'ಒಹ್ ನೋ!" ನಿಮಗೆ ಎಂದಾದರೂ ಫ್ಲೈಟ್ ಡಿಲೇ ಆಗಿದ್ದರೆ, ನಿಮಗೆ ಅದರ ಹತಾಶೆ ತಿಳಿದೇ ಇರುತ್ತದೆ. ನಮಗೂ ಗೊತ್ತು  ಮತ್ತು ಅದಕ್ಕಾಗಿಯೇ ನಾವು ನಿಮ್ಮ ಬೋರ್ಡಿಂಗ್‌ ಸಮಯದವರೆಗಿನ ಆ ದೀರ್ಘ, ಹೆಚ್ಚುವರಿ ನಿಮಿಷಗಳ ಬಗ್ಗೆ ನಿಮಗೆ ಸಹಾಯ ಮಾಡಲು ಚಿಕ್ಕ ಪರಿಹಾರದೊಂದಿಗೆ ಬಂದಿದ್ದೇವೆ; ನಿಮ್ಮ ದೇಶೀಯ ಪ್ರಯಾಣಕ್ಕಾಗಿ ಫ್ಲೈಟ್ ಡಿಲೇಯನ್ನೊಳಗೊಂಡ ಫಿಕ್ಸೆಡ್ ಬೆನೆಫಿಟ್!


ಹಕ್ಕು ನಿರಾಕರಣೆ:  ಫೆಬ್ರವರಿಯಿಂದ ನವೆಂಬರ್‌ವರೆಗಿನ ಎಲ್ಲಾ ವಿಮಾನಗಳಿಗೆ 1000 ರೂಪಾಯಿಗಳು. ಹಾಗೂ ಡಿಸೆಂಬರ್ ಮತ್ತು ಜನವರಿಯಲ್ಲಿನ ವಿಮಾನಗಳಿಗೆ  750ರೂಪಾಯಿಗಳು.

ನಿಮ್ಮ ಡೊಮೆಸ್ಟಿಕ್ ಫ್ಲೈಟ್ ಡಿಲೇಯಾದರೆ ನೀವು ಏನು ಪಡೆಯುತ್ತೀರಿ?*

ಪ್ರಯಾಣದ ತಿಂಗಳು ಫ್ಲೈಟ್ ಡಿಲೇ ಕಚಿತ ಲಾಭಗಳು
ಫೆಬ್ರವರಿಯಿಂದ ನವೆಂಬರ್ 90 ಅಥವಾ ಅದಕ್ಕಿಂತ ಹೆಚ್ಚಿನ ನಿಮಿಷಗಳು ₹1000
ಡಿಸೆಂಬರ್ ಮತ್ತು ಜನೇವರಿ 120 ಅಥವಾ ಅದಕ್ಕಿಂತ ಹೆಚ್ಚಿನ ನಿಮಿಷಗಳು ₹750

ನಿಮಗೆ ಫ್ಲೈಟ್ ಡಿಲೇಯಾದಾಗ, ವಿಮಾನ ನಿಲ್ದಾಣದಲ್ಲಿ ನೀವು ಮಾಡಬಹುದಾದ 5 ಅದ್ಭುತವಾದ ಕೆಲಸಗಳು.

ಫುಡ್ ನಿಮಗೆ ಇಂಧನವಾಗಲಿ.

ಯಾಕೆಂದರೆ, ಹಸಿವಾಗಿರುವ ನೀವು ಹ್ಯಾಪಿ ಆಗಿರುವುದಿಲ್ಲ!

ಹಾಪ್ ಆಂಡ್ ಶಾಪ್

ನಿಮ್ಮ ಮೆಚ್ಚಿನ ಶಾಪ್'ಗಳ ಸುತ್ತಲೂ ಅಡ್ಡಾಡಿ ಮತ್ತು ಆ ಚಿಕ್ಕ ವಿಷ್ ಲಿಸ್ಟ್ ಅನ್ನು ಪೂರೈಸಿಕೊಳ್ಳಬಹುದು!

ಒಂದು ಮೈಂಡ್ ಸ್ಪಾ ಪಡೆಯಿರಿ!

ವಿಮಾನ ನಿಲ್ದಾಣದ ಬುಕ್ ಸ್ಟೋರ್ ಅನ್ನು ಬ್ರೌಸ್ ಮಾಡಿ ಮತ್ತು  ಮುಂದಿನ ನಿಮ್ಮ ಫೆವರೇಟ್ ಪುಸ್ತಕವನ್ನು ಆಯ್ಕೆಮಾಡಿ!

ಸ್ವೀಟ್ ಇಂಡಲ್ಗೆನ್ಸಸ್ (ಸಿಹಿ ಭೋಗಗಳು)

ಫ್ಲೈಟ್ ಡಿಲೇ ಮಾಡಿಕೊಳ್ಳಲು ಯಾರೂ ಅರ್ಹರಲ್ಲ, ಆದರೆ ಪ್ರತಿಯೊಬ್ಬರೂ ಸಿಹಿತಿಂಡಿ ಸವಿಯಲು ಅರ್ಹರು.

ಹಣ ಇರಿಸಿಕೊಳ್ಳಿ

ವ್ಯಾಲೆಟ್‌ ಅನ್ನು ತೊಂದರೆಗಳಿಗೆ ಉಳಿಸಿಕೊಳ್ಳಿ ಅಥವಾ ನಿಮ್ಮ ಮುಂದಿನ ಕ್ಯಾಬ್ ರೈಡ್‌ನಲ್ಲಿ ಹಣವನ್ನು ಬಳಸಿ (ಬಹುಶಃ ಈ ಬಾರಿ ಪ್ರೀಮಿಯರ್ ಕ್ಯಾಬ್ ಸೂಕ್ತವಾಗಬಹುದು)

ನಮ್ಮ ಫ್ಲೈಟ್ ಡಿಲೇ ಕವರ್ (common carrier delay) ತುಂಬಾ ಯೂನಿಕ್ ಆಗಿದೆ. ಏಕೆ ಗೊತ್ತೆ?

ತೊಂದರೆ-ಮುಕ್ತ ಕ್ಲೇಮ್ ಪ್ರೊಸೆಸ್

ನಿಮ್ಮ ಫ್ಲೈಟ್ ಡಿಲೇಯಾದರೆ , ನಾವು ಸ್ವಯಂಚಾಲಿತವಾಗಿ ನಿಮಗೆ SMS ಕಳುಹಿಸುತ್ತೇವೆ.

ನಿಮ್ಮ ಬೋರ್ಡಿಂಗ್ ಪಾಸ್ ಮತ್ತು ಬ್ಯಾಂಕ್ ವಿವರಗಳನ್ನು ಲಿಂಕ್‌ನಲ್ಲಿ ಅಪ್ಲೋಡ್ ಮಾಡಿ.

ಹೇ! ನಾವು ಭರವಸೆ ನೀಡಿದ ಮೊತ್ತವನ್ನು ನಿಮ್ಮ ಅಕೌಂಟಿಗೆ ಕ್ರೆಡಿಟ್ ಮಾಡಲಾಗುತ್ತದೆ!

ಯಾವುದು ಕವರ್ ಆಗುವುದಿಲ್ಲ?

ನಾವು ನಿಜವಾಗಿಯೂ ಪಾರದರ್ಶಕತೆಯನ್ನು ನಂಬುತ್ತೇವೆ! ಆದರೆ ಕವರ್ ಆಗದ ಕೆಲ ಸನ್ನಿವೇಶಗಳು ಇಲ್ಲಿವೆ.

ಒಂದುವೇಳೆ ಫ್ಲೈಟ್ ಡಿಲೇ ಬಗ್ಗೆ ಏರ್‌ಲೈನ್ ಜವಾಬ್ದಾರರಾಗಿದ್ದರೆ ಮತ್ತು ಡಿಲೇ ಬಗ್ಗೆ ಕನಿಷ್ಠ 6 ಗಂಟೆಗಳ ಮುಂಚಿತವಾಗಿ ನಿಮಗೆ ತಿಳಿಸಿದ್ದರೆ.

ಈ ಡಿಲೇ ಕವರ್ ಒಂದು ರೀತಿಯ ದೇಶಿಯ ಪ್ರಯಾಣ ವಿಮೆಯಾಗಿದೆ. (ಡೊಮೆಸ್ಟಿಕ್ ಟ್ರಾವೆಲ್ ಇನ್ಶೂರೆನ್ಸ್ ) ಆದ್ದರಿಂದ ಇದು ಭಾರತದಲ್ಲಿ ಚಾಲನೆಯಲ್ಲಿರುವ ಡೊಮೆಸ್ಟಿಕ್ ಫ್ಲೈಟ್ಸಗಳಿಗೆ ಮಾತ್ರ ಅನ್ವಯಿಸುತ್ತದೆ.

ಈ ಕವರ್ ಒಂದೇ ವಿಮಾನಕ್ಕೆ ಮಾತ್ರ ಅನ್ವಯಿಸುತ್ತದೆ. ಆದ್ದರಿಂದ, ನಿಮ್ಮ ಸಂಪೂರ್ಣ ರೌಂಡ್ ಟ್ರಿಪ್ ಅನ್ನು ನೀವು ಕವರ್ ಮಾಡಲು ಬಯಸಿದರೆ, ನಿಮ್ಮ ಮುಂದಿನ ಮತ್ತು ಹಿಂತಿರುಗುವ ಪ್ರತಿ ಫ್ಲೈಟ್‌ಗೆ ನೀವು ಫ್ಲೈಟ್ ಡಿಲೇ ಕವರ್ (common carrier delay )  ಪಡೆಯಬೇಕು.

ಫ್ಲೈಟ್ ಡಿಲೇಯ ಕಾಮನ್ ಕ್ಯಾರಿಯರ್ ಡಿಲೇ ಕವರ್ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು.

ಒಂದುವೇಳೆ ನನ್ನ ಫ್ಲೈಟ್ ರದ್ದುಗೊಂಡರೆ ?

ಇದು ಫ್ಲೈಟ್ ಡಿಲೇ ಕವರ್ ಮಾತ್ರ, ಆದ್ದರಿಂದ ನಿಮ್ಮ ವಿಮಾನವನ್ನು ರದ್ದುಗೊಳಿಸಿದರೆ ನಾವು ನಿಮಗೆ ಪರಿಹಾರ ನೀಡಲು ಸಾಧ್ಯವಿಲ್ಲ.

ನನ್ನ ಫ್ಲೈಟ್ ವಿಳಂಬವಾದರೆ ನಾನು ಏರ್‌ಲೈನ್‌ನಿಂದ ಯಾವುದೇ ಮರುಪಾವತಿಯನ್ನು ಪಡೆಯಬಹುದೇ?

ಇದು ನಿಮ್ಮ ಏರ್‌ಲೈನಿನ ಪಾಲಿಸಿಯನ್ನು ಅವಲಂಬಿಸಿರುತ್ತದೆ. ಆದರೆ ಸಾಮಾನ್ಯವಾಗಿ, ಹೆಚ್ಚಿನ ಏರಲೈನ್  ಸಂಸ್ಥೆಗಳು ಫ್ಲೈಟ್ ಡಿಲೇಗಾಗಿ ಮರುಪಾವತಿಯನ್ನು ನೀಡುವುದಿಲ್ಲ. ಅದಕ್ಕಾಗಿ ನಿಮಗೆ ಸಹಾಯ ಮಾಡಲು ನಿಮ್ಮೊಂದಿಗೆ ನಮ್ಮನ್ನು ಜೊತೆಯಾಗಿಸಿಕೊಳ್ಳಿ.

ಈ ಫ್ಲೈಟ್ ಡಿಲೇ ಕವರ್ ನನಗೆ ಹೇಗೆ ಬೆನೆಫಿಟ್ ನೀಡುತ್ತದೆ?

ಫ್ಲೈಟ್ ಡಿಲೇಯನ್ನು ಯಾರೂ ಇಷ್ಟಪಡುವುದಿಲ್ಲ ಮತ್ತು ನಾವು ನಿಮಗೆ ಸಮಯವನ್ನು ಹಿಂತಿರುಗಿಸಲು ಸಾಧ್ಯವಾಗದಿದ್ದರೂ, ನಿಮ್ಮ ಸಮಯಕ್ಕೆ ಮಾನಿಟರಿ ಕಾಂಪನ್ಸೆಷನ್  ನೀಡಲು ಯೋಚಿಸಿದ್ದೇವೆ. ಆದ್ದರಿಂದ ನೀವು ಅದನ್ನು ವಿಮಾನ ನಿಲ್ದಾಣದಲ್ಲಿ ಊಟ, ಪುಸ್ತಕ ಅಥವಾ ಬೇರೆ ಯಾವುದನ್ನಾದರೂ ಖರೀದಿಸಬಹುದು. ಅಥವಾ ಅದನ್ನು ಹಾಗೇ ಉಳಿಸಿಕೊಳ್ಳಬಹುದು!

ನಾನು ಪರಿಹಾರದ ಮೊತ್ತವನ್ನು ಯಾವುದಕ್ಕಾದರೂ ಬಳಸಬಹುದೇ?

ಹೌದು, ಆ ಮೊತ್ತದೊಂದಿಗೆ ನೀವು ಏನನ್ನಾದರೂ ಮಾಡಬಹುದು. ಅದಕ್ಕೆ  ಯಾವುದೇ ನಿರ್ಬಂಧವಿಲ್ಲ

ಫ್ಲೈಟ್ ಡಿಲೇ -ಕಾಮನ್ ಕ್ಯಾರಿಯರ್ ಡಿಲೇ ಕವರ್ ಗಾಗಿ ನಾನು ಡಿಜಿಟ್‌ನ ಕವರ್‌ ಅನ್ನು ಏಕೆ ಆಯ್ದುಕೊಳ್ಳಲಿ?

ಫ್ಲೈಟ್ ಡಿಲೇಗಳು ಅನಿವಾರ್ಯ, ಆದರೆ ಡಿಜಿಟ್‌'ನಿಂದ ಫ್ಲೈಟ್ ಕವರ್‌'ಗೆ ಕೇವಲ 49 ರೂಗಳನ್ನು ಖರ್ಚು ಮಾಡುವ ಮೂಲಕ, ನಿಮ್ಮ ಫ್ಲೈಟ್, ಡಿಲೇ ಆದರೂ ಸಹ, ಮಾನಿಟರಿ ಕಾಂಪನ್ಸೆಷನ್  ಮೂಲಕ ನೀವು ಹೆಚ್ಚಿನದನ್ನು ಪಡೆಯುತ್ತೀರಿ ಎಂದು ನೀವು ಭರವಸೆ ಪಡೆಯಬಹುದು.

ಕಾಮನ್ ಕ್ಯಾರಿಯರ್ ಡಿಲೇ ಕವರ್ ಇನ್ಶೂರೆನ್ಸ್ ಎಂದರೇನು?

ಫ್ಲೈಟ್ ಡಿಲೇ ಕವರ್ ಎಂದೂ ಕರೆಯಲ್ಪಡುವ ಕಾಮನ್ ಕ್ಯಾರಿಯರ್ ಡಿಲೇ ಇನ್ಶೂರೆನ್ಸ್ , ಕಿರಿಕಿರಿಗೊಳಿಸುವ ಫ್ಲೈಟ್ಸ್ ಡಿಲೆಗಳನ್ನು ನಿಭಾಯಿಸಲು ಮೀಸಲಾಗಿರುವ ಪಾಕೆಟ್ ಗಾತ್ರದ ಡೊಮೆಸ್ಟಿಕ್ ಟ್ರಾವೆಲ್ ಇನ್ಶೂರೆನ್ಸ್ ಆಗಿದೆ.

ನಿಮ್ಮ ಕಳೆದುಹೋದ ಸಮಯವನ್ನು ಮರಳಿ ಪಡೆಯುವಂತೆ ನಾವು ನಿಮಗೆ ಸಹಾಯ ಮಾಡಲು ಸಾಧ್ಯವಾಗದಿದ್ದರೂ, ನಿಮ್ಮ ಪ್ರಯಾಣದ ವಿಮಾದಾರರು ನಿರ್ದಿಷ್ಟಪಡಿಸಿದಂತೆ ನಿಮ್ಮ ವಿಮಾನವು 90 ಅಥವಾ ಅದಕ್ಕಿಂತ ಹೆಚ್ಚು ನಿಮಿಷಗಳಷ್ಟು ಡಿಲೇ ಆದಾಗ ನಿರ್ದಿಷ್ಟ ಮೊತ್ತದೊಂದಿಗೆ ನಿಮಗೆ ಪರಿಹಾರವನ್ನು ನೀಡಲು ನಾವು ಸಹಾಯ ಮಾಡಬಹುದು.

Download Common Carrier Delay Cover Policy Wordings