ಮಾರುತಿ ಸುಜುಕಿ ತನ್ನ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಪ್ರಯಾಣಿಕ ವಾಹನಗಳ ಶ್ರೇಣಿಯನ್ನು ನೀಡುತ್ತದೆ. ಆದಾಗ್ಯೂ, ಅವುಗಳಲ್ಲಿ ಯಾವುದೂ ಚಾಲಕರಲ್ಲಿ ಮಾರುತಿ ಸುಜುಕಿ ಆಲ್ಟೊ K10 ನಷ್ಟು ಜನಪ್ರಿಯವಾಗಿಲ್ಲ ಅಥವಾ ಹೆಚ್ಚು ಇಷ್ಟಪಡಲಾಗಲಿಲ್ಲ.
ಪ್ರಸ್ತುತ ಭಾರತದಲ್ಲಿ ಅತ್ಯಂತ ಮಿತವ್ಯಯದ ಕಾರುಗಳಲ್ಲಿ ಒಂದಾದ ಮಾರುತಿ ಡಿಸೆಂಬರ್ 2019 ರಲ್ಲಿ ಸುಮಾರು 15500 ಆಲ್ಟೊ K10 ಯುನಿಟ್ಗಳನ್ನು ಮಾರಾಟ ಮಾಡಿದೆ (1). ಈ ವಾಹನದ ಕೈಗೆಟಕುವ ಗುಣದ ಹೊರತಾಗಿ, ಪ್ರಭಾವಶಾಲಿ ನಿರ್ಮಾಣ ಗುಣಮಟ್ಟ ಮತ್ತು ಡ್ರೈವ್ ಸೌಕರ್ಯವು ಆಲ್ಟೊ K10 ಅನ್ನು ಆಯ್ಕೆ ಮಾಡಲು ಹೆಚ್ಚುವರಿ ಕಾರಣಗಳಾಗಿವೆ.
ನೀವು ಈ ಮಾಡೆಲ್ ಅನ್ನು ಖರೀದಿಸಲು ಯೋಜಿಸುತ್ತಿದ್ದರೆ, ನೀವು ಸೂಕ್ತವಾದ ಆಲ್ಟೊ K10 ಇನ್ಶೂರೆನ್ಸ್ ಪಾಲಿಸಿಯನ್ನು ತೆಗೆದುಕೊಳ್ಳುವ ಬಗ್ಗೆಯೂ ಯೋಚಿಸಲು ಪ್ರಾರಂಭಿಸಬೇಕು. ನಿಮ್ಮ ಕಾರನ್ನು ಒಳಗೊಂಡ ಅಪಘಾತಗಳಿಂದ ಉಂಟಾಗುವ ಅನಿರೀಕ್ಷಿತ ವೆಚ್ಚಗಳನ್ನು ತಡೆಗಟ್ಟಲು ಇಂತಹ ಪಾಲಿಸಿಯು ಅಪಾರವಾಗಿ ಸಹಾಯಕವಾಗಿರುತ್ತದೆ. ಈ ನಿಟ್ಟಿನಲ್ಲಿ, ನೀವು ಥರ್ಡ್-ಪಾರ್ಟಿ ಲಯಬಿಲಿಟಿ ಅಥವಾ ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆ ಮಾಡಬಹುದು.
1988 ರ ಮೋಟಾರ್ ವೆಹಿಕಲ್ ಆಕ್ಟ್ ಪ್ರಕಾರ ಭಾರತೀಯ ರಸ್ತೆಗಳಲ್ಲಿ ಸಂಚರಿಸುವ ಎಲ್ಲಾ ಮೋಟಾರು ವಾಹನಗಳಿಗೆ ಥರ್ಡ್-ಪಾರ್ಟಿ ಇನ್ಶೂರೆನ್ಸ್ ಪಾಲಿಸಿ ಕಡ್ಡಾಯವಾಗಿದೆ. ಈ ನಿಯಮವನ್ನು ಅನುಸರಿಸಲು ವಿಫಲವಾದರೆ ರೂ.2000 (ಪುನರಾವರ್ತಿತ ಅಪರಾಧಗಳಿಗೆ ರೂ. 4000) ರಷ್ಟು ಭಾರಿ ದಂಡ ಅಥವಾ ಪೆನಲ್ಟಿಯನ್ನು ವಿಧಿಸಲಾಗಬಹುದು.
ಈ ಥರ್ಡ್-ಪಾರ್ಟಿ ಲಯಬಿಲಿಟಿಯ ಕಾರ್ ಇನ್ಶೂರೆನ್ಸ್ ಪಾಲಿಸಿಯು ನಿಮ್ಮ ಕಾರನ್ನು ಒಳಗೊಂಡ ಅಪಘಾತಗಳ ಕಾರಣದಿಂದಾಗಿ ಥರ್ಡ್-ಪಾರ್ಟಿ ವಾಹನ, ಆಸ್ತಿ ಅಥವಾ ವ್ಯಕ್ತಿಗೆ ಉಂಟಾಗುವ ಹಾನಿಗಳಿಂದ ಉಂಟಾಗುವ ಹಣಕಾಸಿನ ಲಯಬಿಲಿಟಿಗಳನ್ನು ಕವರ್ ಮಾಡುತ್ತದೆ. ಆದಾಗ್ಯೂ, ಅಪಘಾತದಲ್ಲಿ ನಿಮ್ಮ ಸ್ವಂತ ವಾಹನಕ್ಕೆ ಉಂಟಾದ ಹಾನಿಗಳನ್ನು ಸರಿಪಡಿಸಲು ಈ ಪಾಲಿಸಿಗಳು ಯಾವುದೇ ಹಣಕಾಸಿನ ಪರಿಹಾರವನ್ನು ನೀಡುವುದಿಲ್ಲ.
ಇದಕ್ಕಾಗಿಯೇ ಒಂದು ಕಾಂಪ್ರೆಹೆನ್ಸಿವ್ ಆಲ್ಟೊ K10 ಇನ್ಶೂರೆನ್ಸ್ ಪಾಲಿಸಿಯು ಯಾವಾಗಲೂ ಒಂದು ಉತ್ತಮ ಪರ್ಯಾಯವಾಗಿರುತ್ತದೆ. ಇಲ್ಲಿ, ನೀವು ಥರ್ಡ್-ಪಾರ್ಟಿ ಲಯಬಿಲಿಟಿಯೊಂದಿಗೆ ಸ್ವಂತ ಹಾನಿಯನ್ನು ಕ್ಲೈಮ್ ಮಾಡಬಹುದು ಮತ್ತು ನಿಮ್ಮ ವಾಹನಗಳಿಗೆ ಉತ್ತಮ ಸಂಪೂರ್ಣ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಬಹುದು.
ಆದಾಗ್ಯೂ, ಪಾಲಿಸಿ ಖರೀದಿಯೊಂದಿಗೆ ಮುಂದುವರಿಯುವ ಮೊದಲು, ನಿಮ್ಮ ಅಗತ್ಯಗಳಿಗೆ ಯಾವ ಪೂರೈಕೆದಾರರು ಸೂಕ್ತವೆಂದು ನೀವು ನಿರ್ಧರಿಸಬೇಕು. ನೀವೇ ನೋಡಿ!