ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್

ಥರ್ಡ್-ಪಾರ್ಟಿ ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಿ

Third-party premium has changed from 1st June. Renew now

ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಎಂದರೇನು?

ಥರ್ಡ್-ಪಾರ್ಟಿ ಬೈಕ್ ಇನ್ಶೂರೆನ್ಸ್ ಎನ್ನುವುದು, ಟು ವೀಲರ್  ಇನ್ಶೂರೆನ್ಸ್ ಪಾಲಿಸಿಯ ಅತ್ಯಂತ ಮೂಲಭೂತ ವಿಧವಾಗಿದೆ, ಇದು ಅಪಘಾತದಿಂದಾಗಿ ಅಥವಾ ಘರ್ಷಣೆಯಿಂದಾಗಿ ನಿಮ್ಮ ಬೈಕ್ ಉಂಟು ಮಾಡಬಹುದಾದ ಥರ್ಡ್ ಪಾರ್ಟಿ ಆಸ್ತಿಯ/ವಾಹನದ  ಯಾವುದೇ ಹಾನಿ ಮತ್ತು ನಷ್ಟಗಳನ್ನು  ಕವರ್ ಮಾಡಲು ಇದು ಸಹಾಯ ಮಾಡುತ್ತದೆ. ಇದನ್ನೇ ಕಾನೂನಿನ ಪ್ರಕಾರ ಖಡ್ದಾಯಗೊಳಿಸಲಾಗಿದೆ. ಇಲ್ಲದಿದ್ದಲ್ಲಿ, ನೀವು 1,000 ರೂಗಳಿಂದ 2,000 ರೂಗಳವರೆಗೆ ದಂಡಕ್ಕೆ ಹೊಣೆಯಾಗಬಹುದು.

ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಏನನ್ನು ಒಳಗೊಂಡಿದೆ?

ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಏನನ್ನು ಒಳಗೊಂಡಿಲ್ಲ?

ನಿಮ್ಮ ಥರ್ಡ್-ಪಾರ್ಟಿ ಬೈಕ್ ಇನ್ಶೂರೆನ್ಸ್ ಪಾಲಿಸಿ ಏನನ್ನು ಒಳಗೊಂಡಿಲ್ಲ ಎಂಬುದನ್ನು  ತಿಳಿಯುವುದು ಅಷ್ಟೇ ಮುಖ್ಯ. ಇದರಿಂದ ನೀವು ಕ್ಲೇಮ್ ಮಾಡುವ ಸಮಯದಲ್ಲಿ ಯಾವುದೇ ಅಚ್ಚರಿಯಾಗುವುದಿಲ್ಲ. ಅಂತಹ ಕೆಲವು ಸನ್ನಿವೇಶಗಳು ಇಲ್ಲಿವೆ:

ಸ್ವಂತ ಹಾನಿಗಳು

ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಪಾಲಿಸಿಯ ಸಂದರ್ಭದಲ್ಲಿ, ಸ್ವಂತ ವಾಹನದ ಹಾನಿಗಳು ಕವರ್ ಆಗುವುದಿಲ್ಲ.

ಕುಡಿದು ವಾಹನ ಓಡಿಸುವುದು ಅಥವಾ ಲೈಸೆನ್ಸ್ ಇಲ್ಲದೆ ಓಡಿಸುವುದು

ನೀವು ಕುಡಿದು ವಾಹನ ಓಡಿಸಿದರೆ  ಅಥವಾ ವ್ಯಾಲಿಡ್ ಆಗಿರುವ ಟು ವೀಲರ್ ಲೈಸೆನ್ಸ್  ಇಲ್ಲದಿದ್ದರೆ ನಿಮ್ಮ ಬೈಕ್ ಇನ್ಶೂರೆನ್ಸ್ ಅದನ್ನು ಕವರ್ ಮಾಡುವುದಿಲ್ಲ.

ವ್ಯಾಲಿಡ್ ಡ್ರೈವಿಂಗ್ ಲೈಸೆನ್ಸ್ ಹೊಂದಿರುವವರು ಇಲ್ಲದೆ ಚಾಲನೆ ಮಾಡುವುದು

ನೀವು ಕಲಿಕಾ ಲೈಸನ್ಸ್ (learner's licence) ಅನ್ನು ಹೊಂದಿದ್ದರೆ ಮತ್ತು ನಿಮ್ಮ ಟು ವೀಲರ್ ಹಿಂಬದಿ  ಸೀಟಿನಲ್ಲಿ ವ್ಯಾಲಿಡ್ ಲೈಸೆನ್ಸ್ ಹೊಂದಿರುವವರು ಇಲ್ಲದೆಯೇ ನೀವು ವಾಹನ ಓಡಿಸುತ್ತಿದ್ದರೆ - ಆ ಸಂದರ್ಭಗಳಲ್ಲಿ ನಿಮ್ಮ ಕ್ಲೇಮ್ ಕವರ್ ಆಗುವುದಿಲ್ಲ.

ಆಡ್-ಆನ್‌ಗಳನ್ನು ಖರೀದಿಸಲಾಗಿಲ್ಲ

ಕೆಲವು ಸನ್ನಿವೇಶಗಳು, ಆಡ್-ಆನ್‌ಗಳಲ್ಲಿ ಒಳಗೊಂಡಿವೆ . ನೀವು ಆ ಟು ವೀಲರ್ ಗಳ ಆಡ್-ಆನ್‌ಗಳನ್ನು ಖರೀದಿಸದಿದ್ದರೆ, ಹೋಲುವ ಸಂದರ್ಭಗಳು ಕವರ್ ಆಗುವುದಿಲ್ಲ.

ನ ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಪ್ರಮುಖ ಲಕ್ಷಣಗಳು

ಪ್ರಮುಖ ಲಕ್ಷಣಗಳು Digit ಪ್ರಯೋಜನಗಳು
ಪ್ರೀಮಿಯಂ ₹714/-ರಿಂದ ಪ್ರಾರಂಭ
ಖರೀದಿಸುವ ಪ್ರಕ್ರಿಯೆ ಸ್ಮಾರ್ಟ್ ಫೋನ್-ಸಕ್ರಿಯಗೊಳಿಸಲಾದ ಪ್ರಕ್ರಿಯೆ. ಕೇವಲ ಐದು ನಿಮಿಷಗಳಲ್ಲಿ ಮಾಡಬಹುದು.
ಥರ್ಡ ಪಾರ್ಟಿಗೆ ವೈಯುಕ್ತಿಕ ಹಾನಿ ಅನ್ ಲಿಮಿಟೆಡ್ ಹೊಣೆಗಾರಿಕೆ
ಥರ್ಡ್ ಪಾರ್ಟಿಗೆ ಆಸ್ತಿ ಹಾನಿ ₹7.5 ಲಕ್ಷಗಳವರೆಗೆ
ಪರ್ಸನಲ್ ಆಕ್ಸಿಡೆಂಟ್ ಕವರ್ ₹15 ಲಕ್ಷಗಳವರೆಗೆ
ಪರ್ಸನಲ್ ಆಕ್ಸಿಡೆಂಟ್ ಕವರ್ ಪ್ರೀಮಿಯಂ- ₹330/-

ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಪ್ರೀಮಿಯಂ

ಥರ್ಡ್ ಪಾರ್ಟಿ ಇನ್ಶೂರೆನ್ಸ್ ಪಾಲಿಸಿಗಾಗಿ, ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಸಮಗ್ರ (comprehensive) ಟು ವೀಲರ್ ಇನ್ಶೂರೆನ್ಸಿಗಿಂತ ಭಿನ್ನವಾಗಿ, IRDAI ನಿಂದ ಪೂರ್ವನಿರ್ಧರಿಸಲಾಗಿರುತ್ತದೆ. ಅದರ ಪ್ರೀಮಿಯಂ ಬೆಲೆಗಳು ಪ್ರಾಥಮಿಕವಾಗಿ ನಿಮ್ಮ ಟು ವೀಲರ್ ವಾಹನದ ಸಿ.ಸಿಯನ್ನು ಅವಲಂಬಿಸಿರುತ್ತದೆ. IRDAIನ ಇತ್ತೀಚಿನ ಅಪ್‌ಡೇಟ್ ಪ್ರಕಾರ, ವಿವಿಧ ಸಿ.ಸಿ ಶ್ರೇಣಿಗಳ, ಟು ವೀಲರ್ ವಾಹನದ ಪ್ರೀಮಿಯಂ ಶುಲ್ಕಗಳು ಈ ಕೆಳಗಿನಂತಿವೆ. ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್ ಅನ್ನು ಪರಿಶೀಲಿಸಿ.

ಎಂಜಿನ್ ಕೆಪಾಸಿಟಿಯೊಂದಿಗೆ ಟು ವೀಲರ್ ವಾಹನ ಪ್ರೀಮಿಯಂ ರೇಟ್
75cc ಮೀರದಂತೆ ₹538
75cc ಮೀರುವಂತೆ ಆದರೆ 150cc ಮೀರದಂತೆ ₹714
150cc ಮೀರುವಂತೆ ಆದರೆ 350cc ಮೀರದಂತೆ ₹1,366
350cc ಮೀರುವಂತೆ ₹2,804

ಹೊಸ ಟು-ವೀಲರ್‌ಗಳಿಗಾಗಿ ಥರ್ಡ್ ಪಾರ್ಟಿ ಪ್ರೀಮಿಯಂ (5 - ವರ್ಷಗಳ ಸಿಂಗಲ್ ಪ್ರೀಮಿಯಂ ಪಾಲಿಸಿ)

ಎಂಜಿನ್ ಕೆಪ್ಯಾಸಿಟಿಯೊಂದಿಗೆ ಟು ವೀಲರ್‌ಗಳು ಪ್ರೀಮಿಯಂ ದರ (1 ಜೂನ್ 2022 ರಿಂದ ಜಾರಿಯಲ್ಲಿರುವಂತೆ)
75cc ಮೀರದ ₹2,901
75cc ಮೀರಿದ ಆದರೆ 150cc ಮೀರದ ₹3,851
150cc ಮೀರಿದ ಆದರೆ 350cc ಮೀರದ ₹7,365
350cc ಮೀರಿದ ₹15,117

ಹೊಸ ಎಲೆಕ್ಟ್ರಿಕ್ ವೆಹಿಕಲ್ (EV) ಟು-ವೀಲರ್‌ಗಳ ಪ್ರೀಮಿಯಂಗಳು (1-ವರ್ಷದ ಸಿಂಗಲ್ ಪ್ರೀಮಿಯಂ ಪಾಲಿಸಿ)

ವೆಹಿಕಲ್ ಕಿಲೋವ್ಯಾಟ್ ಕೆಪ್ಯಾಸಿಟಿ (KW) ಪ್ರೀಮಿಯಂ ದರ (1ನೇ ಜೂನ್ 2022 ರಿಂದ ಜಾರಿಯಲ್ಲಿರುವಂತೆ)
3KW ಮೀರದ ₹457
3KW ಮೀರಿದ ಆದರೆ 7KW ಮೀರದ ₹607
7KW ಮೀರಿದ ಆದರೆ 16KW ಮೀರದ ₹1,161
16KW ಮೀರಿದ ₹2,383

ಹೊಸ ಎಲೆಕ್ಟ್ರಿಕ್ ವೆಹಿಕಲ್ (EV) ಟು-ವೀಲರ್‌ಗಳ ಪ್ರೀಮಿಯಂಗಳು (5-ವರ್ಷಗಳ ಸಿಂಗಲ್ ಪ್ರೀಮಿಯಂ ಪಾಲಿಸಿ)

ವೆಹಿಕಲ್ ಕಿಲೋವ್ಯಾಟ್ ಕೆಪ್ಯಾಸಿಟಿ (KW) ಪ್ರೀಮಿಯಂ ದರ (1ನೇ ಜೂನ್ 2022 ರಿಂದ ಜಾರಿಯಲ್ಲಿರುವಂತೆ)
3KW ಮೀರದ ₹2,466
3KW ಮೀರಿದ ಆದರೆ 7KW ಮೀರದ ₹3,273
7KW ಮೀರಿದ ಆದರೆ 16KW ಮೀರದ ₹6,260
16KW ಮೀರಿದ ₹12,849

ಬೈಕ್‌ಗಾಗಿ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಅನ್ನು ಕ್ಲೇಮ್ ಮಾಡುವುದು ಹೇಗೆ?

  • ಥರ್ಡ್-ಪಾರ್ಟಿಯು ಎಫ್‌ಐಆರ್ ದಾಖಲಿಸಬೇಕು ಮತ್ತು ಚಾರ್ಜ್ ಶೀಟ್ ಪಡೆಯಬೇಕು. 1800-103-4448 ಸಂಖ್ಯೆಗೆ ನಮಗೆ ಕರೆ ಮಾಡಿ.
  • ಒಂದುವೇಳೆ ಪರಿಹಾರವಿದ್ದಲ್ಲಿ, ಅದನ್ನು ನಿಮ್ಮ ಪರವಾಗಿ ನಾವು ನೋಡಿಕೊಳ್ಳುತ್ತೇವೆ.
  • ಮತ್ತು ಯಾವುದೇ ನಿಯಮಗಳ ಉಲ್ಲಂಘನೆ ಆಗಿಲ್ಲದಿದ್ದರೆ, ನಾವು ನಿಮ್ಮ ಪರವಾಗಿ ನಾನ್ -ಮಾನಿಟರಿ ಸೆಟಲ್ ಮೆಂಟ್'ಗೆ ಪ್ರಯತ್ನಿಸುತ್ತೇವೆ. ಸಂದರ್ಭ ಬಂದರೆ, ನಿಮ್ಮನ್ನು ನಾವು ನ್ಯಾಯಾಲಯದಲ್ಲಿ ಪ್ರತಿನಿಧಿಸುತ್ತೇವೆ.
  • ಬಹು ಮುಖ್ಯವಾಗಿ, ನೀವು ಉತ್ತಮ ನಾಗರಿಕರಾಗಿದ್ದರೆ ಮತ್ತು ಯಾವುದೇ ರೀತಿಯ ನಿರ್ಲಕ್ಷ್ಯಕ್ಕಾಗಿ ನಿಮ್ಮ ತಪ್ಪನ್ನು ಒಪ್ಪಿಕೊಂಡಿದ್ದರೆ, ನಿಮ್ಮ Digit ಥರ್ಡ್ ಪಾರ್ಟಿ ಕವರ್ ಇನ್ನೂ ಉತ್ತಮವಾಗಿರುತ್ತದೆ.
  • ವೈಯಕ್ತಿಕ ಅಪಘಾತ-ಸಂಬಂಧಿತ ಕ್ಲೇಮ್‌ನ ಸಂದರ್ಭದಲ್ಲಿ, ನೀವು ಮಾಡಬೇಕಾಗಿರುವುದು ಇಷ್ಟೇ, 1800-258-5956ಈ ಸಂಖ್ಯೆಗೆ, ನಮಗೆ ಕರೆ ಮಾಡಿ ಮತ್ತು ನಾವು ನಿಮಗೆ ಸಹಾಯ ಮಾಡುತ್ತೇವೆ.

ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಕ್ಲೇಮ್ ಮಾಡುವಾಗ ಪ್ರಮುಖವಾಗಿ ಪರಿಗಣಿಸುವ ಅಂಶಗಳು

  • ಹೇಳಲಾದ ಕ್ಲೇಮ್‌ಗಾಗಿ ಎಫ್‌ಐಆರ್ ಅನ್ನು ಸಲ್ಲಿಸುವ ಥರ್ಡ್ ಪಾರ್ಟಿ ವ್ಯಕ್ತಿಯು, ಅವನು/ಅವಳು ಸೂಕ್ತ ಸಾಕ್ಷ್ಯವನ್ನು ಹೊಂದಿದ್ದಾನೆ /ಳೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.
  • ನಿಮ್ಮ ಇನ್ಶೂರೆನ್ಸ್ ಸಂಸ್ಥೆಯನ್ನು ಮತ್ತು ಪೋಲೀಸರನ್ನು ಆದಷ್ಟು ಬೇಗ ಸಂಪರ್ಕಿಸಬೇಕು ಎಂಬುದನ್ನು ಗಮನಿಸುವುದು ಮುಖ್ಯ. ಘಟನೆಯ ನಂತರದ ದಿನಗಳಲ್ಲಿ ನೀವು ಕ್ಲೇಮ್ ಮಾಡಲು ಸಾಧ್ಯವಿಲ್ಲ!
  • IRDAIನ ನಿಯಮಗಳು ಮತ್ತು ನಿಬಂಧನೆಗಳ ಪ್ರಕಾರ, ಕ್ಲೇಮ್ ಮೊತ್ತವನ್ನು ನಿರ್ಧರಿಸುವುದು ಮೋಟಾರ್ ಆಕ್ಸಿಡೆಂಟ್ ಕ್ಲೇಮ್ಸ್ ಟ್ರಿಬ್ಯೂನಲ್‌ಗೆ ಬಿಟ್ಟಿದ್ದು. ಥರ್ಡ್-ಪಾರ್ಟಿಗೆ ವೈಯಕ್ತಿಕ ಹಾನಿಗಳ ಮೇಲೆ ಯಾವುದೇ ಹೆಚ್ಚಿನ ಮಿತಿಯಿಲ್ಲದಿದ್ದರೂ, ಥರ್ಡ್ ಪಾರ್ಟಿಯ ವಾಹನ ಅಥವಾ ಆಸ್ತಿಗೆ ಹಾನಿ ಮತ್ತು ನಷ್ಟವಾದ ಸಂದರ್ಭದಲ್ಲಿ 7.5ಲಕ್ಷ ರೂಗಳವರೆಗೆ ಸೀಮಿತ ಹೊಣೆಗಾರಿಕೆ (limited liability) ಇರುತ್ತದೆ.

ಡಿಜಿಟ್ ಇನ್ಶೂರೆನ್ಸ್ ಕ್ಲೇಮ್‌ಗಳು ಎಷ್ಟು ವೇಗವಾಗಿ ಇತ್ಯರ್ಥವಾಗುತ್ತವೆ? ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ನಿಮ್ಮ ಮನಸ್ಸಿಗೆ ಬರಬೇಕಾದ ಮೊದಲ ಪ್ರಶ್ನೆ ಇದು. ಒಳ್ಳೆಯದು, ಅದನ್ನು ನೀವೀಗ ಮಾಡುತ್ತಿದ್ದೀರಿ! ಡಿಜಿಟ್‌ನ ಕ್ಲೇಮ್'ಗಳ ವರದಿ ಕಾರ್ಡ್ ಅನ್ನು ಓದಿ

ನಮ್ಮ ಗ್ರಾಹಕರು ನಮ್ಮ ಬಗ್ಗೆ ಏನು ಹೇಳುತ್ತಾರೆ

ವಿಷು ಬೆಹಲ್
★★★★★

ನನ್ನ ಟು ವೀಲರ್ ವಾಹನ ಬಜಾಜ್ ಪ್ಲಾಟಿನಾ ಕ್ಲೇಮ್ ಅನ್ನು ಗೋ ಡಿಜಿಟ್'ನಲ್ಲಿ ಒಂದೇ ದಿನದಲ್ಲಿ ಇತ್ಯರ್ಥಪಡಿಸಿದ ಶ್ರೀ ಗಗನ್‌ದೀಪ್ ಸಿಂಗ್ (ಸರ್ವೇಯರ್ ಅಮೃತಸರ) ಅವರನ್ನು ನಾನು ತುಂಬಾ ಪ್ರಶಂಸಿಸುತ್ತೇನೆ.  ಗೋ ಡಿಜಿಟ್ ಇನ್ಶೂರೆನ್ಸ್ ಮತ್ತು ಗಗನ್‌ದೀಪ್ ಸಿಂಗ್ ಅವರಿಗೆ ಹಾಗೂ ಅವರ ಸೇವೆಗಳಿಗೆ ಧನ್ಯವಾದಗಳು.

ಅಭಿಷೇಕ್ ವರ್ಮಾ
★★★★★

Digit ಮೂಲಕ ಸೂಪರ್ ಸ್ಮೂತ್ ಸರ್ವಿಸ್. ನಾನು ನನ್ನ ಬೈಕ್‌ನ ಕ್ಲೇಮ್ ಅನ್ನು ರಿಜಿಸ್ಟರ್ ಮಾಡಿದ್ದೆ ಮತ್ತು ಎರಡು ದಿನಗಳಲ್ಲಿ ನಾನು ನನ್ನ ಕ್ಲೇಮ್ ಅನ್ನು ಪಡೆದುಕೊಂಡಿದ್ದೇನೆ. ಶ್ರೀ ನಿರ್ಮಲ್ ಅವರು ಕ್ಲೇಮ್ ಮಾಹಿತಿಗಾಗಿ ನನಗೆ ಎಲ್ಲಾ ರೀತಿಯಲ್ಲಿ ಸಹಾಯ ಮಾಡಿದರು ಮತ್ತು ಪ್ರಕ್ರಿಯೆಯು ತುಂಬಾ ಸರಳವಾಗಿತ್ತು

ಆಶಿಷ್ ಕುಮಾರ್
★★★★★

Digit ಇನ್ಶುರೆನ್ಸ್ ಭಾರತದ ಅತ್ಯುತ್ತಮ ಇನ್ಶೂರೆನ್ಸ್ ಕಂಪನಿಯಾಗಿದೆ. ಕೆಲಸದ ವಿಧಾನ ಇಷ್ಟವಾಯಿತು . ಎಲ್ಲವೂ ತುಂಬಾ ಸರಳವಾಗಿದೆ. ನನ್ನ ಬೈಕ್‌ಗೆ ನಾನು ಕ್ಲೇಮ್ ಪಡೆದಿದ್ದೇನೆ. ಇಂದು ನಿಜವಾಗಿಯೂ ಸಂತೋಷವಾಗಿದೆ. ತುಂಬಾ ಧನ್ಯವಾದಗಳು ಗೋ ಡಿಜಿಟ್ ಮತ್ತು ಅಭಿಷೇಕ್ ಸರ್.

Show all Reviews

ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸಿನ ಪ್ರಯೋಜನಗಳು

ಹಣವನ್ನು ಉಳಿಸುತ್ತದೆ

ಟ್ರಾಫಿಕ್ ಉಲ್ಲಂಘನೆಯ ಪೆನಾಲ್ಟಿಗಳಿಂದ ನಿಮ್ಮನ್ನು ರಕ್ಷಿಸುತ್ತದೆ ಏಕೆಂದರೆ ಕನಿಷ್ಠ ಥರ್ಡ್-ಪಾರ್ಟಿ ಇನ್ಶೂರೆನ್ಸ್ ಇಲ್ಲದೆ ವಾಹನ ಓಡಿಸುವಾಗ  ವಿಧಿಸಲಾಗುವ ಹೊಸ ದಂಡವು ಕನಿಷ್ಠ 2,000 ರೂಗಳು ಮತ್ತು ಅದೇ ಕಾರಣಕ್ಕೆ, ನಂತರದ ದಂಡ 4000 ರೂಗಳು.

ಅನಿರೀಕ್ಷಿತ ನಷ್ಟಗಳಿಂದ ನಿಮ್ಮನ್ನು ರಕ್ಷಿಸುತ್ತದೆ

ನಿಮ್ಮ ಟು ವೀಲರ್ ವಾಹನವನ್ನು ಓಡಿಸುವಾಗ  ನೀವು ಒಬ್ಬ ವ್ಯಕ್ತಿಯನ್ನು, ಆಸ್ತಿಯನ್ನು ಅಥವಾ ವಾಹನವನ್ನು ಹಾನಿಗೊಳಿಸುವುದರಿಂದ ಉಂಟಾಗಬಹುದಾದ ನಷ್ಟಗಳು ಮತ್ತು ಹೊಣೆಗಾರಿಕೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ.

ವೈಯಕ್ತಿಕ ಹಾನಿಗಾಗಿ ಕವರ್


ನಿಮ್ಮ ಟು ವೀಲರ್ ವಾಹನವನ್ನು ಓಡಿಸುವಾಗ ಸ್ವತಃ ನಿಮಗೇ ಹಾನಿಯಾಗುವ ದುರದೃಷ್ಟಕರ ಸಂದರ್ಭದಲ್ಲಿ ನಿಮ್ಮನ್ನು ರಕ್ಷಿಸುತ್ತದೆ 

24x7 ಬೆಂಬಲ

ನೀವು ಆನ್‌ಲೈನ್‌ನಲ್ಲಿ ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಅನ್ನು ಖರೀದಿಸಿದಾಗ ನೀವು 24x7 ಬೆಂಬಲವನ್ನು ಸ್ವೀಕರಿಸುತ್ತೀರಿ. ಆದ್ದರಿಂದ ಏನೇ ಇರಲಿ, ನಿಮ್ಮ ಉತ್ತಮ ಸ್ನೇಹಿತ ಅಥವಾ ಬೈಕ್ ಇನ್ಶೂರೆನ್ಸ್ ಸಂಸ್ಥೆಯವರು ಯಾವಾಗಲೂ ನಿಮ್ಮೊಂದಿಗೆ ಇರುತ್ತಾರೆ!

ಕಾನೂನನ್ನು ಅನುಸರಿಸಲು

ಕಾನೂನನ್ನು ಅನುಸರಿಸಲು ಮತ್ತು ಎಲ್ಲಾ ಭಾರತೀಯ ರಸ್ತೆಗಳಲ್ಲಿ ಕಾನೂನುಬದ್ಧವಾಗಿ ವಾಹನ ಚಲಾಯಿಸಲು ಮಾಡಲು ನಿಮಗೆ ಅನುಮತಿಸುತ್ತದೆ.

ಮನಸ್ಸಿನ ಶಾಂತಿ

ನಿಮ್ಮ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ, ನೀವು ಎದುರಿಸಬಹುದಾದ ಯಾವುದೇ ಅವಘಡಗಳ ಸಂದರ್ಭದಲ್ಲಿ, ನೀವು ರಕ್ಷಣೆ ಪಡೆಯುತ್ತೀರಿ ಎಂಬ  ಭರವಸೆಯನ್ನು ಪಡೆಯುತ್ತೀರಿ.

ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸಿನ ಅನಾನುಕೂಲಗಳು

ಸ್ವಂತ ಹಾನಿಯನ್ನು ಒಳಗೊಳ್ಳುವುದಿಲ್ಲ

ನೀವು ಆಕಸ್ಮಿಕವಾಗಿ ನಿಮ್ಮ ಸ್ವಂತ ಟು ವೀಲರ್ ವಾಹನವನ್ನು ಹಾನಿಗೊಳಿಸಿದರೆ, ಅದರಿಂದ ಉಂಟಾಗುವ ನಷ್ಟಗಳನ್ನು ಇದು ಭರಿಸುವುದಿಲ್ಲ!

ನೈಸರ್ಗಿಕ ವಿಕೋಪಗಳಿಗೆ ರಕ್ಷಣೆ ನೀಡುವುದಿಲ್ಲ

ನಿಮ್ಮ ಟು ವೀಲರ್ ವಾಹನಕ್ಕೆ ಹಾನಿ ಮತ್ತು ನಷ್ಟವನ್ನು ಉಂಟುಮಾಡುವ ಪ್ರವಾಹಗಳು, ಬೆಂಕಿ, ಚಂಡಮಾರುತಗಳು ಮತ್ತು ಇತರ ಪ್ರಕೃತಿಯ ವಿಕೋಪಗಳಂತಹ ನೈಸರ್ಗಿಕ ವಿಪತ್ತುಗಳ ಸಂದರ್ಭಗಳಲ್ಲಿ ಇದು ನಿಮಗೆ ರಕ್ಷಣೆ ನೀಡುವುದಿಲ್ಲ.

ಯಾವುದೇ ಕಸ್ಟಮೈಸ್ ಮಾಡಿದ ಯೋಜನೆಗಳಿಲ್ಲ

ಆಡ್-ಆನ್‌ಗಳಂತಹ ಹೆಚ್ಚುವರಿ ವೈಶಿಷ್ಟ್ಯಗಳೊಂದಿಗೆ ಮತ್ತು ಶೂನ್ಯ-ಡೆಪ್ರೆಸಿಯೇಷನ್ ಕವರ್, (Zero Depreciation Cover) ಎಂಜಿನ್ ಮತ್ತು ಗೇರ್‌ಬಾಕ್ಸ್ ರಕ್ಷಣೆಯಂತಹ ಕವರ್‌ಗಳೊಂದಿಗೆ ನಿಮ್ಮ ಥರ್ಡ್ ಪಾರ್ಟಿ ಟು ವೀಲರ್ ವಾಹನ ಇನ್ಶೂರೆನ್ಸ್ ಪಾಲಿಸಿಯನ್ನು ನೀವು ಕಸ್ಟಮೈಸ್ ಮಾಡಲು ಸಾಧ್ಯವಿಲ್ಲ. ನೀವು ಕಾಂಪ್ರೆಹೆನ್ಸಿವ್ ಟು ವೀಲರ್ ವಾಹನ ಇನ್ಶೂರೆನ್ಸ್ (comprehensive two-wheeler insurance ) ಅನ್ನು ಆರಿಸಿಕೊಂಡಾಗ ಮಾತ್ರ ನೀವದನ್ನು ಮಾಡಬಹುದು.

ಭಾರತದಲ್ಲಿ ಬೈಕ್ ಇನ್ಶೂರೆನ್ಸ್ ಯೋಜನೆಗಳ ವಿಧಗಳು

ಥರ್ಡ್ ಪಾರ್ಟಿ ಸಮಗ್ರ

ಅಪಘಾತದಿಂದಾಗಿ ಸ್ವಂತ ಟು ವೀಲರ್ ವಾಹನಕ್ಕೆ ಆಗುವ ಹಾನಿ/ನಷ್ಟ

×

ಬೆಂಕಿಯ ಸಂದರ್ಭದಲ್ಲಿ ಸ್ವಂತ ಟು ವೀಲರ್ ವಾಹನಕ್ಕೆ ಆಗುವ ಹಾನಿ/ನಷ್ಟಗಳು

×

ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಸ್ವಂತ ಟು ವೀಲರ್ ವಾಹನಕ್ಕೆ ಆಗುವ ಹಾನಿ/ನಷ್ಟಗಳು

×

ಥರ್ಡ್ ಪಾರ್ಟಿಯ ವಾಹನಕ್ಕೆ ಆಗುವ ಹಾನಿ

×

ಥರ್ಡ್ ಪಾರ್ಟಿಯ ಆಸ್ತಿಗೆ ಆಗುವ ಹಾನಿ

×

ಪರ್ಸನಲ್ ಆಕ್ಸಿಡೆಂಟ್ ಕವರ್

×

ಥರ್ಡ್-ಪಾರ್ಟಿ ವ್ಯಕ್ತಿಯ ಗಾಯಗಳು/ಸಾವು

×

ನಿಮ್ಮ ಬೈಕ್/ಸ್ಕೂಟರಿನ ಕಳ್ಳತನ

×

ನಿಮ್ಮ ಐಡಿವಿ ಅನ್ನು ಕಸ್ಟಮೈಸ್ ಮಾಡಿ

×

ಕಸ್ಟಮೈಸ್ ಮಾಡಿದ ಆಡ್-ಆನ್‌ಗಳೊಂದಿಗೆ ಹೆಚ್ಚುವರಿ ರಕ್ಷಣೆ

×
Get Quote Get Quote

ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ನಡುವಿನ ವ್ಯತ್ಯಾಸದ ಕುರಿತು ಇನ್ನಷ್ಟು ತಿಳಿಯಿರಿ.

ಬೈಕ್‌ಗಾಗಿ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಖರೀದಿಗೆ ಸಂಬಂಧಿಸಿದ FAQ ಗಳು

ಬೈಕ್‌ಗಾಗಿ ನಾನು ಸ್ಟ್ಯಾಂಡಲೋನ್ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಅನ್ನು ಖರೀದಿಸಬಹುದೇ?

ಹೌದು, ನೀನು ಖರೀದಿಸಬಹುದು. ಆದಾಗ್ಯೂ, ನೀವು ಎಲ್ಲದರಿಂದ ರಕ್ಷಣೆ ಹೊಂದಿದ್ದೀರಿ ಎಂದು ಖಚಿತಪಡಿಸಿಕೊಳ್ಳಲು ಟು ವೀಲರ್ (Comprehensive) ಬೈಕ್ ಇನ್ಶೂರೆನ್ಸ್ ಕವರ್ ಅನ್ನು ಖರೀದಿಸುವಂತೆ ಯಾವಾಗಲೂ ಸಲಹೆ ನೀಡಲಾಗುತ್ತದೆ.

ನಾನು ನನ್ನ ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಅನ್ನು ಕ್ಲೇಮ್ ಮಾಡಿದರೆ, ನಾನು ನನ್ನ ಎನ್.ಸಿ.ಬಿ (NCB) ಅನ್ನು ಕಳೆದುಕೊಳ್ಳುತ್ತೇನೆಯೇ?

ಇಲ್ಲ, ನೀವು ಕಳೆದುಕೊಳ್ಳುವುದಿಲ್ಲ. ನಿಮ್ಮ ಎನ್.ಸಿ.ಬಿಅಥವಾ ನೋ ಕ್ಲೇಮ್ ಬೋನಸ್ ಹಾಗೇ ಉಳಿಯುತ್ತದೆ.

ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಖಡ್ಡಾಯವೇ?

ಹೌದು, ಮೋಟಾರ್ ವೆಹಿಕಲ್ ಆಕ್ಟ್ , 1988 ರ ಅಡಿಯಲ್ಲಿ ಕನಿಷ್ಠ ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿರುವುದು ಕಡ್ಡಾಯವಾಗಿದೆ.

ಅಪಘಾತದ ಸಮಯದಲ್ಲಿ ಬೇರೊಬ್ಬರು ನನ್ನ ಬೈಕನ್ನು ಚಾಲನೆ ಮಾಡುತ್ತಿದ್ದರೆ, ನನ್ನ ನಷ್ಟವನ್ನು Digit ಭರಿಸುತ್ತದೆಯೇ?

ಹೌದು, ಅಪಘಾತದ ಸಮಯದಲ್ಲಿ ಬೈಕ್ ಚಲಾಯಿಸುತ್ತಿದ್ದವರು ಯಾರೇ ಆಗಿರಲಿ, Digit ಇನ್ಶೂರೆನ್ಸ್ ನಿಮ್ಮ ನಷ್ಟವನ್ನು ಭರಿಸುತ್ತದೆ. ಆದರೆ ಚಾಲಕನು ವ್ಯಾಲಿಡ್ ಲೈಸೆನ್ಸ್ ಅನ್ನು ಹೊಂದಿಲ್ಲದಿದ್ದರೆ ಅದನ್ನು ಕವರ್ ಮಾಡುವುದಿಲ್ಲ ಮತ್ತು ನಿಮ್ಮ ಕ್ಲೇಮ್ ಅನ್ನು ರದ್ದುಗೊಳಿಸಬಹುದು.

ನನ್ನ ಬೈಕ್‌ಗೆ ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಸಾಕೇ?

ಹೇ, ನಿಮ್ಮ ಬೈಕ್‌ಗೆ ಆಗಿರುವ ಎಲ್ಲಾ ಹಾನಿಯನ್ನು ಪಾವತಿಸಲು ನೀವು ಒಪ್ಪುತ್ತಿರಾ?? ಅದು ನಿಮಗೆ ಬಾಂಬ್ ಅಷ್ಟು ವೆಚ್ಚವಾಗಬಹುದು ಎಂದು ನಿಮಗೆ ತಿಳಿದಿದೆ. ಥರ್ಡ್ ಪಾರ್ಟಿ, ಮೊದಲೇ ವ್ಯಾಖ್ಯಾನಿಸಿದಂತೆ, ಥರ್ಡ್ ಪಾರ್ಟಿಯನ್ನು ಮಾತ್ರ ಕವರ್ ಮಾಡುತ್ತದೆ. ಅಂದರೆ ನಿಮ್ಮ ಅಪಘಾತದಿಂದ ಹಾನಿಗೊಳಗಾಗಿರುವ ಇತರ ಜನರು. ಥರ್ಡ್-ಪಾರ್ಟಿ ಕವರ್‌ಗೆ ಒಳಪಡದ ಹಾನಿಯನ್ನುಕಾಂಪ್ರೆಹೆನ್ಸಿವ್ ಪಾಲಿಸಿ (comprehensive policy) ರಕ್ಷಿಸುತ್ತದೆ.

ಒಂದುವೇಳೆ ನಾನು ಬೇರೆ ನಗರ/ರಾಜ್ಯದಲ್ಲಿ ಅಪಘಾತ ಹೊಂದಿದರೆ ಏನಾಗುತ್ತದೆ?

ಘಟನೆಯು ಯಾವುದೇ ನಗರ ಅಥವಾ ರಾಜ್ಯವನ್ನು ಲೆಕ್ಕಿಸದೆ, ನಿಮ್ಮನ್ನು Digit ಇನ್ಶೂರೆನ್ಸ್ ಕವರ್ ಮಾಡುತ್ತದೆ.

ನಾನು ಥರ್ಡ್ ಪಾರ್ಟಿ ಟು ವೀಲರ್ ವಾಹನ ಇನ್ಶೂರೆನ್ಸ್ ತೆಗೆದುಕೊಳ್ಳುವುದನ್ನು ತಪ್ಪಿಸಬಹುದೇ?

ಇಲ್ಲ, ಟು ವೀಲರ್ ವಾಹನಕ್ಕೆ ಥರ್ಡ್ ಪಾರ್ಟಿ ಇನ್ಶೂರೆನ್ಸ್  ತೆಗೆದುಕೊಳ್ಳುವುದನ್ನು ನೀವು ತಪ್ಪಿಸಲು ನಿಜಕ್ಕೂ ಸಾಧ್ಯವಿಲ್ಲ ಏಕೆಂದರೆ ಕಾನೂನಿನ ಪ್ರಕಾರ ಕನಿಷ್ಠ ಥರ್ಡ್-ಪಾರ್ಟಿ ಹಾನಿಗಳಿಗೆ ರಕ್ಷಣೆ ನೀಡುವ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದುವುದು ಖಡ್ಡಾಯವಾಗಿದೆ. ಈ ಸಂದರ್ಭದಲ್ಲಿ, ನೀವು ಕನಿಷ್ಟ ಥರ್ಡ್ ಪಾರ್ಟಿ ಟು ವೀಲರ್ ವಾಹನ ಇನ್ಶೂರೆನ್ಸ್ ಅಥವಾ ಇನ್ನೂ ಉತ್ತಮವಾದ ಕಾಂಪ್ರೆಹೆನ್ಸಿವ್ (Comprehensive) ಟು ವೀಲರ್ ವಾಹನ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದುವುದು ಅತ್ಯಗತ್ಯ. ವ್ಯಾಲಿಡ್ ಟು ವೀಲರ್ ವಾಹನ ಇನ್ಶೂರೆನ್ಸ್ ಪಾಲಿಸಿ ಇಲ್ಲದೆ ಚಾಲನೆ ಮಾಡುವ ಯಾರಾದರೂ 2,000ರೂಗಳ ದಂಡಕ್ಕೆ ಮತ್ತು ನಂತರದ  4,000 ರೂಗಳ ದಂಡಕ್ಕೆ ಹೊಣೆಗಾರರಾಗಿರುತ್ತಾರೆ!

ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಪಾಲಿಸಿಯ ಭಾಗವಾಗಿ ನೀಡಲಾಗುವ ಗರಿಷ್ಠ ಪರಿಹಾರ ಎಷ್ಟು ?

ಥರ್ಡ್-ಪಾರ್ಟಿ ಟು ವೀಲರ್ ವಾಹನ ಇನ್ಶೂರೆನ್ಸ್ ಪಾಲಿಸಿಯ ಭಾಗವಾಗಿ, ಗರಿಷ್ಠ ಪರಿಹಾರವು ಹಾನಿಗೊಳಗಾದ ವ್ಯಕ್ತಿಯ ಮೇಲೆ ಅವಲಂಬಿತವಾಗಿರುತ್ತದೆ.

ಥರ್ಡ್ ಪಾರ್ಟಿ ವ್ಯಕ್ತಿಗೆ ವೈಯಕ್ತಿಕ ಹಾನಿಗೆ - ಅನಿಯಮಿತ ಹೊಣೆಗಾರಿಕೆಗಳು (unlimited liabilities). ಥರ್ಡ್ ಪಾರ್ಟಿ ವಾಹನ ಅಥವಾ ಆಸ್ತಿಹಾನಿಗೆ - 7.5ಲಕ್ಷ ರೂಗಳವರೆಗೆ.

ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಕ್ಲೇಮ್ ಅನ್ನು ಸಂಗ್ರಹಿಸುವಾಗ ನಾನು ಯಾವ ದಾಖಲೆಗಳನ್ನು ಸಲ್ಲಿಸಬೇಕು?

ಯಾವುದೇ ದಾಖಲೆಗಳ ಅಗತ್ಯವಿಲ್ಲ. ಆದಾಗ್ಯೂ, ಥರ್ಡ್ ಪಾರ್ಟಿ ಬಾಧಿತರಾದವರು ಹತ್ತಿರದ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಬೇಕು.

ಒಂದುವೇಳೆ ನಾನು ವ್ಯಾಲಿಡ್ ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಪಾಲಿಸಿ ಇಲ್ಲದೆಯೇ ವಾಹನ ಓಡಿಸುವಾಗ ಸಿಕ್ಕಿಬಿದ್ದರೆ ಏನಾಗುತ್ತದೆ?

ಮೊದಲ ಬಾರಿ ಉಲ್ಲಂಘನೆಗಾಗಿ 2,000 ರೂಗಳ ದಂಡವನ್ನು ಮತ್ತು ಎರಡನೇ ಬಾರಿಗೆ ಸಿಕ್ಕಿಬಿದ್ದರೆ 4,000 ರೂಗಳ ದಂಡವನ್ನು, ನೀವು ಪಾವತಿಸಬೇಕಾಗುತ್ತದೆ.