ನೀವು ಕೈಗೆಟುಕುವ, ಸ್ಟೈಲಿಶ್ ಆಗಿರುವ ಮತ್ತು ಟೆಕ್ನಾಲಜಿಯಿಂದಲೂ ಪ್ರಭಾವಶಾಲಿಯಾಗಿರುವ ವಾಹನದ ಹುಡುಕಾಟದಲ್ಲಿದ್ದರೆ, ಟೊಯೋಟಾ ಗ್ಲಾನ್ಜಾ ನಿಮ್ಮ ಎಲ್ಲಾ ಅವಶ್ಯಕತೆಗಳನ್ನು ಪೂರೈಸುತ್ತದೆ. ಇದು ಶಕ್ತಿಶಾಲಿ 1197ಸಿಸಿ ಇಂಜಿನ್ ಹೊಂದಿದ್ದು, 113Nm ಟಾರ್ಕ್ ಮತ್ತು 90PS ಅನ್ನು ಅದರ ಪೀಕ್ ಪರ್ಫಾರ್ಮೆನ್ಸ್ನಲ್ಲಿ ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ.
ಇದಲ್ಲದೆ, ಇದು ಅತ್ಯದ್ಭುತ ಫ್ಯೂಯೆಲ್ ಎಕಾನಮಿಯನ್ನು ಹೊಂದಿದೆ. ಇದು ಒಂದು ಮಾದರಿ ಕಮ್ಯುಟರ್ ವೆಹಿಕಲ್ ಆಗಿ, ಅದರ ಖ್ಯಾತಿಗೆ ಕೊಡುಗೆ ನೀಡುತ್ತದೆ. ಈ ಹ್ಯಾಚ್ಬ್ಯಾಕ್ನ ಮಾಲೀಕರು ತಾವು ಡ್ರೈವ್ ಮಾಡುವ ವೇರಿಯಂಟ್ ಅನ್ನು ಆಧರಿಸಿ, 20 ರಿಂದ 23 kmpl ಗಳ ಮೈಲೇಜ್ ಅನ್ನು ನಿರೀಕ್ಷಿಸಬಹುದು.
ಈಗ, ನಿಮ್ಮ ಅಗತ್ಯಗಳಿಗೆ ಇದು ಸರಿಯಾದ ಕಾರ್ ಎಂದು ನೀವು ನಿರ್ಧರಿಸಿದರೆ, ನೀವು ಟೊಯೋಟಾ ಗ್ಲಾನ್ಜಾ ಕಾರ್ ಇನ್ಶೂರೆನ್ಸ್ ಪಾಲಿಸಿಗಳನ್ನು ಹುಡುಕಲು ಪ್ರಾರಂಭಿಸಬೇಕು. ಆಟೋಮೊಬೈಲ್ ಇನ್ಶೂರೆನ್ಸ್ನ ವಿಷಯಕ್ಕೆ ಬಂದರೆ, ನೀವು ಮುಖ್ಯವಾಗಿ ಎರಡು ಪ್ರಾಥಮಿಕ ಆಯ್ಕೆಗಳಿಂದ ಆರಿಸಿಕೊಳ್ಳಬಹುದು. ಅವುಗಳೆಂದರೆ, ಥರ್ಡ್ ಪಾರ್ಟಿ ಲಯಬಿಲಿಟಿ ಮತ್ತು ಕಾಂಪ್ರೆಹೆನ್ಸಿವ್ ಪಾಲಿಸಿಗಳು.
ಮೊದಲನೆಯ ಪಾಲಿಸಿಯು, ನಿಮ್ಮ ಕಾರಿನ ಅಪಘಾತದಿಂದ ಹಾನಿಗೊಳಗಾದ ಥರ್ಡ್ ಪಾರ್ಟಿ ವ್ಯಕ್ತಿ ಅಥವಾ ವಾಹನಕ್ಕೆ ಸಂಬಂಧಿಸಿದ ನಿಮ್ಮ ಫೈನಾನ್ಸಿಯಲ್ ಲಯಬಿಲಿಟಿಯನ್ನು ಕವರ್ ಮಾಡುತ್ತದೆ.
ಆದಾಗ್ಯೂ, ಅಂತಹ ಪಾಲಿಸಿಯಿಂದ ನೀವು ಸ್ವಂತ ಹಾನಿ (ಓನ್ ಡ್ಯಾಮೇಜ್) ವೆಚ್ಚಗಳನ್ನು ಕ್ಲೈಮ್ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ, ನೀವು ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿರಬೇಕು. ಇದರ ಅಡಿಯಲ್ಲಿ, ನಿಮ್ಮ ಇನ್ಶೂರೆನ್ಸ್ ಮಾಡಲಾದ ಕಾರಿನೊಂದಿಗೆ, ಅಪಘಾತದಲ್ಲಿ ಸಂಭವಿಸಿದ ಥರ್ಡ್ ಪಾರ್ಟಿಗಳ ಹಾನಿಗಳಿಗಾಗಿ ಕವರೇಜ್ ಪಡೆಯುವುದಲ್ಲದೇ, ಜೊತೆಗೆ ನೀವು ಸ್ವಂತ ಹಾನಿ ಪ್ರಯೋಜನಗಳನ್ನು ಸಹ ಪಡೆಯುತ್ತೀರಿ.
ಭಾರತದಲ್ಲಿ, 1988 ರ ಮೋಟಾರ್ ವೆಹಿಕಲ್ಸ್ ಆ್ಯಕ್ಟ್ನ ಅಡಿಯಲ್ಲಿ ಥರ್ಡ್ ಪಾರ್ಟಿ ಲಯಬಿಲಿಟಿ ಪಾಲಿಸಿಯನ್ನು ಕಡ್ಡಾಯಗೊಳಿಸಲಾಗಿದೆ. ನೀವು ಈ ನಿಯಮವನ್ನು ಅನುಸರಿಸಲು ವಿಫಲವಾದರೆ, ನೀವು ₹2000 (ಪುನರಾವರ್ತಿತ ಅಪರಾಧಿಗಳಿಗೆ ₹4000) ದಂಡವನ್ನು ಪಾವತಿಸಬೇಕಾಗುತ್ತದೆ. ಆದ್ದರಿಂದ, ಟೊಯೋಟಾ ಗ್ಲಾನ್ಜಾ ಕಾರ್ ಇನ್ಶೂರೆನ್ಸ್ ಪಾಲಿಸಿಯು ಕೇವಲ ಪ್ರಯೋಜನಕಾರಿ ಪಾಲಿಸಿ ಮಾತ್ರ ಆಗಿರದೆ, ಅದು ಮಾಲೀಕರಿಗೆ ಕಾನೂನಾತ್ಮಕವಾಗಿ ಕಡ್ಡಾಯವಾಗಿದೆ.
ಆದಾಗ್ಯೂ, ನಿಮ್ಮ ಕಾರ್ ಇನ್ಶೂರೆನ್ಸ್ ಪಾಲಿಸಿಗಾಗಿ ನೀವು ಸರಿಯಾದ ಇನ್ಶೂರೆನ್ಸ್ ಪೂರೈಕೆದಾರರನ್ನು ಆಯ್ಕೆ ಮಾಡುವುದು ಕಷ್ಟಕರವಾಗಿರುತ್ತದೆ. ವಿಶೇಷವಾಗಿ ನಿಮಗೆ ಮಾರ್ಕೆಟ್ನಲ್ಲಿ ಹಲವಾರು ಆಯ್ಕೆಗಳಿರುವಾಗ, ಅದರಲ್ಲಿ ಒಂದನ್ನು ಆಯ್ಕೆ ಮಾಡುವುದು ಕಷ್ಟವೇ!. ಈ ನಿಟ್ಟಿನಲ್ಲಿ, ಡಿಜಿಟ್, ಕಾರ್ ಇನ್ಶೂರೆನ್ಸ್ ಇಂಡಸ್ಟ್ರಿಯಲ್ಲಿ ಉತ್ತಮ ದಾಪುಗಾಲು ಇಡುತ್ತಿದೆ. ಡಿಜಿಟ್ ಕಂಪನಿಯು ಇತರ ಇನ್ಶೂರೆನ್ಸ್ ಪೂರೈಕೆದಾರರು ನೀಡದಂತಹ ಹಲವಾರು ಉತ್ತಮ ಪ್ರಯೋಜನಗಳನ್ನು ನೀಡುತ್ತದೆ.
ಇನ್ನೂ ಸಮಾಧಾನವಾಗಲಿಲ್ಲವೇ? ಇನ್ನಷ್ಟು ತಿಳಿಯಲು ಮುಂದೆ ಓದಿ!