ಹ್ಯುಂಡೈನ ಗ್ರ್ಯಾಂಡ್ ಐ10 ನಿಯೋಸ್ ವಿಶ್ವ ದರ್ಜೆಯ ವೈಶಿಷ್ಟ್ಯಗಳನ್ನು ಮತ್ತು ಆಕರ್ಷಕವಾದ ಸೌಂದರ್ಯವನ್ನು ಒಳಗೊಂಡಿರುವ ಸುಲಭ ಚಾಲನೆಯ ಅರ್ಬನ್ ಹ್ಯಾಚ್ಬ್ಯಾಕ್ ಆಗಿದೆ. ಇದು ಹಿಂದಿನ ಗ್ರ್ಯಾಂಡ್ ಐ10 ಮಾಡೆಲ್ ಗಳ ಸಾಮರ್ಥ್ಯದ ಆಧಾರದ ಮೇಲೆ ಹೆಚ್ಚು ಅತ್ಯಾಧುನಿಕ ಪ್ಯಾಕೇಜ್ನಲ್ಲಿ ನಿರ್ಮಿಸಲಾಗಿದೆ. ಇದಲ್ಲದೆ, ಹ್ಯುಂಡೈ ವ್ಯಾಪಕ ಶ್ರೇಣಿಯ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ವೇರಿಯಂಟ್ ಗಳನ್ನು ನೀಡುತ್ತದೆ, ಪ್ರತಿಯೊಂದೂ 5-ಸ್ಪೀಡ್ ಮ್ಯಾನ್ಯುವಲ್ ಅಥವಾ ಎಎಂಟಿ ಆಟೋ ಗೇರ್ಬಾಕ್ಸ್ ಗಳೊಂದಿಗೆ ಸಂಯೋಜಿಸಲ್ಪಟ್ಟಿದೆ.
ಹ್ಯುಂಡೈ, ಬೂಮರಾಂಗ್-ಆಕಾರದ ಡಿಆರ್ಎಲ್ಗಳೊಂದಿಗೆ ದೊಡ್ಡದಾದ ಸಿಗ್ನೇಚರ್ ಗ್ರಿಲ್, ಎಲ್ಇಡಿ ಪ್ರೊಜೆಕ್ಟರ್ ಹೆಡ್ಲ್ಯಾಂಪ್ಗಳು ಮತ್ತು ಫಾಗ್ ಲ್ಯಾಂಪ್ಗಳು, 15-ಇಂಚಿನ ಅಲಾಯ್ ವೀಲ್ ಗಳು ಹೊಂದಿದೆ ಮತ್ತು ಸ್ಪೋರ್ಟಿ ಲುಕ್ ನೀಡಲು ರೂಫ್ ರೈಲ್ಗಳನ್ನು ಸಜ್ಜುಗೊಳಿಸಿದೆ. ಈಗ, ಮಾಡೆಲ್ ಆಧಾರದ ಮೇಲೆ, ನೀವು ಡ್ಯುಯಲ್-ಟೋನ್ ಗ್ರೇ ಅಥವಾ ಕಪ್ಪು ಬಣ್ಣದ ಇಂಟೀರಿಯರ್ ಗಳನ್ನು ಪಡೆಯಬಹುದು.
ಕ್ಯಾಬಿನ್ ಒಳಗೆ, ನೀವು ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋವನ್ನು ಬೆಂಬಲಿಸುವ 8-ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ನೊಂದಿಗೆ ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಕಾಣಬಹುದು.
ಇವುಗಳಲ್ಲದೆ, ವೈರ್ಲೆಸ್ ಚಾರ್ಜರ್, ಯುಎಸ್ಬಿ ಪೋರ್ಟ್, ವಾಯ್ಸ್ ರೆಕಗ್ನಿಷ್, ಬ್ಲೂಟೂತ್ ಕನೆಕ್ಟಿವಿಟಿ, ರೇರ್ ಏರ್ ಕಂಡಿಷನರ್ ವೆಂಟ್ಗಳು, 2 ಪವರ್ ಔಟ್ಲೆಟ್ಗಳು, ರೇರ್ ಪಾರ್ಕಿಂಗ್ ಸೆನ್ಸರ್ಗಳು, ಕ್ಯಾಮೆರಾ, ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್ ಮತ್ತು ಇತ್ಯಾದಿ ಹಲವಾರು ವೈಶಿಷ್ಟ್ಯಗಳಿವೆ.
ನೀವು ಈ ಕಾರನ್ನು ಖರೀದಿಸಿದ್ದರೆ, ಸಂಭವನೀಯ ದುರಸ್ತಿ/ಬದಲಿ ವೆಚ್ಚಗಳನ್ನು ತಪ್ಪಿಸಲು ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಕಾರ್ ಇನ್ಶೂರೆನ್ಸ್ ಅನ್ನು ಪಡೆದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಿ.
ಇದಲ್ಲದೆ, ಕಾರ್ ಇನ್ಶೂರೆನ್ಸ್ ಪಾಲಿಸಿಯು ಕಡ್ಡಾಯವಾಗಿದೆ ಮತ್ತು ಕಾನೂನು ಪರಿಣಾಮಗಳು ಮತ್ತು ಇತರ ಅಪಾಯಗಳಿಂದ ರಕ್ಷಿಸುತ್ತದೆ.