ಕಾರ್ ಇನ್ಶೂರೆನ್ಸ್ ಪಾಲಿಸಿ ಕುರಿತ ನಿಮ್ಮ ನಿರ್ಧಾರವು ಕಾನೂನು ಕಾರಣಕ್ಕೆ ಮಾತ್ರ ಖರೀದಿಸುವ ಅಥವಾ ರಿನೀವ್ ಮಾಡುವುದಕ್ಕಿಂತ ಹೆಚ್ಚಿನ ಉದ್ದೇಶವನ್ನು ಹೊಂದಿರಬೇಕು.
ನಿಮ್ಮ ಟಾಟಾ ಟಿಯಾಗೊಗೆ ನೀವು ಯಾರಿಂದ ಇನ್ಶೂರೆನ್ಸ್ ಪಾಲಿಸಿ ಪಡೆಯಲು ಬಯಸುತ್ತೀರೋ ಆ ಇನ್ಶೂರರ್ನ ವಿಶ್ವಾಸಾರ್ಹತೆಯನ್ನು ಪರಿಗಣಿಸಲು ನೀವು ಬಯಸಬಹುದು.
ಹಾಗೆ ಮಾಡುವ ಮೂಲಕ, ನೀವು ಥರ್ಡ್-ಪಾರ್ಟಿ ಲಯಬಿಲಿಟಿ ಪಾಲಿಸಿ ಅಥವಾ ಟಾಟಾ ಟಿಯಾಗೊ ಬಂಪರ್ ಟು ಬಂಪರ್ ಇನ್ಶೂರೆನ್ಸ್ ಪಾಲಿಸಿ ಯಾವುದಕ್ಕೆ ಹೋದರೂ, ಅದರಿಂದ ಪಡೆಯಬಹುದಾದ ಪ್ರಯೋಜನಗಳನ್ನು ಹೆಚ್ಚಿಸಬಹುದು ಎಂಬುದನ್ನು ಖಚಿತಪಡಿಸಿಕೊಳ್ಳುವುದು ಅರ್ಥಪೂರ್ಣವಾಗಿದೆ.
ಡಿಜಿಟ್ನಂಥ ಪ್ರತಿಷ್ಟಿತ ಇನ್ಸೂರೆನ್ಸ್ ಕಂಪನಿಯೊಂದಿಗೆ, ನಿಮ್ಮ ಟಿಯಾಗೊಗೆ ಇನ್ಶೂರೆನ್ಸ್ ಪಾಲಿಸಿ ಖರೀದಿಸುವುದರ ಅಥವಾ ರಿನೀವಲ್ ಮಾಡುವುದರ ಮೂಲಕ ನೀವು ಅನುಕೂಲಕರ ಸ್ಥಾನವನ್ನು ಆರಿಸಿಕೊಳ್ಳುತ್ತಿದ್ದೀರಿ ಎಂಬುದನ್ನು ನೀವು ಖಚಿತಪಡಿಸಿಕೊಳ್ಳಬಹುದು.
ಇಲ್ಲಿ ಟಾಟಾ ಟಿಯಾಗೊ ಇನ್ಶೂರೆನ್ಸ್ ಪಾಲಿಸಿಯ ಕೆಲವು ವೈಶಿಷ್ಟ್ಯಗಳಿವೆ, ಅವುಗಳು ಅದರ ಪ್ರತಿಸ್ಪರ್ಧಿಗಳ ನಡುವೆ ಸ್ಟಾಂಡ್ ಔಟ್ ಆಗಿ ನಿಲ್ಲುವಂತೆ ಮಾಡಿವೆ:
- ಔಟ್-ಆ್ಯಂಡ್-ಔಟ್ ಡಿಜಿಟಲ್ ಪ್ರೊಸೆಸ್ - ಈ ಡಿಜಿಟಲ್ ಯುಗದಲ್ಲಿ ಕ್ಲೈಮ್ಗಳನ್ನು ರೈಸ್ ಮಾಡಲು ರೆಡ್ ಟೇಪ್ಗಳು ಅಡ್ಡಿಯಾಗಬಾರದು. ಆದ್ದರಿಂದ, ಡಿಜಿಟ್ನೊಂದಿಗೆ, ಸುಲಭವಾಗಿ ಸೆಟಲ್ ಮಾಡುವ ಸಲುವಾಗಿ ಕ್ಲೈಮ್ ರೈಸ್ ಮಾಡಲು ಸಂಪೂರ್ಣ ಡಿಜಿಟೈಸ್ಡ್ ಮತ್ತು ಆನ್ಲೈನ್ ಪ್ರೊಸೆಸ್ ಅನ್ನು ನೀವು ಎಂಜಾಯ್ ಮಾಡಬಹುದು. ಒಂದು ವೇಳೆ ನಿಮ್ಮ ಟಿಯಾಗೊ ಜೊತೆ ಅಫಘಾತದಲ್ಲಿ ಒಳಗೊಂಡರೆ ಮತ್ತು ಕಾರು ಗಣನೀಯ ಪ್ರಮಾಣದ ಡ್ಯಾಮಜ್ಗಳಿಗೆ ಒಳಗಾದರೆ. ನೀವು ಡಿಜಿಟ್ನಲ್ಲಿ ಕಾಂಪ್ರೆಹೆನ್ಸಿವ್ ಟಿಯಾಗೊ ಇನ್ಶೂರೆನ್ಸ್ ಪಾಲಿಸಿ ಪಡೆದಿದ್ದರೆ, ನಿಮ್ಮ ಕ್ಲೈಮ್ ರೈಸ್ ಮಾಡಲು ನಿಮ್ಮ ಸ್ಮಾರ್ಟ್ಫೋನಿನಿಂದ ನೀವು ಆ ಡ್ಯಾಮೇಜ್ನ ಫೋಟೋ ಕ್ಲಿಕ್ ಮಾಡಿ ಮತ್ತು ತಪಾಸಣೆಗಾಗಿ ನಮಗೆ ಕಳುಹಿಸಿ. ಅದಾದ ಬಳಿಕ, ನಾವು ಡ್ಯಾಮೇಜ್ ಅನ್ನು ಪರಿಶೀಲಿಸುತ್ತೇವೆ, ತರುವಾಯ ಕ್ಲೈಮ್ ಸೆಟಲ್ ಮಾಡುತ್ತೇವೆ. ಕನಿಷ್ಠ ಶ್ರಮದೊಂದಿಗೆ ಇವೆಲ್ಲವೂ ಆನ್ಲೈನ್ ಮೂಲಕ ನಡೆಯುತ್ತದೆ.
- ಟೈಲರ್ಡ್ ಇನ್ಸೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ - ಡಿಜಿಟ್ನಲ್ಲಿ ನಿಮ್ಮ ಟಿಯಾಗೊ ಪಾಲಿಸಿಯ ಐಡಿವಿಯನ್ನು ಕಸ್ಟಮೈಸ್ ಮಾಡುವುದನ್ನು ಆಯ್ಕೆ ಮಾಡಬಹುದು. ಸಾಮಾನ್ಯವಾಗಿ, ಐಡಿವಿ ಕ್ಯಾಲ್ಕ್ಯುಲೇಟ್ ಮಾಡಲು ನಾವು ಮಾರಾಟಗಾರರು ಪಟ್ಟಿ ಮಾಡಿದ ಬೆಲೆಯಿಂದ ಅನ್ವಯವಾಗುವ ಡೆಪ್ರಿಸಿಯೇಷನ್ ಅನ್ನು ಡಿಡಕ್ಟ್ ಮಾಡುತ್ತೇವೆ - ನಿಮ್ಮ ಟಿಯಾಗೊ ಒಂದು ವೇಳೆ ಕಳ್ಳತನವಾದರೆ ಅಥವಾ ರಿಪೇರಿ ಮಾಡಲಾಗದ ಡ್ಯಾಮೇಜ್ ಆದ ಸಂದರ್ಭದಲ್ಲಿ ನಿಮ್ಮ ಪಾಲಿಸಿ ವಿರುದ್ಧ ನೀವು ಸ್ವೀಕರಿಸುವ ಅಮೌಂಟ್. ಒಂದು ವೇಳೆ ನೀವು ಅದಕ್ಕಿಂತ ಹೆಚ್ಚಿನ ಐಡಿವಿ ಪಡೆಯಲು ಬಯಸುವುದಾದರೆ, ಟಾಟಾ ಟಿಯಾಗೊ ಇನ್ಶೂರೆನ್ಸ್ ವೆಚ್ಚದಲ್ಲಿ ಸೂಕ್ಷ್ಮ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ಹಾಗೆ ಮಾಡಬಹುದು.
- ಸ್ವಿಫ್ಟ್ ಕ್ಲೈಮ್ ಸೆಟಲ್ಮೆಂಟ್ - ಅಪಘಾತಕ್ಕೆ ಒಳಗಾಗುವುದು ಅಥವಾ ಇನ್ನಿತರ ಕಾರಣಗಳಿಂದ ನಿಮ್ಮ ಟಿಯಾಗೊ ಡ್ಯಾಮೇಜ್ ಆಗುವುದು ಇತ್ಯಾದಿ ಇನಿರೀಕ್ಷಿತ ಘಟನೆಗಳು ನಡೆದಾಗ ಅವುಗಳನ್ನು ಎದುರಿಸುವುದು ಎಂಥ ಎದೆಗುಂದಿಸುವ ಸಂದರ್ಭ ಎಂದು ನಾವು ಅರ್ಥಮಾಡಿಕೊಳ್ಳಬಲ್ಲೆವು. ಆದ್ದರಿಂದ, ಆದಷ್ಟು ಬೇಗ ಶ್ರಮಪಟ್ಟು ನಿಮ್ಮ ಕ್ಲೈಮ್ ಸೆಟಲ್ ಮಾಡುವ ಮೂಲಕ ನಿಮ್ಮ ತೊಂದರೆಗಳನ್ನು ತ್ವರಿತವಾಗಿ ತಗ್ಗಿಸುವ ಭರವಸೆಯನ್ನು ನಾವು ಒದಗಿಸುತ್ತೇವೆ.
- ವ್ಯಾಪಕವಾಗಿ ಹರಡಿರುವ ನೆಟ್ವರ್ಕ್ ಗ್ಯಾರೇಜ್ಗಳ ಸರಣಿ - ಅಪಘಾತದ ರಿಪೇರಿಗಳಿಗೆ ಕ್ಯಾಶ್ ಕಡಿಮೆ ಇದೆಯೇ? ನೀವು ನಿಮ್ಮ ಡ್ಯಾಮೇಜ್ ಆಗಿರುವ ಟಿಯಾಗೊವನ್ನು ನಮ್ಮ 1400+ ನೆಟ್ವರ್ಕ್ ಗ್ಯಾರೇಜ್ಗಳಲ್ಲಿ ಯಾವುದಾದರೊಂದಕ್ಕೆ ತಂದು ಕ್ಯಾಶ್ಲೆಸ್ ರಿಪೇರಿಗಳನ್ನು ಪಡೆಯಬಹುದು. ನಮ್ಮ ನೆಟ್ವರ್ಕ್ ಗ್ಯಾರೇಜ್ಗಳ ವ್ಯಾಪಕವಾದ ಸರಣಿ ದೇಶದಾದ್ಯಂತ ಹರಡಿಕೊಂಡಿದೆ, ಹಾಗಾಗಿ ನೀವು ಎಮರ್ಜೆನ್ಸಿ ಸಂದರ್ಭಗಳಲ್ಲಿ ಅಸಿಸ್ಟೆನ್ಸ್ಗೆ ನಿಮ್ಮ ಪಕ್ಕದಲ್ಲೇ ಫ್ರೆಂಡ್ಲಿ ಗ್ಯಾರೇಜ್ ಅನ್ನು ಹೊಂದುತ್ತೀರಿ.
- ಆ್ಯಡ್-ಆನ್ ಗಳ ರೇಂಜ್ - ಡಿಜಿಟ್ನೊಂದಿಗೆ, ನೀವು ಆ್ಯಡ್-ಆನ್ಗಳನ್ನು ಹೊಂದುವುದರ ಮೂಲಕ ನಿಮ್ಮ ಇನ್ಶೂರೆನ್ಸ್ ಪಾಲಿಸಿಯನ್ನು ಪುಷ್ಟೀಕರಿಸಿಕೊಳ್ಳಬಹುದು. ಈ ಆ್ಯಡ್-ಆನ್ಗಳ ಮೂಲಕ ನಿಮ್ಮ ಟಿಯಾಗೊಗೆ ಪಾಲಿಸಿಯನ್ನು ಕಸ್ಟಮೈಸ್ ಮಾಡಬಹುದು ಮತ್ತು ಕೊಂಚು ಹೆಚ್ಚುವರಿ ಟಾಟಾ ಟಿಯಾಗೊ ಇನ್ಶೂರೆನ್ಸ್ ಬೆಲೆಗೆ ಸಮಗ್ರ ಆರ್ಥಿಕ ಕವರೇಜ್ ಹೊಂದಬಹುದು. ನಾವು 7 ಆ್ಯಡ್-ಆನ್ಗಳನ್ನು ಒದಗಿಸುತ್ತೇವೆ, ಅವುಗಳೆಂದರೆ ರಿಟರ್ನ್ ಟು ಇನ್ವಾಯ್ಸ್ ಕವರ್, ರೋಡ್ಸೈಡ್ ಅಸಿಸ್ಟೆನ್ಸ್ ಕವರ್, ಪ್ಯಾಸೆಂಜರ್ ಕವರ್, ಝೀರೋ ಡೆಪ್ರಿಸಿಯೇಷನ್ ಕವರ್, ಎಂಜಿನ್ ಮತ್ತು ಗೇರ್ಬಾಕ್ಸ್ ಪ್ರೊಟೆಕ್ಷನ್ ಕವರ್ ಇತ್ಯಾದಿ. ಉದಾಹರಣೆ ಕೊಡುವುದಾದರೆ, ನಿಮ್ಮ ಪಾಲಿಸಿಯಲ್ಲಿ ರೋಡ್ಸೈಡ್ ಅಸಿಸ್ಟೆನ್ಸ್ ಕವರ್ ಸೇರಿಸಿಕೊಂಡಿದ್ದರೆ, ನಿಮ್ಮ ಟಿಯಾಗೊ ರಸ್ತೆಮಧ್ಯದಲ್ಲಿ ಮೆಕ್ಯಾನಿಕಲ್ ಬ್ರೇಕ್ಡೌನ್ ಆಗಿ ಒದ್ದಾಡಬೇಕಾದ ಸಂದರ್ಭ ಎದುರಾದರೆ ನೆರವು ಒದಗುತ್ತದೆ.
- ಹಗಲಿರುಳು ಅಸಿಸ್ಟೆನ್ಸ್ - ನಮ್ಮ ಗ್ರಾಹಕ ನೆರವು ತಂಡ ರಾಷ್ಟ್ರೀಯ ರಜಾದಿನಗಳನ್ನೂ ಸೇರಿದಂತೆ 24/7 ನಿಮಗೆ ಅಸಿಸ್ಟ್ ಮಾಡಲು ಲಭ್ಯವಿರುತ್ತದೆ. ಹಾಗಾಗಿ, ವಾರದ ದಿನವೇ ಆಗಿರಲಿ, ಸೋಮಾರಿ ಭಾನುವಾರವೇ ಆಗಿರಲಿ, ನೀವು ಒಂದು ವೇಳೆ ಸಮಸ್ಯೆ ಸಿಲುಕಿಕೊಂಡರೆ ನಮ್ಮ ಸಪೋರ್ಟ್ ತಂಡವನ್ನು ಸಂಪರ್ಕಿಸಿ ಮತ್ತು ನಾವು ಆದ್ಯತೆ ಮೇರೆಗೆ ನಿಮಗೆ ಅಸಿಸ್ಟ್ ಮಾಡುತ್ತೇವೆ.
- ಮನೆಬಾಗಿಲಿಗೆ ಸರ್ವೀಸ್ - ಡಿಜಿಟ್ನ ಟಾಟಾ ಟಿಯಾಗೊ ಇನ್ಶೂರೆನ್ಸ್ ಪಾಲಿಸಿಯಲ್ಲಿ, ಒಂದು ವೇಳೆ ನೀವು ನಮ್ಮ ನೆಟ್ವರ್ಕ್ ಗ್ಯಾರೇಜ್ಗಳಿಂದ ಅಸಿಸ್ಟೆನ್ಸ್ ಬಯಸಿದರೆ ನಿಮ್ಮ ಟಿಯಾಗೊಗೆ ಡೋರ್ಸ್ಟೆಪ್ ಸರ್ವೀಸ್ ಅನ್ನು ನೀವು ಪಡೆಯಬಹುದು. ನಮ್ಮನ್ನು ಸಂಪರ್ಕಿಸಿ ಮತ್ತು ನಾವು ನಿಮ್ಮ ಸ್ಥಳದಿಂದ ಕಾರ್ ಪಿಕ್ ಮಾಡುವ ವ್ಯವಸ್ಥೆ ಮಾಡುತ್ತೇವೆ ಮತ್ತು ರಿಪೇರಿಯಾದ ಬಳಿಕ ವಾಪಸ್ ಡ್ರಾಪ್ ಮಾಡುತ್ತೇವೆ.
ಹಾಗಾಗಿ, ಇವುಗಳು ನೀವು ಟಾಟಾ ಟಿಯಾಗೊ ಕಾರ್ ಇನ್ಶೂರೆನ್ಸ್ ರಿನೀವಲ್ ಅಥವಾ ಖರೀದಿಗೆ ಡಿಜಿಟ್ಗೆ ಯಾಕೆ ಹೋಗಬೇಕು ಎಂಬುದಕ್ಕೆ ಇರುವ ಹಲವಾರು ಕಾರಣಗಳಲ್ಲಿ ಕೆಲವು ಕಾರಣಗಳು.
ಆದಾಗ್ಯೂ, ಪಾಲಿಸಿ ಖರೀದಿಸುವ ಮೊದಲು, ಗರಿಷ್ಠ ಪ್ರಯೋಜನಗಳನ್ನು ಪಡೆಯುವ ಸಲುವಾಗು ಏನೆಲ್ಲಾ ಕವರ್ ಆಗುತ್ತದೆ, ಯಾವುದೆಲ್ಲಾ ಕವರ್ ಆಗುವುದಿಲ್ಲ ಎಂಬುವುದನ್ನು ಗಮನಿಸಿ ಖಚಿತಪಡಿಸಿಕೊಳ್ಳಬೇಕು.