ಡಿಜಿಟ್ ಇನ್ಶೂರೆನ್ಸ್ ಗೆ ಬದಲಾಯಿಸಿ

ಯುನಿವರ್ಸಲ್ ಹೆಲ್ತ್ ಇನ್ಶೂರೆನ್ಸ್ ಯೋಜನೆ (ಯುಎಚ್ಐಎಸ್)

ಉಲ್ಬಣಗೊಳ್ಳುತ್ತಿರುವ ಸಾಂಕ್ರಾಮಿಕ ರೋಗದೊಂದಿಗೆ, ಒಂದು ಕಾಂಪ್ರೆಹೆನ್ಸಿವ್ ಹೆಲ್ತ್ ಕವರ್ ನ ಬೇಡಿಕೆ ಹೆಚ್ಚಾಗಿದೆ. ಆದಾಗ್ಯೂ, ಹೆಲ್ತ್ ಕವರ್ ಅನ್ನು ಪಡೆಯಲು ಸಾಧ್ಯವಾಗದ ಜನರ ಒಂದು ಯಥೇಚ್ಛವಾದ ಭಾಗವೇ ಇದೆ.

ಅದಕ್ಕಾಗಿಯೇ ಸರ್ಕಾರವು ಯುನಿವರ್ಸಲ್ ಹೆಲ್ತ್ ಇನ್ಶೂರೆನ್ಸ್ ಯೋಜನೆ ಅಥವಾ ಸ್ಕೀಮ್ (ಯುಎಚ್ಐಎಸ್) ಅನ್ನು ಪರಿಚಯಿಸಿತು. ಈ ಲೇಖನದಲ್ಲಿ, ನಾವು ಯುಎಚ್ಐಎಸ್ ಬಗ್ಗೆ ವಿವರವಾಗಿ ತಿಳಿಯಲಿದ್ದೇವೆ.

ಸಾರ್ವತ್ರಿಕ ಅಥವಾ ಯುನಿವರ್ಸಲ್ ಹೆಲ್ತ್ ಇನ್ಶೂರೆನ್ಸ್ ಯೋಜನೆ(ಯುಎಚ್ಐಎಸ್) ಎಂದರೇನು?

ಈ ಸಾರ್ವತ್ರಿಕ ಅಥವಾ ಯುನಿವರ್ಸಲ್ ಹೆಲ್ತ್ ಇನ್ಶೂರೆನ್ಸ್ ಯೋಜನೆಯನ್ನು 2003 ರಲ್ಲಿ ಕಡಿಮೆ-ಆದಾಯದ ಗುಂಪುಗಳಿಗೆ ವೈದ್ಯಕೀಯ ಕವರೇಜ್ ಅನ್ನು ಒದಗಿಸಲು ಪ್ರಾರಂಭಿಸಲಾಯಿತು. ಅಪಘಾತದ ಕವರೇಜ್ ಮತ್ತು ಅನ್ನದಾತರು ತೀರಿಕೊಂಡಾಗ ಪರಿಹಾರಕ್ಕಾಗಿ ಸಹ ಇದರಲ್ಲಿ ನಿಬಂಧನೆಗಳಿವೆ.

ಯುನಿವರ್ಸಲ್ ಹೆಲ್ತ್ ಇನ್ಶೂರೆನ್ಸ್ ಯೋಜನೆಯ ವೈಶಿಷ್ಟ್ಯಗಳು ಏನು?

ಒಬ್ಬ ವ್ಯಕ್ತಿ ಅಥವಾ ಒಂದು ಗುಂಪು ಬಡತನ ರೇಖೆಯ ಮೇಲೆ ಅಥವಾ ಕೆಳಗೆ ಇರುತ್ತದೆಯೇ ಎಂಬುದರ ಆಧಾರದ ಮೇಲೆ ಯುಎಚ್ಐಎಸ್ ಭಿನ್ನವಾಗಿರುತ್ತದೆ.

ಬಡತನ ರೇಖೆಗಿಂತ ಮೇಲಿರುವ (ಎಪಿಎಲ್) ವ್ಯಕ್ತಿಗಳಿಗೆ ಯುನಿವರ್ಸಲ್ ಹೆಲ್ತ್ ಇನ್ಶೂರೆನ್ಸ್ ಯೋಜನೆಯ ವೈಶಿಷ್ಟ್ಯಗಳು

ನಿಗದಿತ ಮೊತ್ತಕ್ಕಿಂತ ಹೆಚ್ಚು ಗಳಿಸುವ ವ್ಯಕ್ತಿಗಳು ಮತ್ತು ಕುಟುಂಬಗಳು ಈ ಯೋಜನೆಯನ್ನು ಪಡೆಯಬಹುದು. ಗುಂಪು 100 ಕ್ಕೂ ಹೆಚ್ಚು ಕುಟುಂಬಗಳನ್ನು ಒಳಗೊಂಡಿರಬೇಕು. ಎಲ್ಲಾ ಸದಸ್ಯರು ಒಂದು ಸಿಂಗಲ್ ಗ್ರೂಪ್ ಪಾಲಿಸಿ ಅಡಿಯಲ್ಲಿ ಕವರ್ ಆಗಿರುತ್ತಾರೆ. ಕೊನೆಯದಾಗಿ, ಒಬ್ಬ ವ್ಯಕ್ತಿಯು ಅಂತಹ ಹಲವಾರು ಪಾಲಿಸಿಗಳ ಭಾಗವಾಗಿರಲು ಸಾಧ್ಯವಿಲ್ಲ.

ಯುಎಚ್ಐಎಸ್ ಅನ್ನು, ಈ ಪಾಲಿಸಿ ಅಡಿಯಲ್ಲಿ ಇನ್ಶೂರ್ ಆಗಲಿರುವ ಸದಸ್ಯರ ಹೆಸರಿನ ಪಟ್ಟಿಯೊಂದಿಗೆ, ಒಂದು ಗುಂಪು/ಸಂಸ್ಥೆ/ಸಂಘದ ಹೆಸರಿನಲ್ಲಿ ನೀಡಲಾಗುತ್ತದೆ.

ಯೂನಿವರ್ಸಲ್ ಹೆಲ್ತ್ ಯೋಜನೆಯು ಕವರೇಜ್‌ನ ಭಾಗವಾಗಿ ಈ ಕೆಳಗಿನವುಗಳನ್ನು ನೀಡುತ್ತದೆ: 

  • ವೈದ್ಯಕೀಯ ಚಿಕಿತ್ಸೆಗಳಿಗೆ ಮರುಪಾವತಿ.

  • ತಗುಲಿರಬಹುದಾದ ರೋಗಗಳು ಅಥವಾ ಕಾಯಿಲೆಗಳಿಗೆ ಆಸ್ಪತ್ರೆಗೆ ದಾಖಲಾತಿ ವೆಚ್ಚಗಳು.

  • ಯಾವುದೇ ಗಾಯಗಳಿಗೆ ಹಾಸ್ಪಿಟಲೈಸೇಷನ್ಯ ವೆಚ್ಚಗಳು.

ಬಡತನ ರೇಖೆಗಿಂತ ಕೆಳಗಿರುವವರಿಗೆ (ಬಿಪಿಎಲ್) ವೈಶಿಷ್ಟ್ಯಗಳು

ಎಪಿಎಲ್ ರೀತಿಗೆ ಸಮಾನವಾಗಿ ವ್ಯಕ್ತಿಗಳು ಮತ್ತು ಗುಂಪುಗಳೆರಡೂ ಇದನ್ನು ಪಡೆಯಬಹುದು.

ಒಂದು ಗುಂಪಿನ ಅಡಿಯಲ್ಲಿ ಸುರಕ್ಷಿತವಾಗಿರುವ ಪ್ರತಿಯೊಬ್ಬ ಸದಸ್ಯರೂ ಆ ಒಂದು ಗುಂಪಿನ ಭಾಗವಾಗಿರಲು ಮಾತ್ರ ಸಾಧ್ಯ.

ವೈಯಕ್ತಿಕ ಯುಎಚ್ಐಎಸ್ ಪಾಲಿಸಿಯನ್ನು ಅವರ ಕುಟುಂಬದ ಅನ್ನದಾತರಿಗೆ ನೀಡಲಾಗುತ್ತದೆ. ಗುಂಪುಗಳಿಗೆ, ಎಲ್ಲಾ ಸದಸ್ಯರ ಹೆಸರಿನ ಪಟ್ಟಿಯೊಂದಿಗೆ ಗುಂಪಿನ ಹೆಸರಿನ ಮೇಲೆ ಇನ್ಶೂರೆನ್ಸ್ ಅನ್ನು ನೀಡಲಾಗುತ್ತದೆ.

ಯುನಿವರ್ಸಲ್ ಹೆಲ್ತ್ ಇನ್ಶೂರೆನ್ಸ್ ಯೋಜನೆಯಲ್ಲಿ ಯಾವ ಪ್ರಯೋಜನವನ್ನು ನೀಡಲಾಗುತ್ತದೆ?

ವ್ಯಕ್ತಿ/ಗುಂಪು/ಸಂಘವು ಬಡತನ ರೇಖೆಗಿಂತ ಕೆಳಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಆಧರಿಸಿ ಯುಎಚ್ಐಎಸ್ ನ ಪ್ರಯೋಜನಗಳು ಸಹ ಬದಲಾಗುತ್ತವೆ.

ಎಪಿಎಲ್ ಗಾಗಿ ಯುನಿವರ್ಸಲ್ ಹೆಲ್ತ್ ಇನ್ಶೂರೆನ್ಸ್ ಯೋಜನೆಯ ಪ್ರಯೋಜನಗಳು

ಎಪಿಎಲ್ ಸದಸ್ಯರಿಗೆ ಯುನಿವರ್ಸಲ್ ಹೆಲ್ತ್ ಯೋಜನೆ ಕವರೇಜ್ ಇವುಗಳನ್ನು ಒಳಗೊಂಡಿದೆ -

  • ಒಂದು ಅನಾರೋಗ್ಯದ ಕ್ಲೈಮ್‌ನ ಗರಿಷ್ಠ ಮಿತಿ ರೂ.15,000 ಆಗಿದೆ.

  • ವೈದ್ಯಕೀಯ ಸಂಸ್ಥೆಯ ಬಿಲ್ ಪ್ರಕಾರ ರೂಮ್ ಬಾಡಿಗೆ ಮತ್ತು ಬೋರ್ಡಿಂಗ್ ವೆಚ್ಚಗಳ ಮೇಲೆ ಒಟ್ಟು ಸಮ್ ಇನ್ಶೂರ್ಡ್ ನ 0.5% ಅನ್ನು ಯುಎಚ್ಐಎಸ್ ಕವರ್ ಮಾಡುತ್ತದೆ.

  • ಒಬ್ಬ ವ್ಯಕ್ತಿಯನ್ನು ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಿಸಿದ್ದರೆ, ಸಮ್ ಇನ್ಶೂರ್ಡ್ 1% ವರೆಗೆ ಕ್ಲೈಮ್ ಮಾಡಬಹುದಾಗಿದೆ.

  • ಶಸ್ತ್ರಚಿಕಿತ್ಸಕ, ಅರಿವಳಿಕೆ ತಜ್ಞರು, ವೈದ್ಯರು, ಸಲಹೆಗಾರರು, ತಜ್ಞರ ಶುಲ್ಕಗಳು ಮತ್ತು ಶುಶ್ರೂಷಾ ವೆಚ್ಚಗಳಂತಹ ಖರ್ಚುಗಳಿಗೆ ಪ್ರತಿ ಅನಾರೋಗ್ಯಕ್ಕೆ ಒಟ್ಟು 15% ಅನ್ನು ಕ್ಲೈಮ್ ಮಾಡಬಹುದು.

  • ಅರಿವಳಿಕೆ, ರಕ್ತ, ಆಮ್ಲಜನಕ, ಒಟಿ ಶುಲ್ಕಗಳು, ಶಸ್ತ್ರಚಿಕಿತ್ಸಾ ಉಪಕರಣಗಳು, ಔಷಧಿಗಳು, ರೋಗನಿರ್ಣಯದ ವಸ್ತುಗಳು ಮತ್ತು ಎಕ್ಸ್-ರೇ, ಡಯಾಲಿಸಿಸ್, ಕೀಮೋಥೆರಪಿ, ರೇಡಿಯೋಥೆರಪಿ, ಪೇಸ್‌ಮೇಕರ್‌ನ ವೆಚ್ಚ, ಕೃತಕ ಅಂಗಗಳಂತಹ ವೆಚ್ಚಗಳನ್ನು, ಪ್ರತಿ ಗಾಯ ಅಥವಾ ಅನಾರೋಗ್ಯಕ್ಕೆ, ಇನ್ಶೂರ್ಡ್ ಮೊತ್ತದ 15% ವರೆಗೆ ಕವರ್ ಮಾಡಲಾಗುತ್ತದೆ.

ಬಿಪಿಎಲ್ ಗಾಗಿ ಪ್ರಯೋಜನಗಳು ಅಥವಾ ಕವರೇಜ್

ಬಿಪಿಎಲ್ ವರ್ಗದ ಅಡಿಯಲ್ಲಿ ಬರುವ ಕುಟುಂಬಗಳು, ಹೆಲ್ತ್ ಕೇರ್ ಅಥವಾ ಹಾಸ್ಪಿಟಲೈಸೇಷನ್ ಪ್ರಯೋಜನಗಳು ಮತ್ತು ಯುಎಚ್ಐಎಸ್ ನೊಂದಿಗೆ ಅನ್ನದಾತರ ಮರಣದ ಸಂದರ್ಭದಲ್ಲಿ ಪರಿಹಾರ, ಇವುಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು.

ಹಾಸ್ಪಿಟಲೈಸೇಷನ್ ಪ್ರಯೋಜನಗಳು

  • ಯಾವುದೇ ಒಂದು ಕಾಯಿಲೆಗೆ ತಗಲುವ ಒಟ್ಟು ವೆಚ್ಚವು ರೂ.15000 ಕ್ಕಿಂತ ಕಡಿಮೆಯಿರಬೇಕು.

  • ಆಸ್ಪತ್ರೆಯಿಂದ ಬಿಲ್ ಮಾಡಲಾದ ರೂಮ್ ಬಾಡಿಗೆ ಮತ್ತು ಬೋರ್ಡಿಂಗ್ ವೆಚ್ಚಗಳಲ್ಲಿ, ಒಟ್ಟು ಸಮ್ ಇನ್ಶೂರ್ಡ್ ನ 0.5%, ಮರುಪಾವತಿಗಾಗಿ ಇರುತ್ತದೆ.

  • ಐಸಿಯು ಗೆ ಸೇರಿಸಿದರೆ, ದಿನಕ್ಕೆ 1% ವರೆಗಿನ ಮೊತ್ತವನ್ನು ಹಿಂಪಡೆಯಬಹುದು.

  • ಶಸ್ತ್ರಚಿಕಿತ್ಸಕ, ಅರಿವಳಿಕೆ ತಜ್ಞ, ವೈದ್ಯರು, ಸಲಹೆಗಾರರು, ತಜ್ಞರ ಶುಲ್ಕಗಳು ಮತ್ತು ಶುಶ್ರೂಷಾ ವೆಚ್ಚಗಳು ಮತ್ತು ಅರಿವಳಿಕೆ, ರಕ್ತ, ಆಮ್ಲಜನಕ, ಒಟಿ ಶುಲ್ಕಗಳು, ಶಸ್ತ್ರಚಿಕಿತ್ಸಾ ಉಪಕರಣಗಳು, ಔಷಧಗಳು, ರೋಗನಿರ್ಣಯದ ವಸ್ತು ಮತ್ತು ಎಕ್ಸ್-ರೇ, ಡಯಾಲಿಸಿಸ್, ಕೀಮೋಥೆರಪಿ ಮುಂತಾದ ಇತರ ವೈದ್ಯಕೀಯ ವೆಚ್ಚಗಳ ಖರ್ಚು, ರೇಡಿಯೊಥೆರಪಿ, ಪೇಸ್‌ಮೇಕರ್‌ನ ವೆಚ್ಚ, ಕೃತಕ ಅಂಗಗಳನ್ನು ಎಪಿಎಲ್ ವರ್ಗದಂತೆಯೇ 15% ವರೆಗೆ ಕವರ್ ಮಾಡಲಾಗುತ್ತದೆ.

  • ಆದಾಗ್ಯೂ, ಇದರಲ್ಲಿ ಹೆಚ್ಚುವರಿ ಮೆಟರ್ನಿಟಿ ಪ್ರಯೋಜನಗಳಿವೆ. ಒಂದೇ ಮಗುವಿನ ಜನನಕ್ಕಾಗಿ ಸಾಮಾನ್ಯ ಹೆರಿಗೆಗೆ ರೂ.2,500 ಮತ್ತು ಸಿಸೇರಿಯನ್ ಹೆರಿಗೆಗೆ ರೂ.5,000 ಅನ್ನು ಕ್ಲೈಮ್ ಮಾಡಬಹುದು. ಈ ಮೊತ್ತವು ಮಗುವಿನ ಮೊದಲ ಮೂರು ತಿಂಗಳ ವೈದ್ಯಕೀಯ ವೆಚ್ಚಗಳನ್ನು ಸಹ ಕವರ್ ಮಾಡುತ್ತದೆ. ಆದಾಗ್ಯೂ, ಈ ಪ್ರಯೋಜನವೂ ರೂ.30,000 ರ ಒಟ್ಟು ಮೊತ್ತದ ಒಳಗಿರುತ್ತದೆ.

ಸಂಪಾದಿಸುವವರಿಗೆ ಆ್ಯಕ್ಸಿಡೆಂಟ್ ಕವರ್

ಪಾಲಿಸಿದಾರರು, ಅವನ ಅಥವಾ ಅವಳ ಕುಟುಂಬದ ಸಂಪಾದಿಸುವವರೂ ಆಗಿದ್ದು, ಬಾಹ್ಯ, ಹಿಂಸಾತ್ಮಕ ಮತ್ತು ಗೋಚರಿಸುವ ಗಾಯಗಳಿಂದಾಗಿ ಅಪಘಾತ ಕ್ಕೀಡಾಗುತ್ತಾರೆ ಮತ್ತು ಆ ಗಾಯದಿಂದಾಗಿ ಆರು ತಿಂಗಳೊಳಗೆ ಮರಣಹೊಂದುತ್ತಾರೆ ಎಂದು ಭಾವಿಸೋಣ. ಇಂತಹ ಸಂದರ್ಭದಲ್ಲಿ ಕಂಪನಿಯು ಆ ಕುಟುಂಬಕ್ಕೆ ರೂ.25,000 ಅನ್ನು ಪಾವತಿಸುತ್ತದೆ.

ಸಂಪಾದಿಸುವವರಿಗೆ ಅಂಗವೈಕಲ್ಯ ಪರಿಹಾರ

ಸಂಪಾದಿಸುವವರು ಅನಾರೋಗ್ಯದಿಂದ ಬಳಲುತ್ತಿದ್ದರೆ ಅಥವಾ ಆಸ್ಪತ್ರೆಗೆ ದಾಖಲಾಗಿದ್ದರೆ ಗರಿಷ್ಠ ರೂ. 750 ಅನ್ನು ಪಾವತಿಸಲಾಗುತ್ತದೆ. ಕಂಪನಿಯು ನಾಲ್ಕನೇ ದಿನದಿಂದ ಗರಿಷ್ಠ 15 ದಿನಗಳವರೆಗೆ ರೂ.50 ಅನ್ನು ಪಾವತಿಸಬೇಕು.

ಯುನಿವರ್ಸಲ್ ಹೆಲ್ತ್ ಯೋಜನೆಯ ವಿನಾಯಿತಿಗಳು

ಈ ಸಂದರ್ಭಗಳಲ್ಲಿ ಇನ್ಶೂರ್ಡ್ ಅನ್ನು ಕವರ್ ಮಾಡಲಾಗುವುದಿಲ್ಲ-

  • ಯುದ್ಧ ಅಥವಾ ಭಯೋತ್ಪಾದನೆಯಿಂದ ಉಂಟಾಗುವ ರೋಗ, ಗಾಯಗಳು ಅಥವಾ ಮರಣ.

  • ವೈದ್ಯಕೀಯ ಆಧಾರಗಳಿಲ್ಲದೆ ಮಾಡಿದ ಸುನ್ನತಿ.

  • ಶ್ರವಣ ಸಾಧನಗಳು ಅಥವಾ ಕನ್ನಡಕ ಮತ್ತು ಲೆನ್ಸ್ ಗಳಂತಹ ದೃಷ್ಟಿ ಸಾಧನಗಳು.

  • ಕಾಸ್ಮೆಟಿಕ್(ಸೌಂದರ್ಯವರ್ಧಕ), ದಂತ ಅಥವಾ ಸರಿಪಡಿಸುವ ವಿಧಾನಗಳು.

  • ಲೈಂಗಿಕ ಅಥವಾ ಜನ್ಮಜಾತ ರೋಗಗಳು.

  • ಸ್ವಯಂ-ಕೃತ ಗಾಯಗಳು.

  • ಆತ್ಮಹತ್ಯೆ/ಆತ್ಮಹತ್ಯೆ ಪ್ರಯತ್ನ. 

  • ಎಚ್ಐವಿ/ಏಡ್ಸ್.

  • ಮದ್ಯಪಾನ, ಡ್ರಗ್ಸ್ ಅಥವಾ ಸಾಹಸ ಕ್ರೀಡೆಗಳ ಪ್ರಭಾವದಿಂದಾದ ಗಾಯಗಳು ಅಥವಾ ಮರಣ.

ಯುಎಚ್ಐಎಸ್ (ಯುನಿವರ್ಸಲ್ ಹೆಲ್ತ್ ಇನ್ಶೂರೆನ್ಸ್ ಸ್ಕೀಮ್ ಅಥವಾ ಯೋಜನೆ)ಗೆ ಪ್ರೀಮಿಯಂ ಎಷ್ಟು?

ಯುನಿವರ್ಸಲ್ ಹೆಲ್ತ್ ಇನ್ಶೂರೆನ್ಸ್ ಯೋಜನೆಯ ಪ್ರೀಮಿಯಂ ಎಪಿಎಲ್ ಮತ್ತು ಬಿಪಿಎಲ್ ಗೆ ವಿಭಿನ್ನವಾಗಿದೆ.

ಬಡತನ ರೇಖೆಗಿಂತ ಮೇಲಿನ ಪ್ರೀಮಿಯಂ

  • ವ್ಯಕ್ತಿಗಳಿಗೆ ವಾರ್ಷಿಕ ಪ್ರೀಮಿಯಂ ರೂ.365 ಆಗಿದೆ.

  • ಒಬ್ಬ ಸಂಗಾತಿ ಮತ್ತು ಮೂವರು ಅವಲಂಬಿತ ಮಕ್ಕಳನ್ನು ಹೊಂದಿರುವ ಐದು ಜನರಿಗಿಂತ ಹೆಚ್ಚಿಲ್ಲದ ಕುಟುಂಬಗಳಿಗೆ ವಾರ್ಷಿಕ ಪ್ರೀಮಿಯಂ ರೂ.548/- ಆಗಿದೆ.

  • ಪಾಲಿಸಿದಾರರು, ಸಂಗಾತಿ, ಮೊದಲ ಮೂರು ಅವಲಂಬಿತ ಮಕ್ಕಳು ಮತ್ತು ಅವಲಂಬಿತ ಪೋಷಕರು ಸೇರಿದಂತೆ ಐದಕ್ಕಿಂತ ಹೆಚ್ಚು ಆದರೆ ಏಳು ಸದಸ್ಯರಿಗಿಂತ ಕಡಿಮೆ ಇರುವ ಕುಟುಂಬಗಳಿಗೆ, ವಾರ್ಷಿಕ ಪ್ರೀಮಿಯಂ ರೂ.730/- ಆಗಿದೆ.

ಬಡತನ ರೇಖೆಗಿಂತ ಕೆಳಗಿರುವ ಪ್ರೀಮಿಯಂ

  • ವ್ಯಕ್ತಿಗಳಿಗೆ, ಪ್ರೀಮಿಯಂ ರೂ. 300 ಆಗಿದೆ, ಅದರಲ್ಲಿ ಪಾಲಿಸಿದಾರರು ರೂ.100/- ಭರಿಸುತ್ತಾರೆ ಮತ್ತು ಸರ್ಕಾರ ರೂ.200/- ಸಹಾಯಧನ ನೀಡುತ್ತದೆ.

  • ಒಬ್ಬ ಸಂಗಾತಿ ಮತ್ತು ಮೂವರು ಅವಲಂಬಿತ ಮಕ್ಕಳನ್ನು ಹೊಂದಿರುವ ಐದು ಜನರಿಗಿಂತ ಹೆಚ್ಚಿಲ್ಲದ ಕುಟುಂಬಗಳಿಗೆ ವಾರ್ಷಿಕ ಪ್ರೀಮಿಯಂ ರೂ. 450/- ಆಗಿದೆ. ಈ ಮೊತ್ತದಲ್ಲಿ ರೂ.150/- ಅನ್ನು ವ್ಯಕ್ತಿಯಿಂದ ಭರಿಸಲಾಗುತ್ತದೆ ಮತ್ತು ರೂ.300/- ಸರ್ಕಾರದ ಸಹಾಯಧನವಾಗಿದೆ.

  • ವಿಮಾದಾರರು, ಸಂಗಾತಿ, ಮೊದಲ ಮೂರು ಅವಲಂಬಿತ ಮಕ್ಕಳು ಮತ್ತು ಅವಲಂಬಿತ ಪೋಷಕರು ಸೇರಿದಂತೆ ಐದಕ್ಕಿಂತ ಹೆಚ್ಚು ಆದರೆ ಏಳು ಸದಸ್ಯರಿಗಿಂತ ಕಡಿಮೆ ಇರುವ ಕುಟುಂಬಗಳಿಗೆ ವಾರ್ಷಿಕ ಪ್ರೀಮಿಯಂ ರೂ. 600/- ಆಗಿದೆ, ಅದರಲ್ಲಿ ರೂ. 200/- ಅನ್ನು ವ್ಯಕ್ತಿಯಿಂದ ಪಾವತಿಸಲಾಗುತ್ತದೆ ಮತ್ತು ಉಳಿದದನ್ನು ಸರ್ಕಾರವು ಸಹಾಯಧನವಾಗಿ ನೀಡುತ್ತದೆ.

ಅರ್ಹತೆಯ ಮಾನದಂಡಗಳು.

ಅರ್ಹತೆಯು ಒಬ್ಬ ವ್ಯಕ್ತಿಯು ಬಡತನ ರೇಖೆಗಿಂತ ಮೇಲಿದ್ದಾರೆಯೇ ಅಥವಾ ಕೆಳಗಿದ್ದಾರೆಯೇ ಎಂಬ ಅಂಶವನ್ನು ಆಧರಿಸಿದೆ.

ಎಪಿಎಲ್‌ಗಾಗಿ ಅರ್ಹತೆ

ಕುಟುಂಬದ ಒಟ್ಟು ಆದಾಯವು ನಿಗದಿತ ಮೊತ್ತಕ್ಕಿಂತ ಹೆಚ್ಚಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ವ್ಯಕ್ತಿಗಳು 5 ರಿಂದ 65 ವರ್ಷ ವಯಸ್ಸಿನ ಸದಸ್ಯರಿಗೆ ಈ ಯೋಜನೆ ಕವರೇಜ್ ಅನ್ನು ಆಯ್ಕೆ ಮಾಡಬಹುದು. ಯೋಜನೆಯು ಅವರ ಪೋಷಕರನ್ನು ಕವರ್ ಮಾಡುವವರೆಗೆ ಮಕ್ಕಳು ಮತ್ತು ಶಿಶುಗಳು ಸಹ 3 ತಿಂಗಳ ವಯಸ್ಸಿನಿಂದ 5 ವರ್ಷಗಳವರೆಗೆ ಕವರ್ ಪಡೆಯುತ್ತಾರೆ.

ಬಿಪಿಎಲ್ ಗಾಗಿ ಅರ್ಹತೆ

ಈ ಯೋಜನೆಗೆ ಅರ್ಹರಾಗಲು ಕುಟುಂಬದ ಆದಾಯವು ನಿಗದಿತ ಮೊತ್ತಕ್ಕಿಂತ ಕಡಿಮೆಯಿರಬೇಕು. ಬಿಡಿಒ, ತಹಸೀಲ್ದಾರ್ ಮುಂತಾದ ಅಧಿಕಾರಿಗಳಿಂದ ನೀಡಲಾದ ಸರ್ಟಿಫಿಕೆಟ್ ಅನ್ನೂ ಸಲ್ಲಿಸಬೇಕಾಗುತ್ತದೆ. ವಯಸ್ಸಿನ ಬ್ರಾಕೆಟ್ 5 ರಿಂದ 70 ವರ್ಷಗಳಾಗಿದೆ. 3 ತಿಂಗಳಿಂದ 5 ವರ್ಷ ವಯಸ್ಸಿನ ಮಕ್ಕಳು ಸಹ ಈ ಯೋಜನೆಯ ಭಾಗವಾಗಿರುತ್ತಾರೆ, ಅವರ ಪೋಷಕರು ಸಹ ಕವರ್ ಆಗಿರುವವರೆಗೆ.

ಯುನಿವರ್ಸಲ್ ಹೆಲ್ತ್ ಇನ್ಶೂರೆನ್ಸ್ ಯೋಜನೆಗೆ ನೋಂದಾಯಿಸುವುದು ಹೇಗೆ

ಯುಎಚ್ಐಎಸ್ ಗೆ ನಿಮ್ಮನ್ನು ನೋಂದಾಯಿಸಿಕೊಳ್ಳಲು, ಯೋಜನೆಗೆ ಅರ್ಜಿ ಸಲ್ಲಿಸಲು ನಿಮಗೆ ಸಹಾಯ ಮಾಡಲು ಸಂಬಂಧಪಟ್ಟ ಇನ್ಶೂರೆನ್ಸ್ ಪೂರೈಕೆದಾರರನ್ನು ಭೇಟಿ ಮಾಡಿ.

ನೀವು ಬಿಪಿಎಲ್ ಪ್ರಯೋಜನಗಳಿಗೆ ಅರ್ಜಿ ಸಲ್ಲಿಸಲು ಬಯಸಿದರೆ, ನಿಮ್ಮ ಆದಾಯದ ಪುರಾವೆಯಾಗಿ ನಿಮಗೆ ಬಿಡಿಒ, ತಹಸೀಲ್ದಾರ್, ಮುಂತಾದ ಅಧಿಕಾರಿಗಳಿಂದ ನೀಡಲಾದ ಸರ್ಟಿಫಿಕೇಟ್ ಅಗತ್ಯವಿದೆ. ಸುಲಭ ದಾಖಲಾತಿಗಾಗಿ ಯುನಿವರ್ಸಲ್ ಹೆಲ್ತ್ ಇನ್ಶೂರೆನ್ಸ್ ಯೋಜನೆಯ ಡಾಕ್ಯುಮೆಂಟ್ ಗಳನ್ನು ಒದಗಿಸುವುದು ಬಹಳ ಮುಖ್ಯವಾಗಿರುತ್ತದೆ.

ಇದು ಮುಖ್ಯವಾಗಿ ಬಿಪಿಎಲ್ ಕುಟುಂಬಗಳಿಗೆ ವೈದ್ಯಕೀಯ ಪ್ರಯೋಜನಗಳನ್ನು ಪಡೆಯಲು ರಚಿಸಲಾಗಿದೆ; ಆದಾಗ್ಯೂ, ಎಪಿಎಲ್ ಕುಟುಂಬಗಳು ಸಹ ಅಲ್ಪ ವೆಚ್ಚದಲ್ಲಿ ಈ ಸಹಾಯವನ್ನು ಪಡೆಯಬಹುದಾಗಿದೆ. ಹೆರಿಗೆ ಪ್ರಯೋಜನಗಳು ಈ ಯೋಜನೆಯ ಸವಲತ್ತುಗಳನ್ನು ಹೆಚ್ಚಿಸುತ್ತದೆ.

ಪದೇ ಪದೇ ಕೇಳಲಾದ ಪ್ರಶ್ನೆಗಳು

ಆಸ್ಪತ್ರೆಯ ಪ್ರಯೋಜನಗಳನ್ನು ಪಡೆಯಲು ಇರುವ ಷರತ್ತುಗಳೇನು?

ನೀವು ವೈದ್ಯಕೀಯ ಪರಿಹಾರವನ್ನು ಬಯಸಿದರೆ ಪೂರೈಸಬೇಕಾದ ಕೆಲವು ಷರತ್ತುಗಳಿವೆ-

  • ಪಾಲಿಸಿಯ ಅಡಿಯಲ್ಲಿ ಎಲ್ಲಾ ಕ್ಲೈಮ್‌ಗಳನ್ನು ಐಎನ್ಆರ್(ರೂಪಾಯಿಗಳಲ್ಲಿ) ನಲ್ಲಿ ಪಾವತಿಸಬೇಕು.

  • ಭಾರತದಲ್ಲಿಯೇ ಎಲ್ಲಾ ವೈದ್ಯಕೀಯ ಸೇವೆಗಳನ್ನು ಪಡೆಯಬೇಕು.

  • ಟಿಪಿಎ ನೇರವಾಗಿ ಇನ್ಶೂರ್ಡ್ ವ್ಯಕ್ತಿಗೆ ಅಥವಾ ಆಸ್ಪತ್ರೆಗೆ ಪಾವತಿಸುತ್ತದೆ.

ಪರಿಹಾರದ ಅವಧಿಯಲ್ಲಿ ನಾನು ಪಾಲಿಸಿಯನ್ನು ರದ್ದುಗೊಳಿಸಿದರೆ ನಾನು ಮರುಪಾವತಿಯನ್ನು ಪಡೆಯುತ್ತೇನೆಯೇ?

ಹೌದು, ಆ ಅವಧಿಯಲ್ಲಿ ಯಾವುದೇ ಕ್ಲೈಮ್ ಮಾಡಿಲ್ಲವೆಂದಾದರೆ ಪಾಲಿಸಿಯನ್ನು ರದ್ದುಗೊಳಿಸಲು ನೀವು ಆಯ್ಕೆ ಮಾಡಬಹುದು.

ಎರಡನೇ ಮಗುವಿನ ಮೇಲೆ ಮೆಟರ್ನಿಟಿ ಕ್ಲೈಮ್ ಅನ್ನು ಪಡೆಯಬಹುದೇ?

ಇಲ್ಲ, ಕೇವಲ ಮೊದಲ ಮಗುವಿನ ಮೇಲೆ ಕ್ಲೈಮ್ ಅನ್ನು ಮಾಡಬಹುದಾಗಿದೆ.