ಡಿಜಿಟ್ ಈಗಾಗಲೇ ತನ್ನ ಸುಧಾರಿತ ಗ್ರಾಹಕ ಅನುಭವ ಮತ್ತು ಇದು ಒದಗಿಸುತ್ತಿರುವ ಹಲವು ವೈಶಿಷ್ಠ್ಯಗಳಿಂದಾಗಿ ಇನ್ಶೂರೆನ್ಸ್ ಜಗತ್ತಿನಲ್ಲಿ ತನ್ನನ್ನು ತಾನು ಮುಂಚೂಣಿಯ ಸ್ಥಾನಕ್ಕೇರಿಸಿಕೊಂಡಿದೆ. ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯನ್ನು ಹುಡುಕುತ್ತಿರುವ ಒಬ್ಬ ಹೆಮ್ಮೆಯ ಸ್ಕೂಟಿ ಪೆಪ್ ಮಾಲೀಕರಾಗಿರುವ ನೀವು, ಡಿಜಿಟ್ ಪಾಲಿಸಿಗಳ ಜೊತೆಜೊತೆಗೇ ಬರುವ ವೈಶಿಷ್ಠ್ಯಗಳನ್ನೂ ಗಮನಿಸಬೇಕು.
ನಿಮ್ಮ ನಿರ್ದಿಷ್ಟ ಅಗತ್ಯಗಳನ್ನು ಕವರ್ ಮಾಡುವ ಹಲವು ಪಾಲಿಸಿ ಆಯ್ಕೆಗಳು - ಡಿಜಿಟ್, ಇರಬಹುದಾದ ಎಲ್ಲಾ ಸುರಕ್ಷತಾ ಅಗತ್ಯಗಳನ್ನು ಅರಿತು, ನಿಮಗೆ ಆಯ್ದುಕೊಳ್ಳಲು ಹಲವು ಪಾಲಿಸಿ ಆಯ್ಕೆಗಳನ್ನು ನೀಡುತ್ತಿದೆ.
- ಥರ್ಡ್ ಪಾರ್ಟೀ ಹೊಣೆಗಾರಿಕೆಯ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಗಳು : ನೀವು ನಿಮ್ಮ ಟಿವಿಎಸ್ ಸ್ಕೂಟಿ ಪೆಪ್ ಜೊತೆ ಅಪಘಾತಕ್ಕೀಡಾದರೆ ಇದರಿಂದ ಉಂಟಾಗುವ ಯಾವುದೇ ಥರ್ಡ್ ಪಾರ್ಟೀ ಆರ್ಥಿಕ ಹೊಣೆಗಾರಿಕೆಗಳನ್ನು ಈ ಪಾಲಿಸಿಗಳು ಕವರ್ ಮಾಡುತ್ತವೆ. ಥರ್ಡ್ ಪಾರ್ಟೀ ಸ್ಕೂಟಿ ಪೆಪ್ ಪಾಲಿಸಿಗಳು ಅಪಘಾತದಲ್ಲಿ ಸಿಲುಕಿಕೊಂಡಿರುವ ಯಾವುದೇ ಥರ್ಡ್-ಪರ್ಟೀ ವ್ಯಕ್ತಿ, ವಾಹನ ಅಥವಾ ಸ್ವತ್ತಿಗೆ ಆರ್ಥಿಕ ನೆರವನ್ನು ನೀಡುತ್ತವೆ, ಆದರೆ ಇದು ನಿಮ್ಮ ಸ್ಕೂಟಿಗಾದ ಹಾನಿ ಅಥವಾ ನಿಮಗಾದ ಗಾಯಗಳನ್ನು ಕವರ್ ಮಾಡುವುದಿಲ್ಲ.
- ಕಾಂಪ್ರೆಹೆನ್ಸಿವ್ ಟು ವೀಲರ್-ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಗಳು : ಇದು ಥರ್ಡ್ ಪಾರ್ಟೀ ಹೊಣೆಗಾರಿಕೆಗಳ ಜೊತೆ, ಅಪಘಾತದ ಸಂದರ್ಭದಲ್ಲಿ ನಿಮ್ಮ ಟು ವೀಲರ್ ವಾಹನಕ್ಕೆ ಉಂಟಾಗುವ ಹಾನಿಗಳನ್ನೂ ಕವರ್ ಮಾಡುತ್ತದೆ. ಅದಲ್ಲದೆ, ಇದು ನಿಮ್ಮ ವಾಹನವನ್ನು ಬೆಂಕಿ, ನೈಸರ್ಗಿಕ ಹಾಗೂ ಮನುಷ್ಯ ನಿರ್ಮಿತ ವಿಪತ್ತುಗಳಿಂದಾದ ಹಾನಿಗಳನ್ನೂ ಕವರ್ ಮಾಡುತ್ತದೆ.
ನೀವು ನಿಮ್ಮ ಸ್ಕೂಟಿ ಪೆಪ್ ಅನ್ನು 2018 ರ ಸೆಪ್ಟೆಂಬರ್ ನಂತರ ಖರೀದಿಸಿದ್ದರೆ, ನೀವು ನಿಮ್ಮ ವಾಹನಕ್ಕೆ ಕೇವಲ ಓನ್ ಡ್ಯಾಮೇಜ್ ಟು ವೀಲರ್ ವಾಹನ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡಬಹುದು. ನೀವು ಓನ್ ಡ್ಯಾಮೇಜ್ ಕವರ್ ಖರೀದಿಸಲು ಅರ್ಹರಾಗಲು ಥರ್ಡ್ ಪಾರ್ಟೀ ಹೊಣೆಗಾರಿಕೆಯ ಕವರ್ ಅನ್ನು ಹೊಂದಿರಬೇಕಾದರೂ ಕೂಡಾ, ನೀವು ಅದನ್ನು ಕಡಿಮೆ ಬೆಲೆಗೆ ಪಡೆಯಬಹುದು, ಒಂಟಿ ಕವರ್ ಆಗಿ.
ಸಂಪೂರ್ಣ ಸುರಕ್ಷತೆಗಾಗಿ ಹಲವು ಆಡ್-ಆನ್ ಕವರ್ ಗಳು - ನಿಮ್ಮ ಕಾಂಪ್ರೆಹೆನ್ಸಿವ್ ಸ್ಕೂಟಿ ಇನ್ಶೂರೆನ್ಸ್ ಪಾಲಿಸಿ ಜೊತೆಗೆ ಈ ಕೆಳಗೆ ನೀಡಿರುವ ಆಡ್-ಆನ್ ಕವರ್ ಗಳನ್ನು ಖರೀದಿಸಿ ನಿಮ್ಮ ಟು ವೀಲರ್ ವಾಹನದ ಸುರಕ್ಷತೆಯನ್ನು ವೃದ್ಧಿಸಬಹುದು:
ನೆಟ್ವರ್ಕ್ ಗ್ಯಾರೇಜ್ ಗಳಲ್ಲಿ ಸರಳ ನಗದುರಹಿತ ರಿಪೇರಿಗಳು - ಅಪಘಾತದ ಸಂದರ್ಭದಲ್ಲಿ ಡಿಜಿಟ್ ಜೊತೆ ಪಾರ್ಟ್ನರ್ ಆಗಿರುವ ದೇಶದ ಸಾವಿರಕ್ಕಿಂತಲೂ ಹೆಚ್ಚು ಗ್ಯಾರೇಜ್ ಗಳಲ್ಲಿ ಸರಳವಾಗಿ ನೀವು ನಿಮ್ಮ ಸ್ಕೂಟಿ ಪೆಪ್ ಅನ್ನು ರಿಪೇರಿ ಮಾಡಿಸಬಹುದು. ಈ ಪಾರ್ಟ್ನರ್ ಗ್ಯಾರೇಜ್ ಮತ್ತು ಕೇಂದ್ರಗಳಲ್ಲಿ ದೊರಕುವ ಮುಖ್ಯ ಲಾಭ ಏನೆಂದರೆ ನಗದುರಹಿತ ಸೇವೆ, ಇದರಿಂದ ನಿಮಗೆ ಹಣವನ್ನು ನಿರ್ವಹಿಸುವ ಗೊಂದಲ ತಪ್ಪುತ್ತದೆ.
ಒಂದು ವೇಳೆ ನೀವು ನಿಮ್ಮ ಸ್ಕೂಟಿ ಪೆಪ್ ನ ರಿಪೇರಿಗೆ ನೆಟ್ವರ್ಕ್ ನ ಹೊರಗಿರುವ ಗ್ಯಾರೇಜ್ ನ ಸೇವೆ ಪಡೆದುಕೊಂಡಿದ್ದರೆ, ನಿಮ್ಮ ಸ್ಕೂಟಿಯ ಇನ್ಶೂರೆನ್ಸ್ ಗಾಗಿ ಪ್ರತ್ಯೇಕವಾಗಿ ಕ್ಲೈಮ್ ಅನ್ನು ಫೈಲ್ ಮಾಡಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ,ನೀವು ಆ ಕ್ಷಣಕ್ಕೆ ಬಿಲ್ ಅನ್ನು ಪಾವತಿಸಿ ನಿಮ್ಮ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪ್ರೊವೈಡರ್ ನಿಂದ ಮರುಪಾವತಿಗಾಗಿ ಕಾಯಬೇಕಾಗುತ್ತದೆ.
ಶೀಘ್ರ ಕ್ಲೈಮ್ ಕನಿಷ್ಠ ದಾಖಲಾತಿಗಳೊಂದಿಗೆ - ಡಿಜಿಟ್ ಗ್ರಾಹಕರ ಹೆಚ್ಚುತ್ತಿರುವ ಸಂಖ್ಯೆಗೆ ಒಂದು ಪ್ರಮುಖ ಕಾರಣ ಅದರ ವಿಶಿಷ್ಠ ಸಾಂಪ್ರದಾಯಿಕ ಸರಳ ಕ್ಲೈಮ್ ಪ್ರಕ್ರಿಯೆಯಾಗಿದೆ.
ಡಿಜಿಟ್ ನಿಮಗೆ ಸರಳ ಆನ್ಲೈನ್ ಕ್ಲೈಮ್ ಮಾಡುವ ಸೌಲಭ್ಯವನ್ನು ಕಲ್ಪಿಸುತ್ತದೆ ಹಾಗೂ ಅಪಘಾತದ ಸಮಯದಲ್ಲಿ ಇದನ್ನು ನೀವು ಕ್ಷಣಮಾತ್ರದಲ್ಲಿ ಪೂರ್ತಿ ಮಾಡಬಹುದು. ನಿಮ್ಮ ಸ್ಕೂಟಿ ಪೆಪ್ ಇನ್ಶೂರೆನ್ಸ್ ಜೊತೆ ನೀಡಲಾದ ಈ ಕ್ಲೈಮ್ ಪ್ರಕ್ರಿಯೆಗೆ ಸ್ಮಾರ್ಟ್ ಫೋನ್ ಅಳವಡಿಸಿದ ಪರಿಶೀಲನೆಯ ನೆರವು ದೊರಕುತ್ತದೆ ಹಾಗೂ ಇದರಿಂದ ಕ್ಲೈಮ್ ಪ್ರಕ್ರಿಯೆ ಸಾಕಷ್ಟು ಗೊಂದಲರಹಿತವಾಗುತ್ತದೆ.
ಈ ಶೀಘ್ರ ಕ್ಲೈಮ್ ಜೊತೆ ನಮ್ಮ ಕಡೆಯಿಂದ ನಿಮಗೆ ವಿಳಂಬವಿಲ್ಲದ ಸೆಟ್ಲ್ಮೆಂಟ್ ಕೂಡಾ ದೊರೆಯುತ್ತದೆ. ಇದರ ಜೊತೆ ನಮಗೆ ಸೆಟ್ಲ್ಮೆಂಟಿನ ಅತೀ ಹೆಚ್ಚು ಅನುಪಾತ ಹೊಂದಿರುವ ಹಿರಿಮೆ ಇದೆ.
ಗ್ರಾಹಕ ಸೇವೆ ಎಲ್ಲಾ ಸಮಯದಲ್ಲೂ ಲಭ್ಯ - ಇನ್ಶೂರೆನ್ಸ್ ಪಾಲಿಸಿಗಳು ಅಪಘಾತ ಹಾಗೂ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು ಅಗತ್ಯವಿರುವ ಕೆಲವು ಉತ್ಪನ್ನಗಳಲ್ಲಿ ಒಂದಾಗಿದೆ. ಅದಕ್ಕಾಗಿಯೇ, ಇಂತಹ ಪರಿಸ್ಥಿತಿಗಳನ್ನು ನಿಭಾಯಿಸಲು, ಡಿಜಿಟ್, ವಾರದ ಪ್ರತೀ ದಿನ, ದಿನದ 24 ಘಂಟೆಗಳೂ ಗ್ರಾಹಕ ಸೇವಾ ಸೌಲಭ್ಯವನ್ನು ನೀಡುತ್ತದೆ. ನೀವು ನಿಮ್ಮ ಸ್ಕೂಟಿ ಪೆಪ್ ಇನ್ಶೂರೆನ್ಸ್ ಕ್ಲೈಮ್ ಫೈಲ್ ಮಾಡಲು ನಿಮಗೆ ಬೇಕಾದ ನೆರವಿಗಾಗಿ ಕೇವಲ ನಮ್ಮ ಕಸ್ಟಮರ್ ಕೇರ್ ಗೆ ಕರೆ ಮಾಡಿದರೆ ಸಾಕು.
ನಿಮ್ಮ ಐಡಿವಿ ಅನ್ನು ಕಸ್ಟಮೈಜ್ ಮಾಡುವ ಆಯ್ಕೆ - ಐಡಿವಿ(IDV) ಅಥವಾ ಇನ್ಶೂರೆನ್ಸ್ ಡಿಕ್ಲೇರ್ಡ್ ವ್ಯಾಲ್ಯೂ ನಿಮ್ಮ ಟಿವಿಎಸ್ ಸ್ಕೂಟಿ ಪೆಪ್ ಕಳವು ಅಥವಾ ನಾಶವಾದಲ್ಲಿ ಸಿಗುವ ಒಟ್ಟು ಮೊತ್ತವಾಗಿದೆ. ದುರಸ್ತಿ ಸಾಧ್ಯವಾಗದ ಸಂದರ್ಭದಲ್ಲಿ, ಈ ಭಾರೀ ಮೊತ್ತವು ನಿಮ್ಮ ಸ್ಕೂಟಿಯನ್ನು ಬದಲಿಸಲು ವಿಶೇಷವಾಗಿ ನೆರವಾಗುತ್ತದೆ. ಡಿಜಿಟ್ ನಿಮಗೆ ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮ ಐಡಿವಿ ಅನ್ನು ಆಯ್ಕೆ ಮಾಡಲು ಅನುಮತಿ ನೀಡುತ್ತದೆ ಹಾಗೂ ನಿಮ್ಮ ಸ್ಕೂಟಿ ಪೆಪ್ ಇನ್ಶೂರೆನ್ಸ್ ಮೊತ್ತವನ್ನು ಇದರ ಮೇಲೆಯೇ ನಿರ್ಧರಿಸಲಾಗುತ್ತದೆ.
ನೋ ಕ್ಲೈಮ್ ಮೇಲಿನ ಲಾಭಗಳು - ನಿಮ್ಮ ಸ್ಕೂಟಿಯನ್ನು ಸುರಕ್ಷಿತವಾಗಿ ಓಡಿಸಬೇಕೆಂಬುದು ಎಂದೆಂದಿಗೂ ಮಾನ್ಯವಾಗಿರುವ ಸಲಹೆಯಾಗಿದೆ ಹಾಗೂ ನೀವು ನಿಸ್ಸಂದೇಹವಾಗಿ ಎಲ್ಲಾ ಟ್ರಾಫಿಕ್ ನಿಯಮಗಳನ್ನು ಪಾಲಿಸುವುದನ್ನು ತಪ್ಪಿಸಲು ಇಚ್ಛಿಸುವುದಿಲ್ಲ. ಕೆಲವೊಮ್ಮೆ ಅಪಘಾತಗಳನ್ನು ತಪ್ಪಿಸುವುದು ಅಸಾಧ್ಯವಾದರೂ, ನೀವು ಒಂದು ಇನ್ಶೂರೆನ್ಸ್ ಅವಧಿಯ ಕಾಲ ಇದನ್ನು ತಪ್ಪಿಸಿದರೆ, ನಿಮ್ಮ ಇನ್ಶೂರೆನ್ಸ್ ಪಾಲಿಸಿ ಒದಗಿಸುವ ನೋ ಕ್ಲೈಮ್ ಬೋನಸ್ ಅನ್ನು ನೀವು ಪಡೆಯಬಹುದು.ಇದು ನಿಮ್ಮ ಪಾಲಿಸಿಯ ಆಧಾರದ ಮೇಲೆ 50% ನ ವರೆಗೂ ಹೋಗಬಲ್ಲದ್ದಾದರಿಂದ, ನಿಮ್ಮ ಪ್ರಸ್ತುತ ಪಾಲಿಸಿಯ ರಿನ್ಯೂವಲ್ ದರವನ್ನು ಕಡಿಮೆ ಮಾಡಬಹುದು.
ಖರೀದಿಯ ಸರಳತೆ ಹಾಗೂ ಪಾಲಿಸಿಗಳ ರಿನೀವಲ್ - ಇನ್ಶೂರೆನ್ಸ್ ಪಾಲಿಸಿಗಳ ಆನ್ಲೈನ್ ಲಭ್ಯತೆ, ಅದು ಖರೀದಿ ಆಗಿರಲಿ ಅಥವಾ ರಿನೀವಲ್ ಆಗಿರಲಿ, ನಮ್ಮ ಗ್ರಾಹಕರಿಗೆ ಬಹಳ ಅನುಕೂಲಕರವಾಗಿದೆ. ಇದು ಗ್ರಾಹಕರಿಗೆ ಬೇರೆ ಬೇರೆ ಪಾಲಿಸಿಗಳನ್ನು ಹೋಲಿಸಿ ಅವರಿಗೆ ಉತ್ತಮವಾದುದನ್ನು ಆಯ್ಕೆ ಮಾಡುವ ಅನುಮತಿ ನೀಡುತ್ತದೆ ಹಾಗೂ ಇದರೊಂದಿಗೆ ಅವರು ಸ್ಕೂಟಿ ಪೆಪ್ ರಿನ್ಯೂವಲ್ ನ ದರಗಳನ್ನೂ ಪರಿಶೀಲಿಸಬಹುದು.
ಒಮ್ಮೆ ನೀವು ಪಾಲಿಸಿ ಖರೀದಿಸಿ ಆದ ಮೇಲೆ, ನೀವು ಈ ದರಗಳನ್ನು ಹಾಗೂ ಇತರ ವೈಶಿಷ್ಠ್ಯಗಳನ್ನು ನಿಮ್ಮ ರುಜುವಾತುಗಳೊಂದಿಗೆ ಲಾಗಿನ್ ಮಾಡಿ ಚೆಕ್ ಮಾಡಬಹುದು.
ಈಗಾಗಲೇ ಅರ್ಥಮಾಡಿಕೊಂಡಂತೆ, ಹಠಾತ್ ಆಗಿ ಉಂಟಾಗಬಲ್ಲ ಯಾವುದೇ ರೀತಿಯ ಸಮಸ್ಯೆಗಳಿಂದ ನಿಮ್ಮ ಸ್ಕೂಟಿ ಪೆಪ್ ಅನ್ನು ಸಂಪೂರ್ಣವಾಗಿ ಸಂರಕ್ಷಿಸಲು ಡಿಜಿಟ್ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಗಳು ಉತ್ತಮ ಆಯ್ಕೆಯಾಗಿವೆ.