ಎಚ್ಎಫ್(HF) ಡಿಲಕ್ಸ್ ಇನ್ಶೂರೆನ್ಸ್ ಗೆ ಡಿಜಿಟ್ ಏಕೆ ಸೂಕ್ತವಾದ ಆಯ್ಕೆ ಎನ್ನುವ ಕಾರಣಗಳನ್ನು ಈ ಕೆಳಗೆ ನೀಡಲಾಗಿದೆ.
ಅನುಕೂಲಕರವಾದ ಪಾಲಿಸಿ ಆಯ್ಕೆಗಳು - ಪ್ರತಿ ರೈಡರ್ನ ವೈವಿಧ್ಯಮಯ ಅವಶ್ಯಕತೆಗಳನ್ನು ಪರಿಗಣಿಸಿ ಡಿಜಿಟ್ ತನ್ನ ಪಾಲಿಸಿ ಆಯ್ಕೆಗಳನ್ನು ರಚಿಸಿರುತ್ತದೆ. ಹೀರೋ ಹೆಚ್ಎಫ್( HF) ಡೀಲಕ್ಸ್ ಮಾಲೀಕರು ಅನಗತ್ಯ ಹೊಣೆಗಾರಿಕೆಗಳನ್ನು ತಪ್ಪಿಸಲು ಕೆಳಗಿನ ಯಾವುದಾದರೂ ಯೋಜನೆಗಳನ್ನು ಆಯ್ಕೆ ಮಾಡಬಹುದು.
ಥರ್ಡ್ ಪಾರ್ಟಿ ಲಯಬಿಲಿಟಿ ಸ್ಕೀಮ್- ಈ ಯೋಜನೆಯು ನಿಮ್ಮ ದ್ವಿಚಕ್ರ ವಾಹನದಿಂದ ಅಪಘಾತದಲ್ಲಿ ಥರ್ಡ್ ಪಾರ್ಟಿಗೆ ಉಂಟಾಗುವ ಹಾನಿಗಳಿಗೆ ರಕ್ಷಣೆ ನೀಡುತ್ತದೆ. ತೊಂದರೆಗೊಳಗಾದ ಪಾರ್ಟಿ ಅಥವಾ ವ್ಯಕ್ತಿಯು ನಿಮ್ಮ ಇನ್ಶೂರೆನ್ಸ್ ಕಂಪನಿಯಿಂದ ಅದಕ್ಕಾಗಿ ನೇರವಾಗಿ ಪರಿಹಾರವನ್ನು ಪಡೆದುಕೊಳ್ಳಬಹುದು. ಆದರೆ, ಥರ್ಡ್ ಪಾರ್ಟಿ ಪಾಲಿಸಿಯು ಸ್ವಂತ ಬೈಕ್ ಗೆ ಆದ ಹಾನಿಗೆ ರಕ್ಷಣೆಯನ್ನು ನೀಡುವುದಿಲ್ಲ. ಆದ್ದರಿಂದ, ಆರ್ಥಿಕ ಭದ್ರತೆಯನ್ನು ಹೆಚ್ಚಿಸಿಕೊಳ್ಳಲು, ಥರ್ಡ್ ಪಾರ್ಟಿ ಪಾಲಿಸಿದಾರರು ಸ್ವತಂತ್ರವಾಗಿ ಸ್ವಂತ ಬೈಕ್ ಹಾನಿ ರಕ್ಷಣೆಯನ್ನು ಖರೀದಿಸಬಹುದು.
ಕಾಂಪ್ರೆಹೆನ್ಸಿವ್ ಸ್ಕೀಮ್ - ಇದು ಥರ್ಡ್-ಪಾರ್ಟಿ ಹಾಗೂ ಸ್ವಂತ ಬೈಕ್ ಗೆ ಆದ ಹಾನಿಗಾಗಿ ರಕ್ಷಣೆಯನ್ನು ಒಳಗೊಂಡಿರುವ ವ್ಯಾಪಕ ಪಾಲಿಸಿಯಾಗಿದೆ. ಇದಲ್ಲದೆ, ಪ್ರವಾಹಗಳು, ಭೂಕಂಪಗಳು, ಬೆಂಕಿ, ಕಳ್ಳತನ ಮತ್ತು ಇತರ ಬೆದರಿಕೆ ನೀಡುವಂತಹ ಘಟನೆಗಳಲ್ಲಿ ನೀವು ಯೋಜನೆಯ ವಿರುದ್ಧ ಆರ್ಥಿಕ ರಕ್ಷಣೆಯನ್ನು ಪಡೆಯಬಹುದು.
ಆನ್ಲೈನ್ ಖರೀದಿ ಮತ್ತು ರಿನ್ಯೂ ಮಾಡಲು ಆಯ್ಕೆಗಳು -ಡಿಜಿಟ್ ತನ್ನ ಗ್ರಾಹಕರಿಗೆ ಆನ್ಲೈನ್ನಲ್ಲಿ ಪಾಲಿಸಿಗಳನ್ನು ಖರೀದಿಸಲು ಅಥವಾ ರಿನ್ಯೂ ಮಾಡಲು ಸುಲಭವಾಗುವಂತೆ 100% ಡಿಜಿಟೈಸ್ಡ್ ಆಯ್ಕೆ ನೀಡಿ ಸರಾಗಗೊಳಿಸುತ್ತದೆ. ಪಾಲಿಸಿ ಹೊಂದಿರುವ ಗ್ರಾಹಕರು ಆನ್ಲೈನ್ನಲ್ಲಿ ಹೀರೋ ಹೆಚ್ಎಫ್( HF) ಡಿಲಕ್ಸ್ ಇನ್ಶೂರೆನ್ಸ್ ನವೀಕರಣಕ್ಕಾಗಿ ತಮ್ಮ ಖಾತೆಗಳಿಗೆ ಲಾಗ್ ಇನ್ ಮಾಡಬೇಕಾಗುತ್ತದೆ ಮತ್ತು ಹೊಸ ಗ್ರಾಹಕರು ಹೀರೋ ಹೆಚ್ಎಫ್( HF) ಡಿಲಕ್ಸ್ ಇನ್ಶೂರೆನ್ಸ್ ಆನ್ಲೈನ್ನಲ್ಲಿ ಖರೀದಿಸಲು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬಹುದು.
ತಕ್ಷಣವೇ ಕ್ಲೈಮ್ ಇತ್ಯರ್ಥ - ಡಿಜಿಟ್ನೊಂದಿಗೆ, ನಿಮ್ಮ ಹೆಚ್ಚಿನ ಕ್ಲೈಮ್ಗಳನ್ನು ಸಾಧ್ಯವಾದಷ್ಟು ಕಡಿಮೆ ಸಮಯದಲ್ಲಿ ಇತ್ಯರ್ಥಪಡಿಸುತ್ತೇವೆ ಎಂದು ನಾವು ಭರವಸೆ ನೀಡುತ್ತೇವೆ. ತ್ವರಿತ ಪರಿಹಾರಕ್ಕಾಗಿ, ಡಿಜಿಟ್ ನಿಮಗಾಗಿ ಸ್ಮಾರ್ಟ್ಫೋನ್-ಸಕ್ರಿಯಗೊಳಿಸಿದ ಸೆಲ್ಫ್- ಇನ್ಸ್ಪೆಕ್ಷನ್ ವ್ಯವಸ್ಥೆಯನ್ನು ತರುತ್ತದೆ. ಕ್ಲೈಮ್ ಫೈಲ್ ಮಾಡಲು ಸಿಸ್ಟಂನಲ್ಲಿ ಸಂಬಂಧಿತ ಚಿತ್ರಗಳನ್ನು ಸಲ್ಲಿಸಿ.
ಆಡ್-ಆನ್ ಕವರ್ ಸಹಿತ ಪಾಲಿಸಿ ಮಾರ್ಪಾಡುಗಳು - ಡಿಜಿಟ್ ವಿಸ್ತರಣೆಗೊಳಿಸಿದ ಕೆಳಗಿನ ಯಾವುದೇ ಆಡ್-ಆನ್ ಕವರ್ಗಳನ್ನು ಆಯ್ಕೆ ಮಾಡುವ ಮೂಲಕ ನಿಮ್ಮ ರಕ್ಷಣೆಯನ್ನು ನೀವು ಬಲಪಡಿಸಿಕೊಳ್ಳಬಹುದು
(ಐಡಿವಿ)IDV ಕಸ್ಟಮೈಸ್ ಮಾಡಬಹುದಾದ ಸೌಲಭ್ಯ- ಹೀರೋ ಹೆಚ್ಎಫ್(HF) ಡೀಲಕ್ಸ್ಗಾಗಿ ನಿಮ್ಮ ದ್ವಿಚಕ್ರ ವಾಹನ ಇನ್ಶೂರೆನ್ಸ್ ಅನ್ನು ಮತ್ತಷ್ಟು ಹೆಚ್ಚಿಸಲು, ನಿಮ್ಮ ಇನ್ಶೂರೆನ್ಸ್ ಮಾಡಿದ ಘೋಷಿತ ಮೌಲ್ಯವನ್ನು ಹೆಚ್ಚಿಸುವ ಅಥವಾ ಕಡಿಮೆ ಮಾಡುವ ಆಯ್ಕೆಯನ್ನು ಡಿಜಿಟ್ ನೀಡುತ್ತದೆ. ಈ ಪ್ರಯೋಜನವನ್ನು ಬಳಸಿಕೊಳ್ಳಲು ನೀವು ನಿಮ್ಮ ಪ್ರೀಮಿಯಂಗಳನ್ನು ಸರಿಹೊಂದಿಸಬೇಕು.
ರಾಷ್ಟ್ರವ್ಯಾಪಿ ನೆಟ್ವರ್ಕ್ ಗ್ಯಾರೇಜುಗಳು - ಭಾರತದಾದ್ಯಂತ 2900 ಕ್ಕೂ ಹೆಚ್ಚು ಡಿಜಿಟ್ ನೆಟ್ವರ್ಕ್ ಬೈಕ್ ಗ್ಯಾರೇಜ್ಗಳು ಲಭ್ಯವಿವೆ. ಕ್ಯಾಶ್ಲೆಸ್ ರಿಪೇರಿಗಳನ್ನು ಪಡೆಯಲು ಹತ್ತಿರದ ಯಾವುದೇ ಗ್ಯಾರೇಜ್ಗಳಿಗೆ ಭೇಟಿ ನೀಡಿ.
24x7 ಗ್ರಾಹಕ ಬೆಂಬಲ – ಯಾವುದೇ ಇನ್ಶೂರೆನ್ಸ್-ಸಂಬಂಧಿತ ಪ್ರಶ್ನೆಗಳಿದ್ದರೆ, 1800 258 5956 ಗೆ ಕರೆ ಮಾಡಿ. ಡಿಜಿಟ್ನ ಗ್ರಾಹಕ ಸೇವಾ ಕಾರ್ಯನಿರ್ವಾಹಕರು ನಿಮಗೆ ಬೇಗನೆ ಸಹಾಯ ನೀಡಲು ಸದಾ ಲಭ್ಯವಿರುತ್ತಾರೆ. ಹೆಚ್ಚುವರಿಯಾಗಿ, ನೀವು ಅನಗತ್ಯ ಕ್ಲೈಮ್ಗಳನ್ನು ತಪ್ಪಿಸುವ ಮತ್ತು ಹೆಚ್ಚಿನ ಡಿಡಕ್ಟಿಬಲ್ಸ್ ಆಗದೆ ಇರುವ ಹಾಗೆ ಪಾಲಿಸಿ ಆಯ್ಕೆ ಮಾಡುವ ಮೂಲಕ ನಿಮ್ಮ ಪ್ರೀಮಿಯಂಗಳನ್ನು ಕಡಿಮೆ ಮಾಡಿಕೊಳ್ಳಬಹುದು.