ಭಾರತದ ಅಗ್ರಸ್ಥಾನೀಯ ಹಾಗೂ ಪ್ರತಿಷ್ಠಿತ ಇನ್ಶೂರೆನ್ಸ್ ಪ್ರೊವೈಡರ್ ಗಳಲ್ಲಿ ಒಂದಾಗಿರುವುದರ ಜೊತೆಗೆ, ನಿಮ್ಮ ಟಿವಿಎಸ್ ಟು ವೀಲರ್ ವಾಹನಕ್ಕಾಗಿ ಡಿಜಿಟ್ ನೀಡುವ ಬೈಕ್ ಇನ್ಶೂರೆನ್ಸ್ ಪಾಲಿಸಿಗಳ ಹಲವು ಲಾಭಗಳಿವೆ;
ಕೆಲವನ್ನು ಕೆಳಗಡೆ ನೀಡಲಾಗಿದೆ:
1. ದೊಡ್ಡ ಸಂಖ್ಯೆಯ ನೆಟ್ವರ್ಕ್ ಗ್ಯಾರೇಜ್ ಗಳು - ಡಿಜಿಟ್ ಇನ್ಶೂರೆನ್ಸ್ ಅವರ ಟಿವಿಎಸ್ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಕವರ್ ನ ಅಡಿಯಲ್ಲಿ ನಗದುರಹಿತ ರಿಪೇರಿ ಸೌಲಭ್ಯಗಳನ್ನು ಒದಗಿಸುತ್ತಾರೆ. ಈ ಸೌಲಭ್ಯದೊಂದಿಗೆ, ನೀವು ನಿಮ್ಮ ಇನ್ಶೂರೆನ್ಸ್ ಪ್ರೊವೈಡರ್ ಅಡಿಯಲ್ಲಿರುವ ಯಾವುದೇ ನೆಟ್ವರ್ಕ್ ಗ್ಯಾರೇಜ್ ಗಳಲ್ಲಿ, ಅವರ ಸೇವೆಗಾಗಿ ಯಾವುದೇ ನಗದು ಹಣವನ್ನು ನೀಡದೆಯೇ, ನಿಮ್ಮ ಟು ವೀಲರ್ ವಾಹನದ ರಿಪೇರಿಯನ್ನು ಮಾಡಿಸಬಹುದು. ಡಿಜಿಟ್ ನಲ್ಲಿ 2900 ಕ್ಕಿಂತಲೂ ಹೆಚ್ಚು ನೆಟ್ವರ್ಕ್ ಗ್ಯಾರೇಜ್ ಗಳಿವೆ, ಇದರಿಂದ ನಿಮ್ಮ ನಗದುರಹಿತ ರಿಪೇರಿ ಸೇವೆಗಳನ್ನು ಪಡೆಯುವ ಸಂಭಾವನೆಯೂ ಹೆಚ್ಚುತ್ತದೆ.
2. ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಗಳ ಆಯ್ಕೆಗಳು - ಡಿಜಿಟ್ ನೊಂದಿಗೆ, ನಿಮ್ಮ ಟು ವೀಲರ್ ವಾಹನವನ್ನು ನೀವು ಈ ಕೆಳಗೆ ನೀಡಿರುವ ಇನ್ಶೂರೆನ್ಸ್ ಪಾಲಿಸಿಗಳ ಅಡಿಯಲ್ಲಿ ಇನ್ಶೂರ್ ಮಾಡಿಸಬಹುದು. ಅವು ಹೀಗಿವೆ:
ಥರ್ಡ್ ಪಾರ್ಟೀ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ - ಯಾವುದೇ ಥರ್ಡ್ ಪಾರ್ಟೀ ಸ್ವತ್ತು ಅಥವಾ ವಾಹನಕ್ಕೆ ನಿಮ್ಮ ಇನ್ಶೂರ್ಡ್ ಟು ವೀಲರ್ ವಾಹನದಿಂದ ಹಾನಿ ಅಥವಾ ನಷ್ಟ ಉಂಟಾದರೆ ಅಥವಾ ಆ ಮೂರನೇ ವ್ಯಕ್ತಿಗೆ ಗಂಭೀರ ಗಾಯ ಅಥವಾ ಸಾವು ಸಂಭವಿಸಿದರೆ, ಈ ಸಂದರ್ಭದಲ್ಲಿ ಉಂಟಾಗುವ ಆರ್ಥಿಕ ಹೊಣೆಗಾರಿಕೆಗಳನ್ನು ಈ ಪಾಲಿಸಿಯು ಕವರ್ ಮಾಡುತ್ತದೆ.
ಕಾಂಪ್ರೆಹೆನ್ಸಿವ್ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ - ಈ ಇನ್ಶೂರೆನ್ಸ್ ಕವರ್, ಥರ್ಡ್ ಪಾರ್ಟೀ ಹೊಣೆಗಾರಿಕೆಯನ್ನು ಮಾತ್ರವಲ್ಲದೆ, ಅಪಘಾತ, ನೈಸರ್ಗಿಕ ವಿಪತ್ತು ಇತ್ಯಾದಿಗಳಿಂದ ನಿಮ್ಮ ಸ್ವಂತ ವಾಹನಕ್ಕಾದ ಹಾನಿಗಳಿಂದ ಉಂಟಾಗುವ ಆರ್ಥಿಕ ಹೊಣೆಗಾರಿಕೆಯಿಂದ ಕವರ್ ನೀಡುತ್ತದೆ.
ಸೆಪ್ಟೆಂಬರ್ 2018 ರ ನಂತರ ನೀವು ನಿಮ್ಮ ಟು ವೀಲರ್ ವಾಹನವನ್ನು ಖರೀದಿಸಿದರೆ ನೀವು ಓನ್ ಡ್ಯಾಮೇಜ್ ಕವರ್ ಅನ್ನೂ ಆಯ್ಕೆ ಮಾಡಿಕೊಳ್ಳಬಹುದು. ಈ ಕವರ್ ನಿಮಗೆ ಕಾಂಪ್ರೆಹೆನ್ಸಿವ್ ಪಾಲಿಸಿಯ ಲಾಭಗಳನ್ನು ನೀಡುತ್ತದೆ, ಆದರೆ ಥರ್ಡ್ ಪಾರ್ಟೀ ಹೊಣೆಗಾರಿಕೆಯ ಕವರೇಜ್ ಅನ್ನು ಹೊರತುಪಡಿಸಿ. ನೀವು ಈಗಾಗಲೇ ಒಂದು ಥರ್ಡ್ ಪಾರ್ಟೀ ಬೈಕ್ ಇನ್ಶೂರೆನ್ಸ್ ಅನ್ನು ಖರೀದಿಸಿದ್ದರೆ, ನೀವಿದನ್ನು ಪ್ರತ್ಯೇಕ ಕವರ್ ಆಗಿ ಖರೀದಿಸಬಹುದು.
3. ಶೀಘ್ರ ಹಾಗೂ ಸರಳ ಕ್ಲೈಮ್ ಇತ್ಯರ್ಥ ಹೆಚ್ಚಿನ ಕ್ಲೈಮ್ ಸೆಟ್ಲ್ಮೆಂಟ್ ಅನುಪಾತದೊಂದಿಗೆ - ಸಾಮಾನ್ಯವಾಗಿ, ನೀವು ನಿಮ್ಮ ಇನ್ಶೂರೆನ್ಸ್ ಪಾಲಿಸಿಯ ವಿರುದ್ಧ ಕ್ಲೈಮ್ ರೈಸ್ ಮಾಡಿದ ನಂತರ, ನಿಮ್ಮ ಬೈಕ್ ಅನ್ನು ಪರಿಶೀಲಿಸಿ, ನಿಮ್ಮ ಕ್ಲೈಮ್ ನ ಪರೀಕ್ಷೆಯನ್ನು ನಡೆಸಲು ಕಂಪನಿಯಿಂದ ಒಂದು ಪ್ರತಿನಿಧಿಯನ್ನು ಕಳಿಸಲಾಗುತ್ತದೆ. ಆದರೆ ಡಿಜಿಟ್ ನಲ್ಲಿ, ನೀವು ಸ್ಮಾರ್ಟ್ಫೋನ್ ಅಳವಡಿಕೆಯ ಸ್ವ-ಪರಿಶೀಲನೆಯ ಲಾಭವನ್ನು ಪಡೆಯಬಹುದು. ಇದು ನಿಮ್ಮ ಪ್ರಕ್ರಿಯೆಯ ಶೀಘ್ರತೆಯನ್ನು ಹೆಚ್ಚಿಸಿ, ಸುದೀರ್ಘ ಪತ್ರವ್ಯವಹಾರದ ಗೊಂದಲವನ್ನು ತಪ್ಪಿಸುತ್ತದೆ. ಇವರ ಆನ್ಲೈನ್ ಪ್ರಕ್ರಿಯೆಯೊಂದಿಗೆ, ಡಿಜಿಟ್ ಅವರ ಕ್ಲೈಮ್ ಸೆಟ್ಲ್ಮೆಂಟ್ ಅನ್ನು ದೊಡ್ಡಮಟ್ಟಿಗೆ ಸುಗಮಗೊಳಿಸಿದ್ದಾರೆ. ಕಂಪನಿಯು ನಿಮ್ಮ ಕ್ಲೈಮ್ ಇತ್ಯರ್ಥಕ್ಕಾಗಿ ಕೆಲವೇ ದಿನಗಳನ್ನು ತೆಗೆದುಕೊಳ್ಳುತ್ತದೆ ಹಾಗೂ ಈ ಸಮಯವು ದೇಶದ ಉಳಿದ ಅಗ್ರಸ್ಥಾನೀಯ ಇನ್ಶೂರೆನ್ಸ್ ಕಂಪನಿಗಳು ತೆಗೆದುಕೊಳ್ಳುವ ಸಮಯಕ್ಕಿಂತ ಸಾಕಷ್ಟು ಕಡಿಮೆಯಾಗಿದೆ.
ಇದರ ಜೊತೆ, ಕಂಪನಿಯು ಹೆಚ್ಚಿನ ಕ್ಲೈಮ್ ಸೆಟ್ಲ್ಮೆಂಟ್ ಅನುಪಾತವನ್ನು ಹೊಂದಿದ್ದು, ಇದು ನಿಮ್ಮ ಕ್ಲೈಮ್ ತಿರಸ್ಕಾರವಾಗುವ ಸಂಭಾವನೆಯನ್ನು ಕಡಿಮೆಗೊಳಿಸುತ್ತದೆ.
4. ಸರಳ ಇನ್ಶೂರೆನ್ಸ್ ಖರೀದಿ ಹಾಗೂ ರಿನೀವಲ್ ಪ್ರಕ್ರಿಯೆ - ನೀವು ನಿಮ್ಮ ಟಿವಿಎಸ್ ಟು ವೀಲರ್ ವಾಹನ ಅಥವಾ ಟಿವಿಎಸ್ ಸ್ಕೂಟಿಯ ಇನ್ಶೂರೆನ್ಸ್ ರಿನೀವಲ್ ಗಾಗಿ ಆನ್ಲೈನ್ ಹುಡುಕಾಟ ನಡೆಸುತ್ತಿದ್ದರೆ, ಈ ಪ್ರಕ್ರಿಯೆಯಲ್ಲಿ ನಿಮಗೆ ನೆರವಾಗಲು ಡಿಜಿಟ್ ಗಿಂತ ಉತ್ತಮ ಬೇರಾರೂ ಇಲ್ಲ. ನೀವು ಇನ್ಶೂರೆನ್ಸ್ ಪಾಲಿಸಿಯ ಗೊಂದಲರಹಿತ ಖರೀದಿ ಹಾಗೂ ರಿನೀವಲ್ ಪಡೆಯಬಹುದು. ಅಷ್ಟೇ ಅಲ್ಲದೇ ನಿಮ್ಮ ಹಿಂದಿನ ಪಾಲಿಸಿಯ ನೋ ಕ್ಲೈಮ್ ಬೋನಸ್ ಅನ್ನು ಮುಂದಕ್ಕೆ ತೆಗೆದುಕೊಂಡು ಹೋಗಿ, ನಿಮ್ಮ ಪ್ರೀಮಿಯಂ ಪಾವತಿಯಲ್ಲಿ ರಿಯಾಯಿತಿಯನ್ನು ಪಡೆಯಬಹುದು.
5. ಹೆಚ್ಚಿನ ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ(ಐಡಿವಿ) - ನಾವು ಈಗಾಗಲೇ ಐಡಿವಿ ಬಗ್ಗೆ ಚರ್ಚಿಸಿದ್ದೇವೆ. ಆದ್ದರಿಂದ, ನೀವು ನಿಮ್ಮ ಟಿವಿಎಸ್ ಬೈಕ್ ಇನ್ಶೂರೆನ್ಸ್ ಅನ್ನು ಖರೀದಿಸುವಾಗ ಅಥವಾ ರಿನ್ಯೂ ಮಾಡುವಾಗ, ನಿಮ್ಮ ಪ್ರಾಥಮಿಕ ಗುರಿಯು ಹೆಚ್ಚಿನ ಐಡಿವಿ ಅನ್ನು ಹುಡುಕುವುದು ಆಗಿರಬೇಕು, ಇದರಿಂದ ನಿಮ್ಮ ಬೈಕ್ ಗೆ ಸಂಪೂರ್ಣ ಹಾನಿ ಅಥವಾ ಕಳವಾದ ಸಂದರ್ಭದಲ್ಲಿ ನೀವು ಗರಿಷ್ಠ ಲಾಭಗಳನ್ನು ಪಡೆಯಬಹುದು. ಡಿಜಿಟ್, ನಿಮಗೆ ನಿಮ್ಮ ಅಗತ್ಯದ ಪ್ರಕಾರ ನಿಮ್ಮ ಟು ವೀಲರ್ ವಾಹನದ ಐಡಿವಿ ಅನ್ನು ಕಸ್ಟಮೈಜ್ ಮಾಡುವ ಸೌಲಭ್ಯವನ್ನು ಒದಗಿಸುತ್ತದೆ.
6. ವಿವಿಧ ಆಡ್-ಆನ್ ಕವರ್ ಗಳು - ಡಿಜಿಟ್ ನ ಟಿವಿಎಸ್ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯು, ನಿಮ್ಮ ಬೈಕಿಗೆ ಗರಿಷ್ಠ ಸಂರಕ್ಷಣೆ ಒದಗಿಸುವ ಹಲವು ಆಡ್-ಆನ್ ಗಳನ್ನು ನೀಡುತ್ತದೆ. ನೀವು ನಿಮ್ಮ ಟಿವಿಎಸ್ ಬೈಕಿಗಾಗಿ ಪಡೆಯಬಹುದಾದ ಕೆಲವು ಆಡ್-ಆನ್ ಗಳನ್ನು ಕೆಳಗೆ ನೀಡಲಾಗಿದೆ-
ಈ ಆಡ್-ಆನ್ ಗಳು ನಿಮ್ಮ ಬೈಕ್/ಸ್ಕೂಟರ್ ಗಾಗಿ ಹೆಚ್ಚಿನ ಸಂರಕ್ಷಣೆಯನ್ನು ಒದಗಿಸುವಲ್ಲಿ ಈ ಆಡ್-ಆನ್ ಗಳು ಅಗತ್ಯವಾಗುತ್ತವೆ.
7. 24x7 ಗ್ರಾಹಕ ಸೇವೆ - ಡಿಜಿಟ್ ನ ತಂಡವು ನಿಮಗಾಗಿ ಉತ್ತಮ ಸೇವೆಯನ್ನು ಒದಗಿಸಲು ದಣಿವಿಲ್ಲದೆ ಕೆಲಸ ಮಾಡುತ್ತದೆ. ಹೀಗಾಗಿ ನೀವು ಅವರ ಗ್ರಾಹಕ ಸೇವಾ ಕೇಂದ್ರದಲ್ಲಿ ಯಾವ ಹೊತ್ತಿನಲ್ಲಾದರೂ ಕರೆ ಮಾಡಬಹುದು-ರಾಷ್ಟ್ರೀಯ ರಜಾದಿನಗಳಲ್ಲೂ ಕೂಡಾ.
ನೋಡಿದಿರಲ್ಲವೇ!
ಕೈಗೆಟಕುವ ಪ್ರೀಮಿಯಂ ಹಾಗೂ ಆಕರ್ಷಕ ಆಡ್-ಆನ್ ಕೊಡುಗೆಗಳೊಂದಿಗೆ, ಡಿಜಿಟ್ ಇನ್ಶೂರೆನ್ಸ್, ನಿಮ್ಮ ಬೈಕ್, ಸ್ಕೂಟರ್ ಅಥವಾ ಮೋಪೆಡ್ ಗೆ ಸಂಪೂರ್ಣ ರಕ್ಷಣೆಯನ್ನು ಒದಗಿಸುತ್ತದೆ!
ನಿಮ್ಮ ಟಿವಿಎಸ್ ಟು ವೀಲರ್ ವಾಹನದ ಪ್ರೀಮಿಯಂ ಅನ್ನು ಹೇಗೆ ಕಡಿಮೆ ಮಾಡಬಹುದು ಎಂಬ ಸಣ್ಣ ರಹಸ್ಯವನ್ನು ನಾವು ನಿಮಗೆ ಹೇಳುತ್ತೇವೆ.