ಇನ್ಶೂರರ್ ರನ್ನು ಆಯ್ಕೆಮಾಡುವ ಮೊದಲು, ಟಾಟಾ ಆಲ್ಟ್ರೋಜ್ ಕಾರ್ ಇನ್ಶೂರೆನ್ಸ್ ಬೆಲೆಯ ಹೊರತಾಗಿ ನೀವು ಪರಿಗಣಿಸಬೇಕಾದ ಹಲವು ಅಂಶಗಳಿವೆ. ಡಿಜಿಟ್ ಹಲವಾರು ಪ್ರಯೋಜನಗಳನ್ನು ನೀಡುತ್ತದ್ದು, ಅದು ಟಾಟಾ ಕಾರ್ ಮಾಲೀಕರಿಗೆ ಸೂಕ್ತವಾದ ಆಯ್ಕೆಯಾಗಿದೆ.
● ಇನ್ಶೂರೆನ್ಸ್ ಪಾಲಿಸಿ ಆಯ್ಕೆಗಳು - ಡಿಜಿಟ್ ಆಯ್ಕೆ ಮಾಡಲು ಥರ್ಡ್ ಪಾರ್ಟಿ ಲಯಬಿಲಿಟಿ ಪಾಲಿಸಿ ಮತ್ತು ಕಾಂಪ್ರೆಹೆನ್ಸಿವ್ ಪಾಲಿಸಿ ಎಂಬ ಎರಡು ವಿಭಿನ್ನ ಇನ್ಶೂರೆನ್ಸ್ ಪಾಲಿಸಿಗಳನ್ನು ನೀಡುತ್ತದೆ. ಆದ್ದರಿಂದ, ನೀವು ನಿಮಗೆ ಸೂಕ್ತವೆಂದು ಭಾವಿಸುವುದನ್ನು ಆಯ್ಕೆ ಮಾಡಲು ನಿಮಗೆ ಸ್ವಾತಂತ್ರ್ಯವಿದೆ.
● ಸರಳ ಆನ್ಲೈನ್ ಪ್ರೊಸೀಜರ್ - ನಿಮ್ಮ ಆಲ್ಟ್ರೋಜ್ ಇನ್ಶೂರೆನ್ಸ್ ಅನ್ನು ಖರೀದಿಸಲು ಮತ್ತು ಕ್ಲೈಮ್ ಮಾಡಲು ಡಿಜಿಟ್ ಸರಳವಾದ ಆನ್ಲೈನ್ ಪ್ರೊಸೀಜರ್ ಅನ್ನು ಒದಗಿಸುತ್ತದೆ. ಪಾಲಿಸಿಯನ್ನು ಆಯ್ಕೆ ಮಾಡಲು ಮತ್ತು ನಿಮ್ಮ ಕ್ಲೈಮ್ ಡಾಕ್ಯುಮೆಂಟ್ಗಳನ್ನು ನೇರವಾಗಿ ನಿಮ್ಮ ಸ್ಮಾರ್ಟ್ಫೋನ್ನಿಂದಲೇ ಅಪ್ಲೋಡ್ ಮಾಡಲು ಇದು ಬಳಕೆದಾರ ಸ್ನೇಹಿ ಇಂಟರ್ಫೇಸ್ ಅನ್ನು ಒದಗಿಸುತ್ತದೆ.
● ಅತ್ಯುತ್ತಮ ಪಾರದರ್ಶಕ ನಿಲುವು - ನೀವು ಅದರ ವೆಬ್ಸೈಟ್ನಲ್ಲಿ ಇನ್ಶೂರೆನ್ಸ್ ಪಾಲಿಸಿಗಳನ್ನು ಬ್ರೌಸ್ ಮಾಡುವಾಗ ಡಿಜಿಟ್ ಇನ್ಶೂರೆನ್ಸ್ ಅತ್ಯುತ್ತಮವಾದ ಪಾರದರ್ಶಕತೆಯನ್ನು ಒದಗಿಸುತ್ತದೆ. ಈ ರೀತಿಯಲ್ಲಿ, ನೀವು ಆಯ್ಕೆ ಮಾಡಿದ ಪಾಲಿಸಿಗೆ ನಿರ್ದಿಷ್ಟವಾಗಿ ಪಾವತಿಸುತ್ತೀರಿ. ಪ್ರತಿಯಾಗಿ, ನೀವು ಪಾವತಿಸಿದ್ದಕ್ಕೆ ಕವರೇಜ್ ಅನ್ನು ಪಡೆಯುತ್ತೀರಿ.
● ತ್ವರಿತ ಕ್ಲೈಮ್ ಸೆಟಲ್ಮೆಂಟ್ - ಡಿಜಿಟ್ ಸರಳ ಮತ್ತು ತ್ವರಿತ ಕ್ಲೈಮ್ ಸೆಟಲ್ಮೆಂಟ್ ಸೇವೆಗಳನ್ನು ಒದಗಿಸುತ್ತದೆ. ಇಲ್ಲಿ, ಡಿಜಿಟ್ನ ಸ್ಮಾರ್ಟ್ಫೋನ್-ಎನೇಬಲ್ಡ್ ಸ್ವಯಂ-ತಪಾಸಣೆಯೊಂದಿಗೆ ನಿಮ್ಮ ಕ್ಲೈಮ್ ಅನ್ನು ನೀವು ತಕ್ಷಣವೇ ಇತ್ಯರ್ಥಪಡಿಸಬಹುದು.
● ಪಿಕ್-ಅಪ್ ಮತ್ತು ಡ್ರಾಪ್ ಸೌಲಭ್ಯಗಳು - ಹೆಚ್ಚುವರಿಯಾಗಿ, ಡಿಜಿಟ್ ಇನ್ಶೂರೆನ್ಸ್ ನ ಗ್ಯಾರೇಜ್ಗಳು ನೀವು ಎಂದಾದರೂ ಅಪಘಾತದಲ್ಲಿ ಸಿಲುಕಿಕೊಂಡರೆ ಡ್ಯಾಮೇಜ್ ದುರಸ್ತಿಗಾಗಿ ಮನೆ ಬಾಗಿಲಿಗೆ ಪಿಕ್-ಅಪ್ ಮತ್ತು ಡ್ರಾಪ್ ಸೌಲಭ್ಯಗಳನ್ನು ನೀಡುತ್ತವೆ.
● ಐಡಿವಿ ಕಸ್ಟಮೈಸೇಷನ್ - ಆಲ್ಟ್ರೋಜ್ ನಂತಹ ಟಾಟಾ ಕಾರುಗಳ ಐಡಿವಿ ಅನ್ನು ಬದಲಾಯಿಸಲು ಡಿಜಿಟ್ ನಿಮಗೆ ಅನುಮತಿಸುತ್ತದೆ. ನಿಮ್ಮ ಕಾರು ಸರಿಪಡಿಸಲಾಗದ ಡ್ಯಾಮೇಜ್ ಗೆ ಒಳಗಾಗಿದ್ದಾಗ, ಹೆಚ್ಚಿನ ಐಡಿವಿ ಇದ್ದರೆ ಕಡಿಮೆ ಐಡಿವಿಗಿಂತ ಜಾಸ್ತಿ ಹಣಕಾಸಿನ ಕವರೇಜ್ ಅನ್ನು ಒದಗಿಸುತ್ತದೆ. ಆದಾಗ್ಯೂ, ಕಡಿಮೆ ಐಡಿವಿ ಇದ್ದರೆ ನೀವು ಕಡಿಮೆ ಪಾಲಿಸಿ ಪ್ರೀಮಿಯಂ ಪಾವತಿಸಬಹುದು. ಆದ್ದರಿಂದ, ನೀವು ಕಡಿಮೆ ಐಡಿವಿಗೆ ಹೋಗುವ ಮೂಲಕ ನಿಮ್ಮ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಕಡಿಮೆ ಮಾಡಬಹುದು.
● ಬಹು ಆ್ಯಡ್-ಆನ್ ಕವರ್ಗಳು - ಡಿಜಿಟ್ ಇನ್ಶೂರೆನ್ಸ್ ಹಲವಾರು ಅನುಕೂಲಕರ ಆ್ಯಡ್-ಆನ್ ಪಾಲಿಸಿಗಳನ್ನು ಸಹ ಒದಗಿಸುತ್ತದೆ.
● ವಿಸ್ತಾರವಾದ ಗ್ಯಾರೇಜ್ ನೆಟ್ವರ್ಕ್ - ಡಿಜಿಟ್ ದೇಶಾದ್ಯಂತ 5800ಕ್ಕೂ ಹೆಚ್ಚು ಗ್ಯಾರೇಜ್ಗಳ ವಿಸ್ತಾರವಾದ ನೆಟ್ವರ್ಕ್ನೊಂದಿಗೆ ಟೈ-ಅಪ್ಗಳನ್ನು ಹೊಂದಿದೆ. ಪರಿಣಾಮವಾಗಿ, ನೀವು ಯಾವಾಗಲಾದರೂ ಅಪಘಾತದಲ್ಲಿ ಸಿಲುಕಿಕೊಂಡರೆ ನಿಮ್ಮ ಟಾಟಾ ಆಲ್ಟ್ರೋಜ್ ಗೆ ಕ್ಯಾಶ್ಲೆಸ್ ರಿಪೇರಿ ನೀಡುವ ಅಧಿಕೃತ ಗ್ಯಾರೇಜ್ ಅನ್ನು ನೀವು ಯಾವಾಗಲೂ ನಿಮ್ಮ ಹತ್ತಿರದಲ್ಲಿಯೇ ಕಾಣುತ್ತೀರಿ.
● ಸ್ಪಂದನಾಶೀಲ ಗ್ರಾಹಕ ಸೇವೆ - ನಿಮ್ಮ ಟಾಟಾ ಆಲ್ಟ್ರೋಜ್ ಕಾರ್ ಇನ್ಶೂರೆನ್ಸ್ ಜೊತೆಗೆ 24x7 ಸಹಾಯವನ್ನು ಒದಗಿಸಲು ಸದಾ ಕ್ರಿಯಾಶೀಲವಾದ ಸ್ಪಂದನಾಶೀಲ ಗ್ರಾಹಕ ಸೇವಾ ತಂಡದೊಂದಿಗೆ ಡಿಜಿಟಲ್ ಇನ್ಶೂರೆನ್ಸ್ ಕಾರ್ಯನಿರ್ವಹಿಸುತ್ತದೆ.
ಹೆಚ್ಚುವರಿಯಾಗಿ, ಹೆಚ್ಚಿನ ಡಿಡಕ್ಟಿಬಲ್ ಆರಿಸುವ ಮತ್ತು ಸಣ್ಣ ಕ್ಲೈಮ್ಗಳನ್ನು ತಪ್ಪಿಸುವ ಮೂಲಕ ನಿಮ್ಮ ಪ್ರೀಮಿಯಂ ಅನ್ನು ಕಡಿಮೆ ಮಾಡಲು ಡಿಜಿಟ್ ಇನ್ಶೂರೆನ್ಸ್ ನಿಮಗೆ ಅನುಮತಿಸುತ್ತದೆ. ಆದಾಗ್ಯೂ, ಕಡಿಮೆ ಪ್ರೀಮಿಯಂ ಪಾವತಿಸಲು ಹೋಗುವ ಮೂಲಕ ಹಲವು ಆಕರ್ಷಕ ಪ್ರಯೋಜನಗಳನ್ನು ಕಳೆದುಕೊಳ್ಳುವುದು ಬುದ್ಧಿವಂತ ನಡೆಯಲ್ಲ.
ಆದ್ದರಿಂದ, ನಿಮ್ಮ ಟಾಟಾ ಆಲ್ಟ್ರೊಜ್ ಕಾರು ಇನ್ಶೂರೆನ್ಸ್ ಕುರಿತು ಹೆಚ್ಚಿನ ಸ್ಪಷ್ಟತೆಯನ್ನು ಪಡೆಯಲು ಡಿಜಿಟ್ನಂತಹ ಜವಾಬ್ದಾರಿಯುತ ಇನ್ಶೂರೆನ್ಸ್ ಪೂರೈಕೆದಾರರನ್ನು ಸಂಪರ್ಕಿಸುವುದನ್ನು ಪರಿಗಣಿಸಿ.