2019ರಲ್ಲಿ ಬಿಡುಗಡೆಯಾದ ಟಾಟಾ ಹ್ಯಾರಿಯರ್ ಐದು ಆಸನಗಳ ಕಾಂಪ್ಯಾಕ್ಟ್ ಎಸ್ಯುವಿ ಆಗಿದ್ದು, ಅದನ್ನು ಭಾರತದ ಪ್ರಮುಖ ಆಟೋಮೊಬೈಲ್ ತಯಾರಕ ಟಾಟಾ ಮೋಟಾರ್ಸ್ ನಮಗೆ ಪರಿಚಯಿಸಿದೆ. ಇದು ಆಟೋ ಎಕ್ಸ್ಪೋ 2018ರಲ್ಲಿ ಪ್ರದರ್ಶನಗೊಂಡ ತಕ್ಷಣದಿಂದಲೇ ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ಜನಪ್ರಿಯವಾಗಿರುವ ಮತ್ತು ವಿಶ್ವಾಸಾರ್ಹವಾದ ಟಾಟಾ ಮೋಟರ್ನ ಹುಮ್ಮಸ್ಸನ್ನು ಮತ್ತಷ್ಟು ಹೆಚ್ಚಿಸಿದೆ. 'ವಿನ್ಯಾಸ, ಕಾರ್ಯಕ್ಷಮತೆ ಮತ್ತು ಹೆಚ್ಚಿನವುಗಳ ಪರಿಪೂರ್ಣ ಸಂಯೋಜನೆ' ಎಂದು ಬ್ರಾಂಡ್ ಆಗಿರುವ ಈ ಹ್ಯಾರಿಯರ್ ಅಪೂರ್ವ ಉತ್ಪನ್ನವಾಗಿದೆ. #ಎಲ್ಲಕ್ಕಿಂತಮಿಗಿಲು ಎಂಬ ಅನಾವರಣ ಸಮಯದ ಮಾತಿಗೆ ಇದು ಬದ್ಧವಾಗಿದೆ. ಹ್ಯಾರಿಯರ್ ನ ಟಾಟಾ ಬಜರ್ಡ್ ಸ್ಪೋರ್ಟ್ ಕೂಡ ಬಂದಿದ್ದು, ಪ್ರೋ-ಸ್ಪೋರ್ಟ್ ಸ್ಟೇಟಸ್ ಹೊಂದಿದೆ. ಅದರಿಂದಲೇ ಟಾಟಾ ಹ್ಯಾರಿಯರ್ 2019ರ ಇಂಡಿಯನ್ ಪ್ರೀಮಿಯಂ ಲೀಗ್ಗೆ (ಐಪಿಎಲ್) ಅಧಿಕೃತ ಪಾಲುದಾರನಾಗಿತ್ತು. ಅದು ಬಿಸಿಸಿಐ ಜೊತೆಗಿನ ಅದರ ಎರಡನೇ ವರ್ಷದ ಸಹಭಾಗಿತ್ವವಾಗಿತ್ತು. ಟಾಟಾ ಹ್ಯಾರಿಯರ್ ಪ್ರತಿ ಐಪಿಎಲ್ ಪಂದ್ಯದಲ್ಲೂ ತನ್ನ ಗ್ಲಾಮರ್ ಮತ್ತು ಟ್ರೆಂಡಿ ವಿನ್ಯಾಸವನ್ನು ಪ್ರದರ್ಶಿಸುತ್ತದೆ.
ನೀವು ಟಾಟಾ ಹ್ಯಾರಿಯರ್ ಅನ್ನು ಏಕೆ ಖರೀದಿಸಬೇಕು?
ಐದು-ಬಾಗಿಲುಳ್ಳ ಈ ಕಾಂಪ್ಯಾಕ್ಟ್ ಎಸ್ಯುವಿ ಚಿಂತನಾಶೀಲತೆಯಿಂದ ರೂಪುಗೊಂಡಿದೆ. ಲಾಂಗ್ ಡ್ರೈವ್ಗಳಿಗೆ ಮತ್ತು ಸಿಟಿ ಡ್ರೈವ್ಗಳಿಗೆ ಆರಾಮದಾಯಕವಾಗಿದೆ. ಇದು ಸಬ್ಕಾಂಪ್ಯಾಕ್ಟ್ ಟಾಟಾ ನೆಕ್ಸಾನ್ ಮತ್ತು ಮಿಡ್-ಸೆಗ್ಮೆಂಟ್ ಟಾಟಾ ಹೆಕ್ಸಾ ನಡುವೆ ಇರುವ ಕಾರ್ ಆಗಿದೆ. ಭಾರತೀಯ ಗ್ರಾಹಕರಿಗೆ ರೂ.13.02- 16.87ಲಕ್ಷಗಳ ನಡುವಿನ ಬೆಲೆಯಲ್ಲಿ ದೊರಕುತ್ತಿದ್ದು, ಇದು ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ನ ಆಟವನ್ನೇ ಬದಲಾಯಿಸಿತು. ಅದರ ಅಭಿರುಚಿಯುಕ್ತ ಮತ್ತು ಪ್ರೀಮಿಯಂ ಆಗಿರುವ ಇಂಟೀರಿಯರ್ ಸೂಪರ್ ಆದ ರೈಡ್ ಸೌಕರ್ಯ ಒದಗಿಸುವುದರೊಂದಿಗೆ, ಎಲ್ಲರನ್ನೂ ಬೆರಗುಗೊಳಿಸುತ್ತದೆ. 7 ಉಬರ್ ಬಣ್ಣಗಳಲ್ಲಿ ಲಭ್ಯವಿದೆ ಮತ್ತು ಲ್ಯಾಂಡ್ ರೋವರ್ನ ಲೆಜೆಂಡರಿ ಡಿ8 ಪ್ಲಾಟ್ಫಾರ್ಮ್ನಿಂದ ಪಡೆಯಲಾಗಿರುವ ಅತ್ಯುತ್ತಮವಾದ ಮಾಡ್ಯುಲರ್ ಎಫಿಷಿಯೆಂಟ್ ಜಾಗತಿಕ ಸುಧಾರಿತ ಆರ್ಕಿಟೆಕ್ಚರ್ ನಿಂದ ರೂಪುಗೊಳಿಸಲಾಗಿದೆ. ಹ್ಯಾರಿಯರ್ ನಿಜಕ್ಕೂ ಸಂತೋಷಕರವಾದ ಕಾರ್ ಆಗಿದೆ.
ಅತ್ಯಾಧುನಿಕ ಕ್ರಯೋಟೆಕ್ 2.0ಲೀ ಡೀಸೆಲ್ ಎಂಜಿನ್ ಹೊಂದಿದ್ದು, ಒರಟಾದ ಮತ್ತು ಕಷ್ಟಕರವಾದ ಭೂಪ್ರದೇಶಗಳನ್ನು ಅತ್ಯಂತ ಸುಲಭವಾಗಿ ದಾಟಬಲ್ಲ ಸಾಮರ್ಥ್ಯ ಹೊಂದಿದೆ. ಇದು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ಇಎಸ್ಪಿ), ಟೆರೇನ್ ರೆಸ್ಪಾನ್ಸ್ ಮೋಡ್, ಕ್ರೂಸ್ ಕಂಟ್ರೋಲ್ ಜೊತೆಗೆ 6 ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್ ಮಿಷನ್ನೊಂದಿಗೆ ಬರುತ್ತದೆ. ಎಆರ್ಎಐ ಪ್ರಕಾರ ಟಾಟಾ ಹ್ಯಾರಿಯರ್ ಡೀಸೆಲ್ ಮೈಲೇಜ್ 17 ಕೆಎಂಪಿಎಲ್ ಆಗಿದೆ. ರೈನ್ ಸೆನ್ಸಿಂಗ್ ವೈಪರ್ಗಳು, ಲ್ಯಾಪ್ಟಾಪ್ ಟ್ರೇ ಹೊಂದಿರುವ ಗ್ಲೋವ್ಬಾಕ್ಸ್, ಎಚ್ಚರಿಕೆಯಿಂದ ಇರಿಸಲಾದ 28 ಯುಟಿಲಿಟಿ ಸ್ಪೇಸ್ಗಳು, ಹೊಂದಾಣಿಕೆ ಮಾಡಬಹುದಾದ ಸ್ಟೀರಿಂಗ್ ವೀಲ್, ಪಿಇಪಿಎಸ್, ವಿದ್ಯುನ್ಮಾನವಾಗಿ ಕಾರ್ಯನಿರ್ವಹಿಸುವ ಮಿರರ್ ಗಳು, ಹಿಂಭಾಗದ ಏಸಿ ವೆಂಟ್ಗಳು, ಸ್ವಯಂಚಾಲಿತ ಹೆಡ್ಲ್ಯಾಂಪ್ಗಳು, ಎಚ್ವಿಎಸಿ ಜೊತೆಗೆ ಎಫ್ಎಟಿಸಿ, ಸ್ಟೋರೇಜ್ ಜೊತೆಗೇ ಆರ್ಮ್ರೆಸ್ಟ್ ಇವೆಲ್ಲವೂ ಈ ಕಾರಿನ ಐಷಾರಾಮಿ ಆರಾಮದಾಯಕ ವೈಶಿಷ್ಟ್ಯಗಳು ಈ ಸೆಗ್ಮೆಂಟಿನಲ್ಲಿ ಕಂಡುಬರುವುದಿಲ್ಲ.
ಇರಲಿ, ಕುತೂಹಲಕರ ವಿಚಾರವೆಂದರೆ ಆರಾಮವಾಗಿ ಯಾವುದೇ ರಾಜಿ ಇಲ್ಲದೆ ರಸ್ತೆಯ ಮೇಲೆ ದೃಢವಾದ, ಗಟ್ಟಿಯಾದ ಮತ್ತು ಶಕ್ತಿಯುತ ಕಾರ್ ಅನ್ನು ಓಡಿಸಲು ಇಷ್ಟಪಡುವ ಎಲ್ಲಾ ವಯಸ್ಸಿನ ಗುಂಪುಗಳ ಖರೀದಿದಾರರನ್ನು ಇದು ಆಕರ್ಷಿಸುತ್ತದೆ. ಲ್ಯಾಂಡ್ ರೋವರ್ ಸಮಾನವಾದ ಕಾರನ್ನು ಯಾರು ಇಷ್ಟಪಡುವುದಿಲ್ಲ, ಅಲ್ವೇ?