ಟೋಕಿಯೋ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಮತ್ತು ಬೈಕ್ ಡಿಸೈನರ್ ಗ್ಲಿನ್ ಕೆರ್ ಅವರ ಸಹಯೋಗದಲ್ಲಿ ಪಲ್ಸರ್ನ ಅಭಿವೃದ್ಧಿಯ ಜೊತೆ ಬಜಾಜ್ ಯಾವುದೇ ರಾಜಿಯನ್ನು ಮಾಡಿಕೊಳ್ಳದೆ ಸಾಗುತ್ತಿದೆ.
ಪಲ್ಸರ್, ಮಾರುಕಟ್ಟೆಗೆ ಬಿಡುಗಡೆಯಾಗುವ ಮೊದಲು, ಭಾರತದಲ್ಲಿ ಬೈಕ್ ಮಾರುಕಟ್ಟೆಯು ಹೆಚ್ಚಾಗಿ ಇಂಧನ-ದಕ್ಷತೆಯ ಮೇಲೆ ಕೇಂದ್ರೀಕರಿಸಿತ್ತು. ಇದು ಸಣ್ಣ ಸಾಮರ್ಥ್ಯವುಳ್ಳ ಮೋಟಾರ್ಸೈಕಲ್ಗಳ ಏರಿಕೆಗೆ ಕಾರಣವಾಯಿತು.
- ಬಜಾಜ್ ಪಲ್ಸರ್ ಮಾದರಿಗಳು 150ಸಿಸಿ ಮತ್ತು 180ಸಿಸಿ ವಾಹನಗಳನ್ನು ಕೈಗೆಟುಕುವ ಬೆಲೆಯಲ್ಲಿ ನೀಡುವ ಮೂಲಕ ಮಾರುಕಟ್ಟೆಯಲ್ಲಿ ಕ್ರಾಂತಿಯನ್ನುಂಟು ಮಾಡಿತು. ಅಂದಿನಿಂದ, ಭಾರತದಲ್ಲಿನ ಟು-ವೀಲರ್ ಗ್ರಾಹಕರು ಬಜೆಟ್ ಸ್ನೇಹಿ ಪ್ರೈಸ್ ಟ್ಯಾಗ್ಗಳೊಂದಿಗೆ ಹೆಚ್ಚಿನ ಶಕ್ತಿಯ ಬೈಕ್ಗಳನ್ನು ನಿರೀಕ್ಷಿಸತೊಡಗಿದರು.
- ಪಲ್ಸರ್ 200ಎನ್ಎಸ್ನಂತಹ ಹೊಸ ಪಲ್ಸರ್ ಮಾದರಿಗಳು ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಗೆದ್ದಿವೆ. ವಾಸ್ತವವಾಗಿ, ಇದು ಭಾರತದಲ್ಲಿ ಹೆಚ್ಚು ಪ್ರಶಸ್ತಿ ಪಡೆದ ಬೈಕ್ ಎಂದು ತಿಳಿದುಬಂದಿದೆ. ಅವುಗಳಲ್ಲಿ ಎನ್ಡಿಟಿವಿ ಯ ಕಾರ್ ಮತ್ತು ಬೈಕ್ ಪ್ರಶಸ್ತಿಗಳಲ್ಲಿ ವರ್ಷದ ಬೈಕ್ ಪ್ರಶಸ್ತಿ ಮತ್ತು ಎಕನಾಮಿಕ್ ಟೈಮ್ಸ್ ಜಿಗ್ವೀಲ್ಸ್ ಬೈಕ್ ಆಫ್ ದಿ ಇಯರ್ ಪ್ರಶಸ್ತಿಯನ್ನು ಪಡೆದುಕೊಂಡಿದೆ.
- ಮಾಲಿನ್ಯವನ್ನು ನಿಗ್ರಹಿಸುವ ಸರ್ಕಾರದ ಉಪಕ್ರಮಕ್ಕೆ ಅನುಗುಣವಾಗಿ, ಶೀಘ್ರದಲ್ಲೇ ಬಿಎಸ್ -VI ಕಂಪ್ಲೈಂಟ್ ಪಲ್ಸರ್ ಮಾದರಿಗಳನ್ನು ಬಿಡುಗಡೆ ಮಾಡುವುದಾಗಿ ಬಜಾಜ್ ಘೋಷಿಸಿತು.
ಈ ಎಲ್ಲಾ ಫೀಚರ್ಗಳು ಮತ್ತು ಇನ್ನೂ ಹೆಚ್ಚಿನವುಗಳು ಸೇರಿ ಬಜಾಜ್ ಪಲ್ಸರ್ ಅನ್ನು ಭಾರತದ ಅತ್ಯಂತ ಜನಪ್ರಿಯ ಬೈಕ್ಗಳಲ್ಲಿ ಒಂದಾಗಿಸಿದೆ. ಅದಕ್ಕಾಗಿಯೇ, ಕೇವಲ ಡಿಸೆಂಬರ್ 2019 ರಲ್ಲಿಯೇ, ಬಜಾಜ್ 50,000 ವಿಭಿನ್ನ ಪಲ್ಸರ್ ಮಾಡೆಲ್ಗಳ ವೇರಿಯಂಟ್ಗಳನ್ನು ಮಾರಾಟ ಮಾಡಿದೆ. (1)
ಪಲ್ಸರ್ನಂತಹ ದೊಡ್ಡ ಬೈಕ್ಗಳು ಹೆಚ್ಚಿನ ವೇಗವನ್ನು ಸಾಧಿಸಲು ಸಮರ್ಥವಾಗಿವೆ. ಇದು ಸಾಮಾನ್ಯವಾಗಿ ಬೈಕ್ ರೈಡರ್ಗಳಿಗೆ ಥ್ರಿಲ್ ಕೊಡುವ ಮೂಲದಂತೆ ಕಾರ್ಯನಿರ್ವಹಿಸುತ್ತದೆ.
ಆದಾಗ್ಯೂ, ಅತಿವೇಗದ ಚಾಲನೆಯು ವಿನಾಶಕಾರಿ ಅಪಘಾತಗಳಿಗೆ ಕಾರಣವಾಗಬಹುದು. ಅಲ್ಲದೇ ಅದು ನಿಮ್ಮ ಪ್ರಾಣಕ್ಕೆ ಮತ್ತು ನಿಮ್ಮ ಬೈಕಿಗೆ ಅಪಾಯವನ್ನುಂಟುಮಾಡುತ್ತದೆ. ಇನ್ಶೂರೆನ್ಸಿಗೆ ಅಪಘಾತಗಳನ್ನು ತಡೆಯಲು ಸಾಧ್ಯವಾಗದಿದ್ದರೂ, ಅಂತಹ ಸಂದರ್ಭಗಳಿಂದ ನಿಮ್ಮ ಹಣಕಾಸಿನ ಹೊಣೆಗಾರಿಕೆಯನ್ನು ಕಡಿಮೆ ಮಾಡಲು ಇನ್ಶೂರೆನ್ಸ್ ಸಹಾಯ ಮಾಡುತ್ತದೆ.
ಆದಾಗ್ಯೂ, ಅಂತಹ ಪರಿಸ್ಥಿತಿಗಳಲ್ಲಿ ನೀವು ಸಾಕಷ್ಟು ಸುರಕ್ಷಿತರಾಗಿದ್ದೀರಿ ಎನ್ನುವುದನ್ನು ಖಚಿತಪಡಿಸಿಕೊಳ್ಳಲು, ನಿಮ್ಮ ಬಜಾಜ್ ಪಲ್ಸರ್ಗಾಗಿ ಹೆಸರಾಂತ ಇನ್ಶೂರೆನ್ಸ್ ಪೂರೈಕೆದಾರರಿಂದ ನೀವು ಕಾಂಪ್ರೆಹೆನ್ಸಿವ್ ಕವರ್ ಅನ್ನು ಪಡೆದುಕೊಳ್ಳುತ್ತೀರಿ ಎಂದು ಖಚಿತಪಡಿಸಿಕೊಳ್ಳಬೇಕು.
ಈ ನಿಟ್ಟಿನಲ್ಲಿ ಡಿಜಿಟ್ ನಿಮಗೆ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ನೋಡೋಣ!