ಕೇವಲ ಎಂಟು ವರ್ಷಗಳ ಹಿಂದೆ ಇದರ ಪರಿಚಯವಾಗಿದ್ದು, ಹೀರೋ ಮೆಸ್ಟ್ರೊ ದೇಶದ ಇತರ ಹಳೆಯ ಸ್ಕೂಟರ್ ಗಳ ಪ್ರತಿಸ್ಪರ್ಧಿಯಾಗುವಲ್ಲಿ ಯಶಸ್ವಿಯಾಗಿದೆ. ಹೀರೋ ಮತ್ತು ಹೋಂಡಾ ಎರಡು ಪ್ರತ್ಯೇಕ ಘಟಕಗಳಾದ ತಕ್ಷಣವೇ ಹೀರೋ ಮೆಸ್ಟ್ರೊ ಅನ್ನು ಲಂಡನಿನ ಒ2 ಅರೀನಾದಲ್ಲಿ ಲಾಂಚ್ ಮಾಡಲಾಯಿತು.
ಮೆಸ್ಟ್ರೊ, ಪ್ರಾಥಮಿಕವಾಗಿ ಬೈಕುಗಳನ್ನು ತಯಾರಿಸುವ ಹೀರೋ ಸರಣಿಯ, ಎರಡನೇ ಸ್ಕೂಟರ್ ಅಷ್ಟೇ ಆಗಿತ್ತು. ಕೈಗೆಟಕುವ ದರದೊಂದಿಗೆ ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳು, ಇದರ ಜನಪ್ರಿಯತೆಯನ್ನು ದೃಢಗೊಳಿಸಿದೆ.
110cc ಯ ಎಂಜಿನ್ ಅನ್ನು ಹೊಂದಿದ್ದು, ಈ ಸ್ಕೂಟರ್ 65 ಕೀ/ಲಿ ವರೆಗಿನ ಮೈಲೇಜ್ ಅನ್ನು ನೀಡಲು ಸಮರ್ಥವಾಗಿದೆ.
2016 ರಲ್ಲಿ, ಸಿ ಎನ್ ಬಿ ಸಿ -ಟಿವಿ18 ಒವರ್ಡ್ರೈವ್ ಅವಾರ್ಡ್ ಗಳಲ್ಲಿ ಮೆಸ್ಟ್ರೊ, ವರ್ಷದ ಸ್ಕೂಟರ್ ಎಂಬ ಪ್ರಷಸ್ತಿಯನ್ನು ಪಡೆದಿತ್ತು.(1)
ಇದು ಒದಗಿಸುವ ಆರಾಮದಾಯಕ ರೈಡ್, ಯು.ಎಸ್.ಬಿ 3.0 ಚಾರ್ಜಿಂಗ್ ಪೋರ್ಟ್ ನಂತಹ ನವೀನ ವೈಶಿಷ್ಟ್ಯ ಗಳಿಂದಾಗಿ ವಿಮರ್ಷಕರು ಇದನ್ನು ಬಹಳವಾಗಿ ಹೊಗಳಿದ್ದರು.
ಸರಕಾರಗಳ ನಿಯಮಗಳನ್ನು ಪಾಲಿಸುತ್ತಾ, ಎಮಿಷನ್ ಗಳನ್ನು ಕಡಿಮೆ ಮಾಡಲು, ಹೀರೋ, BS-VI ಗೆ ಒಗ್ಗುವ ಮೆಸ್ಟ್ರೊ ಎಡ್ಜ್ 125 ಅನ್ನು ಲಾಂಚ್ ಮಾಡಿತು.
2017 ರಲ್ಲಿ, ಭಾರತದ ಅತೀ ಜನಪ್ರಿಯ ಸ್ಕೂಟರ್ ಗಳ ವಿಷಯ ಬಂದಾಗ ಹೀರೋ ಮೆಸ್ಟ್ರೊ ಮೂರನೇ ಸ್ಥಾನವನ್ನು ಪಡೆದಿತ್ತು. ಅದೇ ವರ್ಷದ ಜುಲೈ ನಲ್ಲಿ, ಹೀರೋ 40,000 ಕ್ಕಿಂತಲೂ ಹೆಚ್ಚು ಬೈಕುಗಳನ್ನು ಮಾರಾಟ ಮಾಡಿ, ಮಾರುಕಟ್ಟೆಯಲ್ಲಿ ತನ್ನ ಉನ್ನತ ಸ್ಥಾನವನ್ನು ಭದ್ರಪಡಿಸಿತ್ತು. (2)
ಆದ್ದರಿಂದ, ಅದರ ಹೆಸರಿನ ಎದುರು ಇಷ್ಟೊಂದು ಪ್ರಶಸ್ತಿಗಳು ಹಾಗೂ ಹೆಗ್ಗಳಿಕೆಗಳೊಂದಿಗೆ, ಕೈಗೆಟಕುವ ದರ ಹಾಗೂ ಅದ್ಭುತ ಸಾಮಾರ್ಥ್ಯದ ವಿಷಯ ಬಂದಾಗ ಮೆಸ್ಟ್ರೊ ಅತ್ಯುತ್ತಮ ಸ್ಕೂಟರ್ ಗಳಲ್ಲಿ ಒಂದಾಗಿದೆ.
ಆದರೆ, ಭಾರತೀಯ ರಸ್ತೆಗಳಲ್ಲಿ ಓಡಾಡುವ ಯಾವುದೇ ಇತರ ಟು ವೀಲರ್ ಗಳಂತೆಯೇ, ಮೆಸ್ಟ್ರೊ ಅಪಘಾತ, ಕಳ್ಳತನ ಹಾಗೂ ಇತರ ಹಾನಿಗಳಂತಹ ಅಪಾಯಗಳಿಗೆ ತುತ್ತಾಗುವ ಸಂಭವವಿರುತ್ತದೆ.
ಹೀಗಾಗಿ, ನೀವು ಹೀರೋ ಮೆಸ್ಟ್ರೊ ಅನ್ನು ಖರೀದಿಸಿದರೆ, ನಿಮ್ಮ ಬಳಿ ಅಪಘಾತಗಳ ವಿರುದ್ಧ ಸಮರ್ಪಕವಾದ ಸಂರಕ್ಷಣೆಯುರುವುದನ್ನು ಖಚಿತಗೊಳಿಸಿ. ಇದನ್ನು ಮಾಡುವ ಅತ್ಯುತ್ತಮ ವಿಧಾನವೆಂದರೆ ಈ ಸ್ಕೂಟರ್ ಖರೀದಿಯ ವೇಳೆಗೆ ಮೆಸ್ಟ್ರೊ ಇನ್ಶೂರೆನ್ಸ್ ಅನ್ನು ಖರೀದಿಸುವುದು.
ಆದರೆ, ನೀವು ಪಾಲಿಸಿಯನ್ನು ಖರೀದಿಸುವ ಮೊದಲು, ನೀವು ದೇಶದಲ್ಲಿಯ ಇನ್ಶೂರೆನ್ಸ್ ಪ್ರೊವೈಡರ್ ಗಳ ಬಗ್ಗೆ ಅಗತ್ಯ ಸಂಶೋಧನೆಯನ್ನು ನಡೆಸಬೇಕು.
ಡಿಜಿಟ್, ಟು ವೀಲರ್ ವಾಹನ ಮಾಲೀಕರಿಗೆ ವಿವಿಧ ಇನ್ಶೂರೆನ್ಸ್ ಪಾಲಿಸಿಯನ್ನು ಒದಗಿಸುವಂತಹ ಇನ್ಶೂರೆನ್ಸ್ ಕಂಪನಿಯಾಗಿದೆ.