ವ್ಯಾಗನ್ ಟೈಗನ್ ಕುರಿತು ಇನ್ನಷ್ಟು ಮಾಹಿತಿ

ಹೊಸ ಟೈಗನ್ ಅಡ್ವಾನ್ಸ್ಡ್ ಟೆಕ್ನಾಲಜಿ ಸೊಲ್ಯುಷನ್‌ಗಳೊಂದಿಗೆ ಪವರ್-ಪ್ಯಾಕ್ಡ್ ಆಗಿ ಬರುತ್ತದೆ. ಇದು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗಳನ್ನು ನೀಡುವ ನಾಲ್ಕು ವೇರಿಯಂಟ್‌ಗಳಲ್ಲಿ ಲಭ್ಯವಿದೆ.

ಟೈಗನ್ ನಮಗೆ ಏನು ನೀಡುತ್ತದೆ ಎಂಬುದನ್ನು ನಾವು ತ್ವರಿತವಾಗಿ ಒಮ್ಮೆ ನೋಡೋಣ.

ಟೈಗನ್ ಪೆಟ್ರೋಲ್ ಇಂಜಿನ್ ಅನ್ನು ಹೊಂದಿದ್ದು ಅದು 3-ಸಿಲಿಂಡರ್ 1.0-ಲೀಟರ್ ಟರ್ಬೊ-ಚಾರ್ಜ್ಡ್ ಮತ್ತು 4-ಸಿಲಿಂಡರ್ 1.5-ಲೀಟರ್ ಟಿಎಸ್ಐ ಯುನಿಟ್ ಅನ್ನು ಒಳಗೊಂಡಿದೆ. ಇದರ ಹಿಂದಿನ ಯುನಿಟ್ 115 bHP ಅನ್ನು ಜನರೇಟ್ ಮಾಡಬಹುದು ಮತ್ತು 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಯುನಿಟ್‌ನೊಂದಿಗೆ ಸಂಯೋಜಿಸಲ್ಪಟ್ಟಿದೆ. ನಂತರದನ್ನು 6-ಸ್ಪೀಡ್ ಮ್ಯಾನ್ಯುವಲ್ ಅಥವಾ 7-ಸ್ಪೀಡ್ ಡಿಎಸ್‌ಜಿ ಆಟೋಮ್ಯಾಟಿಕ್ ಯುನಿಟ್‌ನೊಂದಿಗೆ ಜೋಡಿಸಲಾಗಿದೆ.

ಅದರ ಸ್ಪರ್ಧಿಗಳ ವಿರುದ್ಧ ಸ್ಪರ್ಧಿಸಲು, ಟೈಗನ್ 10-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಹೈಲೈಟ್ ಮಾಡುತ್ತದೆ. ಇದು ಆಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ ಕನೆಕ್ಟಿವಿಟಿಯನ್ನು ಸಪೋರ್ಟ್ ಮಾಡುತ್ತದೆ. ಇದು ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಡಿಜಿಟಲ್ ಡಿಸ್‌ಪ್ಲೇ, ರಿಯರ್ ವ್ಯೂ ಕ್ಯಾಮೆರಾ, ಎಲೆಕ್ಟ್ರಿಕ್ ಸನ್‌ರೂಫ್, ಟೈಪ್-ಸಿ ಚಾರ್ಜಿಂಗ್ ಪೋರ್ಟ್‌ಗಳು ಮತ್ತು ಹೆಚ್ಚಿನದನ್ನು ಸಹ ಒಳಗೊಂಡಿದೆ.

ತನ್ನ ಎಲ್ಲಾ ಇತ್ತೀಚಿನ ಮಾಡೆಲ್‌ಗಳಂತೆ, ವೋಕ್ಸ್‌ವ್ಯಾಗನ್ ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ಇಎಸ್‌ಸಿ, ಹಿಲ್-ಹೋಲ್ಡ್ ಕಂಟ್ರೋಲ್, ಆರು ಏರ್‌ಬ್ಯಾಗ್‌ಗಳು, ISOFIX ಚೈಲ್ಡ್ ಸೀಟ್ ಆಂಕಾರೇಜ್ ಪಾಯಿಂಟ್‌ಗಳು, ರಿಯರ್ ಪಾರ್ಕ್ ಡಿಸ್ಟೆನ್ಸ್ ಕಂಟ್ರೋಲ್ ಸಿಸ್ಟಮ್ ಮುಂತಾದ ಅತ್ಯುತ್ತಮ ದರ್ಜೆಯ ಸೇಫ್ಟಿ ಫೀಚರ್‌ಗಳನ್ನು ಇನ್ಸ್ಟಾಲ್ ಮಾಡಿದೆ.

ವೋಕ್ಸ್‌ವ್ಯಾಗನ್ ಸಿಂಗಲ್ ಸ್ಲ್ಯಾಟ್ ಕ್ರೋಮ್ ಗ್ರಿಲ್ ಮತ್ತು ಸ್ಕ್ವೇರ್-ಶೇಪ್ಡ್ ಎಲ್‌ಇಡಿ ಹೆಡ್‌ಲೈಟ್‌ಗಳು ಮತ್ತು ಇಂಟಿಗ್ರೇಟೆಡ್ ಹಾರಿಜಾಂಟಲ್ ಎಲ್ಇಡಿ ಡಿಆರ್‌ಎಲ್‌ಗಳನ್ನು ಅಂದವಾಗಿ ಇರಿಸಿದೆ. ಮುಂಭಾಗದಲ್ಲಿ, ನೀವು ಕ್ರೋಮ್ ಗ್ರಿಲ್ ಮತ್ತು ಫಾಗ್ ಲೈಟ್‌ಗಳೊಂದಿಗೆ ಡ್ಯುಯಲ್-ಟೋನ್ ಬಂಪರ್ ಅನ್ನು ಕಾಣಬಹುದು. ಕೆಳಭಾಗದಲ್ಲಿ, ಇದು ಕೃತಕ ಸಿಲ್ವರ್ ಪ್ಲೇಟ್ ಅನ್ನು ಹೊಂದಿದೆ.

ಟೈಗನ್ ತನ್ನ ವರ್ಗದಲ್ಲಿ ಹೆಚ್ಚು ವಿಸ್ತೃತ ವೀಲ್‌ಬೇಸ್ ಅನ್ನು ಹೊಂದಿದೆ ಮತ್ತು ಸೆಂಟರ್ ಕನ್ಸೋಲ್, ಆರ್ಮ್‌ರೆಸ್ಟ್ ಮತ್ತು ಡೋರ್ ಪ್ಯಾಡ್‌ಗಳಲ್ಲಿ ಸಾಕಷ್ಟು ಸ್ಪೇಸ್ ನೀಡುತ್ತದೆ. ದೃಢವಾದ ಮೆತ್ತನೆಯ ಫ್ರಂಟ್ ಸೀಟ್‌ಗಳು ದೊಡ್ಡದಾಗಿರುತ್ತವೆ ಮತ್ತು ಲ್ಯಾಟರಲ್ ಬಾಲ್‌ಸ್ಟೇರಿಂಗ್ ಅನ್ನು ಸಪೋರ್ಟ್ ಮಾಡುತ್ತವೆ. ವಿಶಾಲ ಇಂಗ್ರೆಸ್‌ನಿಂದಾಗಿ ಇದು ರಿಯರ್ ಸೀಟ್‌ಗಳಿಗೆ ಸುಲಭ ಆ್ಯಕ್ಸೆಸ್ ನೀಡುತ್ತದೆ.

ಟೈಗನ್‌ನ ಬೆಲೆ ₹ 10 ಲಕ್ಷಗಳೆಂದು ನಿರೀಕ್ಷಿಸಲಾಗಿದೆ ಮತ್ತು ಟಾಪ್-ಸ್ಪೆಕ್ ವೇರಿಯಂಟ್‌ಗಳ ಬೆಲೆ ಸುಮಾರು ₹ 16 ಲಕ್ಷಗಳು (ಎಕ್ಸ್ ಶೋ ರೂಂ ಬೆಲೆಗಳು).

ಆದ್ದರಿಂದ, ಟೈಗನ್‌ಗಾಗಿ ಈ ಒಟ್ಟು ಮೊತ್ತವನ್ನು ಇನ್ವೆಸ್ಟ್ ಮಾಡುವ ಮೊದಲು, ಗರಿಷ್ಠ ಆರ್ಥಿಕ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಕಾರ್ ಇನ್ಶೂರೆನ್ಸ್ ಪಾಲಿಸಿ ಆಯ್ಕೆಗಳನ್ನು ಒಮ್ಮೆ ಚೆಕ್ ಮಾಡಿ. ನಿಮ್ಮ ಹಣಕಾಸಿನ ಜವಾಬ್ದಾರಿಯನ್ನು ಇಳಿಸಲು ಡಿಜಿಟ್ ವೆಚ್ಚ-ಪರಿಣಾಮಕಾರಿ ವೋಕ್ಸ್‌ವ್ಯಾಗನ್ ಟೈಗನ್ ಕಾರ್ ಇನ್ಶೂರೆನ್ಸ್ ಅನ್ನು ನೀಡುತ್ತದೆ.

ವೋಕ್ಸ್‌ವ್ಯಾಗನ್ ಟೈಗನ್ - ವೇರಿಯಂಟ್‌ಗಳು ಮತ್ತು ಎಕ್ಸ್ ಶೋರೂಂ ಬೆಲೆ

ವೇರಿಯಂಟ್‌ಗಳು ಎಕ್ಸ್ ಶೋರೂಂ ಬೆಲೆ (ನಗರಕ್ಕೆ ಅನುಗುಣವಾಗಿ ಬದಲಾಗಬಹುದು
ವೋಕ್ಸ್‌ವ್ಯಾಗನ್ ಟೈಗನ್ 1.0 ಟಿಎಸ್‌ಐ ಕಂಫರ್ಟ್‌ಲೈನ್ ₹10.49 ಲಕ್ಷಗಳು
ವೋಕ್ಸ್‌ವ್ಯಾಗನ್ ಟೈಗನ್ 1.0 ಟಿಎಸ್‌ಐ ಹೈಲೈನ್ ₹12.79 ಲಕ್ಷಗಳು
ವೋಕ್ಸ್‌ವ್ಯಾಗನ್ ಟೈಗನ್ 1.0 TSI ಹೈಲೈನ್ AT ₹14.09 ಲಕ್ಷಗಳು
ವೋಕ್ಸ್‌ವ್ಯಾಗನ್ ಟೈಗನ್ 1.0 TSI ಟಾಪ್‌ಲೈನ್ ₹14.56 ಲಕ್ಷಗಳು
ವೋಕ್ಸ್‌ವ್ಯಾಗನ್ ಟೈಗನ್ 1.5 ಟಿಎಸ್‌ಐ GT ₹14.99 ಲಕ್ಷಗಳು
ವೋಕ್ಸ್‌ವ್ಯಾಗನ್ ಟೈಗನ್ 1.0 TSI ಟಾಪ್‌ಲೈನ್ AT ₹15.90 ಲಕ್ಷಗಳು
ವೋಕ್ಸ್‌ವ್ಯಾಗನ್ ಟೈಗನ್ 1.5 ಟಿಎಸ್‌ಐ GT ಪ್ಲಸ್ ₹17.49 ಲಕ್ಷಗಳು

ಭಾರತದಲ್ಲಿ ವೋಕ್ಸ್‌ವ್ಯಾಗನ್ ಟೈಗನ್ ಕಾರ್ ಇನ್ಶೂರೆನ್ಸ್ ಕುರಿತು ಪದೇ ಪದೇ ಕೇಳಲಾದ ಪ್ರಶ್ನೆಗಳು

ಟೈಗನ್ ಕಾರ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ಯಾವ ವಿನಾಯಿತಿಗಳಿವೆ?

ಕಾರ್ ಇನ್ಶೂರೆನ್ಸ್ ಪ್ಲ್ಯಾನ್ ಈ ಕೆಳಗಿನ ಕವರೇಜನ್ನು ಒದಗಿಸುವುದಿಲ್ಲ-

  • ಟೈಗನ್‌ನ ವಯಸ್ಸಾಗುವಿಕೆ ಮತ್ತು ಸವಕಳಿ
  • ಎಲೆಕ್ಟ್ರಿಕಲ್ ಬ್ರೇಕ್‌ಡೌನ್ 
  • ಆಲ್ಕೋಹಾಲ್, ಡ್ರಗ್ಸ್ ಮತ್ತು ಇತರ ಅಮಲಿನ ಪದಾರ್ಥಗಳಿಂದ ಸಂಭವಿಸಿದ ಹಾನಿ 
  • ವ್ಯಾಲಿಡ್ ಆಗಿರುವ ಡ್ರೈವಿಂಗ್ ಲೈಸೆನ್ಸ್ ಇಲ್ಲದ ಚಾಲಕರಿಂದ ಸಂಭವಿಸಿದ ಹಾನಿ
  • ಪರಿಣಾಮದ ನಷ್ಟ
  • ಭಾರತದ ಹೊರಗೆ ಸಂಭವಿಸಿದ ಹಾನಿ    

ನನ್ನ ವೋಕ್ಸ್‌ವ್ಯಾಗನ್ ಟೈಗನ್ ಕಾರ್ ಇನ್ಶೂರೆನ್ಸ್‌ನ ವಿರುದ್ಧ ಒಂದು ವರ್ಷದಲ್ಲಿ ನಾನು ಎಷ್ಟು ಕ್ಲೈಮ್‌ಗಳನ್ನು ಸಲ್ಲಿಸಬಹುದು?

ಒಂದು ವರ್ಷದಲ್ಲಿ ನಿಮ್ಮ ಕಾರ್ ಇನ್ಶೂರೆನ್ಸ್ ಪಾಲಿಸಿಯ ವಿರುದ್ಧ ನಿಮಗೆ ಬೇಕಾದಷ್ಟು ಕ್ಲೈಮ್‌ಗಳನ್ನು ನೀವು ಸಲ್ಲಿಸಬಹುದು. ಆದಾಗ್ಯೂ, ಕಾರ್ ಇನ್ಶೂರೆನ್ಸ್ ಕ್ಲೈಮ್‌ಗಳು ನೋ ಕ್ಲೈಮ್ ಬೋನಸ್ ಪ್ರಯೋಜನದ ಮೇಲೆ ಪರಿಣಾಮ ಬೀರುತ್ತವೆ ಎಂಬುದನ್ನು ಯಾವಾಗಲೂ ನೆನಪಿಡಿ. ಅಲ್ಲದೆ, ಒಂದು ವರ್ಷದಲ್ಲಿ ಮಾಡಿದ ಪುನರಾವರ್ತಿತ ಕ್ಲೈಮ್‌ಗಳು, ನಿಮ್ಮ ಪಾಲಿಸಿ ರಿನೀವಲ್‌ನ ನಂತರ ನಿಮ್ಮ ಪ್ರೀಮಿಯಂಗಳನ್ನು ಹೆಚ್ಚಿಸಬಹುದು.