ಡಿಜಿಟ್ ಇನ್ಶೂರೆನ್ಸ್ ಗೆ ಬದಲಾಯಿಸಿ

ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಬಿಎಸ್‌ವೈ)

ಏನಿದು ಮತ್ತು ಇದು ನಿಮಗೆ ಹೇಗೆ ಸಹಾಯ ಮಾಡುತ್ತದೆ?

ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯಂತಹ ಸರ್ಕಾರದ ಬೆಂಬಲಿತ ಯೋಜನೆಗಳಿಗೆ ಸಹಾಯದಿಂದ, ಆಕಸ್ಮಿಕ ಸಾವು ಅಥವಾ ಶಾಶ್ವತ ಹಾನಿಯ ಸಂದರ್ಭದಲ್ಲಿ ಜನರು ಆರ್ಥಿಕ ರಕ್ಷಣೆಯನ್ನು ಪಡೆಯಬಹುದು. ನೀವು ಅಂತಹ ಯೋಜನೆಗಳಲ್ಲಿ ಹೂಡಿಕೆ ಮಾಡಲು ಯೋಜಿಸುತ್ತಿದ್ದರೆ, ಪಿಎಂಬಿಎಸ್‌ವೈ ಕುರಿತು ನೀವು ತಿಳಿದುಕೊಳ್ಳಬೇಕಾದ ಎಲ್ಲವೂ ಇಲ್ಲಿದೆ.

ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಬಿಎಸ್‌ವೈ) ಎಂದರೇನು?

ವರದಿಗಳ ಪ್ರಕಾರ, ಭಾರತದ ಒಟ್ಟು ಜಿಡಿಪಿಯ ಸುಮಾರು 1.4% ಆರೋಗ್ಯಕ್ಕೆ ಮೀಸಲಿಡಲಾಗಿದೆ (1) ಇದು ಸಹಜವಾಗಿಯೇ ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಸೇರಿದ ಜನರಿಗೆ ಸರಿಯಾದ ಚಿಕಿತ್ಸೆ ಪಡೆಯುವುದನ್ನು ಕಠಿಣವಾಗಿಸುತ್ತದೆ.

ಪಿಎಂಬಿಎಸ್‌ವೈ ಭಾರತದ 2015 ರ ಬಜೆಟ್‌ನಲ್ಲಿ ಘೋಷಿಸಲಾದ ಒಂದು ಸಾಮಾಜಿಕ ಭದ್ರತಾ ಯೋಜನೆಯಾಗಿದೆ. ಭಾರತೀಯ ಜನಸಂಖ್ಯೆಯ ಬಹುದೊಡ್ಡ ಭಾಗವು ಸರಿಯಾದ ಇನ್ಶೂರೆನ್ಸ್ ರಕ್ಷಣೆಯನ್ನು ಹೊಂದಿಲ್ಲ ಎಂಬ ಅಂಶವನ್ನು ಪರಿಗಣಿಸಿ, ಈ ಯೋಜನೆಯು ಪಾಲಿಸಿದಾರರ ಕುಟುಂಬ ಸದಸ್ಯರಿಗೆ ಹಣಕಾಸಿನ ನೆರವು ನೀಡುವ ಗುರಿಯನ್ನು ಹೊಂದಿದೆ. 

ಈ ಯೋಜನೆಯ ಅಡಿಯಲ್ಲಿ ನೀವು ಎಷ್ಟು ಪಡೆಯಬಹುದು ಎಂದು ಯೋಚಿಸುತ್ತಿದ್ದೀರಾ?

ಅಲ್ಲದೆ, ವಾರ್ಷಿಕವಾಗಿ ರೂ.12 ರ ಅತ್ಯಲ್ಪ ಪ್ರೀಮಿಯಂ ಅಮೌಂಟ್ದೊಂದಿಗೆ, ನೀವು ಆಕ್ಸಿಡೆಂಟಲ್ ಮರಣ ಮತ್ತು ಶಾಶ್ವತ ಅಂಗವೈಕಲ್ಯಕ್ಕೆ ರೂ.2 ಲಕ್ಷದವರೆಗಿನ ಗಣನೀಯ ಕವರೇಜ್ ಅನ್ನು ಪಡೆಯಬಹುದು. ಈ ಯೋಜನೆಯು ನಿಮಗೆ ಹೇಗೆ ಪ್ರಯೋಜನಕಾರಿಯಾಗಿದೆ ಎಂಬುದನ್ನು ತಿಳಿದುಕೊಳ್ಳಲು ಇದು ಒಳಗೊಂಡಿರುವ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳನ್ನು ಪರಿಶೀಲಿಸಿ.

ಪಿಎಂಬಿಎಸ್‌ವೈ(PMSBY) ಯ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳು

ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಅಥವಾ ಪಿಎಂಬಿಎಸ್‌ವೈ ಕವರೇಜ್ ಅನ್ನು ಪರಿಚಯಿಸುವ ಏಕೈಕ ಉದ್ದೇಶವು ಆರೋಗ್ಯ ತುರ್ತು ಸಂದರ್ಭಗಳಲ್ಲಿ ಸಮಾಜದ ಕೆಳ-ಆದಾಯದ ವರ್ಗಕ್ಕೆ ಸಹಾಯ ಮಾಡುವುದಾಗಿದೆ. ಒಂದು ವೇಳೆ ಇದನ್ನು ಆರಿಸಿಕೊಳ್ಳಬೇಕೆ ಅಥವಾ ಬೇಡವೇ ಎಂದು ನೀವು ಯೋಚಿಸುತ್ತಿದ್ದರೆ, ಈ ಯೋಜನೆ ಒದಗಿಸುವ ಪ್ರಯೋಜನಗಳಿಗಾಗಿ ಕೆಳಗೆ ನೋಡಿ:

  • ಪಾಲಿಸಿ ವೈಶಿಷ್ಟ್ಯಗಳ ಪ್ರಕಾರ, ಕ್ಲೈಮ್ ಅಮೌಂಟ್ವನ್ನು ಇನ್ಶೂರ್ ಆದ ವ್ಯಕ್ತಿಯ ಕುಟುಂಬದ ಸದಸ್ಯರು ಪಡೆಯಬಹುದು, ಮತ್ತು ನಾಮಿನಿಯು ಅದರ ಎಲ್ಲಾ ಅನುಕೂಲಗಳನ್ನು ಪಡೆಯುತ್ತಾರೆ. 
  • ನೀವು ಹೆಚ್ಚುವರಿ ಹೊಣೆಗಾರಿಕೆಗಳನ್ನು ತೆಗೆದುಹಾಕಲು ನಿರ್ಧರಿಸಿದರೆ ಪಾಲಿಸಿಯನ್ನು ಇರುವ ಮುಂದುವರಿಸದೆ ಇರುವ ಸ್ವಾತಂತ್ರ್ಯವನ್ನು ಹೊಂದಿರುತ್ತೀರಿ.
  • ಇಂತಹ ಪಾಲಿಸಿಗಳೊಂದಿಗೆ, ನೀವು ತೆರಿಗೆಗಳನ್ನು ಸಹ ಉಳಿಸಬಹುದಾಗಿದೆ. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80ಸಿ ಮತ್ತು ಸೆಕ್ಷನ್ 10(10ಡಿ) ಅಡಿಯಲ್ಲಿ, ಕಡಿತ ಮತ್ತು ರೂ.1 ಲಕ್ಷದ ವಿಮಾ ಅಮೌಂಟ್ ಎರಡರಲ್ಲೂ ತೆರಿಗೆ ವಿನಾಯಿತಿಗಳು ಲಭ್ಯವಾಗಿರುತ್ತವೆ. 
  • ಇತರ ಇನ್ಶೂರೆನ್ಸ್ ಪಾಲಿಸಿಗಳಿಗೆ ಹೋಲಿಸಿದರೆ ಈ ಪಾಲಿಸಿಯು ದೊಡ್ಡ ಅಮೌಂಟ್ ಅನ್ನು ವಿಧಿಸದೆಯೇ ಗಣನೀಯ ಕವರೇಜ್ ಅನ್ನು ನೀಡುತ್ತದೆ. 
  • ಆಟೋ-ಡೆಬಿಟ್ ಸೌಲಭ್ಯದಲ್ಲಿ ಅಮೌಂಟ್ವನ್ನು ತಾನಾಗಿಯೇ ಸಲ್ಲಿಸಲಾಗುವುದರಿಂದ ನೀವು ಪ್ರತಿ ತಿಂಗಳು ಅದನ್ನು ಮಾಡಲು ಹೆಚ್ಚು ಸಮಯವನ್ನು ವ್ಯಯಿಸದೇ ಇರುವುದನ್ನು ಖಚಿತಪಡಿಸುತ್ತದೆ. 
  • ಈ ಯೋಜನೆಯು ಎರಡೂ ಕಣ್ಣುಗಳ ನಷ್ಟ, ಕೈಕಾಲುಗಳ ಸರಿಪಡಿಸಲಾಗದ ನಷ್ಟ ಅಥವಾ ಶಾಶ್ವತ ಹಾನಿಯಂತಹ ಶಾಶ್ವತ ಅಂಗವೈಕಲ್ಯದ ಸಂದರ್ಭದಲ್ಲಿ ರೂ.2 ಲಕ್ಷಗಳವರೆಗಿನ ವಿತ್ತೀಯ ಕವರೇಜ್ ಅನ್ನು ಒದಗಿಸುತ್ತದೆ. ಮತ್ತು ಭಾಗಶಃ ಅಂಗವೈಕಲ್ಯದ ಸಂದರ್ಭದಲ್ಲಿ, ಒಬ್ಬ ವ್ಯಕ್ತಿಯು ರೂ.1 ಲಕ್ಷದವರೆಗಿನ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಅಪಾಯದ ಕವರೇಜ್ ಅನ್ನು ಪಡೆಯಬಹುದು.

ಪಿಎಂಬಿಎಸ್‌ವೈ(PMSBY) ಯೋಜನೆಯಡಿಯಲ್ಲಿ ಏನೆಲ್ಲಾ ಕವರ್ ಆಗುವುದಿಲ್ಲ?

ಈ ಯೋಜನೆಯು ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಸೇರಿದ ಬಹುಪಾಲು ಜನರಿಗೆ ಸಹಾಯ ಮಾಡುವುದರ ಮೇಲೆ ಕೇಂದ್ರಿತವಾಗಿದ್ದರೂ, ಇದು ಸಾವಿನ ಕಾರಣಕ್ಕೆ ಸಂಬಂಧಿಸಿದ ಕೆಲ ನಿರ್ದಿಷ್ಟ ನಿರ್ಬಂಧಗಳನ್ನು ಹೊಂದಿದೆ. 

ಉದಾಹರಣೆಗೆ, ಪಾಲಿಸಿದಾರರು ಆತ್ಮಹತ್ಯೆ ಮಾಡಿಕೊಂಡರೆ, ಫಲಾನುಭವಿಯು ಕ್ಲೈಮ್‌ಗೆ ಅರ್ಹರಾಗಿರುವುದಿಲ್ಲ. ಆದಾಗ್ಯೂ, ಕೊಲೆಗೆ ಬಲಿಯಾದ ಪಾಲಿಸಿದಾರರ ಫಲಾನುಭವಿಗಳು ಈ ಯೋಜನೆಯಿಂದ ಆರ್ಥಿಕ ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.

ಪ್ರವಾಹಗಳು, ಭೂಕಂಪಗಳು ಮತ್ತು ಹೆಚ್ಚಿನವುಗಳಂತಹ ನೈಸರ್ಗಿಕ ವಿಕೋಪಗಳಿಂದ ಉಂಟಾಗುವ ಸಾವು ಅಥವಾ ಅಂಗವೈಕಲ್ಯವನ್ನು ಸಹ ಈ ಯೋಜನೆಯಡಿ ಕವರ್ ಮಾಡಲಾಗುತ್ತದೆ.

ಪಿಎಂಬಿಎಸ್‌ವೈ(PMSBY) ಗಾಗಿ ಅರ್ಹತೆಯ ಮಾನದಂಡಗಳು ಯಾವುವು?

ಮೊದಲೇ ಹೇಳಿದಂತೆ, ಕುಟುಂಬದ ಏಕೈಕ ಗಳಿಕೆಯ ಸದಸ್ಯರು ಆಕಸ್ಮಿಕ ದುರ್ಘಟನೆಯಲ್ಲಿ ಮರಣಹೊಂದಿದರೆ ಅಥವಾ ಶಾಶ್ವತವಾಗಿ ಅಂಗವಿಕಲರಾದರೆ ಈ ಯೋಜನೆಯು ಹಣಕಾಸಿನ ರಕ್ಷಣೆಯನ್ನು ಒದಗಿಸುತ್ತದೆ. ಸರ್ಕಾರದ ಬೆಂಬಲಿತ ಯೋಜನೆ ಯು ಒದಗಿಸುತ್ತಿರುವ ಈ ಕುಂದಿಲ್ಲದ ಪ್ರಯೋಜನಗಳನ್ನು ಬಳಸಿಕೊಳ್ಳಲು, ನೀವು ಪಿಎಂಬಿಎಸ್‌ವೈ ಅರ್ಹತಾ ಮಾನದಂಡಗಳನ್ನು ಮತ್ತು ನೀವು ಅವುಗಳನ್ನು ಪೂರೈಸಲು ಸಾಧ್ಯವೇ ಎಂದು ತಿಳಿದಿರಬೇಕು .

ಅವುಗಳು ಈ ರೀತಿ ಇವೆ:

  • ಪಿಎಂಬಿಎಸ್‌ವೈ ವಯಸ್ಸಿನ ಮಿತಿಗೆ ಸಂಬಂಧಿಸಿದಂತೆ ಕೆಲವು ಸೂಚನೆಗಳಿವೆ. 18-70 ವರ್ಷದೊಳಗಿನ ಜನರು ಈ ನಿರ್ದಿಷ್ಟ ಯೋಜನೆಗೆ ಅರ್ಹರಾಗಿರುತ್ತಾರೆ. 
  • ಸಾಮಾನ್ಯವಾಗಿ, ಎಲ್ಲಾ ವೈಯಕ್ತಿಕ ಬ್ಯಾಂಕ್ ಖಾತೆದಾರರು (ಜಂಟಿ ಮತ್ತು ಏಕ ಖಾತೆ) ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಆದಾಗ್ಯೂ, ಬಹು ಬ್ಯಾಂಕ್‌ಗಳಲ್ಲಿ ಬಹು ಬ್ಯಾಂಕ್ ಖಾತೆಗಳನ್ನು ಹೊಂದಿರುವವರು ಒಂದು ಖಾತೆಯ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. 
  • ಜಂಟಿ ಖಾತೆದಾರರ ಸಂದರ್ಭದಲ್ಲಿ, ಎರಡೂ ಖಾತೆದಾರರು ಈ ಯೋಜನೆಯ ವೈಶಿಷ್ಟ್ಯಗಳಿಂದ ಪ್ರಯೋಜನ ಪಡೆಯುತ್ತಾರೆ. 
  • ಭಾರತದ ಹೊರಗೆ ವಾಸಿಸುವ ಜನರು ಸಹ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು; ಆದಾಗ್ಯೂ, ಕ್ಲೈಮ್ ಪ್ರಕ್ರಿಯೆಯ ಸಮಯದಲ್ಲಿ, ಒಬ್ಬ ನಾಮಿನಿ ಹಣವನ್ನು ಭಾರತೀಯ ಕರೆನ್ಸಿಯಲ್ಲಿ ಮಾತ್ರ ಸ್ವೀಕರಿಸಬಲ್ಲರು.

ಪ್ರೀಮಿಯಂ ಅಮೌಂಟ್ ಎಷ್ಟು?

ಪ್ರತಿ ಪಾಲಿಸಿದಾರರು ವಾರ್ಷಿಕ ರೂ.12 ಪಾವತಿಸಬೇಕಾಗುತ್ತದೆ, ಇಲ್ಲಿ ಲಿಂಕ್ ಮಾಡಿದ ಬ್ಯಾಂಕ್ ಖಾತೆಯಿಂದ ಅಮೌಂಟ್ ಆಟೋ-ಡೆಬಿಟ್ ಆಗುತ್ತದೆ. ಹೆಚ್ಚಿನ ಜನರನ್ನು ಈ ಯೋಜನೆಗಾಗಿ ಪ್ರೋತ್ಸಾಹಿಸಲು ಸರ್ಕಾರವು ಇಂತಹ ಅಲ್ಪ ಅಮೌಂಟ್ ಅನ್ನು ನಿಗದಿಪಡಿಸಿದೆ.

ಪಿಎಂಬಿಎಸ್‌ವೈ(PMSBY) ಗಾಗಿ ವಿವರವಾದ ದಾಖಲಾತಿ(ಡಾಕ್ಯುಮೆಂಟೇಶನ್) ಮತ್ತು ಫಾರ್ಮ್ ಭರ್ತಿ ಪ್ರಕ್ರಿಯೆ

ಹೆಚ್ಚಿನ ಸರ್ಕಾರಿ-ಬೆಂಬಲಿತ ಯೋಜನೆಗಳು ಸೌಮ್ಯವಾದ ದಾಖಲಾತಿ ವಿಧಾನವನ್ನು ಅನುಸರಿಸುತ್ತಿದ್ದರೂ ಸಹ, ಈ ನಿರ್ದಿಷ್ಟ ಉಪಕ್ರಮದ ಅಡಿಯಲ್ಲಿ ಪ್ರಯೋಜನಗಳಿಗಾಗಿ ಅರ್ಜಿ ಸಲ್ಲಿಸುವಾಗ ನೀವು ಮೂಲಭೂತ ಕಾಗದಕೆಲಸಗಳನ್ನು ಪೂರ್ಣಗೊಳಿಸುವುದು ಕಡ್ಡಾಯವಾಗಿರುತ್ತದೆ. ಅಗತ್ಯವಿರುವ ಡಾಕ್ಯುಮೆಂಟ್ ಗಳು ಈ ರೀತಿ ಇವೆ - 

  • ಪಿಎಂಬಿಎಸ್‌ವೈ ಅಪ್ಲಿಕೇಶನ್ ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು ಆಯ್ಕೆಯಾದ ನಾಮಿನಿಯ ಹೆಸರು, ಆಧಾರ್ ಸಂಖ್ಯೆ, ಸಂಪರ್ಕ ವಿವರಗಳಂತಹ ಎಲ್ಲಾ ಅಗತ್ಯ ಮಾಹಿತಿ ಸೇರಿದಂತೆ ಅವರ ಎಲ್ಲಾ ಅಗತ್ಯ ವಿವರಗಳನ್ನು ಒದಗಿಸಿ. 
  • ನೀವು ಈಗಾಗಲೇ ನಿಮ್ಮ ಆಧಾರ್ ವಿವರಗಳನ್ನು ಅಪ್ಲಿಕೇಶನ್ ಫಾರ್ಮ್ ನೊಂದಿಗೆ ಸಲ್ಲಿಸುತ್ತಿದ್ದರೂ ಸಹ, ನಿಮ್ಮ ಕಾರ್ಡ್ ವಿವರಗಳು ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಆಗಿರದಿದ್ದರೆ ನೀವು ಅದರ ನಕಲನ್ನು ಸಹ ಒದಗಿಸಬೇಕಾಗುತ್ತದೆ.

ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯ ನೋಂದಣಿ ಪ್ರಕ್ರಿಯೆ ಏನು?

ಎಸ್ಎಂಎಸ್ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ಸೌಲಭ್ಯಗಳನ್ನು ಬಳಸಿಕೊಂಡು ನೀವು ಈ ಪಾಲಿಸಿಗೆ ನೋಂದಾಯಿಸಿಕೊಳ್ಳಬಹುದು. ಮೊದಲನೆಯದನ್ನು ಬಳಸಿಕೊಂಡು ನೀವು ಹೇಗೆ ಅರ್ಜಿ ಸಲ್ಲಿಸಬಹುದು ಎಂಬುದನ್ನು ಇಲ್ಲಿ ನೀಡಲಾಗಿದೆ: 

  • ಹಂತ 1: ಸೌಲಭ್ಯವನ್ನು ಸಕ್ರಿಯಗೊಳಿಸಲು ನೀವು ಆನ್-ಬೋರ್ಡಿಂಗ್ ಸಂಸ್ಥೆಯ ಟೋಲ್-ಫ್ರೀ ಸಂಖ್ಯೆಗೆ ಕೇವಲ ಒಂದು ಸಂದೇಶವನ್ನು ಕಳುಹಿಸಬಹುದು. 
  • ಹಂತ 2: ಸಕ್ರಿಯಗೊಳಿಸುವ ಎಸ್ಎಂಎಸ್ ಅನ್ನು ನಿಮಗೆ ಕಳುಹಿಸಲಾಗುತ್ತದೆ; ಆ ಸಂದೇಶಕ್ಕೆ 'PMSBY Y' ನೊಂದಿಗೆ ಉತ್ತರಿಸಿ. 
  • ಹಂತ 3: ಸ್ವೀಕೃತಿಯನ್ನು ಅಂಗೀಕರಿಸುವ ಇನ್ನೊಂದು ಸಂದೇಶವನ್ನು ನೀವು ಪಡೆಯಬಹುದು ಮತ್ತು ಈ ರೀತಿ ನೋಂದಣಿಯು ಪೂರ್ಣಗೊಳ್ಳುತ್ತದೆ. 

ಪಿಎಂಬಿಎಸ್‌ವೈ ದಾಖಲಾತಿ ಪ್ರಕ್ರಿಯೆಗಾಗಿ ಎಸ್ಎಂಎಸ್ ಮಾತ್ರವಲ್ಲದೆ, ಕೆಲವೇ ಸೆಕೆಂಡುಗಳಲ್ಲಿ ಅದನ್ನು ಪೂರ್ಣಗೊಳಿಸಲು ನೀವು ಇಂಟರ್ನೆಟ್ ಬ್ಯಾಂಕಿಂಗ್ ಸೌಲಭ್ಯವನ್ನು ಸಹ ಬಳಸಬಹುದು. ನೀವು ಮಾಡಬೇಕಾಗಿರುವುದು ಇಷ್ಟೇ:

  • ಹಂತ 1: ನೀವು ಆಯ್ಕೆಯ ಹಣಕಾಸು ಸಂಸ್ಥೆಯ ನೆಟ್ ಬ್ಯಾಂಕಿಂಗ್ ಖಾತೆಗೆ ಲಾಗಿನ್ ಮಾಡಿ ಮತ್ತು ಇನ್ಶೂರೆನ್ಸ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  • ಹಂತ 2: ಪಿಎಂಬಿಎಸ್‌ವೈ ಯ ಪ್ರೀಮಿಯಂಗಾಗಿ ಪಾವತಿ ಮಾಡಲು ನೀವು ಬಳಸಬೇಕೆಂದಿರುವ ಖಾತೆಯನ್ನು ಆಯ್ಕೆಮಾಡಿ.
  • ಹಂತ 3: ದೃಢೀಕರಿಸುವ ಮೊದಲು ಎಲ್ಲಾ ವಿವರಗಳನ್ನು ಪರಿಶೀಲಿಸಿ ಮತ್ತು ನಂತರ ದೃಢೀಕರಣ ರಸೀದಿಯನ್ನು ಡೌನ್‌ಲೋಡ್ ಮಾಡಿಕೊಳ್ಳಿ. 

ಈ ಸುಲಭ ನೋಂದಣಿ ಪ್ರಕ್ರಿಯೆ ಮಾತ್ರವಲ್ಲದೆ, ಕ್ಲೈಮ್ ಇತ್ಯರ್ಥ ಪ್ರಕ್ರಿಯೆಯು ಇಷ್ಟೇ ಸರಳ ಮತ್ತು ಚಂದಾದಾರ ಸ್ನೇಹಿಯಾಗಿದೆ.

ಪಿಎಂಬಿಎಸ್‌ವೈ(PMSBY) ಯೋಜನೆಯಡಿ ಕ್ಲೈಮ್ ಮಾಡುವ ಪ್ರಕ್ರಿಯೆ ಏನು?

ಅಂತಹ ದುರದೃಷ್ಟಕರ ಘಟನೆಗಳು ಸಂಭವಿಸಿದಲ್ಲಿ, ಫಲಾನುಭವಿಯು ಪಿಎಂಬಿಎಸ್‌ವೈ ಯೋಜನೆಯ ವಿರುದ್ಧ ಕ್ಲೈಮ್ ಮಾಡಲು ಕೆಳಗಡೆ-ಸೂಚಿಸಲಾದ ವಿಧಾನವನ್ನು ಅನುಸರಿಸಬಹುದು. 

  • ಹಂತ 1: ಈ ಪಾಲಿಸಿಯನ್ನು ಯಾವ ಇನ್ಶೂರರ್ ನಿಂದ ಖರೀದಿಸಿದ್ದೀರೋ ಅವರನ್ನು ಸಂಪರ್ಕಿಸುವ ಮೂಲಕ ಪ್ರಾರಂಭಿಸಿ.
  • ಹಂತ 2: ಸಾಮಾನ್ಯವಾಗಿ, ಆ ಇನ್ಶೂರೆನ್ಸ್ ಕಂಪೆನಿಯು, ಹೆಸರು, ಆಸ್ಪತ್ರೆಯ ವಿವರಗಳು, ಸಂಪರ್ಕ ಮಾಹಿತಿ ಇತ್ಯಾದಿ ವಿವರಗಳನ್ನು ಒದಗಿಸುವುದಕ್ಕಾಗಿ ಕ್ಲೈಮ್ ಫಾರ್ಮ್ ಅನ್ನು ಭರ್ತಿ ಮಾಡಲು ನಿಮ್ಮನ್ನು ಕೇಳುತ್ತದೆ. ಈ ಫಾರ್ಮ್ ಜನಸುರಕ್ಷಾ ವೆಬ್‌ಸೈಟ್‌ನಲ್ಲಿಯೂ ಲಭ್ಯವಿದೆ; ನೀವು ಇದನ್ನು ಡೌನ್‌ಲೋಡ್ ಮಾಡಬಹುದು ಮತ್ತು ಭರ್ತಿ ಮಾಡಬಹುದು.
  • ಹಂತ 3: ಫಾರ್ಮ್‌ನೊಂದಿಗೆ ನೀವು ಸಲ್ಲಿಸಬೇಕಾದ ಬೆಂಬಲ ಡಾಕ್ಯುಮೆಂಟ್ ಗಳ ಪಟ್ಟಿಯನ್ನು ಪರಿಶೀಲಿಸಿ. ಹೆಚ್ಚಿನ ಸಂದರ್ಭಗಳಲ್ಲಿ, ಇನ್ಶೂರರ್ ಗಳು ಬಯಸುವುದು ಮರಣದ ಸರ್ಟಿಫಿಕೇಟ್ ಅಥವಾ ಅಂಗವೈಕಲ್ಯ ಸರ್ಟಿಫಿಕೇಟ್ ಅನ್ನು . 
  • ಹಂತ 4: ವಿವರಗಳನ್ನು ಖಚಿತಪಡಿಸಿದ ನಂತರ, ಇನ್ಶೂರೆನ್ಸ್ ಕಂಪನಿಯು ಕ್ಲೈಮ್ ಅಮೌಂಟ್ವನ್ನು ಲಿಂಕ್ ಮಾಡಲಾದ ಬ್ಯಾಂಕ್ ಖಾತೆಗೆ ವರ್ಗಾಯಿಸುತ್ತದೆ ಮತ್ತು ಕ್ಲೈಮ್ ಅನ್ನು ಇತ್ಯರ್ಥಗೊಳಿಸುತ್ತದೆ.

ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಬಿಎಸ್‌ವೈ) ವರ್ಸಸ್ ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (ಪಿಎಂಜೆಜೆಬಿವೈ)

ಈ ಎರಡೂ ಸರ್ಕಾರಿ-ಬೆಂಬಲಿತ ಯೋಜನೆಗಳು ಆರ್ಥಿಕವಾಗಿ ಹಿಂದುಳಿದಿರುವ ವ್ಯಕ್ತಿಗಳನ್ನು ಬೆಂಬಲಿಸುವ ಗುರಿಯನ್ನು ಹೊಂದಿವೆ, ವಿಶೇಷವಾಗಿ ಕುಟುಂಬದ ಏಕೈಕ ಗಳಿಕೆಯ ಸದಸ್ಯ ಮರಣಹೊಂದಿದಾಗ. ಆದಾಗ್ಯೂ,ಇವುಗಳ ನಡುವೆ ಕೆಲವು ವ್ಯತ್ಯಾಸಗಳಿವೆ, ಉದಾಹರಣೆಗೆ:

ಪರಿಗಣಿಸಬೇಕಾದ ಅಂಶಗಳು ಪ್ರಧಾನ ಮಂತ್ರಿ ಜೀವನ ಜ್ಯೋತಿ ಬೀಮಾ ಯೋಜನೆ (ಪಿಎಂಜೆಜೆಬಿವೈ) ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಬಿಎಸ್‌ವೈ)
ಯೋಜನೆಯ ವಿಧ ಇದೊಂದು ಲೈಫ್ ಇನ್ಶೂರೆನ್ಸ್ ಯೋಜನೆಯಾಗಿದೆ ಇದೊಂದು ಅಪಘಾತ ಇನ್ಶೂರೆನ್ಸ್ ಯೋಜನೆಯಾಗಿದೆ
ವಾರ್ಷಿಕ ಪ್ರೀಮಿಯಂ ಅಮೌಂಟ್ ಪ್ರತಿ ವ್ಯಕ್ತಿಗೆ ರೂ.330 ಪ್ರತಿ ಸದಸ್ಯರಿಗೆ ರೂ.12
ಕವರೇಜ್ ವಿಧ ಪಾಲಿಸಿದಾರರಿಗೆ ಲೈಫ್ ಇನ್ಶೂರೆನ್ಸ್ ಕವರೇಜ್ ಅನ್ನು ಒದಗಿಸುತ್ತದೆ ಪಾಲಿಸಿದಾರರಿಗೆ ಅಪಘಾತ ಇನ್ಶೂರೆನ್ಸ್ ಕವರೇಜ್ ಅನ್ನು ಒದಗಿಸುತ್ತದೆ
ವಯಸ್ಸಿನ ಮಿತಿ 18 ಮತ್ತು 50 ವರ್ಷಗಳ ನಡುವೆ ಪಿಎಂಬಿಎಸ್‌ವೈಗಾಗಿ ವಯಸ್ಸಿನ ಮಿತಿ 18 ಮತ್ತು 70 ವರ್ಷಗಳ ನಡುವೆ ಇರುತ್ತದೆ
ಗರಿಷ್ಠ ಪ್ರೀಮಿಯಂ ಪಾವತಿ ವಯಸ್ಸು ಸಾಮಾನ್ಯವಾಗಿ, ಇದು 50 ವರ್ಷಗಳವರೆಗೆ ಇರುತ್ತದೆ; ಆದಾಗ್ಯೂ, ಕೆಲವು ಸಂದರ್ಭಗಳಲ್ಲಿ, ಇದನ್ನು 55 ವರ್ಷಗಳವರೆಗೆ ವಿಸ್ತರಿಸಬಹುದಾಗಿದೆ. 70 ವರ್ಷಗಳವರೆಗಿನ ವ್ಯಕ್ತಿಗಳು ಪ್ರೀಮಿಯಂಗಳನ್ನು ಭರಿಸಬೇಕಾಗುತ್ತದೆ.
ಪ್ರಯೋಜನಗಳು ಈ ಯೋಜನೆಯ ಏಕೈಕ ಪ್ರಯೋಜನವೆಂದರೆ ಇದರಲ್ಲಿ ಇನ್ಶೂರ್ ಆದ ವ್ಯಕ್ತಿಯು ಮರಣಹೊಂದಿದರೆ ಸಿಗುವ ರೂ.2 ಲಕ್ಷಗಳವರೆಗಿನ ವಿತ್ತೀಯ ಕವರೇಜ್. ಅಪಘಾತದಲ್ಲಿ ಪಾಲಿಸಿದಾರರು ಮರಣಹೊಂದಿದರೆ, ನಾಮಿನಿಯು ಈ ಪಾಲಿಸಿಯಡಿಯಲ್ಲಿ ರೂ.2 ಲಕ್ಷದವರೆಗೆ ಲಾಭವನ್ನು ಪಡೆಯುತ್ತಾರೆ. ಹಾಗೆಯೇ, ಒಬ್ಬ ಇನ್ಶೂರ್ ಆದ ವ್ಯಕ್ತಿಯು ಶಾಶ್ವತ ಅಂಗವೈಕಲ್ಯದಿಂದ ಬಳಲುತ್ತಿದ್ದರೆ, ರೂ.2 ಲಕ್ಷಗಳನ್ನು ಈ ಯೋಜನೆಯಡಿಯಲ್ಲಿ ಪಡೆಯಬಹುದು ಹಾಗೂ ಶಾಶ್ವತ ಭಾಗಶಃ ಅಂಗವಿಕಲತೆಯ ಸಂದರ್ಭದಲ್ಲಿ, ರೂ.1 ಲಕ್ಷ ಪಡೆಯಬಹುದು.

ಪಿಎಂಬಿಎಸ್‌ವೈ(PMSBY) ನಲ್ಲಿ ಭಾಗವಹಿಸುವ ಬ್ಯಾಂಕ್‌ಗಳ ಪಟ್ಟಿ

ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಗೆ ಸಂಪರ್ಕಗೊಂಡಿರುವ ಎಲ್ಲಾ ಬ್ಯಾಂಕ್‌ಗಳು ಇಲ್ಲಿವೆ:

  • ಅಲಹಾಬಾದ್ ಬ್ಯಾಂಕ್
  • ಬ್ಯಾಂಕ್ ಆಫ್ ಇಂಡಿಯಾ
  • ಬ್ಯಾಂಕ್ ಆಫ್ ಮಹಾರಾಷ್ಟ್ರ
  • ಆಕ್ಸಿಸ್ ಬ್ಯಾಂಕ್
  • ಭಾರತೀಯ ಮಹಿಳಾ ಬ್ಯಾಂಕ್
  • ಕೆನರಾ ಬ್ಯಾಂಕ್
  • ಫೆಡರಲ್ ಬ್ಯಾಂಕ್
  • ಕಾರ್ಪೊರೇಷನ್ ಬ್ಯಾಂಕ್
  • ಸೆಂಟ್ರಲ್ ಬ್ಯಾಂಕ್
  • ದೇನಾ ಬ್ಯಾಂಕ್
  • ಎಚ್ ಡಿ ಎಫ್ ಸಿ ಬ್ಯಾಂಕ್
  • ಐಡಿಬಿಐ ಬ್ಯಾಂಕ್
  • ಇಂಡಸ್ಇಂಡ್ ಬ್ಯಾಂಕ್
  • ಕೇರಳಾ ಗ್ರಾಮೀಣ್ ಬ್ಯಾಂಕ್
  • ಕೊಟಾಕ್ ಬ್ಯಾಂಕ್
  • ಐಸಿಐಸಿಐ ಬ್ಯಾಂಕ್
  • ವಿಜಯಾ ಬ್ಯಾಂಕ್
  • ಪಂಜಾಬ್ ಅಂಡ್ ಸಿಂದ್ ಬ್ಯಾಂಕ್
  • ಪಂಜಾಬ್ ನ್ಯಾಷನಲ್ ಬ್ಯಾಂಕ್
  • ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್
  • ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್
  • ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
  • ಯುಕೋ ಬ್ಯಾಂಕ್
  • ಸೌತ್ ಇಂಡಿಯನ್ ಬ್ಯಾಂಕ್
  • ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ
  • ಸ್ಟೇಟ್ ಬ್ಯಾಂಕ್ ಆಫ್ ಟ್ರಾವೆನ್ಕೋರ್
  • ಸಿಂಡಿಕೇಟ್ ಬ್ಯಾಂಕ್
  • ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ

ಪ್ರಪಂಚದಲ್ಲಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದ್ದರೂ, ಎಲ್ಲರಿಗೂ ಗುಣಮಟ್ಟದ ಆರೋಗ್ಯವನ್ನು ಖಚಿತಪಡಿಸಿಕೊಳ್ಳಲು ಭಾರತವು ಇನ್ನೂ ಹೆಣಗಾಡುತ್ತಿದೆ. ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಹೆಚ್ಚಿನ ಪ್ರಮುಖ ಅಂಶಗಳಾದ ಸರಿಯಾದ ಪೋಷಣೆ, ಸುರಕ್ಷಿತ ನೀರು, ಮೂಲಭೂತ ನೈರ್ಮಲ್ಯ ಇತ್ಯಾದಿಗಳನ್ನು ಸಾಮಾನ್ಯವಾಗಿ ನಿರ್ಲಕ್ಷಿಸಲಾಗುತ್ತದೆ. 

ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯಂತಹ ಸರ್ಕಾರಿ-ಸಂಯೋಜಿತ ಇನ್ಶೂರೆನ್ಸ್ ಯೋಜನೆಗಳ ಆಗಮನವು ಇಂತಹ ಗಮನಾರ್ಹ ನಷ್ಟದ ನಂತರದ ಸಂದರ್ಭಗಳನ್ನು ನಿರ್ವಹಿಸಲು ಜನರಿಗೆ ಸಹಾಯ ಮಾಡಿದೆ.

ಪದೇ ಪದೇ ಕೇಳಲಾದ ಪ್ರಶ್ನೆಗಳು

ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯನ್ನು ರಿನೀವ್ ಮಾಡುವುದು ಹೇಗೆ?

ಯೋಜನೆಯ ನಿಯಮಗಳ ಪ್ರಕಾರ, ಜೂನ್ 1 ರಿಂದ ಮೇ 31 ರವರೆಗೆ ಕೇವಲ ಒಂದು ವರ್ಷದ ಅವಧಿಗೆ ಈ ಪ್ರಯೋಜನಗಳು ಮತ್ತು ಕವರೇಜ್ ಅನ್ನು ಬಳಸಿಕೊಳ್ಳಬಹುದು. ಅದರ ನಂತರ, ಪ್ರಯೋಜನಗಳನ್ನು ಆನಂದಿಸುವುದನ್ನು ಮುಂದುವರಿಸಲು ಪ್ರತಿ ವರ್ಷ ಮೇ 31 ರಂದು ಅಥವಾ ಮೊದಲು ಪಿಎಂಬಿಎಸ್‌ವೈ ರಿನೀವಲ್ ಕಡ್ಡಾಯವಾಗಿದೆ. 

ಆಟೋ-ಡೆಬಿಟ್ ಸೌಲಭ್ಯದೊಂದಿಗೆ, ಪ್ರೀಮಿಯಂ ಅಮೌಂಟ್ವನ್ನು ಸ್ವಯಂಚಾಲಿತವಾಗಿ ನಿಮ್ಮ ಲಿಂಕ್ ಮಾಡಲಾದ ಬ್ಯಾಂಕ್ ಖಾತೆಯಿಂದ ಕಡಿತಗೊಳಿಸಲಾಗುತ್ತದೆ. ಆದಾಗ್ಯೂ, ಆಟೋ-ಡೆಬಿಟ್ ಸೌಲಭ್ಯವನ್ನು ಸಕ್ರಿಯಗೊಳಿಸಲು, ಯೋಜನೆಗೆ ಸೇರುವ ಮೊದಲು ನಿಗದಿಪಡಿಸಿದ ಸಮಯದೊಳಗೆ ನಿಮ್ಮ ಆಟೋ-ಡೆಬಿಟ್ ಗಾಗಿ ಸಮ್ಮತಿಯನ್ನು ನೀಡುವುದನ್ನು ಖಚಿತಪಡಿಸಿಕೊಳ್ಳಿ.

ಪಿಎಂಬಿಎಸ್‌ವೈ(PMSBY) ಯೋಜನೆಯು ಚಿಕಿತ್ಸೆಗೆ ಅಥವಾ ಹಾಸ್ಪಿಟಲೈಸೇಷನ್ ಶುಲ್ಕಗಳಿಗೆ ಹಣಕಾಸಿನ ಕವರ್ ನೀಡುತ್ತದೆಯೇ?

ಇಲ್ಲ. ಈ ನಿರ್ದಿಷ್ಟ ಯೋಜನೆಯಡಿಯಲ್ಲಿ, ಅಪಘಾತದಿಂದ ಸಂಭವಿಸಿದ ಮರಣ ಮತ್ತು ಅಂಗವಿಕಲತೆಯ ಸಂದರ್ಭದಲ್ಲಿ ಮಾತ್ರ ಒಂದು ದೊಡ್ಡ ಅಮೌಂಟ್ ಪ್ರಯೋಜನವನ್ನು ಒದಗಿಸಲಾಗುತ್ತದೆ.

ನಾನು ಒಂದು ವರ್ಷದ ನಂತರ ಯೋಜನೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದರೆ, ಒಂದೆರಡು ವರ್ಷಗಳ ನಂತರ ನಾನು ಮತ್ತೆ ಸೇರಲು ಸಾಧ್ಯವೇ?

ಹೌದು, ನೀವು ಯಾವಾಗ ಬೇಕಾದರೂ ಮತ್ತೆ ಸೇರಿಕೊಳ್ಳಬಹುದಾಗಿದೆ. ಈ ವಿಷಯದಲ್ಲಿ ಯಾವುದೇ ನಿರ್ಬಂಧಗಳಿಲ್ಲ.

ಪಾಲಿಸಿ ಸರ್ಟಿಫಿಕೆಟ್ ಅನ್ನು ಡೌನ್‌ಲೋಡ್ ಮಾಡುವುದು ಹೇಗೆ?

ನೀವು ಯಾವ ಬ್ಯಾಂಕ್ ನಲ್ಲಿ ಉಳಿತಾಯ ಖಾತೆಯನ್ನು ಹೊಂದಿದ್ಡೀರಿ ಹಾಗೂ ಯಾವುದರ ಮೂಲಕ ಪಿಎಂಬಿಎಸ್‌ವೈ ಯೋಜನೆಗೆ ಸೇರಿಕೊಂಡಿದ್ದೀರೋ ಅದನ್ನು ಸಂಪರ್ಕಿಸಿ. ನೀವು ಬ್ಯಾಂಕ್‌ನ ಆನ್‌ಲೈನ್ ಪೋರ್ಟಲ್ ಅನ್ನು ಬಳಸಿಕೊಂಡು ಪಾಲಿಸಿ ಸರ್ಟಿಫಿಕೆಟ್ ಅನ್ನು ಡೌನ್‌ಲೋಡ್ ಮಾಡಬಹುದು ಅಥವಾ ಅದನ್ನು ನಿಮಗೆ ಮೇಲ್ ಮಾಡಲು ನೇರವಾಗಿ ಅವರನ್ನು ನೀವು ಕೇಳಬಹುದು.

ಕ್ಲೈಮ್‌ಗಾಗಿ ಅರ್ಜಿ ಸಲ್ಲಿಸುವಾಗ ನಾನು ಎಫ್‌ಐಆರ್ ಅನ್ನು ಸಲ್ಲಿಸಬೇಕೇ?

ಇದು ಕೇವಲ ಪಾಲಿಸಿಹೋಲ್ಡರ್ ಈಡಾಗಿರುವ ಅಪಘಾತದ ವಿಧವನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ, ಕಾರು ಅಪಘಾತದ ಸಂದರ್ಭದಲ್ಲಿ, ಪೊಲೀಸ್ ಎಫ್‌ಐಆರ್ ಅನ್ನು ಸಲ್ಲಿಸಬೇಕಾಗುತ್ತದೆ. ಮತ್ತೊಂದೆಡೆ, ವ್ಯಕ್ತಿಯು ಮರದಿಂದ ಬಿದ್ದು ಶಾಶ್ವತ ಅಂಗವೈಕಲ್ಯವನ್ನು ಪಡೆದರೆ ಇಂತಹ ಡಾಕ್ಯುಮೆಂಟ್ ಗಳ ಅಗತ್ಯವಿಲ್ಲ. ಆದಾಗ್ಯೂ, ಇಂತಹ ಸಂದರ್ಭಗಳಲ್ಲಿ ಆಸ್ಪತ್ರೆಯ ದಾಖಲೆಗಳು ಉಪಯೋಗಕ್ಕೆ ಬರುತ್ತವೆ.

ಪಿಎಂಬಿಎಸ್‌ವೈ(PMSBY) ಗ್ರಾಹಕ ಸೇವಾ ಸಂಖ್ಯೆ ಏನು?

1800-180-1111/1800-110-001 ಇದು ಪಾಲಿಸಿಯನ್ನು ಸಕ್ರಿಯಗೊಳಿಸಲು ನೀವು ಬಳಸಬಹುದಾದ ಟೋಲ್-ಫ್ರೀ ಸಂಖ್ಯೆಯಾಗಿದೆ. ನೀವು ರಾಜ್ಯವಾರು ಕಸ್ಟಮರ್ ಕೇರ್ ಸಂಖ್ಯೆಯನ್ನು ಹುಡುಕುತ್ತಿದ್ದರೆ, ಜನಸುರಕ್ಷಾ ವೆಬ್‌ಸೈಟ್‌ ಗೆ ಭೇಟಿ ನೀಡುವುದನ್ನು ಪರಿಗಣಿಸಿ.