ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಲವಾರು ಇನ್ಶೂರೆನ್ಸ್ ಪೂರೈಕೆದಾರರಲ್ಲಿ, ವೇಗವಾಗಿ ಹೆಚ್ಚುತ್ತಿರುವ ತನ್ನ ಗ್ರಾಹಕ ವರ್ಗದೊಂದಿಗೆ ಡಿಜಿಟ್ ಕಂಪನಿಯು ಬೇರೆಲ್ಲದರ ಮಧ್ಯೆ ವಿಶೇಷವಾಗಿ ಕಾಣುತ್ತದೆ. "ಪಾಪ್ಯುಲಾರಿಟಿ" ನಿಮ್ಮಲ್ಲಿ ಆಸಕ್ತಿ ಮೂಡಿಸಲು ವ್ಯಾಲಿಡ್ ಆದ ಕಾರಣವಾಗಿದ್ದರೂ, ಮಾಲೀಕರಾಗಿ ನಿಮ್ಮ ಡಿಜಿಟ್ ಪ್ಲಾಟಿನಾ ಬೈಕ್ ಇನ್ಶೂರೆನ್ಸ್ ಪಾಲಿಸಿಯಿಂದ ಏನನ್ನು ನಿರೀಕ್ಷಿಸಬಹುದು ಎಂಬುದನ್ನು ನೀವು ತಿಳಿದಿರಬೇಕು ಹಾಗೂ ನೀವದನ್ನು ಆಯ್ಕೆ ಮಾಡಬೇಕು.
ಕ್ಲೈಮ್ ಸೆಟಲ್ಮೆಂಟ್ಗಾಗಿ ಅನುಕೂಲಕರ ಫೈಲಿಂಗ್ ಪ್ರಕ್ರಿಯೆ - ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವಾಗ ನೀವು ಪರಿಶೀಲಿಸಬೇಕಾದ ಅತ್ಯಂತ ಪ್ರಮುಖವಾದ ಪಾಯಿಂಟರ್ಗಳಲ್ಲಿ ಒಂದು ಕ್ಲೈಮ್ ಸಲ್ಲಿಸುವ ವಿಧಾನವಾಗಿದೆ. ಡಿಜಿಟ್ ಸುಲಭವಾದ ವೆರಿಫಿಕೇಶನ್ನೊಂದಿಗೆ ಪ್ರಾಂಪ್ಟ್ ಕ್ಲೈಮ್ಗಳನ್ನು ನೀಡುತ್ತದೆ. ವಿಶೇಷವಾಗಿ ಡಿಜಿಟ್ ನೀಡುವ ಸ್ಮಾರ್ಟ್ಫೋನ್-ಸಕ್ರಿಯಗೊಳಿಸಿದ ಸ್ವಯಂ ತಪಾಸಣೆಯೊಂದಿಗೆ, ಈ ಪ್ರಕ್ರಿಯೆಯನ್ನು ನೀವು ಕೆಲವೇ ನಿಮಿಷಗಳಲ್ಲಿ ಪೂರ್ಣಗೊಳಿಸಬಹುದು. ಹೆಚ್ಚುವರಿಯಾಗಿ, ನಿಮ್ಮ ಪ್ಲಾಟಿನಾ ಇನ್ಶೂರೆನ್ಸ್ ಪ್ರಯೋಜನಗಳನ್ನು ನೀವು ಪಡೆದುಕೊಳ್ಳಬೇಕಾದರೆ, ಧನಾತ್ಮಕ ಅಂಶಗಳನ್ನು ಸೂಚಿಸುವ ಅಧಿಕ ಪ್ರಮಾಣದ ಕ್ಲೈಮ್ ಸೆಟಲ್ಮೆಂಟ್ಗಳನ್ನು ಸಹ ನಾವು ಹೊಂದಿದ್ದೇವೆ.
ನೆಟ್ವರ್ಕ್ ಗ್ಯಾರೇಜ್ಗಳ ಉತ್ತಮ ಸಂಪರ್ಕಿತ ಶ್ರೇಣಿ - ಡಿಜಿಟ್ ಭಾರತದಾದ್ಯಂತ 4400 ಕ್ಕೂ ಹೆಚ್ಚು ನೆಟ್ವರ್ಕ್ ಗ್ಯಾರೇಜ್ಗಳನ್ನು ಹೊಂದಿದೆ. ಇದು ವಿಶೇಷವಾಗಿ ಸಹಾಯಕವಾಗಿದೆ ಏಕೆಂದರೆ ಅಪಘಾತದ ಸಂದರ್ಭದಲ್ಲಿ ನಿಮ್ಮ ಬಜಾಜ್ ಪ್ಲಾಟಿನಾವನ್ನು, ಈ ಯಾವುದೇ ಗ್ಯಾರೇಜ್ನಿಂದ ಹಣ ಹೊಂದಿಸುವ ತೊಂದರೆಯಿಲ್ಲದೆ, ಸುಲಭವಾಗಿ ರಿಪೇರಿ ಮಾಡಿಸಬಹುದು.
ಪಾಲಿಸಿ ಪ್ರಕಾರದ ಆಯ್ಕೆ - ಡಿಜಿಟ್ ನಿಮಗೆ, ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯ ಹಲವಾರು ಆಯ್ಕೆಗಳನ್ನು ನೀಡುತ್ತದೆ. ಇದರಿಂದ ನಿಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ಸೂಕ್ತವಾದ ಪಾಲಿಸಿಯನ್ನು ನೀವು ಆಯ್ಕೆ ಮಾಡಬಹುದು. ಪರಿಣಾಮವಾಗಿ, ನೀವು ವಿವಿಧ ಪಾಲಿಸಿಗಳ ಆಫರ್ಗಳನ್ನು ಅವುಗಳ ಪ್ರಯೋಜನಗಳೊಂದಿಗೆ ಅರ್ಥಮಾಡಿಕೊಳ್ಳುವುದು ಸಹ ಅತ್ಯಗತ್ಯ.
ಥರ್ಡ್-ಪಾರ್ಟಿ ಲಯಬಿಲಿಟಿ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿ : ಸರ್ಕಾರಿ ನಿಯಮಗಳ ಅಡಿಯಲ್ಲಿ ಕಡ್ಡಾಯವಾಗಿದೆ. ಇದು ಅಪಘಾತದ ಸಂದರ್ಭದಲ್ಲಿ ನಿಮ್ಮ ಬಜಾಜ್ ಪ್ಲಾಟಿನಾ ವಿರುದ್ಧ ಎದುರಾಗಬಹುದಾದ ಯಾವುದೇ ಲಯಬಿಲಿಟಿ ಚಾರ್ಜ್ಗಳನ್ನು, ಈ ಪಾಲಿಸಿಗಳು ನೋಡಿಕೊಳ್ಳುತ್ತವೆ. ಇದು ಯಾವುದೇ ಥರ್ಡ್ ಪಾರ್ಟಿ ಆಸ್ತಿ ಅಥವಾ ವೆಹಿಕಲ್ನ ಹಾನಿ ಹಾಗೂ ಇನ್ನೊಬ್ಬ ವ್ಯಕ್ತಿಗೆ ಉಂಟಾದ ಗಾಯವನ್ನು ಒಳಗೊಂಡಿರುತ್ತದೆ. ಗಮನಿಸಬೇಕಾದ ಅಂಶವೆಂದರೆ, ಅಪಘಾತದ ಸಂದರ್ಭದಲ್ಲಿ ನಿಮ್ಮ ಸ್ವಂತ ಮೋಟಾರ್ಬೈಕ್ಗೆ ಉಂಟಾದ ಹಾನಿಯನ್ನು ಥರ್ಡ್ ಪಾರ್ಟಿಯ ಬಜಾಜ್ ಪ್ಲಾಟಿನಾ ಇನ್ಶೂರೆನ್ಸ್ ಪಾಲಿಸಿಯು ಕವರ್ ಮಾಡುವುದಿಲ್ಲ.
ಕಾಂಪ್ರೆಹೆನ್ಸಿವ್ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿ : ಈ ಪಾಲಿಸಿಯ ಹೆಸರೇ ಸೂಚಿಸುವಂತೆ, ಅಪಘಾತದಲ್ಲಿ ನಿಮ್ಮ ಟು ವೀಲರ್ ವೆಹಿಕಲ್ಗೆ ಉಂಟಾದ ಹಾನಿಯ ಜೊತೆಗೆ ಲಯಬಿಲಿಟಿ ಚಾರ್ಜ್ ಎರಡನ್ನೂ ಕವರ್ ಮಾಡುತ್ತದೆ. ಇದಲ್ಲದೆ, ಈ ಪಾಲಿಸಿಗಳು ನಿಮ್ಮ ಬಜಾಜ್ ಪ್ಲಾಟಿನಾ ಕಳ್ಳತನವಾದರೆ ಅಥವಾ ನೈಸರ್ಗಿಕ ಹಾಗೂ ಮಾನವ ನಿರ್ಮಿತ ವಿಪತ್ತುಗಳಿಂದ ಹಾನಿಗೊಳಗಾದರೆ ಅದನ್ನು ಸಹ ಕವರ್ ಮಾಡುತ್ತದೆ.
ಸೆಪ್ಟೆಂಬರ್ 2018 ರ ನಂತರ ನಿಮ್ಮ ಮೋಟಾರ್ಬೈಕ್ ಅನ್ನು ನೀವು ಖರೀದಿಸಿದ್ದರೆ, ನೀವು ಓನ್ ಡ್ಯಾಮೇಜ್ ಕವರ್ ಅನ್ನು ಸಹ ಆಯ್ಕೆ ಮಾಡಿಕೊಳ್ಳಬಹುದು ಎಂಬುದನ್ನು ಗಮನಿಸಿ. ಈ ಪಾಲಿಸಿಗಳು ಕೇವಲ ಅಪಘಾತದ ಸಂದರ್ಭದಲ್ಲಿ ನಿಮ್ಮ ಮೋಟಾರ್ಸೈಕಲ್ಗೆ ಉಂಟಾದ ಹಾನಿಯನ್ನು ಮಾತ್ರ ಕವರ್ ಮಾಡುತ್ತವೆ. ಅರ್ಥವಾಗುವಂತೆ, ಥರ್ಡ್-ಪಾರ್ಟಿ ಲಯಬಿಲಿಟಿ ಪಾಲಿಸಿಗಳನ್ನು ಪಡೆಯುವುದು ಭಾರತದಲ್ಲಿ ಕಡ್ಡಾಯವಾಗಿರುವುದರಿಂದ, ನೀವು ಈಗಾಗಲೇ ಪ್ರಸ್ತುತ ಒಂದು ಪಾಲಿಸಿಯನ್ನು ಹೊಂದಿರಬೇಕು.
ಆಯ್ಕೆ ಮಾಡಲು ಅನೇಕ ಆ್ಯಡ್-ಆನ್ ಆಯ್ಕೆಗಳು - ಡಿಜಿಟ್ ನಿಮ್ಮ ಟು ವೀಲರ್ ವೆಹಿಕಲ್ ಅನ್ನು ಇನ್ನಷ್ಟು ರಕ್ಷಿಸಲು ನಿಮ್ಮ ಕಾಂಪ್ರೆಹೆನ್ಸಿವ್ ಪ್ಲಾಟಿನಾ ಬೈಕ್ ಇನ್ಶೂರೆನ್ಸ್ ಪಾಲಿಸಿಯೊಂದಿಗೆ ಖರೀದಿಸಬಹುದಾದ ಹಲವಾರು ಆ್ಯಡ್-ಆನ್ ಕವರ್ಗಳನ್ನು ಸಹ ನೀಡುತ್ತದೆ.
- ಎಂಜಿನ್ ಮತ್ತು ಗೇರ್ ಪ್ರೊಟೆಕ್ಷನ್ ಕವರ್
- ಝೀರೋ ಡೆಪ್ರಿಸಿಯೇಶನ್ ಕವರ್
- ಕನ್ಸ್ಯೂಮೆಬಲ್ ಕವರ್
- ಬ್ರೇಕ್ ಡೌನ್ ಅಸಿಸ್ಟೆನ್ಸ್
- ರಿಟರ್ನ್ ಟು ಇನ್ವಾಯ್ಸ್ ಕವರ್
ಖರೀದಿ ಮತ್ತು ರಿನೀವಲ್ನ ಸುಲಭತೆ - ಆನ್ಲೈನ್ ಲಭ್ಯತೆಯೊಂದಿಗೆ, ಡಿಜಿಟ್ ನಿಮ್ಮ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯ ಖರೀದಿ ಅಥವಾ ರಿನೀವಲ್ ಅನ್ನು ಸುಲಭಗೊಳಿಸುತ್ತದೆ. ನಿಮ್ಮ ಅಗತ್ಯಗಳಿಗೆ ಸೂಕ್ತವಾದ ಪಾಲಿಸಿಯನ್ನು ಆಯ್ಕೆ ಮಾಡುವ ಅವಕಾಶದ ಜೊತೆಗೆ, ವಿವಿಧ ಇನ್ಶೂರೆನ್ಸ್ ಕವರ್ಗಳಲ್ಲಿ ನೀಡಲಾದ ಫೀಚರ್ಗಳನ್ನು ಹೋಲಿಸಲು ಸಹ ಇದು ನಿಮ್ಮನ್ನು ಅನುಮತಿಸುತ್ತದೆ. ನಿಮ್ಮ ಆಯ್ಕೆಯ ಪಾಲಿಸಿಯನ್ನು ಆಯ್ಕೆ ಮಾಡಿದ ಕೆಲವೇ ನಿಮಿಷಗಳಲ್ಲಿ ಆನ್ಲೈನ್ ಖರೀದಿಯನ್ನು ಪೂರ್ಣಗೊಳಿಸಬಹುದು. ನಿಮ್ಮ ಅಕೌಂಟ್ಗೆ ಲಾಗ್ ಇನ್ ಮಾಡುವ ಮೂಲಕ ಪ್ಲಾಟಿನಾ ಬೈಕ್ ಇನ್ಶೂರೆನ್ಸ್ ರಿನೀವಲ್ ಅನ್ನು ಇನ್ನಷ್ಟು ವೇಗವಾಗಿ ಪೂರ್ಣಗೊಳಿಸಬಹುದು.
ಸದಾಕಾಲ ಲಭ್ಯವಿರುವ 24x7 ಕಸ್ಟಮರ್ ಕೇರ್ - ನೀವು ಯಾವುದೇ ಸಮಯದಲ್ಲಿ ನಮ್ಮನ್ನು ಸಂಪರ್ಕಿಸಬಹುದು ಎಂಬುದನ್ನು ಖಚಿತಪಡಿಸಿಕೊಳ್ಳಲು ಡಿಜಿಟ್ನ ಕಸ್ಟಮರ್ ಕೇರ್ ತುಂಬಾ ಸಕ್ರಿಯವಾಗಿದೆ. ನಿಮ್ಮ ಕ್ಲೈಮ್ ಸಲ್ಲಿಸುವ ತುರ್ತು ಪರಿಸ್ಥಿತಿಯಾಗಿರಲಿ ಅಥವಾ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವಾಗ ನೀವು ಎದುರಿಸುವ ಯಾವುದೇ ಪ್ರಶ್ನೆಯಾಗಿರಲಿ; ನಿಮಗಾಗಿ ಡಿಜಿಟ್ನ ಕಸ್ಟಮರ್ ಕೇರ್ ದಿನವಿಡೀ ಲಭ್ಯವಿರುತ್ತದೆ. ಹೆಚ್ಚುವರಿಯಾಗಿ, ನಮ್ಮ ಕಸ್ಟಮರ್ ಕೇರ್ 24X7 ಸಕ್ರಿಯವಾಗಿರುವುದರಿಂದ ನೀವು ನಮ್ಮನ್ನು ವಾರದುದ್ದಕ್ಕೂ ಸಂಪರ್ಕಿಸಬಹುದು.
ನಿಮ್ಮ ಟು ವೀಲರ್ ವೆಹಿಕಲ್ಗಾಗಿ ಕಸ್ಟಮೈಸ್ ಮಾಡಿದ ಐಡಿವಿ - ಐಡಿವಿ ಅಥವಾ ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ ಎನ್ನುವುದು ನಿಮ್ಮ ಬಜಾಜ್ ಪ್ಲಾಟಿನಾ ಕಳುವಾದ ಸಂದರ್ಭದಲ್ಲಿ ಅಥವಾ ಯಾವುದೇ ರಿಪೇರಿ ವ್ಯಾಪ್ತಿಯನ್ನು ಮೀರಿ ಹಾನಿಗೊಳಗಾದ ಸಂದರ್ಭದಲ್ಲಿ ನೀವು ಪಡೆಯುವ ಒಟ್ಟು ಮೊತ್ತವಾಗಿದೆ. ಡಿಜಿಟ್ನಲ್ಲಿ, ನಿಮ್ಮ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವಾಗ ನಿಮ್ಮ ಐಡಿವಿ ಎಂದು ಪಡೆಯಲು ಬಯಸುವ ಮೊತ್ತವನ್ನು ನೀವೇ ಆಯ್ಕೆ ಮಾಡಬಹುದು.
ನೋ ಕ್ಲೈಮ್ ಬೋನಸ್ನ ಪ್ರಯೋಜನ - ರೈಡರ್ ಆಗಿ, ನೀವು ಸುರಕ್ಷತಾ ಮಾನದಂಡಗಳನ್ನು ಕೈಗೊಂಡಿದ್ದರೆ, ಅಪಘಾತದಿಂದಾಗಿ ನಿಮ್ಮ ಟು ವೀಲರ್ ವೆಹಿಕಲ್ ಹಾನಿಗೊಳಗಾಗುವ ಸಾಧ್ಯತೆ ಕಡಿಮೆಯಿರುತ್ತದೆ. ಅಂತಹ ಸಂದರ್ಭಗಳಲ್ಲಿ, ನಿಮ್ಮ ಪ್ರಸ್ತುತ ಪಾಲಿಸಿಯ ಮೇಲೆ ಯಾವುದೇ ಕ್ಲೈಮ್ ಮಾಡದ ಕಾರಣ, ಒಟ್ಟುಗೂಡಿದ ಬೋನಸ್ಗೆ ನೀವು ಅರ್ಹರಾಗಿದ್ದೀರಿ. ಈ ನೋ ಕ್ಲೇಮ್ ಬೋನಸ್ ನಿಮ್ಮ ಬಜಾಜ್ ಪ್ಲಾಟಿನಾ ಬೈಕ್ ಇನ್ಶೂರೆನ್ಸ್ ರಿನೀವಲ್ ಸಮಯದಲ್ಲಿ ವಿಶೇಷವಾಗಿ ಸಹಾಯಕವಾಗಬಹುದು. ಏಕೆಂದರೆ ಇದು ನೀವು ಪಾವತಿಸಬೇಕಾದ ಪ್ರೀಮಿಯಂ ಅನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡುತ್ತದೆ.
ನಿಮ್ಮ ಬಜಾಜ್ ಪ್ಲಾಟಿನಾದ ಗರಿಷ್ಠ ರಕ್ಷಣೆಯನ್ನು ಆಯ್ಕೆ ಮಾಡಲು ಯಾವ ಇನ್ಶೂರೆನ್ಸ್ ಪೂರೈಕೆದಾರರನ್ನು ಆಯ್ಕೆ ಮಾಡಬೇಕೆಂದು ನೀವು ಸರಿಯಾಗಿ ನಿರ್ಧರಿಸುವ ಸಮಯವಿದು; ಯಾವುದೇ ಅನಿರೀಕ್ಷಿತ ಸಂದರ್ಭಗಳ ವಿರುದ್ಧ ರಕ್ಷಿಸುವ ಅವಶ್ಯಕತೆಗಾಗಿ ಉತ್ತಮ ಇನ್ಶೂರೆನ್ಸ್ ಕಂಪನಿಯ ಆಯ್ಕೆ ತುಂಬಾ ಮುಖ್ಯವಾಗಿರುತ್ತದೆ.