ಸ್ವದೇಶಿ ನಿರ್ಮಿತ ಟಾಟಾ ಮೋಟಾರ್ಸ್ನ ದೊಡ್ಡ ಸಾಧಕ ಮತ್ತು ಆಲ್-ಸೀಸನ್ ಸ್ಟಾರ್ ಟಾಟಾ ನೆಕ್ಸಾನ್ ಅನ್ನು ಪ್ರಸುತ್ತಪಡಿಸುತ್ತಿದ್ದೇವೆ. 2017ರಲ್ಲಿ ಬಿಡುಗಡೆಗೊಂಡ ಟಾಟಾ ನೆಕ್ಸಾನ್ ತನ್ನ ಪ್ರತಿಸ್ಪರ್ಧಿಗಳಾದ ಫೋರ್ಡ್ ಇಕೋಸ್ಪೋರ್ಟ್, ಹೋಂಡಾ ಡಬ್ಲ್ಯೂಆರ್-ವಿ, ಮಹೀಂದ್ರಾ ಟಿಯುವಿ300 ಮತ್ತು ಮಾರುತಿ ಸುಜುಕಿ ವಿಟಾರ ಬ್ರೆಜ್ಜಾಗೆ ಕಠಿಣ ಸ್ಪರ್ಧೆಯನ್ನು ಸಾಬೀತು ಮಾಡಿದೆ. ಅಚ್ಚರಿ ಹುಟ್ಟಿಸುವ ಕ್ಲಾಸ್ ವೈಶಿಷ್ಟ್ಯಗಳಲ್ಲಿ ಮೊದಲನೆಯದು ಎನಿಸಿಕೊಂಡು, ತನ್ನ ಸ್ಪಂಕಿ ಲುಕ್ನಿಂದ ಎತ್ತರದಲ್ಲಿ ನಿಂತಿದೆ. ಆದ್ದರಿಂದ ಬಾಕ್ಸ್ ದೇಹ ಹೊಂದಿರುವ ಪ್ರತಿಸ್ಪರ್ಧಿಗಳನ್ನು ವಿರೋಧಿಸಲೆಂದೇ ಟ್ರೆಂಡಿ ಕರ್ವ್ಗಳಿವೆ. ಈ ಕಾರು ಜನರ ಹೃದಯಗಳೊಂದಿಗೆ ಹಲವಾರು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ:
- 2018ರ ಎನ್ಡಿಟಿವಿ ಕಾರ್ ಮತ್ತು ಬೈಕ್ ಅವಾರ್ಡ್: ವರ್ಷದ ಸಬ್ಕಾಂಪಾಕ್ಟ್ ಎಸ್ಯುವಿ.
- ಗ್ಲೋಬಲ್ ಎನ್ಸಿಎಪಿ ಅಥವಾ ಜಿ-ಎನ್ಸಿಎಪಿ ಆಯೋಜಿಸಿದ್ದ ಕ್ರ್ಯಾಶ್ ಟೆಸ್ಟ್ನಲ್ಲಿ 4-ಸ್ಟಾರ್ ರೇಟಿಂಗ್ ಪ್ರಶಸ್ತಿ ಗಳಿಸಿದೆ, ಆ ಮೂಲಕ ಈ ಕೆಟಗರಿಯಲ್ಲಿ ಪ್ರಶಸ್ತಿ ಗಳಿಸಿದ ಮೊದಲ ಮೇಡ್ ಇನ್ ಇಂಡಿಯಾ ಸಬ್-4ಎಂ ಎಸ್ಯುವಿ ಎನಿಸಿಕೊಂಡಿದೆ.
- ಆರನೇ ವರ್ಲ್ಡ್ ಅಟೋ ಫೋರಮ್ ಅವಾರ್ಡ್ಸ್ನಲ್ಲಿ ಬೆಸ್ಟ್ ಪ್ರೊಡೆಕ್ಟ್ ಇನ್ನೋವೇಶನ್ ಪ್ರಶಸ್ತಿ ಗೆದ್ದಿದೆ.
- ಆಟೋಕಾರ್ ಇಂಡಿಯಾದ ವ್ಯಾಲ್ಯೂ ಫಾರ್ ಮನಿ ಪ್ರಶಸ್ತಿಯನ್ನು ಗೆದ್ದಿದೆ.
ನೀವು ಯಾಕೆ ಟಾಟಾ ನೆಕ್ಸಾನ್ ಖರೀದಿಸಬೇಕು?
ಪರಿಚಯವನ್ನು ಓದಿದ ನಂತರ ಈ ಪ್ರಶ್ನೆಗೆ ಉತ್ತರಿಸುವುದು ಅಂಥಾ ದೊಡ್ಡ ತೊಂದರೆಯೇನಲ್ಲ, ಆದರೆ ಹೇ, ಈ ಬ್ಯೂಟಿಯನ್ನು ಯಾಕೆ ಮನೆಗೆ ಕರೆತರಬೇಕೆಂದು ನಾವೀಗ ಖಚಿತಪಡಿಸಿಕೊಳ್ಳೋಣ. 10 ಲಕ್ಷ ಕೆಳಗಿನ ಬಜೆಟ್ನಲ್ಲಿ ದೃಢವಾಗಿರುವ ಮತ್ತು ವಿಶ್ವಾಸಾರ್ಹ ಕಾರ್ ಹೊಂದಲು ಬಯಸುವ ಎಲ್ಲಾ ಏಜ್ ಗ್ರೂಪ್ಗಳ ಖರೀದಿದಾರರಿಗೂ ಇದು ಹೊಂದಿಕೊಳ್ಳುತ್ತದೆ.
ಸಬ್ಕಾಂಪಕ್ಟ್ ಎಸ್ಯುವಿ ಸೆಗ್ಮೆಂಟಿನಲ್ಲಿ ಅದ್ಭುತವಾಗಿ ಕೈಗೆಟಕುವಂತಿರುವ ಟಾಟಾ ನೆಕ್ಸಾನ್ ರೂ.5.85 ಲಕ್ಷ ಮತ್ತು 9.44 ಲಕ್ಷ (ಎಕ್ಸ್-ಶೋರೂಮ್, ದೆಹಲಿ) ಮಧ್ಯದ ಬೆಲೆಯನ್ನು ಹೊಂದಿದೆ. ಪ್ರಮುಖವಾಗಿ ಎಟ್ನಾ ಆರೆಂಜ್, ಮೊರೋಕ್ಕನ್ ಬ್ಲೂ, ಕ್ಯಾಲ್ಗರಿ ವೈಟ್, ಸಿಯಾಟಲ್ ಸಿಲ್ವರ್, ವರ್ಮಂಟ್ ರೆಡ್ ಮತ್ತು ಗ್ಲಾಸ್-ಗ್ಲೋ ಗ್ರೇ ಎಂಬ ಆರು ಬಣ್ಣಗಳಲ್ಲಿ (3 ಡ್ಯುಯಲ್ ಕಲರ್ ಆಯ್ಕೆಗಳು) ದೊರೆಯುತ್ತದೆ, ಇದು ಖಂಡಿತವಾಗಿಯೂ ನಿಮ್ಮ ಹೃದಯವನ್ನು ಸೆಳೆಯುತ್ತದೆ ಮತ್ತು ಎಂದೂ ತೊರೆಯುವುದಿಲ್ಲ!
ಪಿಟಿಐ ಮತ್ತು ಎನ್ಸಿಎಪಿಯಿಂದ ‘ಸ್ಚೇಬಲ್’ ಮತ್ತು ‘ಸೇಫ್’ ಎಂಬ ಸ್ಟ್ಯಾಂಪ್ ಬಿದ್ದಿದೆ, ಅದು ಈ ಸೆಗ್ಮೆಂಟಿಗೆ ಹೊಸತನ ತಂದಿದೆ ಮತ್ತು ಕೆಲವು ವಿನ್ಯಾಸ ಅಂಶಗಳು ರೇಂಜ್ ರೋವರ್ ಇವೋಕ್ನಿಂದ ಸ್ಫೂರ್ತಿ ಪಡೆದಿವೆ. 108ಬಿಎಚ್ಪಿ ಪವರ್ ಉತ್ಪಾದಿಸುವ ಬ್ರಾಂಡ್ ನ್ಯೂ 1.5 ಲೀಟರ್ ಫೋರ್-ಸಿಲಿಂಡರ್ ಡೀಸೆಲ್ ಎಂಜಿನ್ ಮತ್ತು 1.2 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ನೊಂದಿಗೆ 18 ವರ್ಷನ್ಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಎರಡೂ ವೇರಿಯಂಟ್ಗಳಲ್ಲಿ ಲಭ್ಯವಿದೆ. ಫ್ಯುಯಲ್ ಟ್ಯಾಂಕ್ ಸಾಮರ್ಥ್ಯ 44 ಲೀಟರ್ಗಳು ಮತ್ತು ಮೈಲೇಜ್ 17.0ರಿಂದ 21.5 ಕೆಎಂಪಿಎಲ್ ಮಧ್ಯದಲ್ಲಿ ದಾಖಲಾಗಿದೆ, ಲಾಂಗ್ಡ್ರೈವ್ಗಳಿಗೆ ಸಾಕಷ್ಟಾಯಿತು, ಅಲ್ವೇ?
ಟ್ರೆಂಡಿ ಮತ್ತು ಟ್ರೀಟಿ ಕರ್ವಿ ಔರ್ ಬಾಡಿ, ಇಕೋ, ಸಿಟಿ ಮತ್ತು ಸ್ಪೋರ್ಟ್ ಮಲ್ಟಿ-ಡ್ರೈವ್ ಮೋಡ್ಗಳು, 16-ಇಂಚಿನ ಎಲಾಯ್ ವೀಲ್ ಡೈಮಂಡ್ ಕಟ್ ಡಿಸೈನ್, ಎಲ್ಇಡಿ ಡಿಆರ್ಎಲ್ಗಳು, ಇಬಿಡಿಯೊಂದಿಗೆ ಎಬಿಎಸ್, ಸ್ಟೇರಿಂಗ್ಗೆ ಜೋಡಿಸಲಾಗಿರುವ ಕಂಟ್ರೋಲ್ಗಳು, ಕೂಲ್ಡ್ ಗ್ಲೋವ್ಬಾಕ್ಸ್, ಲೋಡ್ ಲಿಮಿಟರ್ನೊಂದಿಗೆ ಸೀಟ್ಬೆಲ್ಟ್ ಪ್ರೀ-ಟೆನ್ಷನರ್ಸ್, ಮಲ್ಟಿಸೆಂಟ್ರಲ್ ಇನ್ಫಾರ್ಮೇಷನ್ ಡಿಸ್ಪ್ಲೇ, ಪವರ್ ಫೋಲ್ಡಬಲ್ ಓಆರ್ವಿಎಮ್, ಪ್ರೀಮಿಯಂ ಇಂಟೀರಿಯರ್ಗಳು ಮತ್ತಿತ್ಯಾದಿ ಫರ್ಸ್ಟ್-ಇನ್-ಕ್ಲಾಸ್ ವೈಶಿಷ್ಟ್ಯಗಳೊಂದಿಗೆ ಇದು ಬರುತ್ತದೆ. ಅದನ್ನು ನಂಬಲು ನೀವದನ್ನು ನೋಡಬೇಕು!