ಹೊಸ ಟೈಗನ್ ಅಡ್ವಾನ್ಸ್ಡ್ ಟೆಕ್ನಾಲಜಿ ಸೊಲ್ಯುಷನ್ಗಳೊಂದಿಗೆ ಪವರ್-ಪ್ಯಾಕ್ಡ್ ಆಗಿ ಬರುತ್ತದೆ. ಇದು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ಗಳನ್ನು ನೀಡುವ ನಾಲ್ಕು ವೇರಿಯಂಟ್ಗಳಲ್ಲಿ ಲಭ್ಯವಿದೆ.
ಟೈಗನ್ ನಮಗೆ ಏನು ನೀಡುತ್ತದೆ ಎಂಬುದನ್ನು ನಾವು ತ್ವರಿತವಾಗಿ ಒಮ್ಮೆ ನೋಡೋಣ.
ಟೈಗನ್ ಪೆಟ್ರೋಲ್ ಇಂಜಿನ್ ಅನ್ನು ಹೊಂದಿದ್ದು ಅದು 3-ಸಿಲಿಂಡರ್ 1.0-ಲೀಟರ್ ಟರ್ಬೊ-ಚಾರ್ಜ್ಡ್ ಮತ್ತು 4-ಸಿಲಿಂಡರ್ 1.5-ಲೀಟರ್ ಟಿಎಸ್ಐ ಯುನಿಟ್ ಅನ್ನು ಒಳಗೊಂಡಿದೆ. ಇದರ ಹಿಂದಿನ ಯುನಿಟ್ 115 bHP ಅನ್ನು ಜನರೇಟ್ ಮಾಡಬಹುದು ಮತ್ತು 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಯುನಿಟ್ನೊಂದಿಗೆ ಸಂಯೋಜಿಸಲ್ಪಟ್ಟಿದೆ. ನಂತರದನ್ನು 6-ಸ್ಪೀಡ್ ಮ್ಯಾನ್ಯುವಲ್ ಅಥವಾ 7-ಸ್ಪೀಡ್ ಡಿಎಸ್ಜಿ ಆಟೋಮ್ಯಾಟಿಕ್ ಯುನಿಟ್ನೊಂದಿಗೆ ಜೋಡಿಸಲಾಗಿದೆ.
ಅದರ ಸ್ಪರ್ಧಿಗಳ ವಿರುದ್ಧ ಸ್ಪರ್ಧಿಸಲು, ಟೈಗನ್ 10-ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಹೈಲೈಟ್ ಮಾಡುತ್ತದೆ. ಇದು ಆಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್ಪ್ಲೇ ಕನೆಕ್ಟಿವಿಟಿಯನ್ನು ಸಪೋರ್ಟ್ ಮಾಡುತ್ತದೆ. ಇದು ವೆಂಟಿಲೇಟೆಡ್ ಫ್ರಂಟ್ ಸೀಟ್ಗಳು, ಡಿಜಿಟಲ್ ಡಿಸ್ಪ್ಲೇ, ರಿಯರ್ ವ್ಯೂ ಕ್ಯಾಮೆರಾ, ಎಲೆಕ್ಟ್ರಿಕ್ ಸನ್ರೂಫ್, ಟೈಪ್-ಸಿ ಚಾರ್ಜಿಂಗ್ ಪೋರ್ಟ್ಗಳು ಮತ್ತು ಹೆಚ್ಚಿನದನ್ನು ಸಹ ಒಳಗೊಂಡಿದೆ.
ತನ್ನ ಎಲ್ಲಾ ಇತ್ತೀಚಿನ ಮಾಡೆಲ್ಗಳಂತೆ, ವೋಕ್ಸ್ವ್ಯಾಗನ್ ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ಇಎಸ್ಸಿ, ಹಿಲ್-ಹೋಲ್ಡ್ ಕಂಟ್ರೋಲ್, ಆರು ಏರ್ಬ್ಯಾಗ್ಗಳು, ISOFIX ಚೈಲ್ಡ್ ಸೀಟ್ ಆಂಕಾರೇಜ್ ಪಾಯಿಂಟ್ಗಳು, ರಿಯರ್ ಪಾರ್ಕ್ ಡಿಸ್ಟೆನ್ಸ್ ಕಂಟ್ರೋಲ್ ಸಿಸ್ಟಮ್ ಮುಂತಾದ ಅತ್ಯುತ್ತಮ ದರ್ಜೆಯ ಸೇಫ್ಟಿ ಫೀಚರ್ಗಳನ್ನು ಇನ್ಸ್ಟಾಲ್ ಮಾಡಿದೆ.
ವೋಕ್ಸ್ವ್ಯಾಗನ್ ಸಿಂಗಲ್ ಸ್ಲ್ಯಾಟ್ ಕ್ರೋಮ್ ಗ್ರಿಲ್ ಮತ್ತು ಸ್ಕ್ವೇರ್-ಶೇಪ್ಡ್ ಎಲ್ಇಡಿ ಹೆಡ್ಲೈಟ್ಗಳು ಮತ್ತು ಇಂಟಿಗ್ರೇಟೆಡ್ ಹಾರಿಜಾಂಟಲ್ ಎಲ್ಇಡಿ ಡಿಆರ್ಎಲ್ಗಳನ್ನು ಅಂದವಾಗಿ ಇರಿಸಿದೆ. ಮುಂಭಾಗದಲ್ಲಿ, ನೀವು ಕ್ರೋಮ್ ಗ್ರಿಲ್ ಮತ್ತು ಫಾಗ್ ಲೈಟ್ಗಳೊಂದಿಗೆ ಡ್ಯುಯಲ್-ಟೋನ್ ಬಂಪರ್ ಅನ್ನು ಕಾಣಬಹುದು. ಕೆಳಭಾಗದಲ್ಲಿ, ಇದು ಕೃತಕ ಸಿಲ್ವರ್ ಪ್ಲೇಟ್ ಅನ್ನು ಹೊಂದಿದೆ.
ಟೈಗನ್ ತನ್ನ ವರ್ಗದಲ್ಲಿ ಹೆಚ್ಚು ವಿಸ್ತೃತ ವೀಲ್ಬೇಸ್ ಅನ್ನು ಹೊಂದಿದೆ ಮತ್ತು ಸೆಂಟರ್ ಕನ್ಸೋಲ್, ಆರ್ಮ್ರೆಸ್ಟ್ ಮತ್ತು ಡೋರ್ ಪ್ಯಾಡ್ಗಳಲ್ಲಿ ಸಾಕಷ್ಟು ಸ್ಪೇಸ್ ನೀಡುತ್ತದೆ. ದೃಢವಾದ ಮೆತ್ತನೆಯ ಫ್ರಂಟ್ ಸೀಟ್ಗಳು ದೊಡ್ಡದಾಗಿರುತ್ತವೆ ಮತ್ತು ಲ್ಯಾಟರಲ್ ಬಾಲ್ಸ್ಟೇರಿಂಗ್ ಅನ್ನು ಸಪೋರ್ಟ್ ಮಾಡುತ್ತವೆ. ವಿಶಾಲ ಇಂಗ್ರೆಸ್ನಿಂದಾಗಿ ಇದು ರಿಯರ್ ಸೀಟ್ಗಳಿಗೆ ಸುಲಭ ಆ್ಯಕ್ಸೆಸ್ ನೀಡುತ್ತದೆ.
ಟೈಗನ್ನ ಬೆಲೆ ₹ 10 ಲಕ್ಷಗಳೆಂದು ನಿರೀಕ್ಷಿಸಲಾಗಿದೆ ಮತ್ತು ಟಾಪ್-ಸ್ಪೆಕ್ ವೇರಿಯಂಟ್ಗಳ ಬೆಲೆ ಸುಮಾರು ₹ 16 ಲಕ್ಷಗಳು (ಎಕ್ಸ್ ಶೋ ರೂಂ ಬೆಲೆಗಳು).
ಆದ್ದರಿಂದ, ಟೈಗನ್ಗಾಗಿ ಈ ಒಟ್ಟು ಮೊತ್ತವನ್ನು ಇನ್ವೆಸ್ಟ್ ಮಾಡುವ ಮೊದಲು, ಗರಿಷ್ಠ ಆರ್ಥಿಕ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಕಾರ್ ಇನ್ಶೂರೆನ್ಸ್ ಪಾಲಿಸಿ ಆಯ್ಕೆಗಳನ್ನು ಒಮ್ಮೆ ಚೆಕ್ ಮಾಡಿ. ನಿಮ್ಮ ಹಣಕಾಸಿನ ಜವಾಬ್ದಾರಿಯನ್ನು ಇಳಿಸಲು ಡಿಜಿಟ್ ವೆಚ್ಚ-ಪರಿಣಾಮಕಾರಿ ವೋಕ್ಸ್ವ್ಯಾಗನ್ ಟೈಗನ್ ಕಾರ್ ಇನ್ಶೂರೆನ್ಸ್ ಅನ್ನು ನೀಡುತ್ತದೆ.