ಸ್ಕೂಟರ್ ಅನ್ನು ಖರೀದಿಸುವ ಮೊದಲು ಅದರ ಎಲ್ಲಾ ವೈಶಿಷ್ಟ್ಯಗಳನ್ನು ತಿಳಿದುಕೊಳ್ಳುವುದು ಮುಖ್ಯವಾದರೂ, ಅದರ ಸಂರಕ್ಷಣೆಗಾಗಿ ನೀವು ಪಡೆಯುವ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯಿಂದ ನೀವು ಆನಂದಿಸಬಹುದಾದ ಲಾಭದ ಬಗ್ಗೆ ತಿಳಿಯುವುದೂ ಅಷ್ಟೇ ಮುಖ್ಯವಾಗಿದೆ,ಇಲ್ಲಿ, ಸುಜುಕಿ ಆಕ್ಸೆಸ್ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿ ಅಡಿಯಲ್ಲಿ ನೀವು ಪಡೆಯಬಹುದಾದ ಲಾಭಗಳ ಬಗ್ಗೆ ಎಲ್ಲವನ್ನೂ ತಿಳಿಯೋಣ, ಇತರ ವಿಷಯಗಳೊಂದಿಗೆ!
ನೀವು ದಿನಬಳಕೆಯ ವಾಹನದ ಮೇಲೆ ಹೂಡಿಕೆ ಮಾಡಲು ಯೋಚಿಸುತ್ತಿದ್ದೀರಾ? ಹಾಗಾದರೆ, ಸುಜುಕಿ ಆಕ್ಸೆಸ್ಸ್ ನೀವು ಹುಡುಕುತ್ತಿರುವ ವಾಹನವಾಗಿದೆ. ಭಾರತದ ಟು ವೀಲರ್ ವಾಹನ ಸುಜುಕಿ ಮಾರುಕಟ್ಟೆಯಲ್ಲಿ ಕೈಗೆಟಕುವ ದರದ ವಿಷಯ ಬಂದಾಗ ಸುಜುಕಿ ಆಕ್ಸೆಸ್ ಅತೀ ವಿಶ್ವಾಸಹ್ರ ಹೆಸರುಗಳಲ್ಲಿ ಒಂದಾಗಿದೆ. 2007 ರಲ್ಲಿ, ಸುಮಾರು 13 ವರ್ಷಗಳ ಹಿಂದೆ ಪರಿಚಯಿಸಲಾದ ಸುಜುಕಿ ಆಕ್ಸೆಸ್ ಸಮಯದೊಂದಿಗೆ ನವೀಕರಣಗೊಂಡಿದೆ.
ಇಂತಹ ವಾಹನವನ್ನು ಹೊಂದಿರುವುದು ನಿಮಗೊಂದು ಹೆಮ್ಮೆಯ ವಿಷಯವಾಗಿರಬಹುದು. ಆದ್ದರಿಂದಲೇ, ಯಾವುದೇ ಅಪಘಾತ ಅಥವಾ ಇತರ ದುರ್ಘಟನೆಗಳು ನಿಮಗೆ ಮಾನಸಿಕವಾಗಿ ಹಾಗೂ ಆರ್ಥಿಕವಾಗಿ ಆಘಾತವನ್ನುಂಟು ಮಾಡಬಹುದು.
ಇಂತಹ ದುರಾದೃಷ್ಟಕರ ಸಂದರ್ಭದಲ್ಲಿ ಒಂದು ಸುಜುಕಿ ಆಕ್ಸೆಸ್ ಇನ್ಶೂರೆನ್ಸ್ ಪಾಲಿಸಿ ನಿಮಗಾಗಿ ಸೂಕ್ತ ಸಂರಕ್ಷಣೆಯಾಗಬಹುದು. ಇಂತಹ ಯೋಜನೆಗಳು, ಅಪಘಾತವನ್ನು ತಡೆಯುವುದಿಲ್ಲವಾದರೂ, ದುರ್ಘಟನೆಯ ನಂತರ ನಿಮ್ಮ ಸ್ಕೂಟರಿನ ರಿಪೇರಿ ಸಮಯದಲ್ಲಿ ನಿಮಗೆ ಉಂಟಾಗುವ ಆರ್ಥಿಕ ಹೊಣೆಗಾರಿಕೆಗಳನ್ನು ಸೀಮಿತಗೊಳಿಸುತ್ತದೆ. ಇದರೊಂದಿಗೆ, 1988ರ ಮೋಟಾರ್ ವಾಹನ ಅಧಿನಿಯಮದ ಪ್ರಕಾರ ಎಲ್ಲ ಮೋಟರ್ ವಾಹನಗಳಿಗೂ ಇನ್ಶೂರೆನ್ಸ್ ಪಾಲಿಸಿಗಳು ಕಡ್ಡಾಯವಾಗಿರುವ ಕಾರಣ, ಇಂತಹ ಒಂದು ಕವರ್ ನೀವು ದಂಡಕ್ಕೆ ಪಾತ್ರವಾಗದಂತೆಯೂ ನೋಡಿಕೊಳ್ಳುತ್ತದೆ. ನೀವು ಥರ್ಡ್-ಪಾರ್ಟಿ ಹೊಣೆಗಾರಿಕೆಯ ಇನ್ಶೂರೆನ್ಸ್ ಪಾಲಿಸಿ ಪಡೆಯುವಲ್ಲಿ ವಿಫಲರಾದರೆ, ರೂ 2000 ದಂಡ, ಹಾಗೂ ತಪ್ಪು ಪುನರಾವರ್ತನೆಗಾಗಿ Rs. 4000 ದಂಡಕ್ಕೆ ಪಾತ್ರರಾಗುತ್ತೀರಿ.
ಇದನ್ನು ನಂತರ ನೋಡೋಣ! ಮೊದಲಿಗೆ ನಾವು ಸುಜುಕಿ ಆಕ್ಸೆಸ್ ಭಾರತದಲ್ಲಿ ಇಷ್ಟು ಬೇಡಿಕೆಯ ಬೈಕ್ ಆಗಲು ಕಾರಣವೇನೆಂದು ತಿಳಿಯೋಣ.