ಡಿಜಿಟ್ ಇನ್ಶೂರೆನ್ಸ್ ಗೆ ಬದಲಾಯಿಸಿ

ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ ಸಿ.ಜಿ.ಹೆಚ್.ಎಸ್ (CGHS) ಕುರಿತ ಎಲ್ಲ ಮಾಹಿತಿ

ಭಾರತವು ಶಕ್ತಿಯುತ ಆರೋಗ್ಯ ಉದ್ಯಮವನ್ನು ಹೊಂದಿದೆ ಅದು ಕೇವಲ ಮುಂಬರುವ ವರ್ಷಗಳಲ್ಲಿ ಮತ್ತಷ್ಟು ಪ್ರಗತಿಯನ್ನು ಸಾಧಿಸುತ್ತದೆ. ಆದಾಗ್ಯೂ, ಪ್ರಪಂಚದಾದ್ಯಂತದ ಇರುವ ಹೆಚ್ಚಿನ ಆರೋಗ್ಯ ವ್ಯವಸ್ಥೆಗಳಂತೆ, ಭಾರತದ ಆರೋಗ್ಯ ರಕ್ಷಣೆಯು ತನ್ನ ಕೊರತೆಯ ಸಮಪಾಲನ್ನು ಹೊಂದಿದೆ ಮತ್ತು ಅಲ್ಲದೇ ಸುಧಾರಣೆಗಾಗಿ ಸಾಕಷ್ಟು ವ್ಯಾಪ್ತಿಯನ್ನು ಸಹ ಹೊಂದಿದೆ. 

ಇದಲ್ಲದೆ, ಈ ದೇಶದ ಜನಸಂಖ್ಯೆಯ ಗಣನೀಯ ಪ್ರಮಾಣವು, ಆರೋಗ್ಯ ವ್ಯವಸ್ಥೆಯಿಂದ ದೂರ ಉಳಿದಿದೆ ಮತ್ತು ಆರೋಗ್ಯ ರಕ್ಷಣೆಗೆ ಎಲ್ಲ ನಾಗರಿಕರೂ ಸಮಾನ ಪ್ರವೇಶ ಪಡೆಯಬೇಕೆನ್ನುವುದು ದೇಶಕ್ಕೆ ಒಂದು ಪ್ರಮುಖ ಚಿಂತೆಯಾಗಿದೆ ಉಳಿದಿದೆ. ಆದ್ದರಿಂದ ಸರ್ಕಾರವು ಹಲವಾರು ಕಾರ್ಯಕ್ರಮಗಳು ಮತ್ತು ಯೋಜನೆಗಳ ಮೂಲಕ ಈ ಸಮಸ್ಯೆಯನ್ನು ದೂರಮಾಡುವ ಗುರಿಯನ್ನು ಹೊಂದಿದೆ. ಅವುಗಳಲ್ಲಿ ಕೇಂದ್ರ ಸರ್ಕಾರದ ಆರೋಗ್ಯ ಯೋಜನೆಯು ಒಂದಾಗಿದೆ. 

ನಿಮಗೆ ಈ ಯೋಜನೆಯ ಸ್ಪಷ್ಟ ಚಿತ್ರಣ ನೀಡಲು ನಮಗೆ ಅವಕಾಶ ನೀಡಿ. ಇದರಿಂದ ನೀವು ಅದರ ಸಂಪೂರ್ಣ ಮಾಹಿತಿಯನ್ನು ಅರ್ಥಮಾಡಿಕೊಳ್ಳಬಹುದು.

ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ ಎಂದರೇನು?

ಉದ್ಯೋಗಿಗಳಿಗೆ ಆರೋಗ್ಯ ಸೌಲಭ್ಯವಾಗಿ ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ ಅಥವಾ ಸಿ.ಜಿ.ಹೆಚ್.ಸಿ ಅನ್ನು ಪರಿಚಯಿಸಿತು.

ಅರ್ಹ ಫಲಾನುಭವಿಗಳಿಗೆ ಸಮಗ್ರ ಮೆಡಿಕಲ್ ಕೇರ್ ನೀಡುವ ಮೂಲಕ, ವ್ಯಕ್ತಿಗಳ ಸುಧಾರಣೆಗಾಗಿ ಈ ಯೋಜನೆಯನ್ನು ಸ್ಪಷ್ಟವಾಗಿ ವಿನ್ಯಾಸಗೊಳಿಸಲಾಗಿದೆ.

ಕೇಂದ್ರ ಸರ್ಕಾರದ ಆರೋಗ್ಯ ಯೋಜನೆಯ ಅಂಶಗಳನ್ನು ವಿವರವಾಗಿ ನೋಡೋಣ:

  • ಮನೆಯಲ್ಲಿನ ಚಿಕಿತ್ಸೆ ಸೇರಿದಂತೆ ಔಷಧ ಸೇವೆಗಳು

  • ತಜ್ಞ ವೈದ್ಯರಿಂದ ಸಮಾಲೋಚನೆ ಸೌಲಭ್ಯಗಳು

  • ಲ್ಯಾಬೊರೇಟರಿ ಪರೀಕ್ಷೆಗಳಾದ ಇಸಿಜಿ ಮತ್ತು ಎಕ್ಸ್-ರೇ

  • ಆಸ್ಪತ್ರೆ ದಾಖಲಾತಿ

  • ಔಷಧಿಗಳ ಖರೀದಿ, ಪೂರೈಕೆ ಹಾಗೂ ಸಂಗ್ರಹಣೆ ಮತ್ತು ಇತರ ಮೆಡಿಕಲ್ ಅವಶ್ಯಕತೆಗಳು

  • ಫಲಾನುಭವಿಗಳಿಗೆ ಆರೋಗ್ಯ ಶಿಕ್ಷಣ

  • ಹೆರಿಗೆ ಮತ್ತು ಮಕ್ಕಳ ಆರೈಕೆ

  • ಕುಟುಂಬ ಕಲ್ಯಾಣ ಸೇವೆಗಳು

 

ಇದಲ್ಲದೆ, ಸಿ.ಜಿ.ಹೆಚ್.ಎಸ್ ಅನೇಕ ಮೆಡಿಕಲ್ ವ್ಯವಸ್ಥೆಗಳ ಮೂಲಕ ಆರೋಗ್ಯ ರಕ್ಷಣೆಯನ್ನು ಹೆಚ್ಚಿಸುತ್ತದೆ, ಅವುಗಳೆಂದರೆ:

  • ಹೋಮಿಯೋಪತಿ

  • ಅಲೋಪತಿ

  • ಭಾರತೀಯ ಔಷಧ ಪದ್ಧತಿ

    • ಆಯುರ್ವೇದ

    • ಯೋಗ

    • ಯುನಾನಿ

    • ಸಿದ್ಧ

ಸಿ.ಜಿ.ಹೆಚ್.ಎಸ್ (CGHS) ಗೆ ಅರ್ಹತೆಯ ಮಾನದಂಡ ಏನು?

ಈ ಯೋಜನೆಯ ಪ್ರಯೋಜನಗಳನ್ನು ನೀವು ಪಡೆಯಬಹುದೆಂದರೆ ಅಚ್ಚರಿಯಾಗುತ್ತದೆಯೇ?

ಮೇಲೆ ತಿಳಿಸಿದಂತೆ, ಸಿ.ಜಿ.ಹೆಚ್.ಎಸ್ ಅನ್ನು ಕೇಂದ್ರ ಸರ್ಕಾರಿ ನೌಕರರಿಗೆ ಮಾತ್ರ ನೀಡಲಾಗುತ್ತದೆ. ಹಾಗಿದ್ದರೂ, ಈ ಯೋಜನೆಯು ಈ ಕೆಳಗಿನ ವ್ಯಕ್ತಿಗಳನ್ನು ಕವರ್ ಮಾಡುತ್ತದೆ:

  • ಕೊಡುಗೆ ಭವಿಷ್ಯ ನಿಧಿ (ಕಾಂಟ್ರಿಬ್ಯುಟರಿ ಪ್ರೊವಿಡೆಂಟ್ ಫಂಡ್) ನಿಂದ ಪ್ರಯೋಜನ ಪಡೆಯುವ ಕೇಂದ್ರ ಸರ್ಕಾರದ ಪಿಂಚಣಿದಾರರು ಮತ್ತು ಅವರ ಕುಟುಂಬಗಳು

  • ಸಿ.ಜಿ.ಹೆಚ್.ಎಸ್ ವ್ಯಾಪ್ತಿಯ ಪ್ರದೇಶಗಳಲ್ಲಿ ವಾಸಿಸುವ ಕೇಂದ್ರ ಸರ್ಕಾರಿ ನೌಕರರು ಮತ್ತು ಅವರ ಕುಟುಂಬ ಸದಸ್ಯರು 

  • ರೈಲ್ವೆ ಮಂಡಳಿಯ ನೌಕರರು

  • ಕೇಂದ್ರ ಸರ್ಕಾರದ ಪಿಂಚಣಿದಾರರು ಮತ್ತು ಅವರ ಕುಟುಂಬಗಳು

  • ಅಂಚೆ ಮತ್ತು ಟೆಲಿಗ್ರಾಫ್ ಇಲಾಖೆಯ ನೌಕರರು

  • ಪತ್ರಕರ್ತರ ಸಂಘದ ಸದಸ್ಯರಾಗಿರುವ ಪತ್ರಕರ್ತರು

  • ರಕ್ಷಣಾ ನಾಗರಿಕ ನೌಕರರು

  • ಸೈನಿಕ ಸಮ್ಮಾನ್ ಯೋಜನೆಯಡಿ ಪಿಂಚಣಿ ಪಡೆಯುತ್ತಿರುವ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಅವರ ಕುಟುಂಬ ಸದಸ್ಯರು

  • ಕುಟುಂಬ ಪಿಂಚಣಿ ಪಡೆಯುವ ಕೇಂದ್ರ ಸರ್ಕಾರದ ಪಿಂಚಣಿದಾರರ ವಿಧವೆಯರು

  • ದೆಹಲಿ ಪೊಲೀಸ್ ಸಿಬ್ಬಂದಿ ಮತ್ತು ಅವರ ಕುಟುಂಬಗಳು

  • ಅರೆ ಸರ್ಕಾರಕ್ಕೆ ನಿಯೋಜಿಸಲಾದ ಕೇಂದ್ರ ಸರ್ಕಾರಿ ನೌಕರರು ಅಥವಾ ಕೇಂದ್ರ ಸರ್ಕಾರದಿಂದ ಗಮನಾರ್ಹ ಹಣಕಾಸು ಅಥವಾ ಅನುದಾನವನ್ನು ಪಡೆಯುವ ಸ್ವಾಯತ್ತ ಸಂಸ್ಥೆಗಳ ನೌಕರರು

  • ಭಾರತದ ಮಾಜಿ ಉಪರಾಷ್ಟ್ರಪತಿಗಳು ಮತ್ತು ಅವರ ಕುಟುಂಬ

  • ಮಾಜಿ ಲೆಫ್ಟಿನೆಂಟ್, ರಾಜ್ಯಪಾಲರು ಮತ್ತು ಅವರ ಕುಟುಂಬಗಳು

  • ಸಿ.ಜಿ.ಹೆಚ್.ಎಸ್ ಯೇತರ ಪ್ರದೇಶಕ್ಕೆ ವರ್ಗಾವಣೆಯಾದ ಸರ್ಕಾರಿ ನೌಕರರ ಕುಟುಂಬಗಳು

  • ತಮ್ಮ ಕುಟುಂಬಗಳನ್ನು ಒಳಗೊಂಡಂತೆ ಸಂಸತ್ತಿನ ಸದಸ್ಯರು

  • ಸಂಸತ್ತಿನ ಮಾಜಿ ಸದಸ್ಯರು

  • ದೆಹಲಿ ಮತ್ತು ಎನ್.ಸಿ.ಆರ್, ಚೆನ್ನೈ ಕೋಲ್ಕತ್ತಾ, ಬೆಂಗಳೂರು, ಮುಂಬೈ ಮತ್ತು ಹೈದರಾಬಾದ್‌ನಲ್ಲಿ ನೆಲೆಸಿರುವ ಕೇಂದ್ರೀಯ ವಿದ್ಯಾಲಯ ಸಂಘಟನೆಯ ನೌಕರರು

  • ದೆಹಲಿಯ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಾಧೀಶರು

  • ಹೈಕೋರ್ಟ್‌ಗಳು ಮತ್ತು ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶರು 

  • ಈಶಾನ್ಯ ಕೇಡರ್‌ಗೆ ಅಧಿಕಾರಿಯ ವಾಪಸಾತಿ ನಂತರವೂ ದೆಹಲಿಯಲ್ಲಿಯೇ ಇರುವ ಈಶಾನ್ಯ ಕೇಡರ್‌ನ ಐಎಎಸ್ ಅಧಿಕಾರಿಯ ಕುಟುಂಬ ಸದಸ್ಯರು. ಇದು ಜಮ್ಮು ಮತ್ತು ಕಾಶ್ಮೀರ ಕೇಡರ್‌ನ ಐಎಎಸ್ ಅಧಿಕಾರಿಗಳ ಕುಟುಂಬದ ಸದಸ್ಯರಿಗೂ ಅನ್ವಯಿಸುತ್ತದೆ 

  • ಈಶಾನ್ಯ ಪ್ರದೇಶಕ್ಕೆ ಉದ್ಯೋಗಿ ಪೋಸ್ಟ್ ಆದ ನಂತರ ಸಿ.ಜಿ.ಹೆಚ್.ಎಸ್ ವ್ಯಾಪ್ತಿಯ ಪ್ರದೇಶದಲ್ಲಿ ಉಳಿಯುವ ಕೇಂದ್ರ ಸರ್ಕಾರದ ಕುಟುಂಬ ಉದ್ಯೋಗಿಗಳು ಮತ್ತು ಸಿ.ಜಿ.ಹೆಚ್.ಎಸ್ ಫಲಾನುಭವಿಗಳು

  • ಕೇಂದ್ರ ಸರ್ಕಾರದ ಸಚಿವಾಲಯಗಳು ಅಥವಾ ಇಲಾಖೆಗಳು ನಡೆಸುವ ಸಂಸ್ಥೆಗಳಲ್ಲಿ ಕೆಲಸ ಮಾಡುವ ಕೈಗಾರಿಕಾ ಸಿಬ್ಬಂದಿ

  • ಕೇಂದ್ರ ಸರ್ಕಾರದ ಸಂಸದೀಯ ಕಾರ್ಯದರ್ಶಿಗಳು ಮತ್ತು ಅವರ ಕುಟುಂಬಗಳು

  • ಮೃತ ಮಾಜಿ ಸಂಸದರ ಕುಟುಂಬ ಸದಸ್ಯರು

  • ಆರ್ಡಿನೆನ್ಸ್ ಕಾರ್ಖಾನೆಗಳ ಪಿಂಚಣಿದಾರರು

  • ಭಾರತೀಯ ಔಷಧೋಪಚಾರ ಆಯೋಗದ ಉದ್ಯೋಗಿಗಳು ಮತ್ತು ಅವರ ಕುಟುಂಬಗಳು

  • ತಮ್ಮ ವೇತನ ಮತ್ತು ಪಿಂಚಣಿಯನ್ನು ರಾಜ್ಯ ಸರ್ಕಾರಗಳಿಂದ ಭರಿಸಲ್ಪಡುವ ಭಾರತೀಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ನಿವೃತ್ತ ವಿಭಾಗೀಯ ಲೆಕ್ಕಾಧಿಕಾರಿಗಳು

  • ಕೇಂದ್ರ ಸರ್ಕಾರಿ ನೌಕರರಾಗಿ ಸೇವೆ ಸಲ್ಲಿಸದಿದ್ದರೂ, ಜಂಟಿ ಸಲಹಾ ಯಂತ್ರೋಪಕರಣಗಳ ರಾಷ್ಟ್ರೀಯ ಮಂಡಳಿಯ ಸಿಬ್ಬಂದಿ ಭಾಗದ ಸದಸ್ಯರು

  • ಸೇವೆ ಸಲ್ಲಿಸುತ್ತಿರುವ ಮತ್ತು ನಿವೃತ್ತರಾದ ರೈಲ್ವೇ ಆಡಿಟ್ ಸಿಬ್ಬಂದಿ

  • ಸಿ.ಜಿ.ಹೆಚ್.ಎಸ್-ವ್ಯಾಪ್ತಿಯ ಪ್ರದೇಶಗಳಲ್ಲಿ ನಿಯೋಜಿಸಲಾಗಿರುವ ಸಿಐಎಸ್ಎಫ್ ಮತ್ತು ಸಿಎಪಿಎಫ್ ಸಿಬ್ಬಂದಿ ಮತ್ತು ಅವರ ಕುಟುಂಬ

  • ಸೇವೆ ಸಲ್ಲಿಸುತ್ತಿರುವ ಮತ್ತು ನಿವೃತ್ತ ವಿಭಾಗೀಯ ಲೆಕ್ಕಾಧಿಕಾರಿಗಳು ಮತ್ತು ವಿಭಾಗೀಯ ಖಾತೆ ಅಧಿಕಾರಿಗಳು

  • ಸುಪ್ರೀಂ ಕೋರ್ಟ್ ಕಾನೂನು ಸೇವಾ ಸಮಿತಿಯ ನೌಕರರು

ಸಿ.ಜಿ.ಹೆಚ್.ಎಸ್ (CGHS) ಅಡಿಯಲ್ಲಿರುವ ಸೌಲಭ್ಯಗಳು ಯಾವುವು ಮತ್ತು ಅವುಗಳ ವೆಚ್ಚವೆಷ್ಟು?

 ಕೇಂದ್ರ ಸರ್ಕಾರದ ಆರೋಗ್ಯ ಯೋಜನೆಯು ಫಲಾನುಭವಿಗಳಿಗೆ ಈ ಕೆಳಗಿನ ಪ್ರಯೋಜನಗಳೊಂದಿಗೆ ಬರುತ್ತದೆ:

1) ಖಾಸಗಿ ಅಥವಾ ಸರ್ಕಾರಿ ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿಯಲ್ಲಿ ಪಡೆದ ಚಿಕಿತ್ಸಾ ವೆಚ್ಚಗಳ ರಿಇಂಬರ್ಸ್‌ಮೆಂಟ್‌

2) ಒಪಿಡಿ ಚಿಕಿತ್ಸೆ (ಔಷಧಿಗಳ ಸಮಸ್ಯೆಯನ್ನು ಒಳಗೊಂಡು)

3) ಎಂಪನೆಲ್ಡ್ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ

4) ಪಾಲಿಕ್ಲಿನಿಕ್/ಸರ್ಕಾರಿ ಆಸ್ಪತ್ರೆಗಳಲ್ಲಿ ತಜ್ಞರ ಸಮಾಲೋಚನೆಗಳು. ಆಸ್ಪತ್ರೆಗಳು

5) ಪಿಂಚಣಿದಾರರು ಮತ್ತು ಇತರ ಅರ್ಹ ಫಲಾನುಭವಿಗಳಿಗೆ ಡಯಾಗ್ನೋಸ್ಟಿಕ್ಸ್ ಕೇಂದ್ರಗಳು ಮತ್ತು ಎಂಪನೆಲ್ಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ಕ್ಯಾಶ್‌ಲೆಸ್ ಸೌಲಭ್ಯ

6) ಶ್ರವಣ ಸಾಧನಗಳು, ಉಪಕರಣಗಳು, ಕೃತಕ ಅಂಗಗಳು ಇತ್ಯಾದಿಗಳನ್ನು ಖರೀದಿಸಲು ತಗಲುವ ವೆಚ್ಚಗಳ ರಿಇಂಬರ್ಸ್‌ಮೆಂಟ್‌.

7) ಹೋಮಿಯೋಪತಿ, ಯುನಾನಿ, ಆಯುರ್ವೇದ ಮತ್ತು ಸಿದ್ಧ ಔಷಧಿಗಳ (ಆಯುಷ್) ಮೆಡಿಕಲ್ ಸಮಾಲೋಚನೆ ಮತ್ತು ಔಷಧಿಗಳ ಖರೀದಿ

8) ಹೆರಿಗೆ ಮತ್ತು ಮಕ್ಕಳ ಆರೋಗ್ಯ ಸೇವೆಗಳು ಮತ್ತು ಕುಟುಂಬ ಕಲ್ಯಾಣ

 

ಈಗ, ಈ ಯೋಜನೆಯ ಹಣಕಾಸಿನ ವಿಷಯಕ್ಕೆ ಹೋಗೋಣ.

ಕೇಂದ್ರ ಸರ್ಕಾರದ ಆರೋಗ್ಯ ಯೋಜನೆಯನ್ನು ಪಡೆಯುವ ವೆಚ್ಚವು, ವ್ಯಕ್ತಿಯೊಬ್ಬನ ಉದ್ಯೋಗ ಸ್ಥಿತಿಯನ್ನು ಆಧರಿಸಿ ಬದಲಾಗುತ್ತದೆ. ಇದನ್ನು ಹೇಗೆ ವರ್ಗೀಕರಿಸಲಾಗಿದೆ ಎಂಬುದು ಇಲ್ಲಿ ನೋಡಿ:

ಸೇವೆ ಸಲ್ಲಿಸುತ್ತಿರುವ ಉದ್ಯೋಗಿಗಳಿಗೆ - ಸಿ.ಜಿ.ಹೆಚ್.ಎಸ್ ವ್ಯಾಪ್ತಿಯ ಪ್ರದೇಶದಲ್ಲಿ ವಾಸಿಸುವ ಕೇಂದ್ರ ಸರ್ಕಾರಿ ಉದ್ಯೋಗಿಯು ಸಿ.ಜಿ.ಹೆಚ್.ಎಸ್ ಕಾರ್ಡ್ ಹೊಂದಿರಬೇಕು. ಆ ಉದ್ಯೋಗಿಯ ಇಲಾಖೆಯು ಅವರ ವೇತನ ಶ್ರೇಣಿಯನ್ನು ಅವಲಂಬಿಸಿ, ಅವನ/ಅವಳ ಸಂಬಳದಿಂದ ಮಾಸಿಕ ಕಡಿತಗಳನ್ನು ಮಾಡುತ್ತದೆ. ಈ ಮೊತ್ತವನ್ನು ಸಿ.ಜಿ.ಹೆಚ್.ಎಸ್ ಸೌಲಭ್ಯಗಳಿಗೆ ಕೊಡುಗೆ ನೀಡಲಾಗುತ್ತದೆ.

ಪಿಂಚಣಿದಾರರಿಗೆ - ಪಿಂಚಣಿದಾರರು ಸಿ.ಜಿ.ಹೆಚ್.ಎಸ್ ನ ಸೌಲಭ್ಯಗಳನ್ನು ಪಡೆಯಲು ಬಯಸಿದರೆ, ಸೇವೆಯಲ್ಲಿದ್ದ ಸಮಯದಲ್ಲಿ ಅವರು ಅರ್ಹರಾಗಿದ್ದ ವೇತನ ಶ್ರೇಣಿಯ ಆಧಾರದ ಮೇಲೆ ಕೊಡುಗೆಯನ್ನು ನೀಡುತ್ತಾರೆ. ಅಲ್ಲದೇ, ಈ ಕೊಡುಗೆಯನ್ನು ವಾರ್ಷಿಕ ಅಥವಾ ಒಂದು ಬಾರಿ/ಜೀವಮಾನದ ಕೊಡುಗೆಯಾಗಿ ನೀಡಬಹುದು.

ಕೆಳಗಿನ ಕೋಷ್ಟಕವು ಸಿ.ಜಿ.ಹೆಚ್.ಎಸ್ ದರ ಪಟ್ಟಿಯನ್ನು ವಿವರಿಸುತ್ತದೆ:

ಸಿ.ಜಿ.ಹೆಚ್.ಎಸ್ ಚಿಕಿತ್ಸೆಯ ಕಾರ್ಯವಿಧಾನ ಎನ್.ಎ.ಬಿ.ಹೆಚ್ ನ ದರ ನಾನ್-ಎನ್.ಎ.ಬಿ.ಹೆಚ್ ನ ದರ
ಒಪಿಡಿ ಸಮಾಲೋಚನೆ 135 135
ಗಾಯಗಳ ಡ್ರೆಸ್ಸಿಂಗ್ 52 45
ಒಳರೋಗಿ ಸಲಹೆ 270 270
ಸ್ಥಳೀಯ ಅರಿವಳಿಕೆಯೊಂದಿಗೆ ಗಾಯಗಳ ಹೊಲಿಗೆ 124 108
ಆಸ್ಪಿರೇಶನ್ ಪ್ಲೆರಲ್ ಎಫ್ಯೂಷನ್- ಥೆರಪ್ಯುಟಿಕ್ 200 174
ಆಸ್ಪಿರೇಶನ್ ಪ್ಲೆರಲ್ ಎಫ್ಯೂಷನ್- ಥೆರಪ್ಯುಟಿಕ್ 138 120
ಸಂದುಗಳ ಆಸ್ಪಿರೇಶನ್ 329 285
ಹೊಲಿಗೆ ಬಿಚ್ಚುವುದು 41 36
ಬಯಾಪ್ಸಿ ಸ್ಕಿನ್ 239 207
ಕಿಬ್ಬೊಟ್ಟೆಯ ಆಸ್ಪಿರೇಶನ್-ಥೆರಪ್ಯುಟಿಕ್ 476 414
ಕಿಬ್ಬೊಟ್ಟೆಯ ಆಸ್ಪಿರೇಶನ್- ಡಯಾಗ್ನೋಸ್ಟಿಕ್ 380 330
ಸ್ಟರ್ನಲ್ ಪಂಕ್ಚರ್ 199 173
ವೆನೆಸೆಕ್ಷನ್ 143 124
ಮೂತ್ರನಾಳದ ವಿಸ್ತರಣೆ 518 450
ಎಲ್ಎ ಅಡಿಯಲ್ಲಿ ಫಿಮೊಸಿಸ್ 1357 1180
ಇಂಟರ್‌ಕೊಸ್ಟಲ್ ಡ್ರೈನೇಜ್ 144 125
ಉಬ್ಬಿರುವ ರಕ್ತನಾಳಗಳ ಇಂಜೆಕ್ಷನ್ 363 315
ಹೆಮೊರೊಯಿಡ್ಸ್ ಇಂಜೆಕ್ಷನ್ 428 373
ಇನ್ಸಿಶನ್ ಮತ್ತು ಡ್ರೈನೇಜ್ 435 378
ಪೆರಿಟೋನಿಯಲ್ ಡಯಾಲಿಸಿಸ್ 1517 1319
ಇಂಟರ್‌ಕೊಸ್ಟಲ್ ಡ್ರೈನೇಜ್ 144 125

ಇದಲ್ಲದೆ, ಕೇಂದ್ರ ಸರ್ಕಾರದ ಆರೋಗ್ಯ ಯೋಜನೆಯಡಿಯಲ್ಲಿ ಎಂಪನೆಲ್ ಮಾಡಲಾದ ಖಾಸಗಿ ಆಸ್ಪತ್ರೆಯ ವಾರ್ಡ್‌ಗಳು ವ್ಯಕ್ತಿಯೊಬ್ಬರ ವೇತನ ಶ್ರೇಣಿಯ ಆಧಾರದ ಮೇಲೆ ಲಭ್ಯವಿರುತ್ತವೆ. ಯೋಜನೆಯಡಿಯಲ್ಲಿ ಈ ವಾರ್ಡ್‌ನ ಅರ್ಹತೆ ಈ ಕೆಳಗಿನಂತಿದೆ:

  • ಖಾಸಗಿ ವಾರ್ಡ್: ₹63,101 ಮತ್ತು ಮೇಲ್ಪಟ್ಟು

  • ಅರೆ-ಖಾಸಗಿ ವಾರ್ಡ್: ₹47,601-₹63,100

  • ಜನರಲ್ ವಾರ್ಡ್: ₹47,600 ರವರೆಗೆ

 

ಇದಲ್ಲದೆ, ಸಿ.ಜಿ.ಹೆಚ್.ಎಸ್ ಸೌಲಭ್ಯಕ್ಕಾಗಿ ಪರಿಷ್ಕೃತ ಮಾಸಿಕ ಸಬ್‌ಸ್ಕ್ರಿಪ್ಷನ್‌ನ ವಿಷಯಕ್ಕೆ ಬಂದರೆ, 7 ನೇ ಸಿಪಿಎಸ್ ಪ್ರಕಾರ, ಮ್ಯಾಟ್ರಿಕ್ಸ್‌ಗೆ ಅನುಗುಣವಾದ ಮಟ್ಟಗಳು ಮತ್ತು ತಿಂಗಳಿಗೆ ಅವರ ಕೊಡುಗೆಗಳು ಈ ಕೆಳಗಿನಂತಿರುತ್ತವೆ:

  • ಹಂತ 12 ಮತ್ತು ಅದಕ್ಕೂ ಮೇಲಿನದು: ₹1000

  • ಹಂತ 7-11: ₹650

  • ಹಂತ 6: ₹450

  • ಹಂತ 1-5: ₹250

75 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸಿ.ಜಿ.ಹೆಚ್.ಎಸ್ ಫಲಾನುಭವಿಗಳೂ ಒಪಿಡಿ ಸಮಾಲೋಚನೆಯನ್ನು ಪಡೆಯಲು ಮೆಡಿಕಲ್ ತಜ್ಞರಿಂದ ರೆಫರೆನ್ಸ್ ಪಡೆಯುವುದು ಅವಶ್ಯಕವಾಗಿದೆ. ಆದಾಗ್ಯೂ, 75 ವರ್ಷಕ್ಕಿಂತ ಮೇಲ್ಪಟ್ಟವರು, ಹೇಳಲಾದ ಮೆಡಿಕಲ್ ಸಮಾಲೋಚನೆಯನ್ನು ಪಡೆಯಲು ಯಾವುದೇ ರೆಫರಲ್‌ಗಳ ಅಗತ್ಯವಿಲ್ಲ.

ಸಿ.ಜಿ.ಹೆಚ್.ಎಸ್ (CGHS) ಕಾರ್ಡ್ ಎಂದರೇನು?

ಭಾರತ ಸರ್ಕಾರವು ಎಲ್ಲಾ ಸಿ.ಜಿ.ಹೆಚ್.ಎಸ್ ಫಲಾನುಭವಿಗಳಿಗೆ ಮತ್ತು ಅವರ ಅವಲಂಬಿತರಿಗೆ ಸಿ.ಜಿ.ಹೆಚ್.ಎಸ್ ಕಾರ್ಡ್ ಎಂದು ಕರೆಯಲ್ಪಡುವ ಫೋಟೋ ಐಡಿ ಇರುವ ಪ್ಲಾಸ್ಟಿಕ್ ಕಾರ್ಡ್ ಅನ್ನು ನೀಡುತ್ತದೆ. ಇದು ವಿಶಿಷ್ಟ ಫಲಾನುಭವಿ ಗುರುತಿನ ಸಂಖ್ಯೆಯನ್ನು ಹೊಂದಿದ್ದು, ಯಾವುದೇ ಹಂತದಲ್ಲಾದರೂ ವ್ಯಕ್ತಿಯೊಬ್ಬನು ಸಿ.ಜಿ.ಹೆಚ್.ಎಸ್ ಸೌಲಭ್ಯಗಳಿಗೆ ಈ ಕಾರ್ಡ್ ಅನ್ನು ತೋರಿಸಬೇಕು.

ಈ ಕಾರ್ಡ್ ಬಿಳಿ ಬಣ್ಣದ್ದಾಗಿರುತ್ತದೆ ಮತ್ತು ಮೇಲ್ಭಾಗದಲ್ಲಿ ವಿವಿಧ ಬಣ್ಣಗಳ ಪಟ್ಟಿಯೊಂದಿಗೆ ಕಾರ್ಡ್ ಹೋಲ್ಡರ್ ಸ್ಥಿತಿಯನ್ನು ಸೂಚಿಸುತ್ತದೆ. ಆದ್ದರಿಂದ, ಈ ಪಟ್ಟಿಯು ಈ ಕೆಳಗಿನ ಯಾವುದೇ ಬಣ್ಣಗಳಲ್ಲಿರಬಹುದು:

  • ಹಳದಿ: ಸ್ವಾಯತ್ತ ಕಂಪನಿಯ ಪತ್ರಕರ್ತ

  • ನೀಲಿ: ಸೇವೆ ಸಲ್ಲಿಸುತ್ತಿರುವ ಸರ್ಕಾರಿ ನೌಕರ

  • ಕೆಂಪು: ಸಂಸತ್ತಿನ ಸದಸ್ಯ

  • ಹಸಿರು: ಪಿಂಚಣಿದಾರ, ಮಾಜಿ ಸಂಸದ, ನಿವೃತ್ತ ಸಿಬ್ಬಂದಿ ಅಥವಾ ಸ್ವಾತಂತ್ರ್ಯ ಹೋರಾಟಗಾರ

ಸಿ.ಜಿ.ಹೆಚ್.ಎಸ್ ಕಾರ್ಡ್‌ಗಳು ಫಲಾನುಭವಿಯ ನಿವೃತ್ತಿ ದಿನಾಂಕದವರೆಗೆ ಮಾನ್ಯವಾಗಿರುತ್ತವೆ. ನಿವೃತ್ತಿಯ ನಂತರ ಅದರ ಮಾನ್ಯತೆಯನ್ನು ವಿಸ್ತರಿಸಲು, ವ್ಯಕ್ತಿಯೊಬ್ಬನು ನಿವೃತ್ತಿ ಪೂರ್ಣಗೊಳ್ಳುವ ಒಂದು ವರ್ಷದ ಮೊದಲು ಅವನ/ಅವಳ ಕೊಡುಗೆಯನ್ನು ನೀಡಬೇಕು. 

ಹೆಚ್ಚುವರಿಯಾಗಿ, ಈ ಕಾರ್ಡ್‌ನ ಅವಧಿ ಮುಗಿದ ನಂತರ, ಕಾರ್ಡ್‌ಹೋಲ್ಡರ್ ತನ್ನ ಕಾರ್ಡ್ ಅನ್ನು ಸಂಬಂಧಪಟ್ಟ ಇಲಾಖೆಗೆ ಒಪ್ಪಿಸಬೇಕು.

ನಿಮ್ಮ ಸಿ.ಜಿ.ಹೆಚ್.ಎಸ್ ಕಾರ್ಡ್ ಅನ್ನು ನೀವು ನವೀಕರಿಸಲು ಬಯಸಿದರೆ, ನೀವು ಫಾರ್ಮ್ ಮತ್ತು ಅಗತ್ಯ ವಿವರಗಳನ್ನು ಸಲ್ಲಿಸಬೇಕು.

ಯಾವುದೇ ಸಂದರ್ಭದಲ್ಲೂ ಈ ಕಾರ್ಡ್ ಅನ್ನು ಒಬ್ಬ ಉದ್ಯೋಗಿಯಿಂದ ಇನ್ನೊಬ್ಬ ಉದ್ಯೋಗಿಗೆ ವರ್ಗಾಯಿಸಲಾಗುವುದಿಲ್ಲ. ಇದಲ್ಲದೆ, ಈ ಕಾರ್ಡ್ ಮಿಸ್ಸಿಂಗ್ ಪೆನಾಲ್ಟಿಗಳನ್ನು ಹಾಕುತ್ತದೆ. ಮತ್ತು ಕೈಮೀರಿದ ಸಂದರ್ಭಗಳಲ್ಲಿ, ಕಟ್ಟುನಿಟ್ಟಾದ ಶಿಸ್ತಿನ ಕ್ರಮಗಳನ್ನು ಕೈಗೊಳ್ಳುತ್ತದೆ.

ಸಿ.ಜಿ.ಹೆಚ್.ಎಸ್ (CGHS) ಕಾರ್ಡ್‌ಗಾಗಿ ನೋಂದಾಯಿಸುವುದು ಹೇಗೆ?

ಸಿ.ಜಿ.ಹೆಚ್.ಎಸ್ ಫಲಾನುಭವಿಯಾಗಲು ಅರ್ಹರಾಗಿದ್ದರೆ, ನೀವು ಅಧಿಕೃತ ವೆಲ್‌ನೆಸ್ ಕೇಂದ್ರದಿಂದ ಅಥವಾ ಆನ್‌ಲೈನ್ ನೋಂದಣಿ ಮೂಲಕ ಸಿ.ಜಿ.ಹೆಚ್.ಎಸ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ದಾರಿಯನ್ನು ಬಳಸುತ್ತಿದ್ದರೆ, ಸಿ.ಜಿ.ಹೆಚ್.ಎಸ್ ಪೋರ್ಟಲ್‌ಗೆ ಭೇಟಿ ನೀಡಿ ಮತ್ತು ಅರ್ಜಿ ನಮೂನೆಯನ್ನು ಸಲ್ಲಿಸಿ.

ಆದ್ದರಿಂದ, ನೀವು ಕಾರ್ಡ್ ಅನ್ವಯವಾಗುವ ಯಾವುದೇ ನಗರಗಳಲ್ಲಿ ವಾಸಿಸುತ್ತಿದ್ದರೆ, ಆನ್‌ಲೈನ್‌ನಲ್ಲಿ ಸುಲಭವಾಗಿ ನೀವು ಸಿ.ಜಿ.ಹೆಚ್.ಎಸ್ ಕಾರ್ಡ್ ಅನ್ನು ಪಡೆಯಬಹುದು. ಇವುಗಳಲ್ಲಿ ಈ ಕೆಳಗಿನ ಕೆಲವು ನಗರಗಳು ಸೇರಿವೆ:

  • ಅಗರ್ತಲಾ 

  • ಆಗ್ರಾ 

  • ಇಂಫಾಲ್ 

  • ರಾಯಪುರ

  • ಕೋಝಿಕ್ಕೋಡ್ 

  • ಅಲಿಗಢ 

  • ಅಲಹಾಬಾದ್ (ಪ್ರಯಾಗರಾಜ್) 

  • ಅಂಬಾಲ 

  • ಅಮೃತಸರ 

  • ರಾಂಚಿ 

  • ರಾಜಮಂಡ್ರಿ 

  • ಬಾಗ್‌ಪತ್ 

  • ಬೆಂಗಳೂರು 

  • ಬರೇಲಿ 

  • ಬರ್ಹಾಂಪುರ 

  • ಜೈಪುರ 

  • ಕಣ್ಣೂರು 

  • ಲಕ್ನೋ 

  • ಕಾನ್ಪುರ 

  • ವಿಶಾಖಪಟ್ಟಣಂ 

  • ಡೆಹ್ರಾಡೂನ್ 

  • ದೆಹಲಿ ಮತ್ತು ಎನ್.ಸಿ.ಆರ್ 

  • ಹೈದರಾಬಾದ್ 

  • ಮುಂಬೈ 

  • ಅಹಮದಾಬಾದ್ 

  • ಶ್ರೀನಗರ

ಸಿ.ಜಿ.ಹೆಚ್.ಎಸ್ (CGHS) ಕಾರ್ಡ್‌ಗೆ ಅಗತ್ಯವಿರುವ ಡಾಕ್ಯುಮೆಂಟುಗಳು

ನಿಮ್ಮ ಸ್ಥಿತಿಯನ್ನು ಆಧರಿಸಿ, ಸಿ.ಜಿ.ಹೆಚ್.ಎಸ್ ಕಾರ್ಡ್ ಅನ್ನು ಪಡೆಯಲು ಕೆಳಗಿನ ಡಾಕ್ಯುಮೆಂಟುಗಳನ್ನು ಒದಗಿಸುವಂತೆ ನಿಮ್ಮನ್ನು ಕೇಳಲಾಗುತ್ತದೆ::

  • ಪಿಂಚಣಿದಾರರು

    • ಡಿಮ್ಯಾಂಡ್ ಡ್ರಾಫ್ಟ್

    • ತಾತ್ಕಾಲಿಕ ಪಿಪಿಒ/ಪಿಪಿಒ/ಕೊನೆಯ ವೇತನ ಪ್ರಮಾಣಪತ್ರದ ಪ್ರತಿಗಳು

  • ಸೇವೆ ಸಲ್ಲಿಸುತ್ತಿರುವ ಉದ್ಯೋಗಿಗಳಿಗೆ

    • ವಾಸಸ್ಥಳದ ಪುರಾವೆ

    • ಅವಲಂಬಿತ (ರ) ವಯಸ್ಸಿನ ಪುರಾವೆ

    • ಅವಲಂಬಿತರ ವಾಸದ ಪುರಾವೆ

    • ಅವಲಂಬಿತರು ಅಂಗವಿಕಲರಾಗಿದ್ದರೆ, ಮಾನ್ಯವಾದ ಪ್ರಾಧಿಕಾರದಿಂದ ಅಂಗವಿಕಲತೆಯ ಪ್ರಮಾಣಪತ್ರ

ಪ್ರಸ್ತುತ, ಈ ಯೋಜನೆಯು ದೇಶಾದ್ಯಂತ 74 ನಗರಗಳನ್ನು ಒಳಗೊಂಡಿದೆ ಮತ್ತು 38.5 ಲಕ್ಷ ಫಲಾನುಭವಿಗಳನ್ನು ಹೊಂದಿದೆ.

ಕೇಂದ್ರ ಸರ್ಕಾರದ ಆರೋಗ್ಯ ಯೋಜನೆಯು ಹಲವಾರು ಆರೋಗ್ಯ ಪ್ರಯೋಜನಗಳ ಮೂಲಕ, ದೇಶದ ಜನಸಂಖ್ಯೆಯ ಗಣನೀಯ ಭಾಗಕ್ಕೆ ಸಹಾಯ ಹಸ್ತವನ್ನು ಚಾಚಿದೆ.

ಪದೇ ಪದೇ ಕೇಳಲಾದ ಪ್ರಶ್ನೆಗಳು

ಸಿ.ಜಿ.ಹೆಚ್.ಎಸ್ (CGHS) ಕಾರ್ಡ್ ಭಾರತದಾದ್ಯಂತ ಮಾನ್ಯವಾಗಿದೆಯೇ?

ಸಿ.ಜಿ.ಹೆಚ್.ಎಸ್ ಕಾರ್ಡ್ ಭಾರತದಾದ್ಯಂತ ಅನ್ವಯವಾಗುವ ನಗರಗಳಲ್ಲಿನ ಎಲ್ಲಾ ಸಿ.ಜಿ.ಹೆಚ್.ಎಸ್ ಸ್ವಾಸ್ಥ್ಯ ಕೇಂದ್ರಗಳಲ್ಲಿ (ವೆಲ್ನೆಸ್ ಕೇಂದ್ರಗಳು-WCs) ಮಾನ್ಯವಾಗಿರುತ್ತದೆ. ಆದ್ದರಿಂದ, ಕಾರ್ಡುದಾರರು ಈ ಯಾವುದೇ ಸೌಲಭ್ಯಗಳಲ್ಲಿ, ಯಾವುದೇ ಪ್ರದೇಶಗಳಲ್ಲಿ ಸಿ.ಜಿ.ಹೆಚ್.ಎಸ್ ಪ್ರಯೋಜನಗಳನ್ನು ಪಡೆಯಬಹುದು.

ಸಿ.ಜಿ.ಹೆಚ್.ಎಸ್ (CGHS) ಕೊಡುಗೆಯು ಟ್ಯಾಕ್ಸ್ ಗೆ ಒಳಪಡುತ್ತದೆಯೇ?

ಸಿ.ಜಿ.ಹೆಚ್.ಎಸ್ ಗೆ ನೀಡಿದ ಕೊಡುಗೆಯ ಮೊತ್ತವು ಭಾರತೀಯ ಆದಾಯ ಟ್ಯಾಕ್ಸ್ ಕಾಯಿದೆಯ ಸೆಕ್ಷನ್ 80D ಅಡಿಯಲ್ಲಿ ಕಡಿತಕ್ಕೆ ಅರ್ಹವಾಗಿದೆ. ಒಂದು ಹಣಕಾಸು ವರ್ಷದಲ್ಲಿ ಗರಿಷ್ಠ ಕಡಿತ ಮಾಡಬಹುದಾದ ಮೊತ್ತವು ₹25,000 ಆಗಿರುತ್ತದೆ.

ಸಿ.ಜಿ.ಹೆಚ್.ಎಸ್ (CGHS) ಕಾರ್ಡ್‌ಗಳಲ್ಲಿ ಅವಲಂಬಿತರಾಗಿರುವ ಹೆಣ್ಣುಮಕ್ಕಳಿಗೆ/ಗಂಡು ಮಕ್ಕಳಿಗೆ ಯಾವುದಾದರೂ ವಯಸ್ಸಿನ ಮಿತಿ ಇದೆಯೇ?

ಮಗ/ಮಗಳು ಗಳಿಸಲು ಪ್ರಾರಂಭಿಸುವವರೆಗೆ ಅಥವಾ 25 ವರ್ಷ ವಯಸ್ಸಾಗುವವರೆಗೆ ಅಥವಾ ಮದುವೆಯಾಗುವವರೆಗೆ, ಇವುಗಳಲ್ಲಿ ಯಾವುದು ಮೊದಲಾಗುವುದೋ ಅಲ್ಲಿಯವರೆಗೆ ಗಂಡು ಮತ್ತು ಹೆಣ್ಣು ಮಕ್ಕಳಿಬ್ಬರೂ ಸಿ.ಜಿ.ಹೆಚ್.ಎಸ್ ಸೌಲಭ್ಯಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.